ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 25/04/17 ರಂದು ಮೃತ ಗುಂಡಪ್ಪ ಇತನು ಹೊಂಡಾ ಸೈನ ಕೆಎ 32
ಎಸ 595 ಮೇಲೆ ಕುಳಿತುಕೊಂಡು ತಾಜ ಸುಲ್ತಾನಪೂರ ಗ್ರಾಮದಿಂದ ಕಲಬುರಗಿ ಕಡೆಗೆ ಹೊರಟಿದ್ದು,
ರಾತ್ರಿ 09-30 ತಾಜ ಸುಲ್ತಾನಪೂರ ರೋಡಿನ,
ಕಮಲನಗರ ಕಾಲನಿ ಪುಲಚಂದ ಇಟ್ಟಂಗಿ ಭಟ್ಟಿ ಎದುರುಗಡೆ ಬಂದಾಗ ಅದೇ ಸಮಯಕ್ಕೆ ಎದುರುನಿಂದ ಹಿರೋ
ಸ್ಪೆಂಡರ ಕೆಎ 32 ಇಇ 6945 ಚಾಲಕ ಮಲ್ಲಿಕಾರ್ಜುನ ಇತನು ಹಿಂದೆ ರಾಜೇಶ ಗಿರೆಗೋಳ ಇತನಿಗೆ ಕೂಡಿಸಿಕೊಂಡು ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು
ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ಬಂದವನೇ ಗುಂಡಪ್ಪನ ಮೋಟಾರ ಸೈಕಲಿಗೆ
ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಡಿಕ್ಕಿ ಹೊಡೆದ ರಭಸಕ್ಕೆ ಗುಂಡಪ್ಪ ಇತನು ಮೋಟಾರ ಸೈಕಲ ಮೇಲಿಂದ
ಹಾರಿ ರೋಡಿನ ಮೇಲೆ ಬಿದ್ದಾಗ ಅದೇ ಸಮಯಕ್ಕೆ ಗುಂಡಪ್ಪನ ಹಿಂದಿನಿಂದ ಟ್ಯಾಕ್ಟ್ರರ ಇಂಜನ ನಂಬರ ಕೆಎ 33 ಟಿಎ 3948 ಮತ್ತು ಟ್ರಾಲಿ ನಂಬರ ಕೆಎ 33 ಟಿ 9925
ಅದರ ಕೆಳಗಡೆ ಕೆಎ 29 203 ಚಾಲಕ ತನ್ನ ವಶದಲ್ಲಿದ್ದ ಟ್ಯಾಕ್ಟ್ರರನ್ನು
ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ರೋಡಿನ ಮೇಲೆ ಬಿದ್ದ ಗುಂಡಪ್ಪನ ತಲೆಯ ಮೇಲಿಂದ ಹಾಯಿಸಿಕೊಂಡು ಹೋಗಿದ್ದರಿಂದ ಅವನ ತಲೆ
ಚಪ್ಪಟೆಯಾಗಿ ಭಾರಿ ರಕ್ತಗಾಯವಾಗಿ ರಕ್ತ ಸ್ರಾವದಿಂದ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ.
ಟ್ಯಾಕ್ಟ್ರರ ಚಾಲಕ ಮುಂದೆ ಹೋಗಿ ಟ್ಯಾಕ್ಟ್ರರ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಅದರಂತೆ
ಮಲ್ಲಿಕಾರ್ಜುನಿನಗೆ ಸಣ್ಣ ಪುಟ್ಟಗಾಯಗಳಾಗಿದ್ದರಿಂದ ಅವನು ಅಲ್ಲಿಂದ ಓಡಿ ಹೋಗಿದ್ದು ರಾಜೇಶ ಇತನಿಗೆ ರಕ್ತಗಾಯ ಮತ್ತು ಭಾರಿ ಗುಪ್ತಗಾಯಗಳಾಗಿದ್ದರಿಂದ
ಅವನಿಗೆ ಅವನ ಗೆಳೆಯ ಶಿವರಾಜ ಉಪಚಾರ ಕುರಿತು
ಬಸವೇಶ್ವರ ಆಸ್ಪತ್ರೆ ಕಲಬುರಗಿ 108 ಅಂಬುಲೈನ್ಸ ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ಅಂತಾ
ಶ್ರೀಮತಿ ರೇಖಾ ಗಂಡ ಗುಂಡಪ್ಪ ಸುತಾರ ಸಾ : ತಾಜಸುತ್ತಾನಪೂರ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಬಾಬುರಾವ್
ಕಡವೆ ಸಾಃ ಬಾಲ ಹನುಮಾನ ಗುಡಿ ಹಿಂದುಗಡೆ ಲಮಾಣಿ ತಾಂಡಾ ಫಿಲ್ಟರ್ ಬೇಡ್ ಕಲಬುರಗಿ ರವರು ದಿನಾಂಕ 24.04.2017 ರಂದು ಎಂದಿನಂತೆ ನನ್ನ ಎಮ್ಮೆ, ಕೋಣಗಳನ್ನು ನನ್ನ ಮನೆಯ ಅಂಗಳದ ಮುಂದೆ ಕಟ್ಟಿ ನಾನು ಕುಡಾ ಅಲ್ಲಿಯೆ ಮಲಗಿದ್ದು, ಮಧ್ಯರಾತ್ರಿಯಲ್ಲಿ ದಿನಾಂಕ: 25.04.2017 ರಂದು
ನಸುಕಿನ ಜಾವ ಅಂದಾಜು 3.00 ಗಂಟೆ ಸುಮಾರಿಗೆ ನನಗೆ ಎಚ್ಚರವಾಗಿ ನೋಡಿದಾಗ, ನಾನು ಮನೆಯ ಮುಂದೆ ಕಟ್ಟಿದ್ದ 03 ಎಮ್ಮೆ, 01 ಕೋಣಗಳು ಇರಲಿಲ್ಲಾ. ಯಾರೋ ಕಳ್ಳರು ನನ್ನ 03 ಎಮ್ಮೆ, 01 ಕೋಣಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳುವಾದ 03 ಎಮ್ಮೆಗಳ ಅಃಕಿಃ 2,00,000/-
01 ಕೋಣದ ಕಿಮ್ಮತ್ತು ಅಃಕಿಃ 50,000/- ರೂಗಳು ಹಿಗೆ ಒಟ್ಟು 2,50,000/-ರೂ ಬೆಲೆಬಾಳುವ ದನಗಗಳು ಇರುತ್ತವೆ. ನಂತರ ನಾನು & ಇತರರು ಸೇರಿ ಎಲ್ಲಾಕಡೆ ಎಮ್ಮೆ, ಕೋಣಗಳನ್ನು ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗುರುಶಾಂತ ತಂದೆ ಮಲ್ಲಪ್ಪ ದೋಡ್ಡಮನಿ ಸಾ|| ಶಿವಪೂರ ಗ್ರಾಮ ಇವರು ದಿನಾಂಕ
25-04-2017 ರಂದು ಸಾಯಂಕಾಲ ನನ್ನ ಮೋಟರ ಸೈಕಲ ಮೇಲೆ ನಮ್ಮೂರಿನ ಬಸವಣ್ಣ ದೇವರ ಗುಡಿಯ ಮುಂದೆ ಹೋಗುತ್ತಿದ್ದಾಗ ಶಿವಣ್ಣ ತಂದೆ ದೌಲಪ್ಪ ಸೋನ್ನ ಇವರ ಮಗಳು ನನ್ನ ಮೋಟರ ಸೈಕಲಕ್ಕೆ ಅಡ್ಡ ಬಂದಾಗ ನಾನು ತಕ್ಷಣ ಮೋಟರ ಸೈಕಲಕ್ಕೆ ಬ್ರೇಕ್ ಹಾಕಿದೇನು, ಆಗ ಅಲ್ಲೆ ಇದ್ದ 1) ಶಿವಣ್ಣ ತಂದೆ ದೌಲಪ್ಪ ಸೋನ್ನ 2) ಜಗಪ್ಪ ತಂದೆ ದೌಲಪ್ಪ ಸೋನ್ನ 3) ಉಮ್ಮಣ್ಣ ತಂದೆ ದೌಲಪ್ಪ ಸೋನ್ನ ಸಾ|| ಎಲ್ಲರೂ ಶಿವಪೂರ ಇವರು ನನ್ನ ಹತ್ತಿರ ಬಂದು ಶಿವಣ್ಣ ಈತನು ಏನೋ ಬೋಸಡಿ ಮಗನೆ ನಮ್ಮ ಹುಡುಗಿಗೆ ಮೋಟರ ಸೈಕಲ ಹಾಯಿಸುತ್ತಿದ್ದೇ ನೋಡಿಕೊಂಡು ಹೊಡೆಯೊದಕ್ಕೆ ಬರೊದಿಲ್ಲಾ ಅಂತಾ ಬೈದನು, ಆಗ ನಾನು ನಿಮ್ಮ ಹುಡುಗಿನೆ ಮೋ/ಸೈ ಕ್ಕೆ ಅಡ್ಡ ಬಂದಿದೆ ಯಾಕ ಬೈತಿ ಅಂತಾ ಕೇಳಿದೆನು, ಅದಕ್ಕೆ ಶಿವಣ್ಣ ಈತನು ನನ್ನ ಮೇಲೆ ಇದ್ದ ಈ ಹಿಂದಿನ ಜಗಳದ ದ್ವೇಷದಿಂದ ಬೋಸಡಿ ಮಗನೆ ಮತ್ತ ನಮಗೆ ಎದರ ಮಾತಾಡ್ತಿ ಅಂತಾ ಅಲ್ಲೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ಏಡಗೈ ಹಸ್ತದ ಮೇಲೆ ಹೊಡೆದು ಮೂಗಿನ ಮೇಲೆ ಕೈಯಿಂದ ಹೊಡೆದನು. ಉಳಿದವರೆಲ್ಲರೂ ಕೂಡಿ ಕೈಯಿಂದ ಹೊಡೆಯುವುದು ಮತ್ತು ಕಾಲಿನಿಂದ ಒದೆಯುವುದು ಬೈಯುವುದು ಮಾಡಿರುತ್ತಾರೆ. ಸದರಿಯವರು ಮಗನೆ ನಿನಗೆ ಇಷ್ಟಕ್ಕೆ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment