ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀ ಶಿವರಾಯ ತಂದೆ
ತಿಪ್ಪಣ್ಣ ಬೊಚಿನ್, ಸಾ: ಇಂದಿರಾ ನಗರ ಮಳಖೇಡ ಗ್ರಾಮ. ತಾ:
ಸೇಡಂ. ರವರ ಹೆಂಡತಿ ಸುಮಿತ್ರಾಬಾಯಿ ಇವಳು ದಿನಾಂಕ 23-04-2017 ರಂದು ಸಾಯಂಕಾಲ ಕಟ್ಟಿಗೆ
ತರುತ್ತೆನೆ ಅಂತಾ ಹೇಳಿ ಮನೆಯಿಂದ ಹೋದವಳು
ಸಾಯಂಕಲಾ 7 ಗಂಟೆಯಾದರು ಬರದೆ ಇದ್ದುದರಿಂದ 7
ಗಂಟೆಯ ಸುಮಾರಿಗೆ ಸರಕಾರಿ ಬಾಲಕಿಯರ ವಸತಿ ನಿಲಯದ ಎದುರುಗಡೆ ಕಲಬುರಗಿ-ಸೇಡಂ
ರಾಜ್ಯ ಹೆದ್ದಾರಿ -10 ಮೇಲೆ ಒಂದು ಅಫಘಾತ ಆಗಿರುತ್ತದೆ ಅಂತಾ ಗೊತ್ತಾಗಿ ನಾನು ಅಲ್ಲಿಗೆ ಹೋಗಿ ನೋಡಲಾಗಿ
ಅಫಘಾತದಲ್ಲಿ ಒಬ್ಬ ಹೆಣ್ಣು ಮಗಳು ತಲೆಗೆ ಭಾರಿ ರಕ್ತಗಾಯ ಆಗಿ ನರಳಾಡುತ್ತಾ ಬಿದ್ದಿದ್ದಳು ನಾನು
ಹತ್ತಿರ ಹೋಗಿ ನೋಡಲಾಗಿ ಅವಳು ನನ್ನ ಹೆಂಡತಿ ಸಾವಿತ್ರಿಬಾಯಿ ಇದ್ದಳು ನಾನು ಅವಳಿಗೆ ನೋಡಿ
ಗುರುತಿಸಿದ್ದು ನನ್ನ ಹೆಂಡತಿ ಹೊತ್ತುಕೊಂಡು ಬರುತ್ತಿದ್ದ ಕಟ್ಟಿಗೆ ರೋಡಿನ ಪಕ್ಕದಲ್ಲಿ
ಬಿದ್ದಿದ್ದವು ನನ್ನ ಹೆಂಡತಿಯ ತಲೆಗೆ ಭಾರಿ ರಕ್ತಗಾಯ, ಎಡಗಾಲಿಗೆ ಭಾರಿರಕ್ತಗಾಯವಾಗಿ
ಕಾಲು ಮುರಿದಿದ್ದು ಮೈಗೆ ಅಲ್ಲಲ್ಲಿ ಸಾದಾಗಾಯ ಆಗಿದ್ದು ಕಂಡು ಬಂದಿದ್ದು ಆಗ ಅಲ್ಲಿಗೆ ನನ್ನ ತಮ್ಮ
ನಾಗೇಂದ್ರ ನನ್ನ ತಾಯಿ ಶರಣಮ್ಮ ಹಾಗು ನನ್ನ ಮಕ್ಕಳು ಹಾಗು ಇತರರು ಸ್ಥಳಕ್ಕೆ ಬಂದಿದ್ದು ನನ್ನ
ಹೆಂಡತಿ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ನನ್ನ ಹೆಂಡತಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ
ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ನನ್ನ ಹೆಂಡತಿ
ದಿನಾಂಕ 23-04-2017 ರಂದು ಸಾಯಂಕಾಲ ಕಟ್ಟಿಗೆ ಹೊತ್ತುಕೊಂಡು ಸರಕಾರಿ ಬಾಲಕಿಯರ ವಸತಿ ನಿಲಯದ
ಎದುರುಗಡೆ ಕಲಬುರಗಿ-ಸೇಡಂ ರಾಜ್ಯ ಹೆದ್ದಾರಿ -10ನ್ನು ದಾಟುತ್ತಿರುವಾಗ ಯಾವುದೋ
ಒಂದು ಲಾರಿ ಚಾಲಕ ತನ್ನ ವಶದಲ್ಲಿದ್ದ ಲಾರಿಯನ್ನು
ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ನನ್ನ ಹೆಂಡತಿಗೆ ಡಿಕ್ಕಿಪಡಿಸಿ ಅಫಗಾತ ಪಡಿಸಿ
ತನ್ನ ವಾಹನ ಸಮೇತ ಓಡಿ ಹೋಗಿದ್ದು ಅದರ ನಂಬರ ಯಾರು ಗಮನಿಸಿರುವುದಿಲ್ಲ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಅಪಹರಣ ಮಾಡಿ ಹಲ್ಲೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ಯಮನವ್ವ
ಗಂಡ ಬಸಪ್ಪ ಮರಗೊಳ ಸಾಃರಾಜವಾಳ ತಾಃ ಜೇವರಗಿ ರವರ ಮಗಳಾದ ನಾಗಮ್ಮ ಇವಳಿಗೆ ತೆಗನೂರ ಗ್ರಾಮದ
ಪರಶುರಾಮ ಇತನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೆನೆ ಅವಳಿಗೆ ಹುಲಗಪ್ಪ 10 ವರ್ಷದ ಮಗ ಇರುತ್ತಾನೆ, ಮಗಳ ಗಂಡ ಪರಶುರಾಮ ಇತನು ಹೃದಯಾಘಾತದಿಂದ ನಿಧನ ಹೊಂದಿರುತ್ತಾನೆ, ತನ್ನ ಗಂಡ ಸತ್ತ ನಂತರ ನನ್ನ ಮಗಳು 10 ವರ್ಷದ ಗಂಡು ಮಗನ್ನೊಂದಿಗೆ ರಾಜವಾಳಕ್ಕೆ ಬಂದು
ನಮ್ಮ ಮನೆಯಲ್ಲಿಯೇ ವಾಸವಾಗಿದ್ದಳು. ನನ್ನ ಮಗಳ ಗಂಡನ ಮನೆಯವರು ನನ್ನ ಮಗಳ ಮತ್ತು ಅವಳ ಮಗನ ಉಪಜೀವನಕ್ಕಾಗಿ ಐದು ಲಕ್ಷ
ರೂಪಾಯಿ ಕೊಟ್ಟಿದ್ದು ಈ ಹಣವನ್ನು ವಾಮಮಾರ್ಗದಿಂದ
ಪಡೆದುಕೊಳಲು ನಮ್ಮ ಗ್ರಾಮದವರೇ ಆದ ಸಾಯಬಣ್ಣ ತಂದೆ ತಿಪ್ಪಣ್ಣ ಗೊರೆಬೀಮಸೆ ಇತನು ನನ್ನ ಮಗಳು
ನಾಗಮ್ಮ ಇವಳಿಗೆ ಯಾವುದೋ ಆಸೆ ತೊರಿಸಿ ನಂಬಿಸಿ ಅವಳಿಗೆ ಪುಸಲಾಯಿಸಿ ದಿ. 19.04.2017 ರಂದು
ಮುಂಜಾನೆ 5.00 ಗಂಟೆಯ ಸುಮಾರಿಗೆ ನನ್ನ ಮಗಳಿಗೆ ಮತ್ತು ಅವಳ ಮಗ ಹುಲಗಪ್ಪ 10 ವರ್ಷದ ಇವನಿಗೆ
ಮನೆಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ, ನನ್ನ ಮಗಳ ಮತ್ತು ಮೊಮ್ಮಗನ ಪತ್ತೆಗಾಗಿ ಊರಲ್ಲಿ & ನಮ್ಮ ಸಂಭಂಧಿಕರಲ್ಲಿ ವಿಚಾರಿಸಿ ಎಲ್ಲಾ ಕಡೆಗೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ದಿ.
23.04.2017 ರಂದು ಮುಂಜಾನೆ 8.00 ಗಂಟೆಯ ಸುಮಾರಿಗೆ ನಾನು ಸಾಯಿಬಣ್ಣ ಇವನ ಮನೆಗೆ ಹೋಗಿ
ವಿಚಾರಿಸಿಕೊಂಡು ಬಂದಾಯಿತು ಎಂದು ನಮ್ಮೂರ ರಾಜಾಭಕ್ಷ ದರ್ಗಾದ ಹತ್ತಿರ ಹೋಗುತ್ತಿದ್ದಾಗ ಎದರುಗೆ
ಸಾಯಿಬಣ್ಣ ಇತನು ಬಂದನು ಅವನಿಗೆ ನಾನು ನನ್ನ ಮಗಳು ನಾಗಮ್ಮ ಮತ್ತು ಮೊಮ್ಮಗ ಹುಲಗಪ್ಪನಿಗೆ ಎಲ್ಲಿ
ಇಟ್ಟಿದಿಯಾ? ಎಂದು ಕೇಳಲಾಗಿ ಅವನು ಏ ಬೊಸಡಿ
ನನಗೇನು ಕೇಳುತಿ ಎಂದು ಹೊಲಸು ಮಾತುಗಳಿಂದ ಬೈದಿರುತ್ತಾನೆ, ಮತ್ತು ಅವನು ನನ್ನ ಸಂಗಡ ಜಗಳ ಮಾಡುತ್ತಿದ್ದಾಗ ಅವನ ಅಣ್ಣತಮ್ಮಕೀಯವರಾದ 1) ನಿಂಗಪ್ಪ
ತಂದೆ ತಿಪ್ಪಣ್ಣ ಗೊರೆಬಿಸೆ 2) ರಾಜಪ್ಪ ತಂದೆ ತಿಪ್ಪಣ್ಣ ಗೊರೆಬಿಸೆ 3) ಶಕ್ರಪ್ಪ ತಂದೆ
ತಿಪ್ಪಣ್ಣ ಗೊರೆಬಿಸೆ 4) ಸಿದ್ದಪ್ಪ ತಂದೆ ಮಲ್ಲಪ್ಪ ಗೊರೆಬಿಸೆ 5) ದೇವಪ್ಪ ತಂದೆ ಶಂಕ್ರಪ್ಪ
ಗೊರೆಬಿಸೆ 6) ಶಿವಪ್ಪ ತಂದೆ ಭಿಮರಾಯ 7) ಪುತ್ರಪ್ಪ ತಂದೆ ರಾಯಪ್ಪ ದಂಗಣ್ಣರ 8) ಯಮನಪ್ಪ ತಂದೆ
ಮರೆಪ್ಪ ನಾಯಿಕೊಡಿ 9) ಮರೆಪ್ಪ ತಂದೆ ಭಿಮರಾಯ ನಾಯಿಕೊಡಿ 10) ಶರಬವ್ವ ಗಂಡ ರಾಜಪ್ಪ ಗೊರೆಬಿಸೆ
11) ನಾಗಮ್ಮ ಗಂಡ ಸಾಯಬಣ್ಣ ಗೊರೆಬಿಸೆ 12) ವಜ್ರಮ್ಮ ಗಂಡ ಸಾಯಬಣ್ಣ ಗೊರೆಬಿಸೆ 13) ಯಮನಪ್ಪ
ತಂದೆ ತಿಪ್ಪಣ್ಣ ಗೊರೆಬಿಸೆ 14) ಶಾಂತಮ್ಮ ಗಂಡ ಬಸಪ್ಪ ನಾಯಿಕೊಡಿ 15) ದೇವಕ್ಕಿ ಗಂಡ ಶಿವಪ್ಪ
ಗೊರೆಬಿಸೆ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಏ ಬೊಸಡಿ ಸಾಯಿಬಣ್ಣನಿಗೆ ಏನು ಕೇಳುತ್ತಿ ಎಂದು
ನನಗೆ ಬೈಯುತ್ತಿದ್ದಾಗ, ನಾನು ಅವರಿಗೆ ನನ್ನ ಮಗಳು ಮತ್ತು
ಮೊಮ್ಮಗನಿಗೆ ಅಪಹರಿಸಿಕೊಂಡು ಹೋಗಿ ಮತ್ತೆ ನನಗೆ ಬೈಯುತ್ತಿರಿ ಎಂದು ಕೇಳಿದಾಗ ಸಾಯಿಬಣ್ಣ ಇತನು
ಕಾಲಿನಿಂದ ನನ್ನ ಹೊಟ್ಟೆಗೆ ಒದ್ದನು, ಮತ್ತು ಮೈ ಮೇಲಿನ
ಸೀರೆ ಹಿಡಿದು ಜಗ್ಗಿರುತ್ತಾನೆ, ದೇವಪ್ಪ ಇತನು ಕೈಯಿಂದ ನನ್ನ ಕಪಾಳದ ಮೇಲೆ ಎದೆಯ ಮೇಲೆ ಹೊಡೆದನು ನನಗೆ ಹೊಡೆಯುವುದನ್ನು ಕೇಳಿ ನನ್ನ
ಮಕ್ಕಳಾದ ನಾಗಪ್ಪ ತಂದೆ ಬಸಪ್ಪ ಮರಗೊಳ, ಭೀಮರಾಯ ತಂದೆ ಬಸ್ಸಪ್ಪ ಮರಗೊಳ, ರಾಯಪ್ಪ ತಂದೆ ಬಸ್ಸಪ್ಪ ಮರಗೊಳ, ಹಣಮಂತ ತಂದೆ ಬಸ್ಸಪ್ಪ ಮರಗೊಳ ಇವರು ಬಿಡಿಸಲು ಬಂದಾಗ ನಿಂಗಪ್ಪ ಇತನು ಕಾಲಿನಿಂದ ನನ್ನ ಮಗ ನಾಗಪ್ಪನ ಹೊಟ್ಟೆಯ ಮೇಲೆ ಒದ್ದನು. ರಾಜಪ್ಪ ಇತನು
ಬಡಿಗೆಯಿಂದ ನನ್ನ ಮಗ ಭೀಮರಾಯನ ಹಣೆ ಮೇಲೆ ಹೊಡೆದನು, ಶಂಕರೇಪ್ಪ ಇತನು ಕೈಯಿಂದ ನನ್ನ ಮಗ ರಾಯಪ್ಪನ ಕಪಾಳದ ಮೇಲೆ ಹೊಡೆದನು, ಸಿದ್ದಪ್ಪ ಇತನು ಚಪ್ಪಲಿಯಿಂದ ನನ್ನ ಮಗ ಹಣಮಂತನ ಎದೆಯ ಮೇಲೆ ಹೊಡೆದನು, ಊಳಿದವರು ಈ ಬ್ಯಾಡ ಸೂಳೆ ಮಕ್ಕಳಿಗೆ ಸೊಕ್ಕ ಬಹಳ ಬಂದಿದೆ ಜೀವ ಸಹಿತ ಬಿಡಬಾರದು ಎಂದು
ಜೀವದ ಬೇದರಿಕೆ ಹಾಕಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ಸಂಗಮೇಶ್ವರ ತಂದೆ ರಾಚಯ್ಯಾ ಸ್ವಾಮಿ ಮಠಪತಿ ಸಾ:
ರಿಬ್ಬನಪಲ್ಲಿ ಸಾ: ಸೇಡಂ ಇವರ ತಂಗಿಯಾದ ಉಮಾಮಹೇಶ್ವರಿ ಇವಳು ಒಂದು ವರ್ಷದ ಹಿಂದೆ ನಮ್ಮ ಗ್ರಾಮದ
ಹರ್ಷವರ್ಧನ ರೆಡ್ಡಿ ತಂದೆ ಶಿವರೆಡ್ಡಿ ಇತನನ್ನು ಪ್ರಿತಿಸಿ ಮಧುವೆಯಾಗಿದ್ದು, ಸದರಿಯವನಿಗೆ ಈ
ಮುಂಚೆ ಮದುವೆಯಾಗಿದ್ದು, ನಮ್ಮ ತಂಗಿಗೆ ಈ ವಿಷಯದಲ್ಲಿ ನಾವು ಹಲವಾರು ಸಲ ತಿಳಿ ಹೇಳಿದರು ಸಹ
ಸದರಿಯವನು ನಮ್ಮ ತಂಗಿಗೆ ಪುಸಲಾಯಿಸಿ ನಮ್ಮ ತಂಗಿಯನ್ನು ಕರೆದುಕೊಂಡು ಮದುವೆಯಾಗಿದ್ದು ನಂತರ
ಇಬ್ಬರು ಕೂಡಿ ಬೇರೆ ಗ್ರಾಮದಲ್ಲಿ ವಾಸಮಾಡಿಕೊಂಡಿರುತ್ತಾರೆ. ಇದೆ ವಿಷಯದಲ್ಲಿ ಅವನಿಗೆ ಹಾಗು
ನಮ್ಮ ಕುಟುಂಬದವರಿಗೆ ಹಲವಾರು ಸಲ ಬಾಯಿ ಮಾತಿನ ಗಲಾಟೆಯಾಗಿದ್ದು, ಆಗ ಸದರಿಯವನು ನೀವು ಈ ಬಗ್ಗೆ
ನಿವು ಏನಾದರು ಕೇಸ ನೀಡಿದರೆ ನಿಮಗೆ ಜೀವಸಹಿತ ಬೇದರಿಕೆ ಹಾಕಿದ ಕಾರಣ ಹಾಗು ಸದರಿಯವರು
ಗ್ರಾಮದಲ್ಲಿ ಬಲಿಷ್ಟರಿದ್ದರಿಂದ ನಾವುಗಳು ಅವರಿಗೆ ಅಂಜಿ ಫಿರ್ಯಾದಿ ಕೊಟ್ಟಿರುವದಿಲ್ಲಾ. ಇದೆ
ವಿಷಯವಾಗಿ ಹರ್ಷವರ್ಧ ರೆಡ್ಡಿ ಹಾಗು ಅವನ ತಮ್ಮನಾದ ರಾಜರೆಡ್ಡಿ ಇವರು ಬೋಸಡಿ ಮಕ್ಕಳಿಗೆ ನಿಮ್ಮ
ತಂಗಿಗೆ ಕರೆದುಕೊಂಡು ಹೋಗಿ ಮದುವೆಯಾದರು ಏನು ಕಿತ್ತಾಕಾಗಿಲ್ಲಾ ನಿಮ್ಮನ್ನು ಊರು ಬಿಡಿಸಿ ನಂತರ
ನಾನು ಊರಿಗೆ ಬಂದು ನಿಮ್ಮ ತಂಗಿಗೆ ಕರೆದುಕೊಂಡು ಬಂದು ಊರಲ್ಲಿ ಇರುತ್ತನೆ ಅಂತಾ ನಮಗೆ ಜೀವದ
ಬೇದರಿಕೆ ಹಾಕುತ್ತಿದ್ದ. ದಿನಾಂಕ: 23.04.2017 ರಂದು ಸಾಯಂಕಾಲ 1800 ಗಂಟೆ ಸುಮಾರಿಗೆ ನಾನು
ರಿಬ್ಬನಪಲ್ಲಿ ಗೇಟ ಹತ್ತಿರ ಕುಳಿತಾಗ ನಮ್ಮ ಗ್ರಾಮದ ಆಶರೆಡ್ಡಿ ಇತನು ಬಂದು ಹರ್ಷವರ್ಧನ ರೆಡ್ಡಿ
ಹಾಗು ಅವರ ತಮ್ಮನಾದ ರಾಜರೆಡ್ಡಿ ಇವರು ಸೇರಿಕೊಂಡು ನಿಮ್ಮ ತಮ್ಮನಾದ ಚಂದ್ರಶೇಖರ ಇತನಿಗೆ ಅನಂತಪೂರ
ಕ್ರಾಸಹತ್ತಿರ ಹೊಡೆಯುತ್ತಿದ್ದಾರೆ ಅಂತಾ ತಿಳಿಸಿದ ಮೇರೆಗೆ ನಾನು ನಮ್ಮ ತಂದೆಯನ್ನು ಕರೆದುಕೊಂಡು
ಅಲ್ಲಿಗೆ ಹೋಗಲಾಗಿ ಹರ್ಷವರ್ಧನ ರೆಡ್ಡಿ ಇತನು ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ನಮ್ಮನ್ನು ನೋಡಿ
ಬರ್ರೇಲೇ ಬೋಸಡಿ ಮಕ್ಕಳೆ ನಿಮ್ಮಿಂದ ನಾನು ಒಂದು ವರ್ಷದ ವರೆಗೆ ಊರು ಬಿಡಬೇಕಾಗಿದ್ದು ನಿಮ್ಮನ್ನು
ಜೀವಹೊಡೆದೆ ಊರಿಗೆ ಬುರುತ್ತೇನೆ ಅನ್ನುತ್ತಾ ನಮ್ಮ ತಮ್ಮನ್ನನ್ನು ಹೊಡೆಯುತ್ತಿದ್ದು ನಂತರ ನಾವು
ಬಿಡಿಸಲು ಹೊದಾಗ ರಾಜರೆಡ್ಡಿ ಹಾಗು ಅಲ್ಲೆ ಸ್ಥಳಕ್ಕೆ ಬಂದಿರುವ ಅವರ ತಂದೆಯಾದ ಶಿವಾರೆಡ್ಡಿ ತಂದೆ
ಆಶರೆಡ್ಡಿ ಹಾಗು ಚಂದ್ರಾರೆಡ್ಡಿ ತಂದೆ ಆಶರೆಡ್ಡಿ ಇವರು 4ಜನ ಸೇರಿ ಬಡಿಗೆಯಿಂದ ನನಗೆ ಹಾಗು ನಮ್ಮ
ತಂದೆಗೆ ಕಟ್ಟಿಗೆಯಿಂದ ಹೊಡೆ ಬಡೆ ಮಾಡುತ್ತಿದ್ದು ನಮ್ಮ ತಮ್ಮನಿಗೆ ಎಡಗೈಗೆ, ಬಲಗಾಲಿಗೆ ಹಾಗು
ಬಲಕಣ್ಣಿಗೆ ಗುಪ್ತಗಾಯಗಳಾಗಿದ್ದು, ಹಾಗು ಹರ್ಷವರ್ಧನ ರೆಡ್ಡಿ ಇತನು ಅದೇ ಕಟ್ಟಿಗೆಯಿಂದ ತಲೆಯ
ಮೇಲೆ ಬಲವಾಗಿ ಹೊಡೆದ ಕಾರಣ ಭಾರಿ ರಕ್ತಗಾಯವಾಗಿದ್ದು ಹಾಗು ನನಗೆ ಎಡಗೈ ಭುಜಕ್ಕೆ ಹಣೆಯ ಮೇಲೆ
ಗಾಯಗಳಾಗಿದ್ದು ಎಡಗಣ್ಣಿಗೆ ಬಲವಾದ ಗುಪ್ತಗಾಯವಾಗಿದ್ದು ಅದೇ ರೀತಿ ನಮ್ಮ ತಂದೆಗು ಸಹ ಸಣ್ಣ
ಪುಟ್ಟಗಾಯಗಳಾಗಿದ್ದು ನಾವು ಬೇಡಿಕೊಂಡರು ಸಹ ಸದರಿ 4 ಜನರು ಸೇರಿಕೊಂಡು ಈ ಸುಳೆ ಮಕ್ಕಳಿಂದ ನಮಗೆ
ಊರಿನಲ್ಲಿ ಮರ್ಯಾದಿ ಹೋಗಿದೆ ನನ್ನ ಮಗನಿಗೆ ಊರು ಬಿಡುವಂತಾಗಿದ್ದೆ ಈ ಮಕ್ಕಳಿಗೆ ಜೀವಸಮೇತ
ಬಿಡುವದು ಬೇಡಾ ಅಂಥಾ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment