POLICE BHAVAN KALABURAGI

POLICE BHAVAN KALABURAGI

16 August 2011

GULBARGA DISTRICT REPORTED CRIMES

ಅಪಹರಣ ಪ್ರಕರಣ :
ದೇವಲ ಗಾಣಗಾಪೂರ ಠಾಣೆ:
: ಶ್ರೀಮತಿ ಸಂಗಮ್ಮ ಗಂಡ ದೇವಿಂದ್ರಪ್ಪ ಡಾಂಗೆ ಸಾ:ದೇವಲಗಾಣಗಾಪೂರ ತಾ|| ಅಫಜಲಪೂರ ರವರು ನನಗೆ ಶಾಂತಾಬಾಯಿ ಅನ್ನುವ ಮಗಳಿದ್ದು ಅವಳಿಗೆ ಮೋರಟಗಿ ಗ್ರಾಮದ ತನ್ನ ತಮ್ಮ ನಿಂಗಪ್ಪ ಗಂಡ ಸಿದ್ದಪ್ಪ ಬೇಲೂರ ಎಂಬಾತನ ಸಂಗಡ ಮದುವೆ ಮಾಡಿ ಕೊಟ್ಟಿದ್ದು, ಇನ್ನೊಬ್ಬ ಮಗಳಾದ ರೇಣುಕಾ ಇವಳಿಗೆ ನಿಂಬರ್ಗಾ ಗ್ರಾಮದ ಅಶೋಕ ತಂದೆ ಗುಂಡಪ್ಪ ಬಾಸಗಿ ಎಂಬಾತನ ಸಂಗಡ ಮದುವೆ ಮಾಡಿ ಕೊಟ್ಟಿದ್ದು ಉಳಿದ 3 ಜನ ಹೆಣ್ಣು ಮಕ್ಕಳ ಮದುವೆ ಮಾಡಿರುವುದಿಲ್ಲಾ . ದಿನಾಂಕ: 02-04-2011 ರಂದು ಸಾಯಂಕಾಲ ಸುಮಾರಿಗೆ ಮಗಳು ಶಾಂತಾಬಾಯಿ ಹಾಗೂ ಈರಮ್ಮ, ಸಾವಿತ್ರಿ ರವರು ನಮ್ಮ ಮನೆಯಲ್ಲಿದ್ದಾಗ ಅಶೋಕ ತಂದೆ ನಿಂಗಪ್ಪ ಬಾಸಗಿ ಇತನು ಮನಗೆ ಬಂದು ಶಾಂತಾಬಾಯಿಗೆ ನನ್ನ ಜೊತೆಯಲ್ಲಿ ಬಾ, ನಾವಿಬ್ಬರೂ ಸೇರಿ ಪುನಾಕ್ಕೆ ಹೋಗಿ ಮದುವೆ ಮಾಡಿಕೊಂಡು ಆರಾಮವಾಗಿರೋಣ ಅಂತಾ ಅಂದಾಗ ಶಾಂತಾಬಾಯಿ ಹೋಗುವದಕ್ಕೆ ನಿರಾಕರಿಸಿದ್ದರಿಂದ ಅಶೋಕ ಇತನು ನೀನು ನನ್ನ ಸಂಗಡ ಬರದಿದ್ದರೆ ನಿನಗೆ ಬಿಡುವುದಿಲ್ಲಾ ಅಂತಾ ಹಾಗು ಒತ್ತಾಯ ಪೂರ್ವಕವಾಗಿ ಅವಳಿಗೆ ಇಚ್ಚೆ ಇಲ್ಲದಿದ್ದರು ಅವಳಿಗೆ ಮದುವೆ ಮಾಡಿಕೊಳ್ಳೊಣ ಬಾ ಅಂತಾ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ ಪ್ರಕರಣ :

ದೇವಲ ಗಾಣಗಾಪೂರ ಠಾಣೆ : ದಿನಾಂಕ; 15-08-2011 ರಂದು ಸಾಯಂಕಾಲ ಚಿನಮಳ್ಳಿ ಗ್ರಾಮದ ಪ್ರವಾಸಿ ಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರ ಇಸ್ಪೆಟ ಜೂಜಾಟ ಆಡುತಿದ್ದಾಗ ಪಿಎಸ್‌ಐ ರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಮಲ್ಕಣ್ಣಾ ತಂದೆ ರಾಯಪ್ಪ ತಳಕೆರಿ ಸಂಗಡ .6 ಜನರು ಸಾ|| ಎಲ್ಲರೂ ಚಿನಮಳ್ಳಿ ಗ್ರಾಮದವರು ಹಿಡಿದು ಅವರಿಂದ ನಗದು ಹಣ 780 ರೂ ಜಪ್ತಿ ಮಾಡಿಕೊಂಡಿದ್ದರ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಆಳಂದ ಪೊಲೀಸ ಠಾಣೆ: ಶ್ರೀ ಸಿರಾಜ ಅಲಿ ತಂದೆ ರಜಬ ಅಲಿ ರವರು ಬಾಹರ ಪೇಟ ಆಳಂದ ರಪೀಕ ಇತನಿಗೆ ನನ್ನ ಮಗನ ಜೊತೆ ಯಾಕೆ ತಕರಾರು ಮಾಡುತಿದ್ದಿಯಾ ಅಂತ ಕೇಳಿದ್ದಕ್ಕೆ ರಪೀಕ ಮತ್ತು ಸಂಗಡ ಇಬ್ಬರೂ ನೀನು ಕೇಳಲು ಬರುತ್ತಿಯಾ ಮಾಗನೆ ಅಂತ ಅಲ್ಲೆ ಬಿದಿದ್ದ ಇಟಂಗಿಯನ್ನು ತೆಗೆದುಕೊಂಡು ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಹಾಗು ಇನ್ನೊಬ್ಬನು ಕೈಯಿಂದ ಹೊಡೆದಿರುತ್ತಾನೆ ಇನ್ನೊಬ್ಬನು ಸಹ ಹೊಡೆಯುದಕ್ಕೆ ಪ್ರಚೋದನೆ ಮಾಡುತ್ತಿದ್ದನು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ
: ಶ್ರೀ ಅಜಯ ತಂದೆ ಓಮನ ಪುಟನ ಪಿಲ್ಲೆ ಬಿ.ಸಿ.ಎ. ಫಸ್ಟ ವಿದ್ಯಾರ್ಥಿ ಸಾ|| ಜಿ .ಅರ್. ನಗರ ಖಾದ್ರಿ ಚೌಕ ಗುಲಬರ್ಗಾ ರವರು ನಾನು ದಿನಾಂಕ 15-08-11 ರಂದು ಮಧ್ಯಾಹ್ನ ಸುಮಾರಿಗೆ ನನ್ನ ಚಿಕ್ಕಮ್ಮನ ಮಗಳಾದ ಕಾವ್ಯಾ ತಂದೆ ಕಲ್ಯಾಣರಾವ ಹಿರೋಳ್ಳಿ ಸಾ: ಭೂಸನುರ ಗ್ರಾಮ ಇವಳಿಗೆ ಭೂಸನುರ ಗ್ರಾಮಕ್ಕೆ ಬಿಡುವ ಕುರಿತು ನನ್ನ ಹೊಂಡಾ ಸುಟೋನರ ಕೆಎ 32 ಡಬ್ಲೂ 1168 ನೇದ್ದರ ಹಿಂದೆ ಕೂಡಿಸಿಕೊಂಡು ಹೊರಟಿದ್ದು ಎಂ.ಎಸ್.ಕೆ.ಮಿಲ್ಲ ರಿಂಗ ರೋಡ ಕಡೆಯಿಂದ ಕೆಎ 25 ಬಿ 2193 ವಿಅರಎಲ್ ಗೂಡ್ಸ ನೇದ್ದರ ಚಾಲಕ ರಮೇಶ ತಂದೆ ಯಂಕಪ್ಪ ಪತ್ತಾರ ಸಾ: ಓಮಟಾರ ತಾ: ರಾಮದುರ್ಗ ಜಿಲ್ಲಾ ಬೆಳಗಾಂವ ಇತನು ತನನ್ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದವನೇ ಹಿಂದಿನಿಂದ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದು ನಾನು ಮತ್ತು ಕಾವ್ಯಾ ಇಬ್ಬರು ಮೋಟಾರ ಸೈಕಲದೊಂದಿಗೆ ರೋಡಿಗೆ ಬಿದ್ದಿದ್ದು, ನನಗೆ ರಕ್ತಗಾಯವಾಗಿದ್ದು, ಕಾವ್ಯಾ ಇವಳಿಗೆ ನೋಡಲಾಗಿ ಅವಳ ಬಲ ತಲೆ ಹಿಂದೆ, ಬಲಗೈ ಮೊಳಕೈ ಮೇಲೆ ಕೆಳೆಗೆ, ಬಲಗಾಲ ಮೊಳಕಾಲ ಮೇಲೆ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: