POLICE BHAVAN KALABURAGI

POLICE BHAVAN KALABURAGI

26 June 2017

Kalaburagi District Reported Crimes

ಹಲ್ಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ಭೀಮರೆಡ್ಡಿ ತಂದೆ ರಾಮರೆಡ್ಡಿ ಪಲ್ಲೆ ಸಾ|| ಸೋಮಪಲ್ಲಿ ಇವರ ಅಣ್ಣ ಮಲ್ಲರೆಡ್ಡಿ ತಂದೆ ರಾಮರೆಡ್ಡಿ ಇತನೊಂದಿಗೆ ನಮ್ಮೂರ ಶಾಮರೆಡ್ಡಿ ತಂದೆ ರಾಮರೆಡ್ಡಿ, ಮುಕುಂದರೆಡ್ಡಿ ತಂದೆ ನರಸಿಂಹರೆಡ್ಡಿ ಮತ್ತು ನರಸಿಂಹಲು ತಂದೆ ಮೋಗಲಯ್ಯ ಇವರುಗಳು ಹಳೇಯ ವೈಮನಸ್ಸು ಬೆಳೆಸಿಕೊಂಡಿದ್ದು ಅದೇ ವಿಷಯವಾಗಿ ಅವಾಗಾವಾಗ ಇವರುಗಳು ನಮ್ಮಣ್ಣನೊಂದಿಗೆ ಬಾಯಿಮಾತಿನ ಜಗಳತೆಗೆಯುತ್ತಿದ್ದರು, ಅಲ್ಲದೇ ನಮ್ಮ ಅಣ್ಣ ಮಲ್ಲಾರೆಡ್ಡಿ ಇತನು ನಮ್ಮೂರ ಭಿಮಪ್ಪಾ ತಂದೆ ನಾಗಪ್ಪಾ ಇತನ ಹೆಂಡತಿ ದೇವಕ್ಕಮ್ಮಾ ಇವಳೊಂದಿಗೆ ಅನೈತಿಕ ಸಂಬಂಧ ಹೋಂದಿದ್ದಾನೆ ಅಂತಾ ಭಿಮಪ್ಪಾ ಇತನು ಕೂಡ ಈಗ ಕೆಲವು ದಿವಸಗಳ ಹಿಂದೆ ನಮ್ಮ ಅಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆದು ಬೋಸುಡೀ ಮಗನ್ಯಾ ನೀನು ನನ್ನ ಹೆಂಡತಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಿಯಾ ನಿನಗೆ ಜೀವಂತ ಬಿಡುವದಿಲ್ಲಾ ಒಂದಲ್ಲಾ ಒಂದು ದಿನಾ ನಿನ್ನ ಹೊಡಿಸಿ ಖಲಾಸ ಮಾಡಿಸುತ್ತೇನೆ ಅಂತಾ ಬೈದಾಡುತ್ತಿದ್ದನು ಅದಕ್ಕೆ ನಮ್ಮ ಅಣ್ಣನು ನಾನು ನಿನ್ನ ಹೆಂಡತಿ ಜೋತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವದಿಲ್ಲಾ ನೀನು ಸುಮ್ಮನೇ ನನ್ನೊಂದಿಗೆ ಅನುಮಾನ ಪಡಬೇಡ ಅಂತಾ ಹೇಳುತ್ತಿದ್ದನು ಆದರೂಕೂಡ ಸದರಿ ಭಿಮಪ್ಪಾ ಇತನು ಇನ್ನೂಳಿದ 3 ಜನರೊಂದಿಗೆ ಸೇರಿಕೊಂಡು ನಮ್ಮಣ್ಣನನ್ನು ಕೊಲೆಮಾಡಲು ಹೊಂಚು ಹಾಕುತ್ತಿದ್ದರು.ದಿನಾಂಕ 24-06-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ನಮ್ಮೂರ ಹನುಮಾನ ಗುಡಿಯ ಹತ್ತೀರ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತುಕೊಂಡಿದ್ದಾಗ ನಮ್ಮೂರ ಜಗದೀಶ ಇವರ ಮನೆಯ ಮುಂದಿನ ರಸ್ತೇಯ ಮೇಲೆ ಭಿಮಪ್ಪಾ ತಂದೆ ನಾಗಪ್ಪಾ ಇತನು ನಮ್ಮ ಅಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆಯುತ್ತಿದ್ದಾನೆ ಅಂತಾ ವಿಷಯ ಗೊತ್ತಾಗಿ ನಾನು ಅಲ್ಲಿಗೆ ಹೊಗಿ ನೋಡಲಾಗಿ ಅಲ್ಲಿ ನಮ್ಮೂರ 1) ಭಿಮಪ್ಪಾ ತಂದೆ ನಾಗಪ್ಪಾ ನಾಟೇಕರ 2) ಶಾಮರೆಡ್ಡಿ ತಂದೆ ರಾಮರೆಡ್ಡಿ 3) ಮುಕುಂದರೆಡ್ಡಿ ತಂದೆ ನರಸಿಂಹರೆಡ್ಡಿ 4) ನರಸಿಂಹಲು ತಂದೆ ಮೋಗಲಯ್ಯ ಹೀಗೆಲ್ಲರೂ ಕೂಡಿಕೊಂಡು ನಮ್ಮಣ್ಣ ಮಲ್ಲಾರೆಡ್ಡಿ ಇತನೊಂದಿಗೆ ಜಗಳತೆಗೆಯುತ್ತಾ ಭಿಮಪ್ಪಾ ತಂದೆ ನಾಗಪ್ಪಾ ಇತನು ನಮ್ಮಣ್ಣನಿಗೆ ಬೋಸುಡೀ ಮಗನ್ಯಾ ನನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದೀಯಾ ನಿನಗೆ ಇವತ್ತು ಬಿಡುವದಿಲ್ಲಾ ಖಲಾಸ್ ಮಾಡಿಸುತ್ತೇನೆ ಅಂತಾ ಬೈಯುತ್ತಾ ಅಲ್ಲೇ ಇದ್ದ ಶಾಮರೆಡ್ಡಿ ಮತ್ತು ಮುಕುಂದರೆಡ್ಡಿ ಹಾಗು ನರಸಿಂಹಲು ಇವರಿಗೆ ಈ ಬೋಸುಡೀ ಮಗನಿಗೆ ಹೋಡೆದು ಕೊಲೆ ಮಾಡಿರಿ ಅಂತ ಹೇಳುತ್ತಿದ್ದಾಗ ಶಾಮರೆಡ್ಡಿ ಇತನು ಈ ಬೋಸುಡಿ ಮಗ ನಮ್ಮೊಂದಿಗೂ ಆವಾಗಾವಾಗ ಜಗಳತೆಗೆಯುತ್ತಾನೆ ಇವನಿಗೆ ಇವತ್ತು ಒಂದು ಗತಿ ಕಾಣಿಸಬೇಕು ಅಂತಾ ಅಲ್ಲೇ ಬಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ನಮ್ಮಣ್ಣ ಮಲ್ಲಾರೆಡ್ಡಿ ಇತನ ತಲೆಯ ಮೇಲೆ ಹೋಡೆದು ಭಾರಿ ರಕ್ತಗಾಯಪಡಿಸಿದ್ದು ಅಲ್ಲದೇ ಭಿಮಪ್ಪಾ ತಂದೆ ನಾಗಪ್ಪಾ ಮತ್ತು ಮುಕುಂದರೆಡ್ಡಿ ಇವರುಗಳು ಈ ಬೋಸುಡೀ ಮಗನಿಗೆ ಇವತ್ತು ಜೀವಂತ ಬೀಡಬೇಡದು ಅಂತಾ ಕಟ್ಟಿಗೆಯಿಂದ ಮೈಕೈಗೆ ಹೋಡೆಬಡೆಮಾಡಿದ್ದು ನರಸಿಂಹಲು ತಂದೆ ಮೋಗಲಯ್ಯ ಇತನು ಕೈಯಿಂದ ಮೈಕೈಗೆ ಹೋಡೆಬಡೆಮಾಡುತ್ತಿದ್ದಾಗ ಅಲ್ಲೇ ಇದ್ದ ನಾನು ಮತ್ತು ನಮ್ಮೂರ ಬಸಪ್ಪಾ ತಂದೆ ಕಿಷ್ಟಪ್ಪಾ ಯಾದವ್, ದೇವಿಂದ್ರಪ್ಪಾ ಜೋಗಿ, ಮೋಗಲಪ್ಪಾ ತಂದೆ ಮಲ್ಲಪ್ಪಾ ನಾಟೇಕರ ಮತ್ತು ಹುಸೇನಪ್ಪಾ ತಂದೆ ಶ್ಯಾಮಪ್ಪಾ ಹರಿಜನ ಇತರರು ಸೇರಿ ನಮ್ಮ ಅಣ್ಣನಿಗೆ ಹೋಡೆಯುವದನ್ನು ಬಿಡಿಸಿಕೊಂಡಿದ್ದು ನಮ್ಮ ಅಣ್ಣನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಬೇವಾಸಾಗಿ ಬಿದ್ದಿದ್ದನ್ನು ನೋಡಿ ಅವನು ಸತ್ತು ಹೋಗಿದ್ದಾನೆ ಅಂತಾ ತಿಳಿದು ಅವರೆಲ್ಲರೂ ಅಲ್ಲಿಂದ ಹೋರಟು ಹೋಗಿರುತ್ತಾರೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಣ್ಣ ಪಟವಾರಿ ಸಾ|| ಕೆರಳ್ಳಿ, ತಾ|| ಚಿಂಚೋಳಿ ರವರ ತಮ್ಮನಾದ ರಾಜಕುಮಾರ ತಂದೆ ಸಿದ್ದಣ್ಣ ಪಟವಾರಿ ಸಾ|| ಕೆರಳ್ಳಿ, ತಾ|| ಚಿಂಚೋಳಿ ರವರು ದಿನಾಂಕ 25-06-2017 ರಂದು ಮಧ್ಯಾಹ್ನ ಸೇಡಂಗೆ ಕೆಲಸಕ್ಕೆಂದು ಬಂದು ಸೇಡಂ ಚಿಂಚೋಳಿ ರೋಡಿನ ಮೇಲೆ ಸೇಡಂ ಬಸ್ಸ ಡಿಪೋ ಎದುರುಗಡೆ ಹೋಗುತ್ತಿರುವಾಗ ಬಸ್ಸ ನಂ ಕೆಎ 32 ಎಫ್ 1179 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಬಸ್ಸನ್ನು ಅತಿ ವೇಗ ಮತ್ತು ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನನ್ನ ತಮ್ಮನಗೆ ಅಪಘಾತ ಮಾಡಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: