POLICE BHAVAN KALABURAGI

POLICE BHAVAN KALABURAGI

15 August 2011

GULBARGA DIST REPORTED CRIMES


ಕಳೆದ ಎಂಟು ತಿಂಗಳ ಹಿಂದೆ ರೇಣುಕಾ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಚೀಲಗಳನ್ನು ಕಳ್ಳತನ ಮಾಡಿಕೊಂಡು ನಾಪತ್ತೆಯಾಗಿದ್ದ ಆರೋಪಿಗಳ ಮತ್ತು ಮಾಲಿನ ಪತ್ತೆ.

ದಿನಾಂಕ; 01-01-2011 ರಂದು ಮಧ್ಯಾಹ್ನ ಸುಮಾರಿಗೆ ಶ್ರೀ ರಮೇಶ ತಂದೆ ಸಾತಲಿಂಗಪ್ಪಾ ಮಾಳಗೆ ಆಡಳಿತಧಿಕಾರಿಗಳು ಶ್ರೀ ರೇಣುಕಾ ಸುಗರ ಲಿಮಿಟೆಡ್ ಹವಳಗಾ ರವರು ಗೋದಾಮಿನಲ್ಲಿ ಒಟ್ಟು 41,802 ಸಕ್ಕರೆ ಚೀಲಗಳನ್ನು ದಾಸ್ತಾನು ಮಾಡಿಟ್ಟು ಗೋದಾಮಿಗೆ ಸಿಬ್ಬಂದಿ ಹಾಗು ಸಹಾಯಕರನ್ನು ನೇಮಕ ಮಾಡಿದ್ದು ಇದೆ. ನಾನು ದಿನಾಂಕ: 29-12-2010 ರಂದು ಗೋದಾಮಿನ ಸಿಬ್ಬಂದಿಯವರೊಂದಿಗೆ ಗೋದಾಮನ್ನು ಪರೀವಿಕ್ಷಣೆ ಮಾಡಲು ಹೋದಾಗ ಗೋದಾಮಿನ ಹಿಂದಿನ ಭಾಗದ ಟಾರಪಲ್ಲ ಹಾಗು ಪಿನಿಸಿಂಗ್ ಹರಿದು ಗೋದಾಮಿನಲ್ಲಿಟ್ಟಿದ್ದ 153 ಸಕ್ಕರೆ ಚೀಲಗಳನ್ನು ಕಳ್ಳತನವಾದ ಬಗ್ಗೆ ಕಂಡು ಬಂದಿರುತ್ತದೆ . ನಾನು ಸಿಬ್ಬಂದಿಯವರಿಗೆ ವಿಚಾರಿಸಲಾಗಿ ಅವರಿಂದ ಯಾವದೇ ಮಾಹಿತಿ ಸಿಗಲಿಲ್ಲ ಪ್ರತಿಯೊಂದು ಸಕ್ಕರೆ ಚೀಲ 50 ಕೆ.ಜಿ. ತೂಕದಾಗಿರುತ್ತವೆ ಒಂದು ಚೀಲಕ್ಕೆ ರೂ. 1400-00 ಇರುತ್ತದೆ ಒಟ್ಟು 153 ಸಕ್ಕರೆ ಚೀಲಗಳು ಅ::ಕಿ|| 2,14,200 ರೂಪಾಯಿಗಳ ಮೌಲ್ಯದ ಸಕ್ಕರೆ ಚೀಲಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ನಂ: 01/2011 ಕಲಂ 457, 380 ಭಾರತೀಯ ದಂಡ ಸಂಹಿತೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.

ದಿನಾಂಕ:14-08-201 ರಂದು ರಾತ್ರಿ 11-00 ಗಂಟೆಯಿಂದ ಅಫಜಲಪೂರ ಠಾಣೆಯ ಪಿ.ಎಸ.ಐ ರವರು ಶ್ರೀ ಎಸ. ಮಂಜುನಾಥ ರವರು ತಮ್ಮ ಠಾಣೆಯ ಸಿಬ್ಬಂದಿಯವರೊಂದಿಗೆ ರೋಡ ಪೆಟ್ರೊಲಿಂಗ ಕರ್ತವ್ಯ ನಿರ್ವಹಿಸುತ್ತಾ ಮಧ್ಯರಾತ್ರಿ ದಿನಾಂಕ: 15-08-2011 ರಂದು 2 ಎ.ಎಮ ಸುಮಾರಿಗೆ ಹವಳಗಾ ಶ್ರೀ ರೇಣುಕಾ ರೇಣುಕಾ ಸುಗರ್ ಮಿಲಿಟೆಡ್ ಕಾರ್ಖಾನೆ ಹತ್ತಿರ ಹೋದಾಗ 4 ಜನ ವ್ಯಕ್ತಿಗಳು ಕತ್ತಲೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ನಿಂತಿದ್ದು , ಆಗ ಪಿ.ಎಸ.ಐ ರವರು ವಿಚಾರಸಬೇಕು ಅನ್ನುವದರಲ್ಲಿ ಓಡಿ ಹೋಗಲು ಪ್ರಯತ್ನಿಸಿದ್ದು ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಸುತ್ತುವರೆದು ಹಿಡಿದುಕೊಂಡು ವಿಚಾರಿಸಿದಾಗ ಸಮರ್ಪಕವಾದ ಉತ್ತರ ಕೊಡದೇ ಇರುವದರಿಂದ ಠಾಣೆಗೆ ಕರೆತಂದು ಕೂಲಂಕೂಶವಾಗಿ ವಿಚಾರಿಸಿದಾಗ ದಿನಾಂಕ; 31-12-2010 ರಂದು ರಾತ್ರಿ ವೇಳೆಯಲ್ಲಿ ರೇಣುಕಾ ಸುಗರ ಲಿಮಿಟೆಡ್ ಸಕ್ಕರೆ ಕಾರ್ಖಾನೆಯಿಂದ 109 ಚೀಲಗಳನ್ನು ಹೊರೆಗೆ ತಂದು ಗೋದಾಮಿನಿಂದ ಸ್ವಲ್ಪ ದೂರದಲ್ಲಿ ಎರಡು ಜೀಪ ಮತ್ತು ಒಂದು ಗೂಡ್ಡ 407 ವಾಹನಗಳಲ್ಲಿ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ತಿಳಿಸಿದ್ದು , ಸದರಿಯವರು ಹೆಸರುಗಳು ಮಲ್ಲು ತಂದೆ ಸಿದ್ದಪ್ಪಾ ಜಮಾದಾರ ಸಾ|| ಶಿವಪೂರ , ವಿಜಯಕುಮಾರ ತಂದೆ ಸಿದ್ದನಗೌಡ ಪೊಲೀಸ್ ಪಾಟೀಲ್ , ಅಡಿವೆಪ್ಪಾ ತಂದೆ ಸಿದ್ದಪ್ಪಾ ಪೂಜಾರಿ ,ಶರಣು ತಂದೆ ಅಡಿವೆಪ್ಪಾ ನಾಡಿಕಾರ, ಮಾಳಪ್ಪಾ ತಂದೆ ಸಂಗಪ್ಪಾ ಜಗಲಗೊಂಡ, ಮಹಾಂತೇಶ ತಂದೆ ಶಿವಪ್ಪಾ ಪೂಜಾರಿ, ಕಾಂತಪ್ಪಾ ತಂದೆ ಶಿವಪ್ಪಾ ಜಗಲಗೊಂಡ , ಮಲ್ಲಪ್ಪಾ ತಂದೆ ಶರಣಗೌಡ ಪಾಟೀಲ್, ಬಸ್ಪಪಾ ತಂದೆ ಸಿದ್ದಪ್ಪಾ ಮೀನಗಾರ ಸಾ || ಎಲಲ್ರೂ ಹಾವಳಗಾ ಗ್ರಾಮದವರನ್ನು ದಸ್ತಗಿರಿ ಮಾಡಿ ಇವರಿಂದ ಮಾಲು ಹಾಗು ಕಳ್ಳತನಕ್ಕೆ ಉಪಯೋಗಿಸಿದ ಎರಡು ಜೀಪಗಳು ಮತ್ತು 407 ಗೂಡ್ಸ ವಾಹನ ವಶಪಡಿಸಿಕೊಳ್ಳಲಾಗಿದೆ ಸದರಿ ದಾಳಿಯು ಮಾನ್ಯ ಎಸ.ಪಿ ಸಾಹೇಬರು ಮತ್ತು ಅಪರ ಎಸಪಿ ಸಾಹೇಬರ ಮಾರ್ಗದರ್ಶನದ ಮೇರೆಗೆ ಡಿ.ಎಸ.ಪಿ ಆಳಂದ ರವರ ನೇತ್ರತ್ವದಲ್ಲಿ ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ ಮತ್ತು ಪಿ.ಎಸ.ಐ ಮಂಜುನಾಥ ಹಾಗು ಸಿಬ್ಬಂದಿಯವರಾದ ರಾಮಚಂದ್ರ ಹೆಚ.ಸಿ , ಮಾರುತಿ ಹೆಚ.ಸಿ, ಪಿಸಿ ನರಸರೆಡ್ಡಿ, ಅರವಿಂದ , ಶರಣು ಇವರೆಲ್ಲರಿಗೆ ಪತ್ತೆ ಕಾರ್ಯಕ್ಕೆ ಮಾನ್ಯ ಎಸ,ಪಿ ಸಾಹೇಬರು ಪ್ರಶಂಸಿರುತ್ತಾರೆ .

No comments: