POLICE BHAVAN KALABURAGI

POLICE BHAVAN KALABURAGI

16 August 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :
ದೇವಲ ಗಾಣಗಾಪೂರ ಠಾಣೆ:
: ಶ್ರೀಮತಿ ಸಂಗಮ್ಮ ಗಂಡ ದೇವಿಂದ್ರಪ್ಪ ಡಾಂಗೆ ಸಾ:ದೇವಲಗಾಣಗಾಪೂರ ತಾ|| ಅಫಜಲಪೂರ ರವರು ನನಗೆ ಶಾಂತಾಬಾಯಿ ಅನ್ನುವ ಮಗಳಿದ್ದು ಅವಳಿಗೆ ಮೋರಟಗಿ ಗ್ರಾಮದ ತನ್ನ ತಮ್ಮ ನಿಂಗಪ್ಪ ಗಂಡ ಸಿದ್ದಪ್ಪ ಬೇಲೂರ ಎಂಬಾತನ ಸಂಗಡ ಮದುವೆ ಮಾಡಿ ಕೊಟ್ಟಿದ್ದು, ಇನ್ನೊಬ್ಬ ಮಗಳಾದ ರೇಣುಕಾ ಇವಳಿಗೆ ನಿಂಬರ್ಗಾ ಗ್ರಾಮದ ಅಶೋಕ ತಂದೆ ಗುಂಡಪ್ಪ ಬಾಸಗಿ ಎಂಬಾತನ ಸಂಗಡ ಮದುವೆ ಮಾಡಿ ಕೊಟ್ಟಿದ್ದು ಉಳಿದ 3 ಜನ ಹೆಣ್ಣು ಮಕ್ಕಳ ಮದುವೆ ಮಾಡಿರುವುದಿಲ್ಲಾ . ದಿನಾಂಕ: 02-04-2011 ರಂದು ಸಾಯಂಕಾಲ ಸುಮಾರಿಗೆ ಮಗಳು ಶಾಂತಾಬಾಯಿ ಹಾಗೂ ಈರಮ್ಮ, ಸಾವಿತ್ರಿ ರವರು ನಮ್ಮ ಮನೆಯಲ್ಲಿದ್ದಾಗ ಅಶೋಕ ತಂದೆ ನಿಂಗಪ್ಪ ಬಾಸಗಿ ಇತನು ಮನಗೆ ಬಂದು ಶಾಂತಾಬಾಯಿಗೆ ನನ್ನ ಜೊತೆಯಲ್ಲಿ ಬಾ, ನಾವಿಬ್ಬರೂ ಸೇರಿ ಪುನಾಕ್ಕೆ ಹೋಗಿ ಮದುವೆ ಮಾಡಿಕೊಂಡು ಆರಾಮವಾಗಿರೋಣ ಅಂತಾ ಅಂದಾಗ ಶಾಂತಾಬಾಯಿ ಹೋಗುವದಕ್ಕೆ ನಿರಾಕರಿಸಿದ್ದರಿಂದ ಅಶೋಕ ಇತನು ನೀನು ನನ್ನ ಸಂಗಡ ಬರದಿದ್ದರೆ ನಿನಗೆ ಬಿಡುವುದಿಲ್ಲಾ ಅಂತಾ ಹಾಗು ಒತ್ತಾಯ ಪೂರ್ವಕವಾಗಿ ಅವಳಿಗೆ ಇಚ್ಚೆ ಇಲ್ಲದಿದ್ದರು ಅವಳಿಗೆ ಮದುವೆ ಮಾಡಿಕೊಳ್ಳೊಣ ಬಾ ಅಂತಾ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :

ದೇವಲ ಗಾಣಗಾಪೂರ ಠಾಣೆ : ದಿನಾಂಕ; 15-08-2011 ರಂದು ಸಾಯಂಕಾಲ ಚಿನಮಳ್ಳಿ ಗ್ರಾಮದ ಪ್ರವಾಸಿ ಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರ ಇಸ್ಪೆಟ ಜೂಜಾಟ ಆಡುತಿದ್ದಾಗ ಪಿಎಸ್‌ಐ ರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಮಲ್ಕಣ್ಣಾ ತಂದೆ ರಾಯಪ್ಪ ತಳಕೆರಿ ಸಂಗಡ .6 ಜನರು ಸಾ|| ಎಲ್ಲರೂ ಚಿನಮಳ್ಳಿ ಗ್ರಾಮದವರು ಹಿಡಿದು ಅವರಿಂದ ನಗದು ಹಣ 780 ರೂ ಜಪ್ತಿ ಮಾಡಿಕೊಂಡಿದ್ದರ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಆಳಂದ ಪೊಲೀಸ ಠಾಣೆ: ಶ್ರೀ ಸಿರಾಜ ಅಲಿ ತಂದೆ ರಜಬ ಅಲಿ ರವರು ಬಾಹರ ಪೇಟ ಆಳಂದ ರಪೀಕ ಇತನಿಗೆ ನನ್ನ ಮಗನ ಜೊತೆ ಯಾಕೆ ತಕರಾರು ಮಾಡುತಿದ್ದಿಯಾ ಅಂತ ಕೇಳಿದ್ದಕ್ಕೆ ರಪೀಕ ಮತ್ತು ಸಂಗಡ ಇಬ್ಬರೂ ನೀನು ಕೇಳಲು ಬರುತ್ತಿಯಾ ಮಾಗನೆ ಅಂತ ಅಲ್ಲೆ ಬಿದಿದ್ದ ಇಟಂಗಿಯನ್ನು ತೆಗೆದುಕೊಂಡು ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಹಾಗು ಇನ್ನೊಬ್ಬನು ಕೈಯಿಂದ ಹೊಡೆದಿರುತ್ತಾನೆ ಇನ್ನೊಬ್ಬನು ಸಹ ಹೊಡೆಯುದಕ್ಕೆ ಪ್ರಚೋದನೆ ಮಾಡುತ್ತಿದ್ದನು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ
: ಶ್ರೀ ಅಜಯ ತಂದೆ ಓಮನ ಪುಟನ ಪಿಲ್ಲೆ ಬಿ.ಸಿ.ಎ. ಫಸ್ಟ ವಿದ್ಯಾರ್ಥಿ ಸಾ|| ಜಿ .ಅರ್. ನಗರ ಖಾದ್ರಿ ಚೌಕ ಗುಲಬರ್ಗಾ ರವರು ನಾನು ದಿನಾಂಕ 15-08-11 ರಂದು ಮಧ್ಯಾಹ್ನ ಸುಮಾರಿಗೆ ನನ್ನ ಚಿಕ್ಕಮ್ಮನ ಮಗಳಾದ ಕಾವ್ಯಾ ತಂದೆ ಕಲ್ಯಾಣರಾವ ಹಿರೋಳ್ಳಿ ಸಾ: ಭೂಸನುರ ಗ್ರಾಮ ಇವಳಿಗೆ ಭೂಸನುರ ಗ್ರಾಮಕ್ಕೆ ಬಿಡುವ ಕುರಿತು ನನ್ನ ಹೊಂಡಾ ಸುಟೋನರ ಕೆಎ 32 ಡಬ್ಲೂ 1168 ನೇದ್ದರ ಹಿಂದೆ ಕೂಡಿಸಿಕೊಂಡು ಹೊರಟಿದ್ದು ಎಂ.ಎಸ್.ಕೆ.ಮಿಲ್ಲ ರಿಂಗ ರೋಡ ಕಡೆಯಿಂದ ಕೆಎ 25 ಬಿ 2193 ವಿಅರಎಲ್ ಗೂಡ್ಸ ನೇದ್ದರ ಚಾಲಕ ರಮೇಶ ತಂದೆ ಯಂಕಪ್ಪ ಪತ್ತಾರ ಸಾ: ಓಮಟಾರ ತಾ: ರಾಮದುರ್ಗ ಜಿಲ್ಲಾ ಬೆಳಗಾಂವ ಇತನು ತನನ್ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದವನೇ ಹಿಂದಿನಿಂದ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದು ನಾನು ಮತ್ತು ಕಾವ್ಯಾ ಇಬ್ಬರು ಮೋಟಾರ ಸೈಕಲದೊಂದಿಗೆ ರೋಡಿಗೆ ಬಿದ್ದಿದ್ದು, ನನಗೆ ರಕ್ತಗಾಯವಾಗಿದ್ದು, ಕಾವ್ಯಾ ಇವಳಿಗೆ ನೋಡಲಾಗಿ ಅವಳ ಬಲ ತಲೆ ಹಿಂದೆ, ಬಲಗೈ ಮೊಳಕೈ ಮೇಲೆ ಕೆಳೆಗೆ, ಬಲಗಾಲ ಮೊಳಕಾಲ ಮೇಲೆ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 August 2011

GULBARGA DIST REPORTED CRIMES


ಕಳೆದ ಎಂಟು ತಿಂಗಳ ಹಿಂದೆ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಚೀಲಗಳನ್ನು ಕಳ್ಳತನ ಮಾಡಿಕೊಂಡು ನಾಪತ್ತೆಯಾಗಿದ್ದ ಆರೋಪಿಗಳ ಮತ್ತು ಮಾಲಿನ ಪತ್ತೆ.

ದಿನಾಂಕ; 01-01-2011 ರಂದು ಮಧ್ಯಾಹ್ನ ಸುಮಾರಿಗೆ ಶ್ರೀ ರಮೇಶ ತಂದೆ ಸಾತಲಿಂಗಪ್ಪಾ ಮಾಳಗೆ ಆಡಳಿತಧಿಕಾರಿಗಳು ಶ್ರೀ ರೇಣುಕಾ ಸುಗರ ಲಿಮಿಟೆಡ್ ಹವಳಗಾ ರವರು ಗೋದಾಮಿನಲ್ಲಿ ಒಟ್ಟು 41,802 ಸಕ್ಕರೆ ಚೀಲಗಳನ್ನು ದಾಸ್ತಾನು ಮಾಡಿಟ್ಟು ಗೋದಾಮಿಗೆ ಸಿಬ್ಬಂದಿ ಹಾಗು ಸಹಾಯಕರನ್ನು ನೇಮಕ ಮಾಡಿದ್ದು ಇದೆ. ನಾನು ದಿನಾಂಕ: 29-12-2010 ರಂದು ಗೋದಾಮಿನ ಸಿಬ್ಬಂದಿಯವರೊಂದಿಗೆ ಗೋದಾಮನ್ನು ಪರೀವಿಕ್ಷಣೆ ಮಾಡಲು ಹೋದಾಗ ಗೋದಾಮಿನ ಹಿಂದಿನ ಭಾಗದ ಟಾರಪಲ್ಲ ಹಾಗು ಪಿನಿಸಿಂಗ್ ಹರಿದು ಗೋದಾಮಿನಲ್ಲಿಟ್ಟಿದ್ದ 153 ಸಕ್ಕರೆ ಚೀಲಗಳನ್ನು ಕಳ್ಳತನವಾದ ಬಗ್ಗೆ ಕಂಡು ಬಂದಿರುತ್ತದೆ . ನಾನು ಸಿಬ್ಬಂದಿಯವರಿಗೆ ವಿಚಾರಿಸಲಾಗಿ ಅವರಿಂದ ಯಾವದೇ ಮಾಹಿತಿ ಸಿಗಲಿಲ್ಲ ಪ್ರತಿಯೊಂದು ಸಕ್ಕರೆ ಚೀಲ 50 ಕೆ.ಜಿ. ತೂಕದಾಗಿರುತ್ತವೆ ಒಂದು ಚೀಲಕ್ಕೆ ರೂ. 1400-00 ಇರುತ್ತದೆ ಒಟ್ಟು 153 ಸಕ್ಕರೆ ಚೀಲಗಳು ಅ::ಕಿ|| 2,14,200 ರೂಪಾಯಿಗಳ ಮೌಲ್ಯದ ಸಕ್ಕರೆ ಚೀಲಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ನಂ: 01/2011 ಕಲಂ 457, 380 ಭಾರತೀಯ ದಂಡ ಸಂಹಿತೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.

ದಿನಾಂಕ:14-08-201 ರಂದು ರಾತ್ರಿ 11-00 ಗಂಟೆಯಿಂದ ಅಫಜಲಪೂರ ಠಾಣೆಯ ಪಿ.ಎಸ.ಐ ರವರು ಶ್ರೀ ಎಸ. ಮಂಜುನಾಥ ರವರು ತಮ್ಮ ಠಾಣೆಯ ಸಿಬ್ಬಂದಿಯವರೊಂದಿಗೆ ರೋಡ ಪೆಟ್ರೊಲಿಂಗ ಕರ್ತವ್ಯ ನಿರ್ವಹಿಸುತ್ತಾ ಮಧ್ಯರಾತ್ರಿ ದಿನಾಂಕ: 15-08-2011 ರಂದು 2 ಎ.ಎಮ ಸುಮಾರಿಗೆ ಹವಳಗಾ ಶ್ರೀ ರೇಣುಕಾ ರೇಣುಕಾ ಸುಗರ್ ಮಿಲಿಟೆಡ್ ಕಾರ್ಖಾನೆ ಹತ್ತಿರ ಹೋದಾಗ 4 ಜನ ವ್ಯಕ್ತಿಗಳು ಕತ್ತಲೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಂತಿದ್ದು , ಆಗ ಪಿ.ಎಸ.ಐ ರವರು ವಿಚಾರಸಬೇಕು ಅನ್ನುವದರಲ್ಲಿ ಓಡಿ ಹೋಗಲು ಪ್ರಯತ್ನಿಸಿದ್ದು ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಸುತ್ತುವರೆದು ಹಿಡಿದುಕೊಂಡು ವಿಚಾರಿಸಿದಾಗ ಸಮರ್ಪಕವಾದ ಉತ್ತರ ಕೊಡದೇ ಇರುವದರಿಂದ ಠಾಣೆಗೆ ಕರೆತಂದು ಕೂಲಂಕೂಶವಾಗಿ ವಿಚಾರಿಸಿದಾಗ ದಿನಾಂಕ; 31-12-2010 ರಂದು ರಾತ್ರಿ ವೇಳೆಯಲ್ಲಿ ರೇಣುಕಾ ಸುಗರ ಲಿಮಿಟೆಡ್ ಸಕ್ಕರೆ ಕಾರ್ಖಾನೆಯಿಂದ 109 ಚೀಲಗಳನ್ನು ಹೊರೆಗೆ ತಂದು ಗೋದಾಮಿನಿಂದ ಸ್ವಲ್ಪ ದೂರದಲ್ಲಿ ಎರಡು ಜೀಪ ಮತ್ತು ಒಂದು ಗೂಡ್ಡ 407 ವಾಹನಗಳಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ತಿಳಿಸಿದ್ದು , ಸದರಿಯವರು ಹೆಸರುಗಳು ಮಲ್ಲು ತಂದೆ ಸಿದ್ದಪ್ಪಾ ಜಮಾದಾರ ಸಾ|| ಶಿವಪೂರ , ವಿಜಯಕುಮಾರ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್ , ಅಡಿವೆಪ್ಪಾ ತಂದೆ ಸಿದ್ದಪ್ಪಾ ಪೂಜಾರಿ ,ಶರಣು ತಂದೆ ಅಡಿವೆಪ್ಪಾ ನಾಡಿಕಾರ, ಮಾಳಪ್ಪಾ ತಂದೆ ಸಂಗಪ್ಪಾ ಜಗಲಗೊಂಡ, ಮಹಾಂತೇಶ ತಂದೆ ಶಿವಪ್ಪಾ ಪೂಜಾರಿ, ಕಾಂತಪ್ಪಾ ತಂದೆ ಶಿವಪ್ಪಾ ಜಗಲಗೊಂಡ , ಮಲ್ಲಪ್ಪಾ ತಂದೆ ಶರಣಗೌಡ ಪಾಟೀಲ್, ಬಸ್ಪಪಾ ತಂದೆ ಸಿದ್ದಪ್ಪಾ ಮೀನಗಾರ ಸಾ || ಎಲಲ್ರೂ ಹಾವಳಗಾ ಗ್ರಾಮದವರನ್ನು ದಸ್ತಗಿರಿ ಮಾಡಿ ಇವರಿಂದ ಮಾಲು ಹಾಗು ಕಳ್ಳತನಕ್ಕೆ ಉಪಯೋಗಿಸಿದ ಎರಡು ಜೀಪಗಳು ಮತ್ತು 407 ಗೂಡ್ಸ ವಾಹನ ವಶಪಡಿಸಿಕೊಳ್ಳಲಾಗಿದೆ ಸದರಿ ದಾಳಿಯು ಮಾನ್ಯ ಎಸ.ಪಿ ಸಾಹೇಬರು ಮತ್ತು ಅಪರ ಎಸಪಿ ಸಾಹೇಬರ ಮಾರ್ಗದರ್ಶನದ ಮೇರೆಗೆ ಡಿ.ಎಸ.ಪಿ ಆಳಂದ ರವರ ನೇತ್ರತ್ವದಲ್ಲಿ ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ ಮತ್ತು ಪಿ.ಎಸ.ಐ ಮಂಜುನಾಥ ಹಾಗು ಸಿಬ್ಬಂದಿಯವರಾದ ರಾಮಚಂದ್ರ ಹೆಚ.ಸಿ , ಮಾರುತಿ ಹೆಚ.ಸಿ, ಪಿಸಿ ನರಸರೆಡ್ಡಿ, ಅರವಿಂದ , ಶರಣು ಇವರೆಲ್ಲರಿಗೆ ಪತ್ತೆ ಕಾರ್ಯಕ್ಕೆ ಮಾನ್ಯ ಎಸ,ಪಿ ಸಾಹೇಬರು ಪ್ರಶಂಸಿರುತ್ತಾರೆ .

GULBARGA DISTRICT REPORTED CRIMES

ಯು. ಡಿ. ಅರ್. ಪ್ರಕರಣ :
ಬ್ರಹ್ಮಪೂರ ಠಾಣೆ
: ಶ್ರೀಮತಿ ಗೌರಮ್ಮ ಗಂಡ ಚಂದ್ರಕಾಂತ ಶೇಟಗಾರ ವಯ: 70 ವರ್ಷ ಸಾ: ಬೆಳಮಗಿ ರವರು ನನ್ನ ಮಗಳಾದ ಶ್ರೀದೇವಿ ಇವಳಿಗೆ 30 ವರ್ಷಗಳ ಹಿಂದೆ ಮಹಾಗಾಂವ ಗ್ರಾಮದ ಸಿದ್ದಲಿಂಗಪ್ಪ ವೀರಶೇಟ್ಟಿ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ,  ಸುಮಾರು ಎರಡುವರೆ ತಿಂಗಳ ಹಿಂದೆ ತನ್ನ ಮನೆಯಲ್ಲಿ ಬಿಸಿ ನೀರು ಮೈ ಮೇಲೆ ಬಿದ್ದು ಮಗಳಿಗೆ ಸುಟ್ಟಗಾಯಗಳಾಗಿದ್ದು ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2 ತಿಂಗಳ ಉಪಚಾರ ಮಾಡಿಸಿ ನಂತರ 8-9 ದಿವಸಗಳ ಹಿಂದೆ ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ ನನ್ನ ಮಗಳು ಶ್ರೀದೇವಿ ಇವಳು  ಉಪಚಾರ ಫಲಕಾರಿಯಾಗದೇ ದಿನಾಂಕ: 14/08/2011 ರಂದು ಸಾಯಂಕಾಲ ಆಸ್ಪತ್ರೆಯಲ್ಲಿ ಮೃತ್ತ ಪಟ್ಟಿರುತ್ತಾಳೆ ಮಗಳು ಮೃತಪಟ್ಟ ಬಗ್ಗೆ ಯಾರ ಮೇಲೆ ಸಂಶಯ ಇರುವದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಯು.ಡಿ.ಆರ್. ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ :
ಶ್ರೀ. ವಸಂತ ತಂದೆ ಗೌಡಪ್ಪ ಪೊಲೀಸ್ ಪಾಟೀಲ್ ಸಾ; ಕಿಣ್ಣಿ ಸಡಕ ಗ್ರಾಮ ತಾ;ಜಿ; ಗುಲಬರ್ಗಾ ರವರು ನಾನು ಮತ್ತು ನಮ್ಮ ಗ್ರಾಮದ ಗಿರಿರಾಜ ಗೊಬ್ಬೂರವಾಡಿ ಕೂಡಿಕೊಂಡು ಶ್ರಾವಣ ಮಾಸದ ಭಜನೆ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲು ದಿನಾಂಕ: 14/08/2011 ರಂದು ರಾತ್ರಿ 8-30 ರ ಸುಮಾರಿಗೆ ನಮ್ಮೂರಿನಿಂದ ಹಳ್ಳಿಖೇಡ (ಕೆ) ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಎದುರುಗಡೆಯಿಂದ ಕೆಎ-32 ಎಸ್– 8555 ಮೋಟರ್ ಸೈಕಲ್ ಸವಾರರು ತಮ್ಮ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಿಣ್ಣೀ ಸಡಕ ಗ್ರಾಮದ ಸೇತುವೆ ಹತ್ತಿರ ಮೋಟರ್ ಸೈಕಲ್ ನಿಯಂತ್ರಣ ಕಳೆದುಕೊಂಡು ರೋಡ ಗಾರ್ಡ ಕಂಬಕ್ಕೆ ಡಿಕ್ಕಿ ಹೊಡೆದಿರುತ್ತಾನೆ ಮೋಟಾರ ಸೈಕಲ್ ಸವಾರನನ್ನು ವಿಚಾರಿಸಲಾಗಿ ಮಹಾಂತೇಶ ತಂದೆ ಮಲ್ಲೇಶಪ್ಪ ಶಿರವಾಳ ಸಾ: ವಿಜಯನಗರ ಆಳಂದ ಕಾಲೂನಿ ಗುಲಬರ್ಗಾ ಅಂತಾ ತಿಳಿಸಿದ್ದು, ಆತನ ಹಿಂದುಗಡೆ ಕುಳಿತವನು ಪ್ರಶಾಂತ ತಂದೆ ಮಲ್ಲಿನಾಥ  ರೇವೂರ ಸಾ; ಆಳಂದ ಕಾಲೂನಿ ಗುಲಬರ್ಗಾ ಅಂತಾ ತಿಳಿಯಿತು. ಪ್ರಶಾಂತ ಇತನು ಭಾರಿ ಗಾಯಗಾಳಿರುವದರಿಂದ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಾವು 108 ಅಂಬುಲೇನ್ಸ್ ಗೆ ಫೋನ್ ಮಾಡಿ ಕರೆಯಿಸಿ ಗಾಯಾಳುವನ್ನು  ಮೋಟರ್ ಸೈಕಲ ಚಲಾಯಿಸುತ್ತಿದ್ದವನ ಸಂಗಡ  ಉಪಚಾರ ಕುರಿತು ಗುಲಬರ್ಗಾದ ಆಸ್ಪತ್ರೆಗೆ ಕೊಟ್ಟು ಕಳುಹಿಸಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.