ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪ್ರಕರಣ : ಬ್ರಹ್ಮಪೂರ ಠಾಣೆ ಸರಹದ್ದಿನಲ್ಲಿ ದಿನಾಂಕ: 16/08/11 ರಂದು ಸಾಯಂಕಾಲ ಶ್ರೀ.ಮಹಾಂತೇಶ ಸಿ.ಪಿ.ಸಿ ರವರು ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ಹೋದಾಗ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರುಗಡೆ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವನನ್ನು ಹಿಡಿದು ವಿಚರಿಸಲಾಗಿ ಸರಿಯಾದ ಮಾಹಿತಿ ಮತ್ತು ವಿಳಾಸ ತಿಳಿಸದೇ ಇರುವದರಿಂದ ಅನವನ್ನು ಅಲ್ಲಿಯೇ ಬಿಟ್ಟರೆ ಯಾವುದಾದರೊಂದು ಸ್ವತ್ತಿನ ಅಪರಾದ ಮಾಡಬುದೆಂದು ತಿಳಿದು ಠಾಣೆಗೆ ಕರೆ ತಂದು ಕೂಲಕೂಂಶವಾಗಿ ವಿಚಾರಿಸಲಾಗಿ ಸಾಗರ ತಂದೆ ನಾರಾಯಣ @ ವಕೀಲ ಕಾಳೆ, ಸಾ|| ಮಾಂಗರವಾಡಿ ಗಲ್ಲಿ ಬಾಪೂನಗರ ಗುಲಬರ್ಗಾ ಅಂತಾ ತಿಳಿಸಿದ್ದರಿಂದ ಬ್ರಹ್ಮಪೂರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ : ಶ್ರೀ ಅಯ್ಯುಬಶಾಹ ತಂದೆ ರುಕುಮಶಾಹಾ ಬಿಯಾಬಾನಿ ಸಾ: ಭೀಮಳ್ಳಿ ತಾ:ಜಿ: ಗುಲಬರ್ಗಾ ರವರು ನನ್ನ ತಂದೆಯಾದ ರುಕುಮಶಹಾ ವ:65 ವರ್ಷ ಇವರು ಪ್ರತಿ ದಿವಸ ಭೀಮಳ್ಳಿಯಿಂದ ಗುಲಬರ್ಗಾಕ್ಕೆ ಬಂದು ಶೇಖರೋಜಾ ದರ್ಗಾದಲ್ಲಿ ಭೀಕ್ಷೆ ಬೇಡುತ್ತಿದ್ದು ದಿನಾಂಕ 16-8-2011 ರಂದು ಮಧ್ಯಾಹ್ನ ಸುಮಾರಿಗೆ ಆಳಂದ ಚೆಕ್ಕ ಪೋಸ್ಟ ಸಮೀಪ ಕೃಷಿ ಸಂಶೋಧನಾ ಕೇಂದ್ರದ ಸಣ್ಣ ಗೇಟ ಎದುರುಗಡೆ ರುಕುಮಶಹಾ ಇವರು ಕೆಎ 32 ಎಫ 1093 ಬಸ್ಸಿನಲ್ಲಿ ಎರುವಾಗ ಬಸ್ಸ ಚಾಲಕ ಶರಣಪ್ಪ ತಂದೆ ಮನ್ಸಪ್ಪಾ ಯಂಕಂಚಿ ಇತನು ತನ್ನ ಬಸ್ಸನ್ನು ಅಲಕ್ಷತನದಿಂದ ಒಮ್ಮೇಲೆ ಚಾಲು ಮಾಡಿ ನಡೆಸಿದ್ದರಿಂದ ಬಸ್ಸಿನ ಕೆಳೆಗೆ ಬಿದಿದ್ದು ಬಸ್ಸಿನ ಹಿಂದಿನ ಟೈರ ಬಲಗಾಲ ಮೊಳಕಾಲ ಮೇಲೆ ಹೋಗಿದೆ ಬಲಗಾಲಿಗೆ ಭಾರಿಗಾಯ ಮತ್ತು ಅಲ್ಲಿಲ್ಲಿ ಗುಪ್ತ ಪೆಟ್ಟಾಗಿದ್ದು ನಂತರ ಉಪಚಾರ ಕುರಿತು ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರದಲ್ಲಿ ಗುಣ ಮುಖನಾಗದೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment