POLICE BHAVAN KALABURAGI

POLICE BHAVAN KALABURAGI

28 June 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:27/06/2017 ರಂದು ರಾಘವೇಂದ್ರ ನಗರ  ಠಾಣಾ ವ್ಯಾಪ್ತಿಯ ಫ್ಲೊರಾ ಶಾಲೆ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತ ಮಾಹಿತಿ  ಮೇರೆಗೆ ಶ್ರೀ ಎ.ಪೌಲ್‌ ಎಎಸ್‌ಐ ರಾಘವೆಂಸ್ರ ನಗರ ಪೊಲೀಸ್‌ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ಡಿಸೆಂಟ್‌ ಫಂಕ್ಷನ್‌ ಹಾಲ್‌ ಮುಂದೆ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಟಿ ಅಂಗಡಿಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಜನರಿಂದ ಹಣವನ್ನು ಪಡೆದುಕೊಂಡು ಮಟಕಾ ಚೀಟಿಗಳನ್ನು ಬರೆದು ಕೊಡುತ್ತಿರುವದನ್ನು ನೋಡಿ ಪಂಚರನ್ನು ತೊರಿಸಿ ಖಾತ್ರಿ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ನಾನು ಆತನ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು 1) ಮಕ್ತುಂಸಾಬ ತಂದೆ ಮದರಸಾಬ ಮುಲ್ಲಾ ಸಾ:ಖಣಿ ಏರಿಯಾ ಜಿಲನಾಬಾದ ಕಲಬುರಗಿ ಅಂತ ತಿಳಿಸಿದ್ದು, ಸದರಿಯವನಿಗೆ ಅಂಗ ಶೋದನೆ ಮಾಡಲು ಒಂದು ಬಾಲ್‌ ಪೆನ್‌, 2 ಮಟಕಾ ಬರೆದ ಚೀಟಿ, ನಗದು ಹಣ 900/-ರೂಗಳು ದೊರೆತಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಜಯ ತಂದೆ  ಮಲ್ಲಪ್ಪಾ  ಸಾ; ಮಂಗಲ ಪೇಟ  ಮಥೆಡ್ ಚರ್ಚ ಹತ್ತಿರ ಬೀದರ ರವರು ರಮಜಾನ ಹಬ್ಬದ ಪ್ರಯುಕ್ತ ಕಲಬುರಗಿಯ ಖಾಜಾ ಬಂದೇನವಾಜ ದರ್ಗಾ ದರ್ಶನಕ್ಕೆಂದು ನಾನು ಮತ್ತು ನನ್ನ ಗೆಳೆಯರಾದ  2) ಮಹಮ್ಮದ ಇಬ್ರಾಹಿ ತಂದೆ ಮಹಮ್ಮದ ಅಜಿ 3) ಮಹಮ್ಮದ ಯುಸುಫ ತಂದೆ ಮಹಮ್ಮದ ಇಸ್ಮಾಯಿಲ್ 4) ಮಹಮ್ಮದ ನಯಿಮ ತಂದೆ ಖಯ್ಯೂಮ 5) ಮಹಮ್ಮದ ಆಶೀಫ ತಂದೆ ಮಹಮ್ಮದ ಇಸ್ಮಾಯಿಲ್ 6) ಸ್ಟಾರವೆಲ್ಲ ತಂದೆ ಡೇವಿಡ 7) ಶೇಖರ @ ಮಹಮ್ಮದ ಖಾಜಾ 8) ಶಹಬಾಜ ತಂದೆ ಅಬ್ದುಲ ಶುಕುರ 9) ಸುಲ್ತಾನ ತಂದೆ ಹೈದರ 10) ಆರೀಫ ತಂದೆ ಜಬ್ಬಾರ ಮತ್ತು 11) ಮಹಮ್ಮದ ಇಮ್ತಿಯಾಜ ತಂದೆ ನಸೀರ ಸಾ;ಎಲ್ಲರೂ ಅಬ್ದುಲ ಫೈಜಲ ದರ್ಗಾ ಹತ್ತಿರ ಹೈದ್ರಾಬಾದ ರೋಡ ಬೀದರ ಎಲ್ಲರೂ ಕೂಡಿಕೊಂಡು ಮಹಮ್ಮ ಇಮ್ತಿಯಾಜ ಇತನ ಟಾಟಾ ಎ.ಸಿ.ಇ. ವಾಹನ ಸಂ. ಕೆ.ಎ.32-ಬಿ8838 ನೆದ್ದರಲ್ಲಿ  ದಿನಾಂಕ. 26-6-2017 ರಂದು ಬೀದರದಿಂದ ಕಲಬುರಗಿಗೆ ಬಂದಿದ್ದು , ರಾತ್ರಿ ದರ್ಗಾದಲ್ಲಿ ಹಾಲ್ಟ ಮಾಡಿ ದಿನಾಂಕ. 27-6-2017 ರಂದು ಮುಂಜಾನೆ ದರ್ಗಾ ದರ್ಶನ ಮಾಡಿಕೊಂಡು 8-00 ಎ.ಎಂ.ಕ್ಕೆ. ದರ್ಗಾದಿಂದ ನಾವು ತೆಗೆದುಕೊಂಡು ಬಂದ ಸದರಿ ಟಾಟಾ ಎ.ಸಿ.ಇ. ವಾಹನದಲ್ಲಿ ಬೀದರಕಡೆಗೆಬರುತಿದ್ದೇವು ಸದರಿ ವಾಹನವನ್ನು  ಮಹಮ್ಮದ ಇಮ್ತಿಯಾಜ ನಡೆಯಿಸುತತ್ತಿದ್ದು ಅವನ ಪಕ್ಕದಲ್ಲಿ ಕ್ಯಾಬಿನದಲ್ಲಿ  ಮಹಮ್ಮದ ನಯೀಮ ಹಾಗೂ ಸುಲ್ತಾನ ಕುಳಿತಿದ್ದು ಉಳಿದ  8 ಜನರು  ಹಿಂದುಗಡೆ ಕುಳತಿದ್ದೇವು , ಹುಮನಾಬಾದರೋಡಿನ ಅವರಾಧ (ಬಿ) ಗ್ರಾಮದ ಸಮೀಪ ಹೋಗುತಿದ್ದಾಗ ನಮ್ಮ ಚಾಲಕನಿಗೆ ವಾಹನ ಸಾವಕಾಶ ನಡೆಯಿಸು ಅಂತಾ ಹೇಳಿದರು ಕೂಡಾ  ಕೇಳದೆ ತನ್ನ ವಾಹನವನ್ನು ಬಹಳ ವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು  ಹೋಗಿ ಅವರಾಧ (ಬಿ) ಗ್ರಾಮದ ಬ್ರೀಜ ಹತ್ತಿರ ರೋಡಿನ ಬದಿಗೆ ನಡೆದುಕೊಂಡು ಹೋಗುತಿದ್ದ ಒಬ್ಬ ವ್ಯಕ್ತಿಗೆ ಜೋರಾಗಿ ಡಿಕ್ಕಿ ಹೊಡೆದು ಮುಂದೆ ರೋಡಿ ಪಕ್ಕದಲ್ಲಿರುವ ಗಿಡಕ್ಕೆ ಜೊರಾಗಿ ಡಿಕ್ಕಿ ಹೊಡೆದೆನು. ಇದರಿಂದ ನನಗೆ ಎದೆಯ ಬಲಭಾಗದಲ್ಲಿ ಗುಪ್ತ ಪೆಟ್ಟು , ಟೊಂಕಕ್ಕೆ ಗುಪ್ತ ಪೆಟ್ಟಾಗಿರುತ್ತದೆ.ಮತ್ತು 2) ಮಹಮ್ಮದ ಇಬ್ರಾಹಿ ತಂದೆ ಮಹಮ್ಮದ ಅಜಿಜ ಇತನಿಗೆ  ಎರಡು ಮೊಳಕಾಲ ಮೇಲೆ ಗುಪ್ತ ಪೆಟ್ಟು, ಮೈಮೇಲೆ ಅಲ್ಲಿ ಒಳಪೆಟ್ಟಾಗಿರುತ್ತದೆ. 3) ಮಹಮ್ಮದ ಯುಸುಫ ತಂದೆ ಮಹಮ್ಮದ ಇಸ್ಮಾಯಿಲ್  ಬಲಹಣೆಗೆ ರಕ್ತಗಾಯ , ಊಗಿನಿಂದ ರಕ್ತಸ್ರಾವ , ಟೊಂಕಕ್ಕೆ ಗುಪ್ತಪೆಟ್ಟಾಗಿರುತ್ತದೆ.5) ಮಹಮ್ಮದ ಆಶೀಫ ತಂದೆ ಮಹಮ್ಮದ ಇಸ್ಮಾಯಿಲ್  ಇತನಿಗೆ ಎದೆಗೆ ಗುಪ್ತ ಪೆಟ್ಟ, ಬಲಪಕ್ಕೆಗೆ ಗುಪ್ತಪೆಟ್ಟು , ಚಿನ್ನಕ್ಕೆ ಗುಪ್ತ ಪೆಟ್ಟಾಗಿ ತರಚಿದ ರಕ್ತ ಗಾಯವಾಗಿರುತ್ತದೆ ,6) ಸ್ಟಾರವೆಲ್ಲ ತಂದೆ ಡೇವಿಡ ಇತನಿಗೆ  ತಲೆಗೆ ಗುಪ್ತಗಾಯ, 7) ಶೇಖರ @ ಮಹಮ್ಮದ ಖಾಜಾ ಇತನಿಗೆ ಗಟಬಾಯಿಗೆ ರಕ್ತಗಾಯ , ತಲೆಗೆ ಭಾರಿ ಪೆಟ್ಟಾಗಿ ರಕ್ತಗಾಯ , ಬಾಯಿಂದ ರಕ್ತಸ್ರಾವಾಗಿರುತ್ತದೆ ಬಲಗಣ್ಣಿಗೆ ಪೆಟ್ಟಾಗಿರುತ್ತದೆ.  8) ಶಹಬಾಜ ತಂದೆ ಅಬ್ದುಲ ಶುಕುರ  ಎಡಮೊಗಲಗಿ ಗುಪ್ತಪೆಟ್ಟಾಗಿರುತ್ತದೆ  10) ಆರೀಫ ತಂದೆ ಜಬ್ಬಾರ  ಮುಖಕ್ಕೆ ಭಾರಿ ಪೆಟ್ಟಾಗಿ ಬಾಯಿಯಿಂದ ರಕ್ತಸ್ರಾವವಾಗಿರುತ್ತದೆ  ಹಾಗೂ ವಾಹನದ ಕ್ಯಾಬಿನದಲ್ಲಿ ಕುಳಿತಿದ್ದ 4) ಮಹಮ್ಮದ ನಯಿಮ ತಂದೆ ಖಯ್ಯೂಮ  ಇತನಿಗೆ  ಎಡಮೊಳಕಾಲಕೆಳಗೆ ರಕ್ತಗಾಯ , ಬಗಾಲತೊಡೆಗೆ ಗುಪ್ತಪೆಟ್ಟಾಗಿರುತ್ತದೆ. ಮತ್ತು  9) ಸುಲ್ತಾನ ತಂದೆ ಹೈದರ  ಇತನಿಗೆ ಎಡಗಾಲು ಮೊಳಕಾಲಿಗೆ ಭಾರಿ ರಕ್ತಗಾಯ , ಎಡಗಣ್ಣಿನ  ಹತ್ತಿರ ರಕ್ತಗಾಯ , ಹಾಗೂ  ವಾಹನ ಚಾಲಕನಿಗೆ  11) ಮಹಮ್ಮದ ಇಮ್ತಿಯಾಜ ತಂದೆ ನಸೀರ ಇತನಿಗೆ ಎಡಗಣ್ಣಿನ ಹತ್ತಿರ , ತಲೆ ಮೇಲೆ ತರಚಿದ ರಕ್ತಗಾಯ ,ಎಡಗಾಲು ಮೊಳಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ಹಾಗೂ  ನಡೆದುಕೊಂಡು ಹೋಗುತಿದ್ದ ವ್ಯಕ್ತಿಗೆ ಡಿಕ್ಕಿಯಾಗಿ ಕೆಳಗೆ ಬಿದ್ದ ವ್ಯಕ್ತಿ ಹೆಸರು ಕೇಳಿ ಗೊತ್ತಾದ ಕಲ್ಯಾಣಿ @ ಕಲ್ಯಾಣರಾವ ತಂದೆ ಶಿವಪ್ಪಾ ನಾಕಮನ ಸಾ;ಬಬಲಾದ ಇತನಿಗೆ ಎಡಗಣ್ಣಿ ಮೇಲೆ ರಕ್ತಗಾಯ, ಹಾಗೂ ತಲೆಗೆ ಬಾರಿ ಪೆಟ್ಟಾಗಿರುತ್ತದೆ. , ಹೊಟ್ಟೆಯ ಮೇಲೆ ತರಚಿದ ರಕ್ತಗಾಯ ವಾಗಿ ಮಾತನಾಡುತಿರಲಿಲ್ಲಾ ಅಷ್ಟರಲ್ಲಿ 108 ಅಂಬುಲೆನ್ಸ ಬಂದಿದ್ದು ಎಲ್ಲರನ್ನು ಅಂಬುಲೆನ್ಸದಲ್ಲಿ ಕೂಡಿಕೊಂಡು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಬಂದು ತೊರಿಸಿದಾಗ ಸದರಿ ಕಲ್ಯಾಣಿ @ ಕಲ್ಯಾಣರಾವ ನಾಕಮನ ಮೃತ ಪಟ್ಟಿರುವದಾಗಿ ವೈದ್ಯರು ತಿಳಿಸಿದರು ಉಳಿದವರು ಸರಕಾರಿ ಆಸ್ಪತ್ರೆಯಲ್ಲಿ ಇನ್ನೂ ಕೆಲವು ಜನರು ಎ.ಎಸ್.ಎಂ. ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಸೇಡಂ ಠಾಣೆ : ದಿನಾಂಕ: 26-06-17 ರಂದು 1] ದೇವಿಂದ್ರಪ್ಪ ತಂದೆ ಶರಣಪ್ಪ ಹಂಚನಾಳ  2] ದತ್ತು ತಂದೆ ದೇವಿಂದ್ರಪ್ಪ ಹಂಚನಾಳ  3] ಸಿದ್ದು ತಂದೆ ಪೀರಪ್ಪ ಹಂಚನಾಳ, 4] ಜಗನ್ನಾಥ ತಂದೆ ದೇವಿಂದ್ರಪ್ಪ ಹಂಚನಾಳ ಎಲ್ಲರೂ ಸಾ|| ಬಿಬ್ಬಳ್ಳಿ, ತಾ||ಸೇಡಂ ರವರು ಮನೆಯ ಮುಂದೆ ಬಿಬ್ಬಳ್ಳಿ ಗ್ರಾಮದಲ್ಲಿ ಮರಗಮ್ಮ ಗುಡಿಯ ಕಟ್ಟುವ ಸಲುವಾಗಿ ಬುನಾದಿಯನ್ನು ಹಾಕುತ್ತಿದ್ದು, ಸದರಿ ಬುನಾದಿ ಮಣ್ಣು ರೋಡಿನ ಮೇಲೆ ಹಾಕಿದ್ದರು.  ಸದರಿ ರಸ್ತೆಯ ಮೇಲಿನ ಮಣ್ಣಿನ ವಿಷಯದಲ್ಲಿ ಶ್ರೀ ರಾಯಪ್ಪ ತಂದೆ ಶಂಕ್ರಪ್ಪ ದೊಡ್ಡಮನಿ ಸಾ|| ಬಿಬ್ಬಳ್ಳಿ, ತಾ|| ಸೇಡಂ ಹಾಗು ಆರೋಪಿತರ ಮಧ್ಯೆ ಜಗಳವಾಗಿ ಆರೋಪಿತರೆಲ್ಲರೂ ಕೂಡಿಕೊಂಡು ಫಿರ್ಯಾದಿಗೆ  ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: