POLICE BHAVAN KALABURAGI

POLICE BHAVAN KALABURAGI

27 June 2017

Kalaburagi District Reported Crimes

ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ ಬಾಲಸೂದಲು ತಂದೆ ಕೃಷ್ಣಯ್ಯ ಗುಂಟಪಲ್ಲಿ ಸಾಃ ಕನಹಳ್ಳಿ ತಾಃ ಸುರಪೂರ ರವರು ಮತ್ತು ಹೆಂಡತಿ ಮಕ್ಕಳು ಸುಮಾರು 18 ವರ್ಷದ ಹಿಂದೆ ನಮ್ಮ ಸ್ವಂತ ಊರು ಆಂದ್ರಪ್ರದೇಶದ ಅಗ್ರಹಾರಮ್  ಬಿಟ್ಟು ಯಾದಗಿರಿ ಜಿಲ್ಲೆಯ  ಸೂರಪೂರ ತಾಲೂಕಿನ ಕನ್ನಹಳ್ಳಿ ಗ್ರಾಮಕ್ಕೆ ಬಂದು ಇಲ್ಲಿಯೇ ವಾಸವಾಗಿರುತ್ತೆವೆ, ನನ್ನ ಮಗನಾದ ಸುನೀಲ ಇತನು ಈಗ 3 ವರ್ಷಗಳ ಹಿಂದೆ ಜೇವರಗಿ ತಾಲೂಕಿನ ಸಜ್ಜನ ಶೇಟ್ಟಿ ಇವರ ಹೊಲ ಪಾಲಿಗೆ ಮಾಡಿ  ತನ್ನ ಹೆಂಡತಿ ಮಕ್ಕಳೊಂದಿಗೆ ಜೇವರಗಿ ಸೀಮಾಂತರದ ಸಜ್ಜನ ಶೇಟ್ಟಿ ಇವರ ಹೊಲದಲ್ಲಿಯೇ ಮನೆ ಮಾಡಿಕೊಂಡು  ವಾಸವಾಗಿದ್ದನು  ನಾವು ಆಗಾಗ್ಗೆ  ಅವನ ಹತ್ತಿರ ಬಂದು ಹೋಗಿ ಮಾಡುತ್ತಿದ್ದೆವು. ನಾನು ಮತ್ತು ನನ್ನ ಹೆಂಡತಿ ಲಕ್ಮೀ ಇಬ್ಬರೂ ನನ್ನ ಮಗನಿಗೆ ಮಾತನಾಡಿಸಿಕೊಂಡು ಹೋಗಬೇಕೆಂದು ನೀನ್ನೆ ದಿ. 25.06.2017 ರಂದು ನಮ್ಮ ಮಗನ ಹತ್ತಿರ ಬಂದಿದ್ದೆವು. ಇಂದು ದಿ. 26.06.2017 ರಂದು ಮುಂಜಾನೆ ನನ್ನ ಮಗನಾದ ಸುನೀಲ ಗುಂಟುಪಲ್ಲಿ ಇತನು ಜೇವರಗಿಯಲ್ಲಿ ಕೆಲಸ ಇದೆ. ನಾನು ಜೇವರಗಿಗೆ ಹೋಗಿ ಬರುತ್ತೆನೆ ಎಂದು ಹೇಳಿ ಸಜ್ಜನ ಶೆಟ್ಟಿ ಇವರ ಹತ್ತಿರ ಕೆಲಸ ಮಾಡುವ ಕರಣಪ್ಪ ತಂದೆ ಶರಣಪ್ಪ ಯನಗುಂಟಿ ಸಾಃ ಆಂದೊಲಾ ಇತನು ನಡೆಯಿಸುವ ಮೊಟಾರ್ ಸೈಕಲ ಮೇಲೆ ಕುಳಿತಕೊಂಡು ಹೋದನು. ನಾನು ಮತ್ತು ನನ್ನ ಹೆಂಡತಿ ಸೊಸೆ ಎಲ್ಲರೂ ಹೊಲದಲ್ಲಿನ ಮನೆಯಲ್ಲಿಯೇ ಇದ್ದೆವು. ಮುಂಜಾನೆ 9.00  ಸುಮಾರಿಗೆ ಜೇವರಗಿಯಿಂದ ಶಿವು ನಾಟೀಕಾರ ಇತನು ಪೊನ ಮಾಡಿ ನೀಮ್ಮ ಮಗ ಸುನೀಲ ಇತನಿಗೆ ಜೇವರಗಿ ಪಟ್ಟಣದ ಸರಕಾರಿ ಆಸ್ಪತ್ರೆ ಎದುರು ರೋಡಿನಲ್ಲಿ ಎಕ್ಸಿಟೆಂಟ್ ಆಗಿರುತ್ತದೆ ಅವನು ಸ್ಥಳಲ್ಲಿಯೇ ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದ್ದು  ನಾನು ಮತ್ತು ನನ್ನ ಹೆಂಡತಿ ಲಕ್ಷ್ಮಿ  ಸೋಸೆ ನಾಗಮಣಿ ಮೂವರು ಕೂಡಿ ಎಕ್ಸಿಡೆಂಟ್ ಆದ ಸ್ಥಳಕ್ಕೆ ಬಂದಾಗ ಅಲ್ಲಿ ನನ್ನ ಮಗನ ಹೆಣ ಜೇವರಗಿ ಸರಕಾರಿ ಆಸ್ಪತ್ರೆಯಲ್ಲಿ ಹಾಕಿರುತ್ತಾರೆಂದು ಗೊತ್ತಾಗಿ ಆಸ್ಪತ್ರೆಗೆ ಹೋಗಿ ನೋಡಲು ನನ್ನ ಮಗನ  ಹಣೆಯ ಮೇಲೆ, ಗಲ್ಲದ ಮೇಲೆ, ಬಲ ಮುಂಗೈ ಹತ್ತಿರ  ತರಚಿದ ಗಾಯವಾಗಿದ್ದವು. ಅವನು ಮೃತಟ್ಟಿದ್ದು ಅಲ್ಲಿಯೇ ಇದ್ದ ಶಿವು  ನಾಟೀಕಾರ ಇತನಿಗೆ ಕೇಳಲಾಗಿ ಅವನು  ಹೇಳಿದ್ದೆನೆಂದರೆ ನಾನು ಮತ್ತು ನನ್ನ ಗೆಳೆಯ ಶಿವಲಿಂಗಪ್ಪ ತಂದೆ ಭೀಮರಾಯ ಶಿವಗೊಂಡ, ಬಸಯ್ಯ ತಂದೆ ಬಸಲಿಂಗಯ್ಯ ಸ್ವಾಮಿ ಮೂವರು ಕೂಡಿ ಇಂದು ದಿ 26.06.2017 ರಂದು ಮುಂಜಾನೆ 8.30 ಗಂಟೆಯ ಸುಮಾರಿಗೆ ಜೇವರಗಿ ಪಟ್ಟಣದ  ಸರಕಾರಿ ಆಸ್ಪತ್ರೆ ಎದುರು ಜೇವರಗಿ ಶಹಾಪೂರ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅದೇ ವೇಳೆಗೆ ಜೇವರಗಿ ಪಟ್ಟಣದ ಸಿಂದಗಿ ಕ್ರಾಸ್ ಕಡೆಯಿಂದ  ಕರಣಪ್ಪ ತಂದೆ ಶರಣಪ್ಪ ಯನಗುಂಟಿ ಇತನು ತನ್ನ ಮೊಟಾರ್  ಸೈಕಲ ಮೇಲೆ ಸುನೀಲ ಇತನಿಗೆ ಹಿಂದೆ ಕೂಡಿಸಿಕೊಂಡು  ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡಿನಲ್ಲಿ ಡಿವೈಡರ್ ಕ್ಕೆ ಡಿಕ್ಕಿಪಡಿಸಿದನು ಆಗ ಹಿಂದೆ ಕುಳಿತ ಸುನೀಲ ಇತನು  ಮೊಟಾರ್ ಸೈಕಲ ಮೇಲಿಂದ ರೋಡಿನಲ್ಲಿ ಬಿದ್ದನು. ಆಗ ನಾವು ಮೂವರು ಕೂಡಿ  ಹೋಗಿ ನೋಡಲು ಸುನೀಲ ಇತನಿಗೆ ಹಣೆಯ ಮೇಲೆ, ಗಲ್ಲದ ಮೇಲೆ, ಬಲ ಮುಂಗೈ ಹತ್ತಿರ  ತರಚಿದ ಗಾಯವಾಗಿದ್ದವು ಅವನಿಗೆ ಎಬ್ಬಿಸಿದರು ಎಳಲಿಲ್ಲಾ ಅವನು ಸ್ಥಳದಲ್ಲಿಯೇ ಮೃತಪಟ್ಟಿದ್ದನು ಮೊಟಾರ್ ಸೈಕಲ ನಂ ನೋಡಲಾಗಿ ಅದರ ನಂ ಕೆಎ-32-ವಾಯ್-2889 ನೇದ್ದು ಇತ್ತು. ಅದರ ಸವಾರ ಕರಣಪ್ಪ ಇತನು ಸುನಿಲ ಸತ್ತಿದ್ದು ನೋಡಿ ಮೊಟಾರ್ ಸೈಕಲ ಸ್ಥಳದಲ್ಲಿಯೇ  ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು  :
ಯಡ್ರಾಮಿ ಠಾಣೆ :  ಶ್ರೀ ಹಳ್ಳೆಪ್ಪ ತಂದೆ ಪೀರಪ್ಪ ಹಳ್ಳದಕೇರಿ ಸಾ: ಮಳ್ಳಿ ತಾ: ಜೇವರ್ಗಿ ರವರ ಅಣ್ಣ ತಮ್ಮಕಿಯವರಾದ ತಿಪ್ಪಣ್ಣ ಗೌಂಡಿ, ಬಸಪ್ಪ ಹಳ್ಳದಕೇರಿ, ಹಳ್ಳೆಪ್ಪ ತಂದೆ ಚಂದ್ರಾಮ ಹಳ್ಳದಕೇರಿ ಹೀಗೆಲ್ಲರ ಮನೆಗಳು ಒಂದೆ ಕಡೆ ಇದ್ದು ಎಲ್ಲರ ಮನೆಯ ಮುಂದೆ ಬಯಲು ಜಾಗೆ ಇರುತ್ತದೆ. ಆ ಜಾಗೆಯಲ್ಲಿ ತಿಪ್ಪಣ್ಣ ತಂದೆ ಹಳ್ಳೆಪ್ಪ ಗೌಂಡಿ ಇತನು ನಮ್ಮೆಲ್ಲರಿಗೂ ಬರತಕ್ಕಂತ ಜಾಗೆಯಲ್ಲಿ ಬುನಾದಿ ಹಾಕುತ್ತಿದ್ದಾಗ ನಾವು ಗ್ರಾಮ ಪಂಚಾಯತಿ ಮಳ್ಳಿಯಲ್ಲಿ ತಕರಾರು ಅರ್ಜಿ ಹಾಕಿರುತ್ತೆನೆ. ಆಗ ಗ್ರಾಮ ಪಂಚಾಯತಿಯವರು ಕಟ್ಟಡ ಮಾಡುವುದನ್ನು ನಿಲ್ಲಿಸಿರುತ್ತಾರೆ. ಅಂದಿನಿಂದ ತಿಪ್ಪಣ್ಣ ಗೌಂಡಿ ಹಾಗೂ ಆತನ ಮಕ್ಕಳಾದ ವಿಯಕುಮಾರ, ಸಂತೋಷ ಇವರೆಲ್ಲರೂ  ನಮಗೆ ಕಟ್ಟಡ ಮಾಡುವುದು ನಿಲ್ಲಿಸಿದ್ದಿರಿ ನೀಮಗೆ ಒಂದಿಲ್ಲ ಒಂದು ದಿನ ಖಲಾಸ ಮಾಡಿಯೇ ಬಿಡುತ್ತೆವೆ ಅಂತಾ ಓದರಾಡುತ್ತಿದ್ದು ಆದರು ಕೂಡಾ ಎಲ್ಲರೂ ಅಣ್ಣತಮ್ಮಕಿಯರೆಂಬ ಭಾವನೆಯಿಂದ ಸುಮ್ಮನಿದ್ದೆವು. ದಿನಾಂಕ: 26-06-2017 ರಂದು ಬೆಳಿಗ್ಗೆ 9=00 ಗಂಟೆಯ ಸುಮಾರಿಗೆ ನಮ್ಮ ಎಲ್ಲರ ಮನೆಯ ಮುಂದೆ ಖುಲ್ಲಾ ಜಾಗೆಯಲ್ಲಿ  1) ತಿಪ್ಪಣ್ಣ ತಂದೆ ಹಳ್ಳೆಪ್ಪ ಹಳ್ಳದಕೇರಿ 2) ವಿಜಯಕುಮಾರ ತಂದೆ ತಿಪ್ಪಣ್ಣ ಹಳ್ಳದಕೇರಿ  3) ಸಂತೋಷ ತಂದೆ ತಿಪ್ಪಣ್ಣ ಹಳ್ಳದಕೇರಿ ಇವರುಗಳು ಕಟ್ಟಡ ಮಾಡುತ್ತಿದ್ದಾಗ ನಾನು , ನನ್ನ ಹೆಂಡತಿ ನಾಗಮ್ಮ , ಮಗನಾದ ಶಂಕರೆಪ್ಪ ಹಾಗೂ ನಮ್ಮ ಅಣ್ಣತಮ್ಮಕೀಯ ಹಳ್ಳೆಪ್ಪ ತಂದೆ ಬಸಪ್ಪ ಹಳ್ಳದಕೇರಿ , ರೇಣುಕಾ ಗಂಡ ಹಳ್ಳೆಪ್ಪ ಹಳ್ಳದಕೇರಿ, ಸುಮಿತ್ರಾ ಗಂಡ ಹಳ್ಳೆಪ್ಪ ಹಳ್ಳದಕೇರಿ ಹೀಗೆಲ್ಲರೂ ಕೂಡಿಕೊಂಡು ತಿಪ್ಪಣ್ಣನು ಕಟ್ಟಡ ಕಟ್ಟುವ ಜಾಗೆಯಲ್ಲಿ ಹೋಗಿ ಈ ಜಾಗೆ ಎಲ್ಲರಿಗೂ ಸಂಭಂದ ಪಟ್ಟಿದ್ದು ಇದ್ದು ಇಲ್ಲಿ ಕಟ್ಟಡ ಮಾಡಬೇಡಿರಿ ಅಂತಾ ಅಂದಿದ್ದಕ್ಕೆ ಅವರೆಲ್ಲರೂ ಕೊಲೆ ಮಾಡುವ ಉದ್ದೇಶದಿಂದ ನಾವು ಈ ಜಾಗೆಯಲ್ಲಿ ಕಟ್ಟಡ ಮಾಡಿಯೇ ತಿರುತ್ತೆವೆ ನೀವು ಯಾರು ಕೇಳುವವರು ಬೋಸಡಿ ಮಕ್ಕಳೆ ಅಂತಾ ಬೈದು ಅವರಲ್ಲಿ ತಿಪ್ಪಣ್ಣ ಇತನು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆ ಬಡೆ ಮಾಡಹತ್ತಿದನು ಆಗ ನನ್ನ ಹೆಂಡತಿಯಾದ ನಾಗಮ್ಮ ಜಗಳವನ್ನು ಬಿಡಿಸಲು ಬಂದಾಗ ವಿಜಯಕುಮಾರ  ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಹೆಂಡತಿಯ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಪಡಿಸಿದನು ನಂತರ ನನ್ನ ಮಗ ಶಂಕ್ರೆರೆಪ್ಪ ಬಿಡಿಸಲು ಬಂದಾಗ ವಿಜಕುಮಾರ ಇತನು ಅದೆ ಕೊಡಲಿಯಿಂದ ನನ್ನ ಮಗನ ತಲೆಯ ಹಿಂಬಾಗದಲ್ಲಿ ಹೊಡೆದು ರಕ್ತಗಾಯಪಡಿಸಿದನು. ಆಗ ನನ್ನ ಅತ್ತಿಗೆಯಾದ ರೇಣುಕಾ ಇವಳು ಜಗಳವನ್ನು ಬಿಡಿಸಿಕೊಳ್ಳಲು ಬಂದಾಗ ಸಂತೋಷ ತಂದೆ ತಿಪ್ಪಣ್ಣ ಗೌಂಡಿ ಬಡಿಗೆಯಿಂದ ಬೆನ್ನಿನ ಮೇಲೆ ಹೊಡೆದಿರುತ್ತಾನೆ. ಆಗ ಜಗಳವನ್ನು ನಮ್ಮ ಅಣ್ಣತಮ್ಮಕೀಯ ಮಗ ಹಳ್ಳೆಪ್ಪ ತಂದೆ ಬಸಪ್ಪ ಹಳ್ಳದಕೇರಿ, ಸುಮಿತ್ರಾ ಗಂಡ ಹಳ್ಳೆಪ್ಪ ಹಳ್ಳದಕೇರಿ  ಇವರುಗಳು ಬಂದು ಜಗಳವನ್ನು ಬಿಡಿಸಿಕೊಂಡಿರುತ್ತಾರೆ. ಅವರೆಲ್ಲರೂ ಅಲ್ಲಿಂದ ಹೋಗುವಾಗ ಈ ಕಟ್ಟಡ ಕಟ್ಟದೆ ಬಿಡುವುದಿಲ್ಲ ಆ ವೇಳೆ ತಡೆದಲ್ಲಿ ನೀಮಗೆ ಖಲಾಸ ಮಾಡಿಯೇ ಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀ ಸೈಯದ ಆಸೀಫ್ ತಂದೆ ಮಸ್ತಾನಸಾಬ ಸಾ|| ರಹಮತ ನಗರ ಸೇಡಂ, ತಾ|| ಸೇಡಂ ರವರ ಮಾವನಾದ ಮಹ್ಮದ ಇಬ್ರಾಹಿಂ ಇತನಿಗೆ 1. ಯುನಸ್ ತಂದೆ ಮಹ್ಮದ ಹುಸೇನ 2. ಇದಿರೀಶ ತಂದೆ ಮಹ್ಮದ ಹುಸೇನ 3. ಆಹ್ಮದ@ಅಮ್ಮು ತಂದೆ ಮಹ್ಮದ ಹುಸೇನ 4. ಇರ್ಫಾನ ತಂದೆ ಬಾಬಾ ಎಲ್ಲರೂ ಸಾ|| ಕೆ.ಇ.ಬಿ ಕಾಲೋನಿ ಸೇಡಂ ಇವರು ಕುಡಿಕೊಂಡು ತಮ್ಮ ಹೊಟೇಲ್ ಮುಂದ ಮೋಟಾಸೈಕಲ್ ಯಾಕೆ ಹಚ್ಚಿದ್ದಿ ಅಂತಾ ಜಗಳ ತೆಗೆದು ಅವಾಚ್ಯ ಶಬ್ಗಳಿಂದ ಬೈದು ಹೊಡೆಬಡೆ ಮಾಡಿ ಬಿಡಿಸಲು ಹೋದ ನನಗು ಸಹ ಹೊಡೆಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: