ಯು. ಡಿ. ಅರ್. ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀಮತಿ ಗೌರಮ್ಮ ಗಂಡ ಚಂದ್ರಕಾಂತ ಶೇಟಗಾರ ವಯ: 70 ವರ್ಷ ಸಾ: ಬೆಳಮಗಿ ರವರು ನನ್ನ ಮಗಳಾದ ಶ್ರೀದೇವಿ ಇವಳಿಗೆ 30 ವರ್ಷಗಳ ಹಿಂದೆ ಮಹಾಗಾಂವ ಗ್ರಾಮದ ಸಿದ್ದಲಿಂಗಪ್ಪ ವೀರಶೇಟ್ಟಿ ಇತನಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ, ಸುಮಾರು ಎರಡುವರೆ ತಿಂಗಳ ಹಿಂದೆ ತನ್ನ ಮನೆಯಲ್ಲಿ ಬಿಸಿ ನೀರು ಮೈ ಮೇಲೆ ಬಿದ್ದು ಮಗಳಿಗೆ ಸುಟ್ಟಗಾಯಗಳಾಗಿದ್ದು ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನಂತರ ಹೆಚ್ಚಿನ ಉಪಚಾರ ಕುರಿತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 2 ತಿಂಗಳ ಉಪಚಾರ ಮಾಡಿಸಿ ನಂತರ 8-9 ದಿವಸಗಳ ಹಿಂದೆ ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ ನನ್ನ ಮಗಳು ಶ್ರೀದೇವಿ ಇವಳು ಉಪಚಾರ ಫಲಕಾರಿಯಾಗದೇ ದಿನಾಂಕ: 14/08/2011 ರಂದು ಸಾಯಂಕಾಲ ಆಸ್ಪತ್ರೆಯಲ್ಲಿ ಮೃತ್ತ ಪಟ್ಟಿರುತ್ತಾಳೆ ಮಗಳು ಮೃತಪಟ್ಟ ಬಗ್ಗೆ ಯಾರ ಮೇಲೆ ಸಂಶಯ ಇರುವದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಯು.ಡಿ.ಆರ್. ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ. ವಸಂತ ತಂದೆ ಗೌಡಪ್ಪ ಪೊಲೀಸ್ ಪಾಟೀಲ್ ಸಾ; ಕಿಣ್ಣಿ ಸಡಕ ಗ್ರಾಮ ತಾ;ಜಿ; ಗುಲಬರ್ಗಾ ರವರು ನಾನು ಮತ್ತು ನಮ್ಮ ಗ್ರಾಮದ ಗಿರಿರಾಜ ಗೊಬ್ಬೂರವಾಡಿ ಕೂಡಿಕೊಂಡು ಶ್ರಾವಣ ಮಾಸದ ಭಜನೆ ಕಾರ್ಯಕ್ರದಲ್ಲಿ ಪಾಲ್ಗೊಳ್ಳಲು ದಿನಾಂಕ: 14/08/2011 ರಂದು ರಾತ್ರಿ 8-30 ರ ಸುಮಾರಿಗೆ ನಮ್ಮೂರಿನಿಂದ ಹಳ್ಳಿಖೇಡ (ಕೆ) ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಎದುರುಗಡೆಯಿಂದ ಕೆಎ-32 ಎಸ್– 8555 ಮೋಟರ್ ಸೈಕಲ್ ಸವಾರರು ತಮ್ಮ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಿಣ್ಣೀ ಸಡಕ ಗ್ರಾಮದ ಸೇತುವೆ ಹತ್ತಿರ ಮೋಟರ್ ಸೈಕಲ್ ನಿಯಂತ್ರಣ ಕಳೆದುಕೊಂಡು ರೋಡ ಗಾರ್ಡ ಕಂಬಕ್ಕೆ ಡಿಕ್ಕಿ ಹೊಡೆದಿರುತ್ತಾನೆ ಮೋಟಾರ ಸೈಕಲ್ ಸವಾರನನ್ನು ವಿಚಾರಿಸಲಾಗಿ ಮಹಾಂತೇಶ ತಂದೆ ಮಲ್ಲೇಶಪ್ಪ ಶಿರವಾಳ ಸಾ: ವಿಜಯನಗರ ಆಳಂದ ಕಾಲೂನಿ ಗುಲಬರ್ಗಾ ಅಂತಾ ತಿಳಿಸಿದ್ದು, ಆತನ ಹಿಂದುಗಡೆ ಕುಳಿತವನು ಪ್ರಶಾಂತ ತಂದೆ ಮಲ್ಲಿನಾಥ ರೇವೂರ ಸಾ; ಆಳಂದ ಕಾಲೂನಿ ಗುಲಬರ್ಗಾ ಅಂತಾ ತಿಳಿಯಿತು. ಪ್ರಶಾಂತ ಇತನು ಭಾರಿ ಗಾಯಗಾಳಿರುವದರಿಂದ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನಾವು 108 ಅಂಬುಲೇನ್ಸ್ ಗೆ ಫೋನ್ ಮಾಡಿ ಕರೆಯಿಸಿ ಗಾಯಾಳುವನ್ನು ಮೋಟರ್ ಸೈಕಲ ಚಲಾಯಿಸುತ್ತಿದ್ದವನ ಸಂಗಡ ಉಪಚಾರ ಕುರಿತು ಗುಲಬರ್ಗಾದ ಆಸ್ಪತ್ರೆಗೆ ಕೊಟ್ಟು ಕಳುಹಿಸಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment