ಅಪಘಾತ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ :ದಿನಾಂಕ: 22/03/2017 ರಂದು ಬಸಮ್ಮಾ
ಕಿರಣಗಿ ಇವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ದಿನಾಂಕ: 21/03/2017 ರಂದು ತಾನು ಮಾವನೂರ
ಗ್ರಾಮಕ್ಕೆ ಬಂದು ಅಲ್ಲಿಂದ ಜೇವರ್ಗಿಗೆ ಹೋಗುವ ಕುರಿತು ಮಾವನೂರ ಬಸ ನಿಲ್ದಾಣದಲ್ಲಿ ರಾಜು
ಕಿರಣಗಿ ಇವರ ಟಂಟಂ ನಂ: ಕೆಎ 32 ಬಿ 3502 ರಲ್ಲಿ ರಾಯಪ್ಪ ತಂದೆ ನಿಂಗಪ್ಪ ಯಲಗೊಂಡ, ಅರ್ಜುನ
ತಂದೆ ಭೀರಪ್ಪ ಕಿರಣಗಿ ಇವರೊಂದಿಗೆ ಕುಳಿತು ಹೋಗುತ್ತಿರುವಾಗ
ಒಂದು ಬೊಲೆರೋ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿಸ್ಕಾಳಜೀತನದಿಂದ ನಡೆಯಿಸಿಕೊಂಡು
ನಾವು ಕುಳಿತ ಟಂಟಂಕ್ಕೆ ಅಪಘಾತ ಪಡಿಸಿದ್ದು ಆಗ ನನಗೆ
ಭಾರಿ ಗಾಯಗಳಾಗಿದ್ದು ಕಲಬುರಗಿಯ ಗಂಗಾ ಆಸ್ಪತ್ರೆ
ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಮ್ಮ ಟಂಟಂಕ್ಕೆ ಅಪಘಾತ ಪಡಿಸಿದ ಬೋಲೇರೋ ಪಿಕಪ ವಾಹನ ನಂ:
ಕೆಎ 32 ಡಿ 6902 ಅಂತ ಇದ್ದು ಬೊಲೆರೋ ಪಿಕಪ ನಂ. ಕೆಎ 32 ಡಿ 6902 ನೇದ್ದರ ಚಾಲಕನ ಮೇಲೆ ಕ್ರಮ
ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಮಟಕಾ ಜೂಜು ಕೋರರ ಬಂಧನ:
ಶಹಾಬಾದ ನಗರ ಪೊಲೀಸ ಠಾಣೆ : ದಿನಾಂಕ 22/03/2017 ರಂದು ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ನಗರ ಪೊಲೀಸ ಠಾಣೆ ರವರು
ಶಹಾಬಾದ ಪಟ್ಟಣದ ಭಾರತ ಚೌಕ್ದಲ್ಲಿ ಮಟಕಾ
ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಟೆದು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ
ಸ್ಥಳಕ್ಕೆ ಹೋಗಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದು ಚೀಟಿ ಬರೆದುಕೊಳ್ಳುತ್ತಿದ್ದ ರಾಜಶೇಖರ್
ತಂದೆ ಗುರುಲಿಂಗಪ್ಪಾ ಸಾ: ಶಹಾಬಾದ ಈತನಿಗೆ ದಸ್ತಗೀರ ಮಾಡಿ ಆತನಿಂದ ನಗದು ಹಣ 610 ರೂ ಒಂದು
ಮಟಕಾ ಚೀಟಿ, ಒಂದು ಪೆನ್ ಜಪ್ತಿ ಪಡಿಸಿಕೊಂಡು
ಆತನ ವಿರುದ್ದ ಶಹಾಬಾದ ಠಾಣೆಯಲ್ಲಿ ಪ್ರಕರಣ ಧಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment