POLICE BHAVAN KALABURAGI

POLICE BHAVAN KALABURAGI

23 April 2017

Kalaburagi District Reported Crimes

ದರೊಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 10-05-2014 ರಂದು ರಾತ್ರಿ ಅಗ್ನಿಶಾಮಕ ಠಾಣೆಯಿಂದ 200 ಮೀಟರ್ ಮುಂದೆ ಮುಖ್ಯ ರಸ್ತೆಯ ಮೇಲೆ ಕೆಲವು ಜನ ಹುಡುಗರು ಪಿರ್ ಜಿಂಗಾನಿ ದರ್ಗಾಕ್ಕೆ ಹೊಗುವ ದಾರಿ ಪಕ್ಕದಲ್ಲಿನ ಕಾಂಪೌಂಡ ಗೋಡೆಯ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಗುಸುಗುಸು ಮಾತನಾಡುತ್ತಾ ಅಡಗಿ, ಅವರು ದರೋಡೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ತಮ್ಮ ಹತ್ತೀರ ಮಾರಕಾಸ್ತ್ರಗಳನ್ನಿಟ್ಟುಕೊಂಡು ಸಜ್ಜಿತರಾಗಿ ಕುಳಿತುಕೊಂಡ ಬಗ್ಗೆ ಬಾತ್ಮಿ ಮೇರೆಗೆ ಶ್ರೀ ಸಂಜೀವ ಕುಮಾರ  ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ   ಸ್ಥಳಕ್ಕೆ ಹೋಗಿ  ದಾಳಿ ಮಾಡಲಾಗಿ  ಕಾಂಪೌಂಡ ಮರೆಯಲ್ಲಿ ಕುಳಿತ ದರೋಡೆಕೋರರು ನಾವು ಬರುವದನ್ನು ಗಮನಿಸಿ ಓಡರೋ ಓಡರೋ ಅನ್ನುತ್ತಾ ತಾವು ತಂದ ಎರಡು ಮೋಟಾರು ಸೈಕಲ್ಗಳನ್ನು ಅಲ್ಲಿಯೆ ಬಿಟ್ಟು ಒಂದೆ ಸವನೆ ಓಡ ಹತ್ತಿದಾಗ ಇವರನ್ನು ಸಿಬ್ಬಂದಿಯವರ ಸಹಾಯದಿಂದ ಹಿಡಿದು ವಿಚಾರಿಸಲು 1] ಅಂಬ್ರೇಶ ತಂದೆ ಸುಭಾಷ ಸಣಬು ಕೊರಿಮಠದ ಹತ್ತೀರ ಸಾ : ಧನಗರಗಲ್ಲಿ ಬ್ರಹ್ಮಪೂರ ಗುಲಬರ್ಗಾ 2) ಶರಣು ತಂದೆ ಕೆಂಚಪ್ಪ ಹದಗಲ್ ಸಾ : ಧನಗರಗಲ್ಲಿ ಬ್ರಹ್ಮಪೂರ ಗುಲಬರ್ಗಾ 3) ಸುರೇಶ ತಂದೆ ಸೋಮಶೇಖರ ವಾಗ್ದರಗಿ ಕೊರಿಮಠದ ಹತ್ತೀರ ಸಾ : ಧನಗರಗಲ್ಲಿ ಬ್ರಹ್ಮಪೂರ ಗುಲಬರ್ಗಾ  4) ಶರಣಬಸ್ಸಪ್ಪ ತಂದೆ ಲಕ್ಷ್ಮಣ ತಳವಾರ ಸಾ : ಧನಗರಗಲ್ಲಿ ಕೊರಿಮಠದ ಹತ್ತೀರ ಬ್ರಹ್ಮಪೂರ ಗುಲಬರ್ಗಾ ಅಂತಾ ಹೇಳಿದ್ದು ಅಲ್ಲದೆ ಓಡಿಹೊದವನ ಹೇಸರು ಕೇಳಲಾಗಿ, 5] ಸುರೇಶ ತಂದೆ ಭೀಮಶ್ಯಾ ಸಾ : ತಾರಫೈಲ್ ಅಂತಾ ತಿಳಿಸಿದ್ದು ಇವರೆಲ್ಲರು ಈ ಮೊಲು ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ನ್ಯಾಯಾಲಯದಲ್ಲಿ ಜಾಮೀನು ಪಡೆದು  ನಂತರ ನ್ಯಾಯಾಲಕ್ಕೆ ಹಾಜರಾಗದೆ ತಲೆಮರಿಕೊಂಡವರಾಗಿರುತ್ತಾರೆ  ಅಂತಾ ಗೊತ್ತಾಗಿದ್ದು  ಸದರಿಯವರೊಂದಿಗೆ  ರಾಘವೇಂದ್ರ ನಗರ ಠಾಣೆಗೆ  ಬಂದು ಪ್ರಕರಣ ದಾಖಲಿಸಲಾಗಿದೆ
ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಜೇವರಗಿ ಠಾಣೆ : ಚಂದ್ರಶೇಕರ ತಂದೆ ಸಿದ್ರಾಮಪ್ಪ ಗರ್ ಸಾ : ಕೋಳಕೂರ  ಇವರು ಕೃಷಿ ಚಟುವಟಿಕೆ ಕುರಿತು ಬ್ಯಾಂಕ್‌ ನಲ್ಲಿ ಮತ್ತು ಖಾಸಗಿಯಾಗಿ ಒಟ್ಟು 7 ಲಕ್ಷ 50 ಸಾವೀರ  ರೂಗಳ ಸಾಲವನ್ನು ಮಾಡಿಕೊಂಡಿದ್ದು ಈ ವರ್ಷ ಸರಿಯಾಗಿ ಮಳೆ ಬೆಳೆ ಆಗದ್ದಕ್ಕೆ ಸಾಲ ತೀರಿಸಲು ಆಗಿರುವದಿಲ್ಲ. ನನ್ನ ಗಂಡನು ಸಾಲ ತೀರಿಸಲು ಆಗದೆ  ಅದನ್ನೆ  ಮನಸ್ಸಿನ ಮೇಲೆ ಪರಿಣಾ ಮಾಡಿಕೊಂಡು ಇಂದು ದಿನಾಂಕ 22.04.2017 ರಂದು ಬೇಳಗಿನ ಜಾವ 4 ಗಂಟೆಯ ಸುಮಾರಿಗೆ ಮನಯಲ್ಲಿನ ದನಗಳ  ಕೊಟ್ಟಿಗೆಯಲ್ಲಿ ಹಗ್ಗದಿಂದ ಊರಲು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿರುತ್ತಾನೆ ಅಂತಾ ಶ್ರೀಮತಿ ದೇವಕಿ ಗಂಡ ಚಂದ್ರಶೇಕರ ಗರ್ ಸಾ : ಕೋಳಕೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಾಳಪ್ಪ ತಂದೆ ಲಕ್ಷ್ಮಣ ಜಗಲಗೊಂಡ ಸಾ: ಘತ್ತರಗಾ ಗ್ರಾಮ ಇವರು ದಿನಾಂಕ 21-04-2017 ರಂದು ರಾತ್ರಿ 10:00 ಗಂಟೆಗೆ ಸುಮಾರಿಗೆ ನಾನು ನನ್ನ ಹೆಂಡತಿ ಮಕ್ಕಳು ಎಲ್ಲರೂ  ನಮ್ಮನೆಯ ಮಾಳಗಿಯ ಮೇಲೆ ಮಲಗಿಕೊಂಡಿದ್ದು  ರಾತ್ರಿ 03:30 ಗಂಟೆ ಸುಮಾರಿಗೆ ನನ್ನ ಹೆಂಡತಿ ನೀರು ಕುಡಿಯಲು ಎದ್ದು ಕೆಳಗೆ ಹೊಗಿ ಚೀರಿದಳು  ಆಗ ನಾನು ಕೆಳಗೆ ಹೋಗಿ ನೋಡಲಾಗಿ  ನಮ್ಮ ಮನೆಯ ಬಾಗಿಲುಗಳು ತರೆದಿದ್ದು, ಮನೆಯಲ್ಲಿದ್ದ ಅಲಮಾರಿಯ ಬಾಗಿಲು ತೆರೆದಿತ್ತು, ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರು ಅಲಮಾರಿಯನ್ನು ಚೆಕ್ ಮಾಡಲಾಗಿ ಅಲಮಾರಿಯಲ್ಲಿ ಇಟ್ಟಿದ್ದ 20,000/- ರೂ ನಗದು ಹಣವನ್ನು ಹಾಗೂ ಸುನೀಲ ಹೊಳಿಕೇರಿ ಎಂಬಾತನ ಸಮಸಂಗ ಜೆ7 ಗೋಲ್ಡ ಮೋಬೈಲ ಐಎಮ್ ವಿ ನಂ 354302082527989 ಅಂತಾ ಇದ್ದು ಅದರಲ್ಲಿ  ನಂ 9972277795 ಸಿಮ್ ಇದ್ದು ಇವುಗಳನ್ನು ಯಾರೊ ಕಳ್ಳರು ಅಲಮಾರಿಯ ಬಾಗಿಲು ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No comments: