ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಮಹಾನಂದಾ
ಗಂಡ ರಾಜಶೇಖರ ಮರಡಿ ಸಾ: ಹೆಚ್.ಐ.ಜಿ 41
ಕೆ.ಹೆಚ್.ಬಿ ಕಾಲನಿ ಕಲಬುರಗಿ ಇವರ ವಿವಾಹವು ರಾಜಶೇಖರ ತಂದೆ ಬೀಮರಾವ ಮರಡಿ ಸಾ: ದೇವಿ ನಗರ
ಕಲಬುರಗಿ ಇತನೊಂದಿಗೆ ದಿನಾಂಕ 22.06.2012 ರಂದು ಇಂಡಿಯಾ ಫಂಕ್ಷನ್ ಹಾಲ ಶಹಾಬಾದದಲ್ಲಿ
ಜರುಗಿರುತ್ತದೆ. ಇದೇ ಸಂದರ್ಭದಲ್ಲಿ ನನ್ನ ಅಣ್ಣನಾದ ಮಂಜುನಾಥನ ವಿವಾಹವು ಕೂಡ ನನ್ನ ಗಂಡ
ರಾಜಶೇಖರ ಸಹೋದರಿ ವಿಜಯಲಕ್ಷ್ಮೀ ಜೊತೆಗೆ ವಿವಾಹ ಜರುಗಿರುತ್ತದೆ. ನನ್ನ ವಿವಾಹದ ನಂತರ ನನು ನನ್ನ
ಗಂಡನ ಮನೆಯಲ್ಲಿ ಕೇವಲ ಕೆಲವೇ ತಿಂಗಳಲ್ಲಿ ನನ್ನ ಗಂಡ ರಾಜಶೇಖರ ಮರಡಿ ನನಗೆ ನನ್ನ ತವರು ಮನೆಯಿಂದ
5 ಲಕ್ಷ ವರದಕ್ಷಿಣೆ ಹಣ ತರಲು ಪಿಡಿಸತೊಡಗಿದರು. ನನ್ನ ತಂದೆ ತಾಯಿ ಬಡವರಾಗಿದ್ದರಿಂದ ನನಗೆ ಹಣ
ತರಲು ಸಾದ್ಯವಿಲ್ಲವೆಂದು ಹೇಳಿದಾಗ ನನಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಜನೇವರಿ
2013 ರಲ್ಲಿ ಹೊರಗೆ ಹಾಕಿರುತ್ತಾನೆ. ಆ ಸಂದರ್ಬದಲ್ಲಿ ನಾನು ಗರ್ಬಿಣಿಯಾಗಿದ್ದೆ. ನಂತರ ನನ್ನ
ಹೆರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಆಗಿದ್ದು. ಆದರೆ ದುರ್ದೈವದಿಂದ ಜನಸಿದ ಗಂಡು ಮಗು ಸ್ವಲ್ಪ
ಸಮಯದಲ್ಲಿ ಸತ್ತಿರುತ್ತದೆ ನನ್ನ ಗಂಡ ಆ ಸಮಯದಲ್ಲಿ ನನ್ನ ಸಹಾಯಕ್ಕೆ ಬಂದಿರುವದಿಲ್ಲ ನನ್ನ
ಹೆರಿಗೆಯ ಅವಧಿ ಮುಗಿದ ನಂತರ ನಾನು ಕುಟುಂಬ ನ್ಯಾಯಾಲಯ ಕಲಬುಗರಿಯಲ್ಲಿ ನನ್ನ ಜೀವನಕ್ಕಗಿ ಅರ್ಜಿ
ಸಲ್ಲಿಸಿದೆ ಆದರೆ ಹಿರಿಯರ ಮದ್ಯಸ್ಥಿಕೆಯಿಂದ ಕೇಸ ವಾಪಾಸ್ಸು ಪಡೆದು ನನ್ನ ಗಂಡನೊಂದಿಗೆ ಸಂಸಾರ
ಪ್ರಾರಂಬಿಸಿದೆನು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನನ್ನ ಗಂಡ ನನಗೆ ಪುನ;
ಹೊಡೆಯಲು ಹಾಗೂ ತವರು ಮನೆಯಿಂದ ಹಣ ತರಲು ಒತ್ತಾಯಿಸಿ ಜೀವ ಬೆದರಿಕೆ ಹಾಕಲು ಪ್ರಾರಂಬಿಸಿದನು.
ನನ್ನ ಗಂಡ ದಿನಾಂಕ 18.11.2015 ರಂದು ನನ್ನನ್ನು
ಮನೆಯಿಂದ ಹೊರಗೆ ಹಾಕಿರುತ್ತಾನೆ ನಾನು ಈಗ ನನ್ನ ತಂದೆ ತಾಯಿಯ ಆಶ್ರಯದಲ್ಲಿ ಜೀವನ
ಸಾಗಿಸುತ್ತಿದ್ದೆನೆ. ನನ್ನ ಗಂಡ ಮನೆ ಖರೀದಿಸಲು ನನ್ನ ಡಿಗ್ರಿ ಸರ್ಟಿಪಿಕೆಟ ಹಚ್ಚಿ 20 ಲಕ್ಷ
ಸಾಲ ತೆಗೆದುಕೊಂಡಿರುತ್ತಾರೆ. ದಿನಾಂಕ 19.03.2017 ರಂದು ರಾತ್ರಿ 11 ಗಂಟೆಗೆ ನನ್ನ ಗಂಡ
ರಾಜಶೇಖರ ಕೆಲವು ಗುಂಡಾ ಜನರನ್ನು ಕರೆದುಕೊಂಡು ನಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನನಗೆ
ಬೈದು ನಾನು ಮನೆಯ ಹೊರಗೆ ನಿಂತಿರುವಾಗ ನನಗೆ ಹೊಡೆದು ಗುಪ್ತಗಾಯಪಡಿಸಿರುತ್ತಾನೆ. ಆಗ ನನ್ನ ಅಣ್ಣ
ಮತ್ತು ನೆರೆಹೊರೆಯವರು ಬಂದು ಜಳ ಬಿಡಿಸಿದಾಗ ನನ್ನ ಗಂಡ ಹಾಗೂ ಆತನ ಸ್ನೇಹಿತರು ಓಡಿ
ಹೋಗಿರುತ್ತಾರೆ. ಓಡಿ ಹೋಗುವಾಗ ನನಗೆ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಆದದ್ದರಿಂದ ಮೇಲಿನ
ಎಲ್ಲಾ ಅಂಶಗಳನ್ನು ಪರಿಗಣಿಸಿ ನನ್ನ ಗಂಡ ಹಾಗೂ ಆತನ ಸಂಗಡಿಗರಾದ ಶ್ರೀಕಾಂತ ಮರಡಿ,ಸುಭಾಷ ಮರಡಿ,ಬಶೆಟ್ಟಿ,ತುಕಾರಾಮ, ಚಂದ್ರಕಾಂತ ಬಂಗರಗಿ ಮತ್ತು ಮಲಕಯ್ಯ ಸ್ವಾಮಿ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 10.03.2017
ರಂದು ಬೆಳ್ಳಿಗ್ಗೆ ನಾನು ನಮ್ಮ ತಾಯಿ ಜೈಶ್ರೀ ಕೂಡಿಕೊಂಡು ನಮ್ಮ ಮೋಟಾರ ಸೈಕಲ ತೆಗೆದುಕೊಂಡು ಹುಮನಾಬಾದ
ಹತ್ತಿರ ಇರುವದ ಕಪಲಾಪೂರ ಅಂಬಾ ಭವಾನಿ ದೇವರಿಗೆ ಹೊರಟಿದೇವು ಬೆಳ್ಳಿಗ್ಗೆ 10:30 ಗಂಟೆಯ ಸುಮಾರಿಗೆ
ನಾವು ಹುಮನಾಬಾದ ರಿಂಗ್ ರೋಡ ಹತ್ತಿರ ಬಂದಿದ್ದು ಅಲ್ಲಿ ನನಗೆ ಪರಿಚಯದವರಾದ ವೀರಣ್ಣ ತಂದೆ ದೇವಿಂದ್ರಪ್ಪ
ವಿಶ್ವಕರ್ಮ ಮತ್ತು ಹೊನ್ನಮ್ಮ ಗಂಡ ಜಗನ್ನಾಥ ಅಜಾದಪೂರ ಇವರು ಮೋಟಾರ ಸೈಕಲ ತೆಗೆದುಕೊಂಡು ನಿಂತ್ತಿದ್ದು
ಅವರನ್ನು ನೋಡಿ ನಾವು ನಿಂತು ಅವರ ಸಂಗಡ ಮಾತನಾಡಿದ್ದು ಅವರು ಕೂಡಾ ಕಪಲಾಪೂರ ಅಂಬಾ ಭವಾನಿ ಗುಡಿಗೆ
ಹೊಗುತ್ತಿರುವದಾಗಿ ತಿಳಿಸಿದ್ದು ನಂತರ ನಾವು ಮೊಟಾರ ಸೈಕಲ ತೆಗೆದುಕೊಂಡು ಹುಮನಾಬಾದ ಕಡೆಗೆ ಎನ್.ಎಚ್.218ರ
ಮೇಲೆ ಹೊಗುತ್ತಿದ್ದು ವೀರಣ್ಣ ಇವರು ತಮ್ಮ ಮೋಟಾರ ಸೈಕಲ ನಂ ಕೆಎ 32 ಇಕೆ 4510 ನೇದ್ದು ತೆಗೆದುಕೊಂಡು
ಹೊನ್ನಮ್ಮ ಇವಳನ್ನು ಮೋಟಾರ ಸೈಕಲ ಹಿಂದೆ ಕೂಡಿಸಿಕೊಂಡು ನಮ್ಮ ಮುಂದೆ ಹೋಗುತ್ತಿದ್ದು ನಾನು ನಮ್ಮ
ತಾಯಿ ನಮ್ಮ ಮೋಟಾರ ಸೈಕಲ ಮೇಲೆ ಅವರ ಹಿಂದೆ ಹೊಗುತ್ತಿದ್ದು ಮಧ್ಯಾನ 12:30 ಗಂಟೆಯ ಸುಮಾರಿಗೆ ನಾವು
ಭಿಮನಾಳ ಸಿಮಾಂತರದ ಕುದುರೆ ಮುಖ ಏರಿನಲ್ಲಿ ಹೊಗುತ್ತಿದ್ದು ಕುದುರೆ ಮುಖ ರಸ್ತೆ ತಿರುವಿನಲ್ಲಿ ನಮ್ಮ
ಎದರುಗಡೆಯಿಂದ ಅಂದರೆ ಹುಮನಾಬಾದ ಕಡೆಗೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ
ನಡೆಯಿಸುತ್ತಾ ಬರುತ್ತಿದ್ದು ನಮ್ಮ ಮುಂದೆ ಮೋಟಾರ ಸೈಕಲ ನಡೆಯಿಸಿಕೊಂಡು ಹೊಗುತ್ತಿದ್ದ ವಿರಣ್ಣ ಇವರು
ತಮ್ಮ ಮೋಟಾರ ಸೈಕಲನ್ನು ರಸ್ತೆಯ ಎಡಭಾಗದಿಂದ ನಡೆಯಿಸಿಕೊಂಡು ಹೊಗುತ್ತಿದ್ದು ಆಗ ಎದರುಗೆಯಿಂದ ಬರುತ್ತಿದ್ದ
ಕಾರ ಚಾಲಕನು ವೇಗದಿಂದ ಬಂದು ವೀರಣ್ಣ ಇವರ ಮೋಟಾರ ಸೈಕಲಕ್ಕೆ ಜೋರಾಗಿ ಗುದ್ದಿ ಅಪಘಾತ ಪಡಿಸಿದ್ದು
ಆಗ ವೀರಣ್ಣ ಮತ್ತು ಹೊನ್ನಮ್ಮ ಇವರು ಮೋಟಾರ ಸೈಕಲ ಸಮೇತ ರಸ್ತೆಯ ಮೇಲೆ ಬಿದ್ದಿದ್ದು ಸದರಿ ಘಟನೆಯನ್ನು
ನೋಡಿ ನಾನು ಮತ್ತು ನಮ್ಮ ತಾಯಿ ಕೂಡಿಕೊಂಡು ಸದರಿಯವರ ಹತ್ತಿರ ಹೋಗಿ ನೋಡಲು ವಿರಣ್ಣ ಇವರ ಎಡಭಾಗದ
ತೆಲೆಗೆ ಎಡಗಣ್ಣಿನ ಕೆಳಗೆ, ಹಣೆಗೆ ರಕ್ತಗಾಯವಾಗಿದ್ದು ಎಡಭುಜಕ್ಕೆ, ಎರಡು ಕಾಲುಗಳ ಮೊಳಕಾಲ ಮೇಲೆ, ಮತ್ತು ದೇಹದ ಇತರೆ ಭಾಗದಲ್ಲಿ ರಕ್ತಗಾಯ,
ಗುಪ್ತಗಾಯವಾಗಿದ್ದು ಇರುತ್ತದೆ ನಂತರ ಹೊನ್ನಮ್ಮಳಿಗೆ ನೋಡಲು ಅವಳ ಹಣೆಯ ಮೇಲೆ ಎಡಗಣ್ಣಿನ
ಹತ್ತಿರ ಗದ್ದಕ್ಕೆ ರಕ್ತಗಾಯವಾಗಿದ್ದು ದೇಹದ ಇತರೆ ಭಾಗದಲ್ಲಿ ಗುಪ್ತಗಾಯವಾಗಿದ್ದು ಇರುತ್ತದೆ. ಸದರಿಯವರಿಗೆ
ಅಪಘಾತ ಪಡಿಸಿದ ಕಾರ ಅಲ್ಲೆ ಇದ್ದು ನಂಬರ ನೋಡಲು ಕೆಎ 32 ಎನ್ 5321 ಅಂತ ಇದ್ದು ಅಪಘಾತವಾದ ನಂತರ
ಜನರು ಬರುವದನ್ನು ನೋಡಿ ಸದರಿ ಕಾರಿನ ಚಾಲಕ ತನ್ನ ಕಾರನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ.
ಸದರಿ ಕಾರ ಚಾಲಕನನ್ನು ನೋಡಿದರೆ ಗುರುತಿಸುತ್ತೆನೆ, ನಂತರ ನಾನು 108 ಅಂಬುಲೇನ್ಸಕ್ಕೆ
ಕರೆ ಮಾಡಿದ್ದು ಸ್ವಲ್ಪ ಸಮಯದಲ್ಲಿ ಅಂಬುಲೇನ್ಸ ಸ್ಥಳಕ್ಕೆ ಬಂದಿದ್ದು ನಾನು ಮತ್ತು ನಮ್ಮ ತಾಯಿ ಕೂಡಿಕೊಂಡು
ವೀರಣ್ಣ ಮತ್ತು ಹೊನ್ನಮ್ಮ ಇವರಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಬಂದು ಯುನೈಟೆಡ್ ಆಸ್ಪತ್ರೇಗೆ ತಂದು
ಸೇರಿಕೆ ಮಾಡಿದ್ದು ಇರುತ್ತದೆ. ಸಧ್ಯ ಸದರಿ ಇಬ್ಬರು ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲ ದಿನಾಂಕ 20.03.2017 ರಂದು ಮಧ್ಯಾನ 12:30 ಗಂಟೆಗೆ ಸುಮಾರಿಗೆ
ಉಪಚಾರ ಹೊಂದುತ್ತಿದ್ದ ವೀರಣ್ಣ ತಂದೆ ದೇವಿಂದ್ರ ವಿಶ್ವಕರ್ಮ
ಸಾ: ರಾಜಾಪೂರ ಇವರು ಮೃತಪಟ್ಟಿರುತ್ತಾರೆ ಅಂತ ಸಲ್ಲಿಸಿದ ಶ್ರೀ ಕೀರಣಕುಮಾರ ತಂದೆ ಜಗನ್ನಾಥ ಗುತ್ತೆದಾರ
ಸಾ: ಮನೆ ನಂ 2-907/1813 ಗುಬ್ಬಿ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment