ಗೋಡೆ ಕಟ್ಟುವಾಗ ಗೋಡೆ ಕುಸಿದು ಮೃತಪಟ್ಟ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀಮತಿ ಕಾಂತಾಬಾಯಿ @ ಕಾಂತಮ್ಮಾ ಗಂಡ ಕಳಸಪ್ಪ ಕಂಬಾಳೆ ಸಾ : ಸಾವಳಗಿ (ಬಿ) ತಾ:ಜಿ:ಕಲಬುರಗಿ ಹಾವ : ಕೆಕೆ ನಗರ ಕಲಬುರಗಿ
ಮತ್ತು ಶ್ರೀಮತಿ ಸರಗಮ್ಮಾಬಾಯಿ ಗಂಡ ಜಗನ್ನಾಥ ಸಾ:ಹರಸೂರ ತಾ:ಜಿ:ಕಲಬುರಗಿ ಹಾವ: ಕೆಕೆ ನಗರ
ಕಲಬುರಗಿ ನಾಗೇಶ ತಂದೆ ಅರ್ಜುನ ಮದರೇಕರ್ ಸಾ:ಹರಸೂರ ತಾ:ಜಿ:ಕಲಬುರಗಿ ರವರು ದಿನಾಂಕ 24-04-2017
ರಂದು ವಿಜಯಕುಮಾರ ಇವರೊಂದಿಗೆ ಗೊಡೆ ಕಟ್ಟುವ ಕೆಲಸಕ್ಕೆ ಕಲಬುರಗಿ ನಗರದ ಇಂಡಸ್ಟ್ರೀಯಲ್ 2ನೇ ಪೇಸ್ ಮಹಮ್ಮದ ನಿಜಾಮೋದ್ದಿನ
ಇವರ ದಾಲಮೀಲದಲ್ಲಿ ಕೆಲಸಕ್ಕೆ ಹೋಗಿದ್ದು ವಿಜಯಕುಮಾರ
ಗೊಡೆ ಕಟ್ಟಿತ್ತಿದ್ದಾಗ ದಾಲ ಮಿಲ್ ಮಸಿನ ಚಾಲು ಮಾಡಿದಾಗ ಅಲ್ಲೆ ಹಾಜರಿದ್ದ ನಮ್ಮ
ಗುತ್ತೇದಾರ ನಾಗಣ್ಣಾ ಮತ್ತು ಮಶೀನ ಆಪರೇಟರ ಒಂದು
ಯಾಕೋ ಗೋಡೆ ಬಹಳಷ್ಟು ಅಲುಗಾಡುತ್ತಿದೆ ಅಂಥಾ ಹೇಳಿದಾಗ ಅವರಿಬ್ಬರು ದಿನಾ ಇದೇ ಮಾತು
ಹೇಳುತ್ತಿರಿ ಎನು ಆಗುವದಿಲ್ಲಾ ಮತ್ತು ಗೋಡೆ
ಬಿಳುವುದಿಲ್ಲಾ ಸುಮ್ಮನೆ ಗೋಡೆ ಕಟ್ಟಿರಿ ಅಂತಾ ಹೇಳಿ ನಮಗೇ
ಯಾವುದೇ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮ ಕೈಕೊಳ್ಳದೇ
ಗೋಡೆ ಕಟ್ಟುವ ಕೆಲಸಕ್ಕೆ ಹಚ್ಚಿದಾಗ ಗೋಡೆ ಕಟ್ಟುವ ಕೆಲಸ ಮಾಡುತ್ತಿದ್ದಾಗ ಸಾಯಂಕಾಲ
5-30 ಗಂಟೆಗೆ ದಾಲ ಮಿಲ್ ಮಸೇನ ಚಾಲು ಇದ್ದುದ್ದರಿಂದ ಗೋಡೆ ಅಲುಗಾ ಅಲುಗಾಡಿ ಒಮ್ಮಿಂದ ಒಮ್ಮಲೇ
ಗೋಡೆ ಕುಸಿದು ಬಿದ್ದು ಗೊಡೆ ಅಸರೆಯಲ್ಲಿ ಕೆಲಸ ಮಾಡುತ್ತಿದ್ದ ಫಿರ್ಯಾದಿ, ಸರಗಮ್ಮಾಬಾಯಿ ಮತ್ತು ನಾಗೇಶ
ತಂದೆ ಅರ್ಜುನ ಮದರೇಕರ್ ರವರ ಮೇಲೆ ಬಿದ್ದಿದ್ದು ನನಗು ಮತ್ತು ಸರಗಮ್ಮಾಬಾಯಿಗೆ ಗಾಯಗಳಾಗಿದ್ದು ನಾಗೇಶ
ತಂದೆ ಅರ್ಜುನ ಮದರೇಕರ್ ಇವನು ಗೋಡೆಯ ಒಳಗಡೆ ಸಿಕ್ಕಿಬಿದ್ದಿದ್ದು ಅವನಿ ಹೊರಗೆ ತೆಗೆದು ಎಲ್ಲರನ್ನು
ಆಸ್ಪತ್ರೆಗೆ ಕರೆದುಕೊಂಡು ಬರಲಾಗಿ ವೈದ್ಯರು ನಾಗೇಶನಿಗೆ ಪರೀಕ್ಷೆ ಮಾಡಿ ಮೃತಪಟ್ಟಿರುತ್ತಾನೆ
ಅಂತಾ ತಿಳಿಸಿದರು ನಮಗೇ ಯಾವುದೇ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮ ಕೈಕೊಳ್ಳದೇ ಗೋಡೆ ಕಟ್ಟುವ ಕೆಲಸಕ್ಕೆ ಹಚ್ಚಿದ 1. ಮಹಮ್ಮದ ನಿಜಾಮೋದ್ದಿನ ತೇಲಿ ದಾಲಮೀಲ್ ಮಾಲಿಕ 2. ನಾಗಣ್ಣಾ ಗುತ್ತೆದಾರ 3. ಮಶೀನ್ ಆಪರೇಟರ್ ರವರ ಮೇಲೆ ಕ್ರಮ ಜರುಗಿಸಿರಿ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಜೇವರಗಿ
ಠಾಣೆ : ಶ್ರೀ ಉಸ್ಮಾನ ಬಾಷಾ ತಂದೆ ಜಾಫರಲಿ ಜಾಗೀರದಾರ ಸಾಃ ಚಿಗರಳ್ಳಿ
ತಾಃ ಜೇವರಗಿ ರವರು ದಿನಾಂಕ 24.04.2017 ರಂದು
ಸಿಗರಥಹಳ್ಳಿ
ಗ್ರಾಮದವರು ಚಿಗರಳ್ಳಿ ಕ್ರಾಸ್ ಹತ್ತಿರ ಇರುವ ಹಜರತ
ಸೈಯ್ಯದ ಪೀರ ದರ್ಗಾದಲ್ಲಿ ದೇವರ ಕಾರ್ಯಕ್ರಮ ಮಾಡಿದ್ದರು. ಆ ಕಾರ್ಯಕ್ಕೆ ಬರಲು ಹೇಳಿದರಿಂದ ನಾನು
ಮತ್ತು ನನ್ನ ಗೆಳೆಯ ಮೌನೇಶ ತಂದೆ ಶರಣಪ್ಪ ಪೂಜಾರಿ ಇಬ್ಬರೂ ಹೊಗಿದ್ದೆವು ನಾವು ಅಲ್ಲಿಗೆ ಹೋಗಿ
ಊಟ ಮಾಡಿ ಮದ್ಯಾಹ್ನ 2.00 ಗಂಟೆಯ ಸುಮಾರಿಗೆ ದರ್ಗಾದಿಂದ ಮರಳಿ ಚಿಗರಳ್ಳಿಯ ಕಡೆಗೆ
ಬರುತ್ತಿದ್ದೆವು. ಅದೇ ವೇಳೆಗೆ ಚಿಗರಳ್ಳಿ ಕಡೆಯಿಂದ ವಿಶ್ವನಾಥ ತಂದೆ ಸಾಯಿಬಣ್ಣ ಹೇಳವರ ಸಾಃ
ಯಾಳವಾರ ಇತನು ಮೊಟಾರ್ ಸೈಕಲ ಮೇಲೆ ಭೀಮಣ್ಣ ತಂದೆ ಶಿವಪ್ಪ ಸೂರಪೂರ ಇತನಿಗೆ
ಮತ್ತು ಶರಣಪ್ಪ ತಂದೆ ನಿಂಗಪ್ಪ ಪೂಜಾರಿ ಸಾಃ ಚಿಕ್ಕ ಜೇವರಗಿ ಇತನಿಗೆ ಕೂಡಿಕೊಂಡು ದರ್ಗಾದಲ್ಲಿ
ಊಟ ಮಾಡಲು ಬರುತ್ತಿದ್ದರು, ಜೇವರಗಿ-ಶಹಾಪೂರ
ರೋಡ ದರ್ಗಾ ಹತ್ತಿರ ರೊಡಿನಲ್ಲಿ ಮೊಟಾರ್ ಸೈಕಲ ತಿರುಗಿಸುತ್ತಿದ್ದಾಗ ಜೇವರಗಿ ಕಡೆಯಿಂದ ಒಂದು
ಮೊಟಾರ್ ಸೈಕಲ ಸವಾರನು ತನ್ನ ಮೊಟಾರ್ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು
ಬಂದು ವಿಶ್ವನಾಥನ ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದನು ಎರಡು ಮೊಟಾರ್ ಸೈಕಲ ಮೇಲಿದ್ದವರು
ತಮ್ಮ ತಮ್ಮ
ಮೊಟಾರ್ ಸೈಕಲದೊಂದಿಗೆ ರೋಡಿನಲ್ಲಿ ಬಿದ್ದರು. ಆಗ ನಾನು ಮತ್ತು ಮೌನೇಶ ಹಾಗೂ ಅಲ್ಲಿಯೇ
ಬರುತ್ತಿದ್ದ ಶರಣಪ್ಪ ತಂದೆ ಸಾಯಬಣ್ಣ ಪೂಜಾರಿ, ಸಾಯಿಬಣ್ಣ ತಂದೆ ಹಣಮಂತ ಖವಾಲ್ದಾರ ಸಾಃ ಚಿಗರಳಿ ಎಲ್ಲರೂ ಹೋಗಿ ಎಬ್ಬಿಸಿ
ನೋಡಲಾಗಿ
ಶರಣಪ್ಪ ಪೂಜಾರಿ
ಇತನ ತಲೆಗೆ & ಎಡ ಮೊಳಕಾಲಿಗೆ ರಕ್ತಗಾಯ, ಬಾಯಿಯಿಂದ ಕಿವಿಯಿಂದ, ಮೂಗಿನಿಂದ ರಕ್ತಸ್ರಾವವಾಗಿತ್ತು, ಅವನು ಮಾತನಾಡಿಸಿದರು
ಮಾತನಾಡಲಿಲ್ಲಾ, ನಂತರ ಅವನ ಮುಂದೆ
ಕುಳಿತ ಭೀಮಣ್ಣ
ಸುರಪೂರ ಇತನಿಗೆ ತಲೆ ಗಾಯವಾಗಿತ್ತು ಮೊಟಾರ್ ಸೈಕಲ
ನಡೆಯಿಸುತ್ತಿದ್ದ ವಿಶ್ವನಾಥ ತಂದೆ ಸಾಯಿಬಣ್ಣ ಹೇಳೂರ ಸಾಃ ಯಳವಾರ ಇತನಿಗೂ ತಲೆಗೆ ಓಳಪೆಟ್ಟು
ಆಗಿತ್ತು.
ವಿಶ್ವನಾಥನ ಮೊಟಾರ್ ಸೈಕಲ ನಂಬರ ನೋಡಲು ಕೆ.ಎ-36-ಇ.ಹೆಚ್-3487 ನೇದ್ದು
ಇತ್ತು. ಮೊಟಾರ್ ಸೈಕಲಕ್ಕೆ ಡಿಕ್ಕಿಪಡಿಸಿದ ಮೊಟಾರ್ ಸೈಕಲ ನಂಬರ ನೋಡಲಾಗಿ ಅದು
ಕೆ.ಎ-32-ಎಕ್ಸ್-4192 ನೇದ್ದು ಇತ್ತು ಅದರ ಸವಾರನಿಗೆ ನೋಡಲು ಹಣೆಯ ಮೇಲೆ ರಕ್ತ ಗಾಯವಾಗಿತ್ತು
ಅವನ ಹೆಸರು ವಿಠಪ್ಪ ತಂದೆ ಭೀಮರಾಯ ಅಮ್ಮಾಪೂರ ಸಾಃ ಬೈಚಬಾಳ ಅಂತಾ ಗೊತ್ತಾಗಿರುತ್ತದೆ. ಅವನ
ಹಿಂದೆ ಕುಳಿತವನಿಗೆ ಯಾವುದೇ ಗಾಯವಾಗಿರುವುದಿಲ್ಲಾ ಅವನ ಹೆಸರು ಭೀಮಣ್ಣಾ ತಂದೆ ಜಯಪ್ಪ ಶೇಟ್ಟರ ಸಾಃ ಬೈಚಬಾಳ
ಅಂತಾ ಗೊತ್ತಾಗಿರುತ್ತದೆ,
ನಂತರ ವಿಷಯ
ಗೊತ್ತಾಗಿ ಸ್ಥಳಕ್ಕೆ ಬಂದ ಅಂಬುಲೇನ್ಸ್ ದಲ್ಲಿ ಶರಣಪ್ಪ ಪೂಜಾರಿ & ಮತ್ತು ಗಾಯವಾದವರಿಗೆಲ್ಲರಿಗೂ ಉಪಚಾರ
ಕುರಿತು ಹಾಕಿಕೊಂಡು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಉಪಚಾರ ಕೊಡಿಸಿ
ಶರಣಪ್ಪನಿಗೆ ಹೆಚ್ಚಿನ ಉಪಚಾರ ಕುರಿತು ಅಂಬುಲೇನ್ಸ್ ನಲ್ಲಿ ಹಾಕಿಕೊಂಡು ಕಲಬುರಗಿ ಆಸ್ಪತ್ರೆಗೆ
ತೆಗೆದುಕೊಂಡು ಹೋಗುವಾಗ ಜೇವರಗಿ ಪಟ್ಟಣದ ಹೊರ ವಲಯದ ಕೊಳಕೂರ ಕ್ರಾಸ್
ಹತ್ತಿರ ಮಾರ್ಗ ಮದ್ಯ ಮದ್ಯಾಹ್ನ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ. ಸಿದ್ದಾರೋಡ ತಂದೆ
ಬಸವಣಪ್ಪಾ ಮೂಲಗೆ ವಿಳಾಸ; ಸೈಯದ ಚಿಂಚೋಳಿ ಗ್ರಾಮ ತಾ;ಜಿ;ಕಲಬುರಗಿ ಇವರು ದಿನಾಂಕ. 24-4-2017 ರಂದು
ಮುಂಜಾನೆ ನಾನು ಮತ್ತು ನನ್ನ ಗೆಳೆಯ ಗುರುನಾಥ ಬಿಂಗೆ
ಇಬ್ಬರು ನನ್ನ ಮೋಟಾರ ಸೈಕಲ್ ಮೇಲೆ ಮತ್ತು ನನ್ನ ಅಣ್ಣ ಶರಣಬಸಪ್ಪಾ ಊರ್ಫ ಶಿವಶರಣಪ್ಪಾ
ಮೂಲಗೆ ಇವನ ಮತ್ತು ಅವನ ಪರಿಚಯದವನಾದ ಚಾಂದಪಾಶ ತಂದೆ ಫತ್ರುಸಾಬ ಇವರಿಬ್ಬರು ಒಂದು ಹೀರೊಹೊಂಡಾ
ಮೋಟಾರ ಸೈಕಲ್ ನಂ.ಕೆ.ಎ.36 ಇ.ಡಿ.3868 ಇವರ ಮೇಲೆ ಚೇಂಗಟಾ ಗ್ರಾಮಕ್ಕೆ ಒಂದು ಕಾರ್ಯಕ್ರಮಕ್ಕೆ
ಹೋಗಿದ್ದು ಕಾರ್ಯಾಕ್ರಮ ಮುಗಿಸಿಕೊಂಡು ಮರಳಿ ಚೇಂಗಟಾದಿಂದ ಕಲಬುರಗಿಗೆ ಬರುತ್ತಿರುವಾಗ ನಮ್ಮ
ಅಣ್ಣ ಶರಣಬಸ್ಸಪ್ಪಾ ಮತ್ತು ಅವನ ಗೆಳೆಯ ಚಾಂದಪಾಶಾ ಇಬ್ಬರು ತಮ್ಮ ಮೋಟಾರ ಸೈಕಲ್ ಮೇಲೆ ಬರುತಿದ್ದರು ನಮ್ಮ ಅಣ್ಣ
ಗಾಡಿ ನಡೆಯಿಸುತಿದ್ದರು ಚಾಂದಪಾಶಾ ಹಿಂದೆ ಕುಳಿತಿದ್ದನು ಮತ್ತು ನಾನು ಮತ್ತು ನನ್ನ ಗೆಳೆಯ ಗುರುನಾಥ ಬಿಂಗೆ ನಮ್ಮ ಮೋಟಾರ ಸೈಕಲ್ ಮೇಲೆ ಹಿಂದೆ
ಬರುತಿದ್ದೇವು ಸಂಜೆ 7-15 ಪಿ.ಎಂ. ಗಂಟೆ ಸುಮಾರಿಗೆ ಅವರಾದ (ಬಿ) ಗ್ರಾಮ ದಾಟಿ ತಾವರಗೇರಾ ಕ್ರಾಸ
ಸಮೀಪ ನ್ಯೂ ಪರಿಸರ ದಾಬಾದ ಎದುರುಗಡೆ ನಮ್ಮ ಅಣ್ಣನವರು ಮೊಟಾರ ಸೈಕಲ್ ಮೇಲೆ ಹೋಗುತಿರುವಾಗ
ಅದೇವೇಳೆಗೆ ಕಲಬುರಗಿಕಡೆಯಿಂದ ಒಂದು ಮೋಟಾರ
ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಬಹಳ ವೇಗವಾಗಿ ಮತ್ತು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು
ಬಂದವನೆ ನಮ್ಮ ಅಣ್ಣ ಶರಣಬಸ್ಸಪ್ಪಾ ಇತನು ನಡೆಯಿಸುತಿದ್ದಾ ಮೋಟಾರ ಸೈಕಲಗೆ ಜೋರಾಗಿ ಡಿಕ್ಕಿ
ಹೊಡೆದನು ಇದರಿಂದ ನಮ್ಮ ಅಣ್ಣ ಮತ್ತು ಅವರ ಗೆಳೆಯ ಮೋಟಾರ ಸೈಕಲ್ ಸಮೇತಾ ಕೆಳಗೆ ಬಿದ್ದನು ಆಗನಾನು ಮತ್ತು ನನ್ನ ಗೆಳೆಯ
ಗುರುನಾಥ ತಂದೆ ಅಣ್ಣರಾವ ಬಿಂಗೆ ಹೋಗಿ ನೋಡಲಾಗಿ ನಮ್ಮ ಅಣ್ಣ ಶರಣಬಸ್ಸನಿಗೆ ತಲೆಗೆ ಭಾರಿ
ರಕ್ತಗಾಯ ಮತ್ತು ಗುಪ್ತ ಪೆಟ್ಟಾಗಿ ಮೂಗಿನಿಂದ ರಕ್ತಸ್ರಾವಾ ಆಗುತಿದ್ದು ಮತ್ತು ಚಾಂದಪಾಶಾ
ಇತನಿಗೆ ಕೈ ಕಾಲಿಗೆ ಅಲಲ್ಲಿ ಗಾಯಗಳಾಗಿದ್ದು ಅಪಘಾತ ಪಡಿಸಿದ ಮೋಟಾರ ಸೈಕಲ್ ನೋಡಲು ಹೀರೊಹೊಂಡ
ಸ್ಪ್ಲೆಂಡರ ನಂ.ಕೆ.ಎ.32 ಇ.ಎ.8967 ನೆದ್ದು ಇದ್ದು ಜನರು ಸೇರುವಷ್ಟರಲ್ಲಿ ಈ ಮೋಟಾರ
ಸೈಕಲ್ ಸವಾರನು ತನ್ನ ಮೋಟಾರ ಸೈಕಲ್ ನ್ನು
ತೆಗೆದುಕೊಂಡು ಹಾಗೆ ಓಡಿಸಿಕೊಂಡು ಹೋದನು ಇತನಿಗೆ ನೋಡಿದಲ್ಲಿ ಗುರ್ತಿಸುತ್ತೇನೆ. ನಂತರ 108
ಅಂಬುಲೆನ್ಸಗೆ ಫೋನ ಮಾಡಿದ್ದು ಸ್ವಲ್ಪ ಸಮಯದ ನಂತರ
108 ಅಂಬುಲೆನ್ಸ ಸ್ಥಳಕ್ಕೆ ಬಂದಿದ್ದು
ಆಗನಾನು ಮತ್ತು ಗುರುನಾಥ ಬಿಂಗೆ ಇಬ್ಬರು ಕೂಡಿಕೊಂಡು ನನ್ನ ಅಣ್ಣನಿಗೆ ಅಂಬುಲೆನ್ಸದಲ್ಲಿ
ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ವೈದ್ದಾಧಿಕಾರಿಗೆ ತೋರಿಸಲು ಮೃತಪಟ್ಟಿರುತ್ತಾನೆ
ಎಂದು ತಿಳಿಸಿದರು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment