ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ
10/6/18 ರಂದು ಬೆಳಿಗ್ಗೆ ನಾಗೂರ ತಾಂಡಾದಿಂದ ನಮ್ಮ ಗುತ್ತೆದಾರ ಠಾಕೂರ ಜಾಧವ ಇವರ ಹೇಳಿದ
ಪ್ರಕಾರ ಹಾಗರಗಾ ಕ್ರಾಸ ಹತ್ತಿರುವ ಸೈಟಿಗೆ ಛತ್ತು ಹಾಕುವ ಕೂಲಿ ಕೆಲಸಕ್ಕೆ ಶ್ರೀ ಸಂತೋಷ ತಂದೆ ದೇವಿದಾಸ
ಜಾಧವ ಸಾ : ನಾಗೂರ ತಾಂಡಾ ರವರು ಮತ್ತು
ಕರ್ಣ, ಪೂಜಾ, ಪ್ರಿಯಾಂಕ, ಸವಿತಾ, ಗುರಿಬಾಯಿ, ವಿಕಾಸ ಜಾಧವ ಲಲಿತಾಬಾಯಿ ಇವರನ್ನು ಲಾರಿ KA 27 2694 ಚಾಲಕ ಪ್ರಕಾಶ ತಂದೆ ಶಂಕರ ರಾಠೋಡ ಸಾ: ನಾಗೂರ ತಾಂಡಾ
ಇತನು ಕೂಡಿಸಿಕೊಂಡು ಕಲಬುರಗಿ ಕಡೆ ಹೊರಟಿದ್ದು ಮಾಹಾಗಾಂವ ಕ್ರಾಸನಲ್ಲಿ ಜಾಕೀರ, ಶಿವಾನಂದ,
ನಾಗೇಶ ಇವರುಗಳು ಲಾರಿಯಲ್ಲಿ ಏರಿ ಕುಳಿತುಕೊಂಡರು. ಅಂಕಲಗಿ ಕ್ರಾಸನಲ್ಲಿ ಮಂಜುನಾಥ @ ಬಸವರಾಜ ಇತನು ಏರಿದ್ದು, ಲಾರಿ ಚಾಲಕ ಪ್ರಕಾಶ ರಾಠೋಡ ಇತನು
ತನ್ನ ವಶದಲ್ಲಿದ್ದ ಲಾರಿ KA 27
2694 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ
ಹಾಗೂ ಅಡ್ಡಾ ತಿಡ್ಡಿಯಾಗಿ ನಡೆಸುತ್ತಾ ಬೆಳಗಿನ 09-00 ಗಂಟೆ ಸುಮಾರಿಗೆ ಅವರಾದ (ಬಿ) ಗ್ರಾಮದ
ಸೀಮಾಂತರದಲ್ಲಿ ಬರುವ ತೊಗರಿನಾಡು ಎಂದು ಬರೆದ ಬೋರ್ಡ ಹತ್ತಿರ ಬಂದಾಗ ಎದುರುನಿಂದ ಬರುತ್ತಿದ್ದ
ಅಂದರೆ ಕಲಬುರಗಿ ಕಡೆಯಿಂದ ಬರುತ್ತಿದ್ದ ಬಿಳಿ ಬಣ್ಣ
ಕಾರ KA
19 MD 3587 ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಲಾರಿ
ರೋಡಿನ ಬಲಭಾಗದಲ್ಲಿ ತೆಗ್ಗಿನಲ್ಲಿ ಹೋಗಿ ನಿಂತಿರುತ್ತದೆ. ಇದರಿಂದಾಗಿ ಲಾರಿಯಲ್ಲಿದ್ದ ನನಗೆ
ಮತ್ತು ಕರ್ಣ, ಜಾಕೀರ, ಪ್ರಕಾಶ, ವಿಕಾಸ, ನಾಗೇಶ,ಮಂಜುನಾಥ @ ಬಸವರಾಜ, ಶಿವಾನಂದ, ಪೂಜಾ,
ಪ್ರಿಯಾಂಕಾ, ಗುರಿಬಾಯಿ, ಸವಿತಾ, ಲಲಿತಾಬಾಯಿ ಇವರುಗಳಿಗೆ ರಕ್ತಗಾಯ ಮತ್ತು
ಗುಪ್ತಗಾಯಗಳಾಗಿದ್ದು, ಅವರಲ್ಲಿ ವಿಕಾಸ, ನಾಗೇಶ ಇಬ್ಬರಿಗೂ ಭಾರಿ ರಕ್ತಗಾಯ ಮತ್ತು
ಗುಪ್ತಗಾಯಗಳಾಗಿ ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಎ.ಎಸ್.ಎಂ. ಆಸ್ಪತ್ರ ಕಲಬುರಗಿ, ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ,
ಯುನೈಟೆಡ ಆಸ್ಪತ್ರೆ ಕಲಬುರಗಿ, ಬಸವೇಶ್ವರ ಆಸ್ಪತ್ರೆ ಕಲಬುರಗಿ ಮೇಲ್ಕಂಡವರು ಉಪಚಾರ ಕುರಿತು
ಸೇರಿಕೆಯಾಗಿರುತ್ತಾರೆ. ಲಲಿತಾಬಾಯಿ ಇವಳಿಗೆ ಅಂತಹ ಪೆಟ್ಟಗಾದ ಕಾರಣ ಆಸ್ಪತ್ರೆಗೆ
ತೋರಿಸಕೊಂಡಿರುವುದಿಲ್ಲಾ. ಈ ಅಪಘಾತವು ಈ ಮೇಲೆ ಹೇಳಿದಂತೆ ನಮ್ಮ ಲಾರಿ KA 27 2694 ಚಾಲಕ
ಪ್ರಕಾಶ ತಂದೆ ಶಂಕರ ರಾಠೋಡ ಇತನ ತಪ್ಪಿನಿಂದ ಸಂಭವಿಸಿರುತ್ತದೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದಿನಾಂಕ 11/06/18 ರಂದು ರಾತ್ರಿ
12-15 ಗಂಟೆ ಸುಮಾರಿಗೆ ಯುನೈಟೆಡ ಆಸ್ಪತ್ರೆ ಕಲಬುರಗಿ ಸಿಬ್ಬಂದಿಯವರು ಪೋನ ಮುಖಾಂತರ ವಿಕಾಸ
ತಂದೆ ಗೋಪು @ ಗೋಪಾಲ ಜಾಧವ ಸಾ: ನಾಗೂರ ತಾಂಡಾ ಇತನು ಗುಣ ಮುಖ ಹೊಂದದೇ ಮೃತಪಟ್ಟಿರುತ್ತಾನೆ ಅಂತಾ
ತಿಳಿಸಿದರ ಮೇರೆಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣಗಳು :
ಮಹಿಳಾ ಠಾಣೆ : ಶ್ರೀಮತಿ
ಪೂಜಾ ಗಂಡ ಸಚಿನ ಚವ್ಹಾಣ ಸಾ: ಕಮಲಾಪೂರ ಚವ್ಹಾಣ ತಾಂಡಾ ತಾ:ಜಿ: ಕಲಬುರಗಿ ಹಾ:ವ ಹನುಮಾನ ನಗರ
ತಾಂಡಾ ಕಲಬುರಗಿ ಇವರ ಮದುವೆಯು ಸಚಿನ ತಂದೆ ಸುಭಾಷ ಚವ್ಹಾಣ ಇವರೊಂದಿಗೆ ಹಿಂದು ಸಂಪ್ರದಾಯದಂತೆ 4 ವರ್ಷ ಕಳೆದಿರುತ್ತವೆ. ಮದುವೆಯಾದಾಗಿನಿಂದ 3
ವರ್ಷಗಳವರೆಗೆ ನನ್ನೊಂದಿಗೆ ಅನೂನ್ಯತೆಯಿಂದ ಇದ್ದ ನನ್ನ ಪತಿ ಇತ್ತಿತ್ತಲಾಗಿ ಸುಮಾರು 1 ವರ್ಷಗಳಿಂದ ನನ್ನ ಪತಿಯವರು ನನ್ನ
ಅತ್ತೆಯಾದ 1)ಶ್ರೀಮತಿ ಜಗುಬಾಯಿ ಗಂಡ ಸುಭಾಷ ಚವ್ಹಾಣ 2) ಮಾವನಾದ ಸುಭಾಷ 3) ಮೈದುನಾದ ಸುನೀಲ
ತಂದೆ ಸುಭಾಷ ಚವ್ಹಾಣ ಇವರೆಲ್ಲರೂ ಕುಮ್ಮಕಿನಿಂದಲೇ ನನ್ನ ತವರು ಮನೆಯಿಂದ 4 ತೊಲೆ ಬಂಗಾರ ಹಾಗೂ 1
ಲಕ್ಷ ಹಣ ತೆಎಗೆದುಕೊಂಡು ಬಾ ನನ್ನ ಪತಿ ಹಾಗೂ ಅತ್ತೆ ಮೈದು ಎಲ್ಲರೂ ಕಿರುಕುಳ ನೀಡುತ್ತಿರುವ
ಪ್ರಯುಕ್ತ ನಾನು ನನ್ನ ತವರು ಮನೆಯಾದ ಹನುಮಾನ ನಗರ ತಾಂಡಾ ತವರು ಮನೆಯಲ್ಲಿ ಸುಮಾರು 1
ವರ್ಷದಿಂದ ವಾಸ ಮಾಡುತ್ತಿದ್ದೇನೆ ಈ ಹಿಂದೆ ನನ್ನ ಪತಿಯವರು ಹೊರಗಿನ ದೇಶಕ್ಕೆ ಹೋಗುವುದು ಇದೆ
ಮೇಡಿಕಲ ಚೆಕ ಮಾಡಿಸಿಕೊಂಡು ಬರುತ್ತೇನೆಂದು ಹೇಳಿ 1 ವರ್ಷ ಕಳೆದರು ಸಹ ಇಲ್ಲಿಯವರೆಗೆ ಮನೆಗೆ
ಬಂದಿರುವುದಿಲ್ಲ ಸದರಿ ನನ್ನ ಪತಿಯವರ ಮೋಬೈಲ ನಂ 9945333507 ಗೆ ಕರೆ ಮಾಡಿ ನನ್ನ ತವರು ಮನಗೆ
ಬಂದು ನನಗೆ ಕರೆದುಕೊಂಡು ಹೋಗು ಎಂದು ಎಷ್ಟೊಂದು ಸಹ ವಿನಂತಿ ಮಾಡಿಕೊಂಡಿದರು ಸಹ ಮನೆಗೆ
ಬರುವುದಿಲ್ಲ ನೀ ಏನು ಮಾಡುತ್ತಿ ಮಾಡಿಕೊ ಎಂದು ಹೇಳುತ್ತಿದ್ದಾರೆ. ಮಾನ್ಯರೇ ನನ್ನ ತಂದೆ
ತಾಯಿ ವಯೋವೃದ್ದರಾಗಿದ್ದು ಕೂಲಿ ಕೆಲಸ ಮಾಡಿ ತಮ್ಮ ಉಪಜೀವನ ನಿರ್ವಹಿಸುತ್ತಿದ್ದಾರೆ ಇಂತಹ
ಸಂಕಷ್ಟ ಪರಿಸ್ಥಿಯಲ್ಲ 4 ತೊಲೆ ಬಂಗಾರ ಹಾಗೂ 1 ಲಕ್ಷ ಹಣ ಕೊಡಲಾರದಂತಹ ಸಂಕಷ್ಟ ಪರಿಸ್ಥಿಯಲ್ಲಿ
ನನ್ನ ತಂದ ತಾಯಿಯವರು ಇರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮುಧೋಳ ಠಾಣೆ : ಶ್ರೀಮತಿ ಗೀತಾ
ಗಂಡ ವೆಂಕಟೇಶ ತಳವಾರವ ಸಾ: ಗುಂಡಳ್ಳಿ(ಬಿ) ತಾ : ಸೇಡಂ ಇವರು ಸುಮಾರು 6 ವರ್ಷ 11 ತಿಂಗಳ ಹಿಂದೆ ಅಂದರೆ ದಿನಾಂಕ 08-06-2011 ರಂದು ಗುಂಡಳ್ಳಿ(ಬಿ) ಗ್ರಾಮದ ವೆಂಕಟೇಶ ತಂದೆ ಅನಂತಪ್ಪ ಇವರೊಂದಿಗೆ
ಮದುವೆ ಮಾಡಿ ಕೊಟ್ಟಿದ್ದು ಈಗ ನನಗೆ 6 ವರ್ಷದ ಬಾನುಪ್ರಸಾದ ಅಂತಾ ಗಂಡು ಮಗ ಹಾಗು 3 ವರ್ಷದ ದಿವ್ಯಾ ಅಂತಾ ಮಗಳಿದ್ದು. ಮದುವೆಯಾಗಿ ಸುಮಾರು 2-3 ವರ್ಷದವರೆಗೆ ನನ್ನ ಗಂಡನು ನನಗೆ ಚೆನ್ನಾಗಿ ನೋಡಿಕೊಂಡಿದ್ದು ನಂತರ ನನ್ನ ಗಂಡನು ನನಗೆ
ದಿನಾಲು ಮದ್ಯ ಕುಡಿದು ಬಂದು ನಿಮ್ಮ ತಂದೆ ಮದುವೆಯಲ್ಲಿ ನನಗೆ ಎರಡವರೆ ತೊಲೆ ಬಂಗಾರ 35,000/- ಸಾವಿರ ರೂ ಕೊಟ್ಟಿದ್ದು ನನಗೆ ಕಡಿಮೆ ವರದಕ್ಷಿಣೆಕೊಟ್ಟಿದ್ದು, ನೀನು ನಿಮ್ಮ ತಂದಗೆ ಹೇಳಿ ಇನ್ನು 1 ತೊಲೆ ಬಂಗಾರ ಮತ್ತು 20,000 ರೂಪಾಯಿ ಹಣವನ್ನು ತೆಗೆದುಕೊಂಡು ಬಾ ಅಂತಾ ನನಗೆ ದಿನಾಲು ಹೊಡೆ
ಬಡೆ ಮಾಡಿ ದೈಹಿಕ ಮತ್ತು ಮಾನಸಿಕ ಕಿರುಕುಳ ನಿಡುತ್ತಿದ್ದರಿಂದ ನಾನು ನಮ್ಮ ತವರು ಮನೆಯಲ್ಲಿ ಹೇಳಿದ್ದು, ಅವರು ಹಲವುಬಾರಿ ನನ್ನ ಗಂಡನಿಗೆ ಬುದ್ದಿವಾದ ಹೇಳಿದ್ದು, ಇಂದಲ್ಲಾ ನಾಳೆ ಸರಿಹೋಗಬಹುದು ಅಂತಾ ನಾನು ಸುಮ್ಮನಾಗಿದ್ದೇನು. ದಿನಾಂಕ: 21-05-2018 ರಂದು ಬೆಳಗ್ಗೆ 11-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಗಂಡನಾದ ವೆಂಕಟೇಶ ಇವರು ಹೊರಗಿನಿಂದ
ಮದ್ಯ ಕುಡಿದು ಮನೆಗೆ ಬಂದು ನನಗೆ ಏರಂಡಿ ಏನುಮಾಡುತ್ತಿಯಾ ಮೊನ್ನೆ ನಿಮ್ಮ ತಂದೆ ನನಗೆ ದೌಲತಾಬಾದ
ಮದುವೆಗೆ ಹೋದಾಗ ಬೈದು ನನ್ನ ಮರಯಾದೆ ಹಾಳು ಮಾಡಿದ್ದಾನೆ ನಿಮ್ಮ ತಂದೆಗೆ ಬಹಳಸೊಕ್ಕು ಬಂದಿದೆ ನಿನು
ಅಲ್ಲೆ ಇದ್ದರೂ ನಿಮ್ಮ ತಂದೆಗೆ ಏನು ಹೇಳಲಿಲ್ಲ ರಂಡಿ ಅಂತಾ ನನಗೆ ಅವ್ಯಾಚ್ಯ ಶಬ್ದಗಳಿಂದ ಬೈಯುತ್ತಾ
ಬಂದಾಗ ನಾನು ಯಾಕೆ ಸುಮ್ಮ ನೆಬೈಯುತ್ತಿರಿ ಅವರು ನಮಗೆ ಬುದ್ದಿಹೇಳಿರುತ್ತಾರೆ ಅಂತಾ ಹೇಳುತ್ತಿದ್ದಾಗ
ಏರಂಡಿ ನೀನು ಅವರ ಪರವಾಗಿ ಮಾತನಾಡುತ್ತಿಯಾ ನಿನಗೆ ಬಹಳ ಸೊಕ್ಕು ಇದೆ ಹೋಗು ನೀನು ನಿಮ್ಮ ತಂದೆಯ ಮನೆಗೆ
ಹೋಗಿ ನನಗೆ ನಿಮ್ಮ ತಂದೆ ನನಗೆ ಮದುವೆಯಲ್ಲಿ ವರದಕ್ಷಿಣೆ ಕಡಿಮೆ ಕೊಟ್ಟಿರುತ್ತಾನೆ ನೀನು ಹೋಗಿ ಇನ್ನು
1 ತೊಲೆ ಬಂಗಾರ ಮತ್ತು 20,000 ರುಪಾಯಿ ಹಣವನ್ನು ತೆಗೆದುಕೊಂಡುಬಾ ಅಂತಾ ನನಗೆ ಕೈಯಿಂದ ಮೈಕೈಗೆ
ಹೊಡೆಬಡೆ ಮಾಡುತ್ತಿದ್ದಾಗ ನಮ್ಮ ಭಾವನ ಹೆಂಡತಿಯಾದ ಸವಿತಾ ಇವಳು ಬಂದು ಬಿಡಿಸಿದ್ದು ನಂತರ ಸುಮ್ಮಾನಗಿದ್ದು
ನಂತರ ಸಾಯಕಾಂಲ 05-30 ಗಂಟೆಯ ಸುಮಾರಿಗೆ ಹೊರಗಿನಿಂದ ಬಂದು ನನಗೆ ನೋಡಿ ಏರಂಡಿ ನೀನು
ಇನ್ನು ಇಲ್ಲೆಇದ್ದಿಯಾ ನಿನು ನಿಮ್ಮ ತಂದೆಯ ಮೆನೆಗೆ ಹೋಗಿ ಹಣ ಬಂಗಾರ ತೆಗೆದುಕೋಂಡುಬಾ ಅಂತಾ ಹೇಳಿದ್ದರು
ಹೋಗಿಲ್ಲವಲ್ಲ ನೀನು ಅಂತಾ ಬೈಯುತ್ತಿದ್ದಾಗ, ನಾನು ಯಾಕೆಹೋಗಬೇಕು ಅಂತಾ ಹೇಳಿದ್ದಕ್ಕೆ, ನನ್ನ ಗಂಡನು ಬೊಸಡಿ ನೀನು ನನಗೆ ಎದುರು ಮಾತಾಡುತ್ತಿಯಾ ಅಂತಾ ನನಗೆ ಅಲ್ಲೆ ಮನೆಯಲ್ಲಿದ್ದ
ಕಟ್ಟಿಗೆಯನ್ನು ತೆಗೆದುಕೊಂಡು ಮೈಕೈಗೆ ಹಾಗು ಬಲಗಣ್ಣಿನ ಕೆಳಗಡೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯಪಡಿಸಿದ್ದು, ನಂತರ ನಾನು ಚಿರಾಡುವ ಸಪ್ಪಳ ಕೇಳಿ ನಮ್ಮ ಪಕ್ಕದ ಮನೆಯವರಾದ
ಮೈಪಾಲ ಹಾಗು ಮಾಧವರೆಡ್ಡಿ ಇವರುಗಳು ಬಂದು ನನಗೆ ಹೊಡೆಬಡೆಮಾಡುವುದನ್ನು ಬಿಡಿಸಿಕೊಂಡಿದ್ದು ಇರುತ್ತದೆ.
ನಂತರ ನಾನು ಸ್ವಲ್ಪ ಸಮಯದ ನಂತರ ನಮ್ಮ ತಂದಗೆ ಪೋನ ಮಾಡಿ ವಿಷಯ ತಿಳಿಸಿದಾಗ ನಮ್ಮ ತಂದೆ ಹಾಗು ನಮ್ಮ
ಅಣ್ಣನಾದ ನರೇಶ ಇವರು ನನ್ನ ಗಂಡನ ಮನಗೆ ಬಂದು ನನಗೆ ವಿಚಾರಿಸಿ ನನಗೆ ಉಪಚಾರ ಕುರಿತು ಮುಧೋಳ ಆಸ್ಪತ್ರೆಗೆ
ಕರೆದುಕೊಂಡು ಬರುತ್ತಿದ್ದಾಗ ನನ್ನ ಗಂಡನು ನಮ್ಮ ತಂದೆ ಮತ್ತು ಅಣ್ಣನಿಗೆ ಏಬೋಸುಡೀಮಕ್ಕಳ್ಯಾ ನಿಮ್ಮ
ಮಗಳಿಗೆ ಮತ್ತೆ ವಾಪಾಸ ನಮ್ಮ ಮನೆಗೆ ಕರೆದುಕೊಂಡು ಬಂದರೇ ನಿಮ್ಮನ್ನು ಅವತ್ತೆ ಖಲಾಸ ಮಾಡುತ್ತೆನೆ
ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮುಧೋಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment