ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-06-2018 ರಂದು ಘತ್ತರಗಾ ಗ್ರಾಮದ ಭೀಮಾ ನದಿಗೆ ಹೋಗುವ ರಸ್ತೆಯ ಬಾಜು ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಘತ್ತರಗಾ ಗ್ರಾಮದ ಭೀಮಾನದಿ ಹತ್ತಿರ ಹೋಗಿ ಅಲ್ಲೆ ಸ್ವಲ್ಪ ದೂರ ಖಾಸಗಿ ವಾಹನ ನಿಲ್ಲಿಸಿ ನಡೆದುಕೊಂಡು ಹೋಗಿ, ಮರೆಯಾಗಿ ನಿಂತು ನೊಡಲು ಭೀಮಾನದಿಗೆ ಹೋಗುವ ರಸ್ತೆ ಬಾಜು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ 04 ಜನರು ದುಂಡಾಗಿ ಕುಳಿತುಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಜೂಜಾಟ ಆಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ 04 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1) ಅರ್ಜುನ ತಂದೆ ಶಂಕ್ರೆಪ್ಪ ಬಜಂತ್ರಿ 2) ಲಕ್ಷ್ಮಣ ತಂದೆ ಭೀಮಶ್ಯಾ ಭಜಂತ್ರಿ ಸಾ|| ಇಬ್ಬರು ಘತ್ತರಗಾ 3) ರಮೇಶ ತಂದೆ ನಿಂಗಪ್ಪ ಭಜಂತ್ರಿ ಸಾ||ಜಾಲವಾದಿ ತಾ||ಸಿಂದಗಿ 4) ಸಂತೋಷ ತಂದೆ ಬಸಣ್ಣ ಭಜಂತ್ರಿ ಸಾ||ಘತ್ತರಗಾ ಅಂತ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ 52 ಇಸ್ಪಿಟ್ ಎಲೆಗಳು ನಗದು ಹಣ 8060/- ರೂಪಾಯಿಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ
ಅಫಜಲಪೂರ ಠಾಣೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಕಮಲಾಪೂರ
ಠಾಣೆ : ಶ್ರೀಮತಿ ಸುರೇಖ ಗಂಡ ರೇವಣಸಿದ್ದಪ್ಪ ಜನಕಟ್ಟಿ ಮು:ಡೊಂಗರಗಾಂವ ತಾ:ಜಿ:ಕಲಬುರಗಿ
ಸೂಮಾರು 1 ತಿಂಗಳ ಹಿಂದೆ ಡೊಂಗರಗಾಂವ ಗ್ರಾಮದ ವೀರಭದ್ರಪ್ಪ @ ಭದ್ರಪ್ಪ ಇವರ ಹಿರಿಯ ಮಗನಾದ ರೇವಣಸಿದ್ದಪ್ಪ ಇವರೊಂದಿಗೆ
ಮದುವೆ ಮಾಡಿಕೊಟ್ಟಿದ್ದು. ನಾವಿಬ್ಬರೂ ಅನ್ಯೋನ್ಯವಾಗಿದ್ದೇವು. ಡೊಂಗರಗಾಂವ ಗ್ರಾಮ ಸೀಮಾಂತರದಲ್ಲಿ
ನನ್ನ ಗಂಡನ ಹೆಸರಲ್ಲಿ ಸರ್ವೆ ನಂಬರ-24 ನೇದ್ದರಲ್ಲಿ 2 ಎಕರೆ
ಜಮೀನ ಇದ್ದು. ನನ್ನ ಗಂಡ ಒಕ್ಕಲುತನ ಕೆಲಸ ಮಾಡಿಕೊಂಡಿದ್ದರು. ಮದುವೆಯಾದ 15 ದಿನಗಳ ನಂತರ ನನ್ನ ಗಂಡ ನನ್ನೊಂದಿಗೆ ಹಾಗೂ ನನ್ನ ಅತ್ತೆ
ಹಾಗೂ ಅವರ ಮನೆಯವರೊಂದಿಗೆ ಸರಿಯಾಗಿ ಮಾತನಾಡದೆ ಸರಿಯಾಗಿ ಊಟ ಕೂಡಾ ಮಾಡದೆ
ಒಬ್ಬಂಟಿಗನಾಗಿರುತ್ತಿದ್ದು. ನಾನು ಆಗಾಗ ನನ್ನ ಗಂಡನಿಗೆ ನೀವು ಯಾಕೆ ಒಬ್ಬರೆ ಸುಮ್ಮನೆ
ಕುಡುತ್ತಿರಿ ಸರಿಯಾಗಿ ಊಟ ಕೂಡಾ ಮಾಡುವುದಿಲ್ಲ ಏನ ಚಿಂತೆ ಮಾಡುತ್ತಿರಿ ಅಂತಾ ಕೇಳಿದಾಗ ನನ್ನ
ಗಂಡ ತಾನು ತನ್ನ ಹೆಸರಿನಲ್ಲಿರುವ ಹೋಲ ಸರ್ವೆ ನಂ.24 ನೇದ್ದರ
ಮೇಲೆ ಈಗ್ಗೆ ಸೂಮಾರು 2 ವರ್ಷಗಳ ಹಿಂದೆ ಡೊಂಗರಗಾಂವ ಗ್ರಾಮದ ಪಿ.ಕೆ.ಜಿ.ಬಿ
ಬ್ಯಾಂಕನಲ್ಲಿ 50 ಸಾವಿರ ರೂಪಾಯಿಗಳ ಬೆಳೆ ಸಾಲ ತೆಗೆದುಕೊಂಡಿದ್ದು.
ಕಾಲಕ್ಕೆ ಸರಿಯಾಗಿ ಮಳೆ ಆಗದೆ ಬೆಳೆ ಬೆಳೆಯದೆ ಇದ್ದರಿಂದ ಸಾಲ ಮುಟ್ಟಿಸಲು ಆಗುತ್ತಿಲ್ಲ ಸಾಲ
ಹೇಗೆ ಮುಟ್ಟಿಸುವುದು ಅಂತಾ ಚಿಂತೆ ಆಗುತ್ತಿರುವ ಬಗ್ಗೆ ಹೇಳಿದ್ದರಿಂದ ನಾನು ಮತ್ತು ನನ್ನ ಅತ್ತೆ
ಶೇಖಮ್ಮ ಜನಕಟ್ಟಿ ಇವರು ಕೂಡಿ ನನ್ನ ಗಂಡನಿಗೆ ನೀವು ಚಿಂತೆ ಮಾಡಬೇಡಿರಿ ದೇವರು ಕಣ್ಣು ತೆಗೆದರೆ
ಯಾವುದು ಸಾಲ ದೋಡ್ಡದಲ್ಲ ಮುಂದೆ ನಿಧಾನವಾಗಿ ಸಾಲ ಮುಟ್ಟಿಸೋಣ ಅಂತಾ ಧೈರ್ಯ ಹೇಳುತ್ತ ಬಂದಿದ್ದರು
ಕೂಡಾ ನನ್ನ ಗಂಡ ಹಾಗೆ ಮೋದಲಿನಂತೆ ಒಬ್ಬಂಟಿಗನಾಗಿ ಕುಡುತ್ತ ಸಾಲ ಮುಟ್ಟಿಸುವ ವಿಷಯದಲ್ಲಿ
ಮಾನಸಿಕ ಮಾಡಿಕೊಂಡು ಊಟ ತಿಂಡಿ ಮಾಡುತ್ತಿರಲಿಲ್ಲ. ಹೀಗಿದ್ದು ಇಂದು ದಿನಾಂಕ:08-06-2018 ರಂದು ಮುಂಜಾನೆ 10-30 ಗಂಟೆಯ ಸೂಮಾರಿಗೆ ನಾನು ನನ್ನ ಮನೆಯಲ್ಲಿ ಬಟ್ಟೆ ಒಗೆಯುತ್ತಿದ್ದು ನನ್ನ ಅತ್ತೆ
ಬಟ್ಟೆಯನ್ನು ಹಿಂಡುತ್ತಿದ್ದಾಗ ನನ್ನ ಗಂಡ ರೇವಣಸಿದ್ದಪ್ಪ ಈತನು ಮನೆಯಿಂದ ಹೋಲದ ಕಡೆಗೆ ಹೋಗಿ
ಬರುತ್ತೇನೆ ಅಂತಾ ಹೇಳಿ ಹೋಗಿದ್ದು. ಇಂದು ಮದ್ಯಾಹ್ನ 01.00 ಗಂಟೆಯ
ಸೂಮಾರಿಗೆ ನಮ್ಮೂರ ಸಂಜುಕುಮಾರ ರಾಜೇಶ್ವರ ಇವರು ನನಗೆ ಫೊನ ಮಾಡಿ ತಿಳಿಸಿದ್ದೆನಂದರೆ. ನಿನ್ನ
ಗಂಡ ರೇವಣಸಿದ್ದಪ್ಪ ಈತನು ನಿಮ್ಮ ಹೋಲದ ಬಂದಾರಿಯಲ್ಲಿನ ಬೇವಿನ ಗಿಡಕ್ಕೆ ಪ್ಲಾಸ್ಟಿಕ ಹಗ್ಗದಿಂದ
ಕುತ್ತಿಗೆಗೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದು. ಆಗ ನಾನು ಗಾಬರಿಗೊಂಡು
ಸದರಿ ವಿಷಯವನ್ನು ನನ್ನ ಅತ್ತೆ ಶೇಖಮ್ಮ ಜನಕಟ್ಟಿ ಶೋಭಾ ವಾರದ ಇವರಿಗೆ ತಿಳಿಸಿ ನಂತರ ನಾವೇಲ್ಲರೂ
ಕೂಡಿ ಇಂದೇ ಮದ್ಯಾಹ್ನ 01.30 ಗಂಟೆಯ ಸೂಮಾರಿಗೆ ನಮ್ಮ ಹೋಲದ ಬಂದಾರಿಯಲ್ಲಿ ಬಂದು
ನೋಡಲು ಸಂಜುಕುಮಾರ ಇವರು ಹೇಳಿದಂತೆ ನನ್ನ ಗಂಡ ರೇವಣಸಿದ್ದಪ್ಪ ಈತನು ಬಂದಾರಿಯಲ್ಲಿನ ಬೆವಿನ
ಗಿಡಕ್ಕೆ ಪ್ಲಾಸ್ಟಿಕ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ನಾಲಿಗೆ ಹೋರೆ ಚಾಚಿ ಮೃತ
ಪಟ್ಟಿದ್ದು ನಿಜ ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ
ಶಶಿಕುಮಾರ ತಂದೆ ಶಿಡ್ಡೇಪ್ಪ ಮೋರೆ ಸಾ|| ಬಸವರಾಜಪೂರ ತಾ||ಚನ್ನಗಿರಿ ಜಿ||ದಾವಣಗೇರಾ ರವರು ಹಾಗು ಬಸವರಾಜ ತಂದೆ ರಂಗಪ್ಪ ದೂರ್ವೆ ಇಬ್ಬರು ಬೋಲೇರೋ ಪಿಕ್ ಆಫ್ ನಂ ಕೆಎ-17 ಸಿ-2541 ನೇದ್ದರ ಮೇಲೆ ನಾನು ಕ್ಲೀನರ ಹಾಗು ಬಸವರಾಜ ಈತನು ಚಾಲಕ ಕೆಲಸ ಮಾಡಿಕೊಂಡಿರುತ್ತೇವೆ ನಾವು ಮೀನಿನ ವ್ಯಾಪಾರ ಮಾಡುತ್ತೇವೆ ಈಗ 5-6 ದಿವಸಗಳಿಂದ ನಾನು ಬಸವರಾಜ ಹಾಗು ವಾಹನದ ಮಾಲಿಕನಾದ ಸುನಿಲ ಧೂರ್ವೆ ಅಫಜಲಪೂರ ತಾಲೂಕಿನ ಚಿಕ್ಕ ಗೊಬ್ಬುರಕ್ಕೆ ಬಂದಿದ್ದು ಚಿಕ್ಕ ಗೊಬ್ಬರ ಕೆರೆಯಲ್ಲಿ ಮೀನು ಹಿಡಿದು ನಮ್ಮ ವಾಹನದಲ್ಲಿ ಸೋಲಾಪೂರಕ್ಕೆ ತಗೆದುಕೊಂಡು ಹೋಗಿ ವ್ಯಾಪಾರ ಮಾಡುತ್ತೇವೆ ದಿನಾಂಕ 03/06/2018 ರಂದು 10.00 ಪಿಎಮ್ ಸುಮಾರಿಗೆ ನಾನು ಚಾಲಕ ಬಸವರಾಜ ಹಾಗು ಮಾಲಿಕನಾದ ಸುನಿಲ ಮೂರು ಜನರು ಚಿಕ್ಕಗೊಬ್ಬುರದಿಂದ ನಮ್ಮ ವಾಹನದಲ್ಲಿ ಮೀನು ತಗೆದುಕೊಂಡು ಅಫಜಲಪೂರ ಮಾರ್ಗವಾಗಿ ಸೋಲಾಪೂರಕ್ಕೆ ಹೋಗಿ ವ್ಯಾಪಾರ ಮಾಡಿ ಮರಳಿ ದಿನಾಂಕ 04/06/2018 ರಂದು ಬರುವಾಗ ಬಳೂರ್ಗಿ ದಾಟಿದ ಬಳಿಕ ನಮ್ಮ ವಾಹನದ ಚಾಲಕನಾದ ಬಸವರಾಜ ಈತನು ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸುತಿದ್ದನು ನಾವು ನಿಧಾನವಾಗಿ ಚಲಾಯಿಸು ಅಂತ ಹೇಳಿದರು ಕೇಳದೆ ಹಾಗೆ ಚಲಾಯಿಸುತ್ತಾ ಮಾದಬಾಳ ತಾಂಡಾದ ಹತ್ತಿರ ರೋಡಿನ ಬಾಜು ಇದ್ದ ಸಂಚಾರಿ ಸುರಕ್ಷತಾ ಡಿವೈಡರ್ ಕಂಬಕ್ಕೆ ಡಿಕ್ಕಿ ಪಡಿಸಿದ ರಬಸಕ್ಕೆ ಸುನಿಲ ರವರಿಗೆ ಎಡಕಾಲಿಗೆ ಭಾರಿ ರಕ್ತಗಾಯ ಹಾಗು ಮೈಕೈಗೆ ಗುಪ್ತಗಾಯಗಳಾಗಿರುತ್ತವೆ ನನಗೆ ಹಾಗು ಚಾಲಕನಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುತ್ತವೆ ನಮ್ಮ ವಾಹನದ ಮುಂದಿನ ಭಾಗ ಜಕಂ ಆಗಿರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಮುಸ್ತಾಫ್ ತಂದೆ ಬಾಬು ಆಲಮೇಲಕರ ಸಾ||ನಿಚೆಗಲ್ಲಿ ಅಫಜಲಪೂರ ರವರು ದಿನಾಂಕ 06/06/2018 ರಂದು ನಾನು ನಮ್ಮ ಮನೆಯಲಿದ್ದಾಗ ನಮ್ಮ ಅಣ್ಣತಮ್ಮಕಿಯ ಗೌಸ ತಂದೆ ಅಬ್ದುಲಗನಿ ಆಲಮೇಲಕರ ರವರು ನನ್ನ ಮೋಬೈಲಗೆ ಕರೆ ಮಾಡಿ ತಿಳಿಸಿದ್ದೆನೆಂದರೆ ನಾನು ಹಾಗು ರಫೀಕ್ ತಂದೆ ಮೈಬೂಬ ಆಲಮೇಲಕರ ಇಬ್ಬರು ನಮ್ಮ ಮೋಟಾರ್ ಸೈಕಲ್ ಮೇಲೆ ದುದನಿಗೆ ಹೋಗುತಿದ್ದಾಗ ನಮ್ಮ ಮುಂದೆ ನಿಮ್ಮ ಅಣ್ಣನಾದ ಯುಸೂಫ್ ರವರು ಮೋಟಾರ ಸೈಕಲ್ ನಂ ಕೆಎ-32 ಇಎಫ್-8560 ನೇದ್ದರ ಮೇಲೆ ಮಾದಬಾಳ ತಾಂಡಾ ಕಡೆ ಹೋಗುತಿದ್ದರು ನಮ್ಮ ಪಟ್ಟಣದ ಬಸ್ ಡಿಪೋ ಹತ್ತಿರ ಮುಖ್ಯ ರಸ್ತೆ ಮೇಲೆ ಎದುರಿನಿಂದ ಒಬ್ಬ ಲಾರಿ ಚಾಲಕ ತನ್ನ ಲಾರಿಯನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ ಹೋಗುತಿದ್ದ ನಿಮ್ಮ ಅಣ್ಣನವರ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ಅಣ್ಣ ರೋಡಿನ ಬಾಜು ಬಿದ್ದು ಭಾರಿ ಗಾಯ ಹೊಂದಿರುತ್ತಾರೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ಓಣಿಯ ಸೈಯದ್ ತಂದೆ ಮಹ್ಮದ್ ಹುಸೇನ ಕಿಣ್ಣಿ ಇಬ್ಬರು ಒಂದು ಖಾಸಗಿ ವಾಹನ ತಗೆದುಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನಮ್ಮ ಅಣ್ಣನ ತಲೆಗೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಎರಡು ಕಾಲುಗಳಿಗೆ ಭಾರಿ ರಕ್ತಗಾಯ,ಮೈ ಕೈಗಳಿಗೆ ತರಚಿದ ರಕ್ತಗಾಯಗಳಾಗಿರುತ್ತವೆ ಸದರಿ ಡಿಕ್ಕಿ ಪಡಿಸಿದ ಲಾರಿ ಚಾಲಕನು ತನ್ನ ಲಾರಿ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಸದರಿ ಲಾರಿ ನಂಬರ ನೋಡಲಾಗಿ ಎಮ್ ಹೆಚ್ 12 ಕೆಪಿ 4577 ಅಂತ ಇರುತ್ತದೆ. ನಂತರ ನಾವೇಲ್ಲರು ಸದರಿ ಘಟನೆಯಲ್ಲಿ ಗಾಯ ಹೊಂದಿದ ನಮ್ಮ ಅಣ್ಣ ಯುಸೂಫ್ ಗೆ ಖಾಸಗಿ ವಾಹನದಲ್ಲಿ ಹಾಕಿಕೊಂಡು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment