ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಆಳಂದ
ಠಾಣೆ : ಶ್ರೀ ಮಹೇಶ ತಂದೆ ಕಲ್ಯಾಣಿ ಮಾನಕರ ಸಾ- ತಡಕಲ ಗ್ರಾಮ
ರವರು ದಿನಾಂಕ 08-06-2018 ರಂದು ರಾತ್ರಿ 10 ಗಂಟೆಯ ಸುಮಯದಲ್ಲಿ ನಾನು ನಮ್ಮ ಗ್ರಾಮದ ಅಂಬೆಡ್ಕರ
ಸರ್ಕಲ ಹತ್ತಿರ ಆಳಂದ ದಿಂದ ಬಂದು ನಿಂತಿರುವಾಗ ರಾಜಕೀಯ ವೈಶಮ್ಯ ಇಟ್ಟುಕೊಂಡು
ಒಮ್ಮಿಂದೊಮ್ಮಲೆ ನಮ್ಮ ಗ್ರಾಮದ ಶರಣಬಸಪ್ಪಾ ತಂದೆ ನಾಗಪ್ಪಾ ಜಮಾದಾರ ಅಲಿಯಾಸ್
ದಿಪು ಹಾಗು ರಾಜೇಂದ್ರ ತಂದೆ ಅಂಬಾರಾಯ ಜಮಾದಾರ ಎಕಾಏಕಿ ರಾಜೇಂದ್ರ ಅವರು ಕೈಯಲ್ಲಿ
ಕೊಡಲಿ, ಶರಣಬಸಪ್ಪನ ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದರು.
ರಾಜೇಂದ್ರನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಹೊಲೆಯಾ ಸುಳೆ ಮಗನೇ ಈ ಸಲ ರಾಜಕೀಯ
ಮಾಡಿದ್ದಿ, ಮುಂದಿನ ಸಲ ರಾಜಿಕೀಯ ಮಾಡಬಾರದು ಎಂದು ಹೇಳಿ ಬಲ ತಲೆಯ ಮೇಲೆ ಹೊಡೆದನು. ಆಗ
ರಕ್ತ ಸ್ರಾವ ಆಯ್ತು . ಆಗ ಶರಣಬಸಪ್ಪಾ ಬಡಿಗೆಯಿಂದ ನನ್ನ ಮೇಲೆ ಬೆನ್ನು ಮತ್ತು ಹೊಟ್ಟೆಯ ಮೇಲೆ
ಹಲ್ಲೆ ಮಾಡಿದನು. ಈಗ ನಮ್ಮ ಮಾಲಿಕರು ಆರಿಸಿ ಬಂದಾರ್ ಖಲಾಸ ಮಾಡ್ರಿ ರಂಡಿ ಮಗನಿಗೆ ಎಂದು ಹೇಳಿ
ಬೈಯುತ್ತಿದ್ದರು. ಮತ್ತು ಮನಬಂದಂತೆ ಹೊಡೆದರು. ಈ ರಂಡಿ ಮಗನಿಗೆ ಇವತ್ತು ಬಿಡಬ್ಯಾರದು
ಎಂದು ಬೈಯುತ್ತಿದ್ದರು. ಆಗ ನಾನು ಚಿರಾಡ ತೊಡಗಿದ್ದೆ ಆಗ ನಮ್ಮ ಗ್ರಾಮದ ರವೀಂದ್ರ ತಂದೆ ಶರಣಪ್ಪ
ಮಸನ , ಚಿದಾನಂದ ತಂದೆ ನಾಗಪ್ಪ ತಡಕಲ ಅವರು ಬಂದುದ್ದನ್ನು ನೋಡಿ ಅವರು ಕೃತ್ಯಕ್ಕೆ ಬಳಸಿದ
ವಸ್ತುಗಳು(ಮಾರಕಾಸ್ತ್ರ) ತೆಗೆದುಕೊಂಡು ಓಡಿ ಹೊದರು. ನಂತರ ನನಗೆ ಗ್ರಾಮದ ಈರಣ್ಣಾ ಮಾಳಗೆ ನನ್ನ
ತಮ್ಮನಾದ ಆಕಾಶ ತಂದೆ ಕಲ್ಯಾಣಿ ಕೂಡಿಕೊಂಡು ಆಳಂದ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ
ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗುಲಬರ್ಗಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ಸೆರ್ಪಡೆ ಮಾಡಿರುತ್ತಾರೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment