POLICE BHAVAN KALABURAGI

POLICE BHAVAN KALABURAGI

20 March 2017

Kalaburagi District Reported Crimes

ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ದಿನಾಂಕ 19-03-2017 ರಂದು ಬೆಳಿಗ್ಗೆ ನನ್ನ ಗಂಡ ಕೆಲಸಕ್ಕೆಂದು ಯಡ್ರಾಮಿಗೆ ಹೋಗಿರುತ್ತಾರೆ, ನಂತರ 6;15 ಪಿ.ಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ದೇವಿಂದ್ರಪ್ಪ ನ್ಯಾವನೂರ ರವರು ನಮ್ಮ ಮನೆಗೆ ಬಂದು ಹೇಳಿದ್ದೇನೆಂದರೆ, ನಮ್ಮೂರ ಟಂಟಂ ನಂ ಕೆ.32-ಸಿ-1484 ನೇದ್ದರಲ್ಲಿ ನಾನು ಮತ್ತು ನಿಮ್ಮ ಗಂಡ ಸಿದ್ದಪ್ಪ ಮಾದರ ಹಾಗು ಪಾರ್ವತಿ ಗಂಡ ಭೀಮಶಾ ಕಟಬರ ಹಿಗೆಲ್ಲರು ಕುಳಿತು ಯಡ್ರಾಮಿಯಿಂದ ಸುಂಬಡ ಗ್ರಾಮಕ್ಕೆ ಬರುತ್ತಿದ್ದಾಗ ಸುಂಬಡ ಸಮೀಪ ಅಖಂಡಳ್ಳಿ ಕ್ರಾಸ ಹತ್ತಿರ ಟಂಟಂ ಚಾಲಕ ಸುಬಾಸ ತಂದೆ ಮಲ್ಲಪ್ಪ ಮಾದರ ಸಾ|| ಸುಂಬಡ ಈತನು ತನ್ನ ಟಂಟಂ ನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮೇಲೆ ಕಟ್ಟ ಮಾಡಿದ್ದರಿಂದ ಟಂಟಂ ರೋಡಿನ ಬಲಗಡೆ ಪಲ್ಟಿಯಾಯಿತು. ಅಪಘಾತದಲ್ಲಿ ನಮಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಆದರೆ ನಿಮ್ಮ ಗಂಡ ಸಿದ್ದಪ್ಪ ಮಾದರ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿದೆ ಅಂತಾ ಹೇಳಿದ ಕೂಡಲೆ ನಾನು ಮತ್ತು ನನ್ನ ಅಳೀಯ ಮುತ್ತು ತಂದೆ ಮಹಾದೇವಪ್ಪ ಮಾದರ ಹಾಗು ನಮ್ಮ ಅಣ್ಣ ಹಳ್ಳೆಪ್ಪ ಮಾದರ ಹಿಗೆಲ್ಲರು ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ ಟಂಟಂ ನಂ ಕೆ.32-ಸಿ-1484 ನೇದ್ದು ರಸ್ತೆಯ ಬಲಗಡೆ ಪಲ್ಡಿಯಾಗಿ ಬಿದ್ದಿದ್ದು, ಅದರ ಹತ್ತಿರ ಬಿದ್ದ ನನ್ನ ಗಂಡನನ್ನು ನೋಡಲಾಗಿ ಅವರ ತಲೆಗೆ ಭಾರಿ ರಕ್ತಗಾಯವಾಗಿದ್ದು, ರಕ್ತ ಸೋರುತ್ತಿತ್ತು, ನಂತರ ಅದೇ ಟಂಟಂ ನಲ್ಲಿ ನನ್ನ ಗಂಡನನ್ನು ಹಾಕಿಕೊಂಡು ಉಪಚಾರ ಕುರಿತು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಆಸ್ಪತ್ರೆ ಆವರಣದಲ್ಲಿ ನನ್ನ ಗಂಡ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ನೆಲೋಗಿ ಠಾಣೆ : ಶ್ರೀ ಅಣ್ಣಪ್ಪ ತಂದೆ ಶಿವಲಿಂಗಪ್ಪ ಗಂದೆನವರ ಉ|| ಪೊಲೀಸ್ ಮುಖ್ಯ ಪೇದೆ  ಸಾ|| ವೀರೆಂದ್ರ ಪಾಟೀಲ ಬಡಾವಣೆ ಕಲಬುರಗಿ  ರವರು ದಿನಾಂಕ: 17/03/2017 ರಂದು ಜೇವರ್ಗಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ತೇರ ಬಂದೋಬಸ್ತ ಕುರಿತು ನಾನು ಮತ್ತು ನಮ್ಮ ಠಾಣೆಯ ಅಣ್ಣಪ್ಪ ಜಿಂಗ್ಗೆ ಎ.ಎಸ್.ಐ ಹಾಗೂ ಮಹಾದೇವ ಸಿ.ಹೆಚ್.ಸಿ 429 ಎಲ್ಲರೂ ಕೂಡಿ ಬಂದೋಬಸ್ತ ಕರ್ತವ್ಯಕ್ಕೆ ನಾನು ಹಾಗೂ ಅಣ್ಣಪ್ಪ ಎ.ಎಸ್.ಐ ನನ್ನ ಮೋಟರ ಸೈಕಲ ಮೇಲೆ ಹಾಗೂ ಮಹಾದೇವ ಇವರು ತನ್ನ ಮೋಟರ ಸೈಕಲ ಮೇಲೆ ತಿರುಗಾಡಲು ತನ್ನ ಮಗನೊಂದಿಗೆ ಬಂದಿದ್ದು ಇರುತ್ತದೆ. ನಿನ್ನೆ ದಿನಾಂಕ:17/03/2017 ರಂದು ಸಾಯಂಕಾಲ 7:00 ಪಿ.ಎಂ ಸುಮಾರಿಗೆ ತೇರ ಎಳೆದಾದನಂತರ ನಮಗೆ ಕಲಬುರಗಿಯಲ್ಲಿ ಸಿಎಂ ಬಂದೋಬಸ್ತ ಇರುವ ಪ್ರಯುಕ್ತ ನಾವು ತಮ್ಮ ತಮ್ಮ ಮೋಟರ ಸೈಕಲ ಮೇಲೆ ಅರಳಗುಂಡಗಿ ಗ್ರಾಮದಿಂದ ಮರಳಿ ಬರುವಾಗ ನನ್ನ ಮೋಟರ ಸೈಕಲ ನಾನು ಚಲಾಯಿಸುತ್ತಿದ್ದೆ ನನ್ನ ಹಿಂದೆ ಅಣ್ಣಪ್ಪ ಎ.ಎಸ್.ಐ ಕುಳಿತರು ಮಹಾದೇವ ಮೋಟರ ಸೈಕಲ ನಂ: ಕೆ.ಎ 32-ಇಎ-8264 ನೇದ್ದರ ರಾತ್ರಿ ಆಗಿರುವ ಕಾರಣ ಅವರ ಮಗನಾದ ಪ್ರಸನ್ನ ಕುಮಾರ ತಂದೆ ಮಹಾದೇವ ಅಣವಾರ ಈತನು ಮೋಟರ ಸೈಕಲ ಚಲಾಯಿಸಿಕೊಂಡು ಜೇವರ್ಗಿ ರಸ್ತೆಯಲ್ಲಿ ಬರುವ ಸೋನ್ನ ಕ್ರಾಸ ಇನ್ನೂ 100 ಅಡಿ ಅಂತರ ಇರುವಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದ ರಸ್ತೆಯಲ್ಲಿ ಅಂದಾಜು 8:00 ಪಿ.ಎಂಕ್ಕೆ ಪ್ರಸನ್ನಕುಮಾರ ನಮ್ಮ ಮುಂದೆ ಮುಂದೆ ಮೋಟರ ಸೈಕಲ ಚಲಾಯಿಸುತ್ತಿದ್ದ ಅದೇ ಕತ್ತಲ್ಲಲ್ಲಿ ರಸ್ತೆಯ ಪಕ್ಕ ತೆಗ್ಗಿನಲ್ಲಿ ಒಮ್ಮಲೆ ಹಾಕಿದ್ದರಿಂದ ಅವರೂ ಮೋಟರ ಸೈಕಲದಿಂದ ಕೇಳಗೆ ಬಿದ್ದಾಗ ನಾವು ನೋಡಿ ನನ್ನ ಗಾಡಿ ಸೈಡಿಗೆ ನಿಲ್ಲಿಸಿ ಅವರಿಬ್ಬರಿಗೆ ಎಬ್ಬಿಸಿ ನೋಡಲು ಮಹಾದೇವನಿಗೆ ಬಲ ತಲೆಗೆ ರಕ್ತಗಾಯ ಬಲ ಮೈಗೆ ತರಚಿದ ಗಾಯ ಬಲ ಮತ್ತು ಎಡ ಕೈ ಮುಂಡಿಗೆ ತರಚಿದ ಗಾಯ ಬಲ ಪಕ್ಕಗೆ ಗುಪ್ತಗಾಯ ಎಡ ಸೊಂಟಕ್ಕೆ ತರಚಿದ ಗಾಯ ಆಗಿದ್ದು ಪ್ರಸನ್ನಕುಮಾರನಿಗೆ ಅಷ್ಟೇನು ಗಾಯ ಆಗಿಲ್ಲ ಆಗ ನಾವು 108 ಅಂಬುಲೇನ್ಸಗೆ ಫೊನ ಮಾಡಿ ಕರೆಯಿಸಿ ಅದರ ಮಹಾದೇವನಿಗೆ ಹಾಕಿ ದವಾಖೆಗೆ ಕಳುಹಿಸಿಕೊಟ್ಟು ನಾವು ಇಂದು ಸಿಎಂ ಬಂದೋಬಸ್ತ ಕರ್ತವ್ಯಕ್ಕೆ ಹೋಗಿ ಬಂದೋಬಸ್ತ ಕರ್ತವ್ಯ ಮುಗಿಸಿ ಮಹಾದೇವ ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ನಾನು ನೆಲೋಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಿರುತ್ತೆನೆ.  
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:19/03/2017 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ವಿವೇಕಾನಂದ ನಗರದಲ್ಲಿರುವ ಓಂಕಾರೇಶ್ವರ ಮಂದೀರದ ಹಿಂದುಗಡೆ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ್ಜೂಜಾಟ ಆಡುತ್ತಿದ್ದಾರೆ ಅಂತಾ ಬಂದ ಮಾಹಿತಿ ಮೇರೆಗೆ ಶ್ರೀ ಸಂಜೀವಕುಮಾರ ಪಿ.ಎಸ್.ಐ. ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ವಿವೇಕಾನಂದ ನಗರದ ಮಿಲಿನಿಯಮ ಶಾಲೆಯ  ಹತ್ತಿರ ಹೋಗಿ ಶಾಲೆಯ ಪಕ್ಕದಲ್ಲಿ ಇರುವ ಸಾರ್ವಜನಿಕ ಗಾರ್ಡನ ಹತ್ತಿರ ನಿಂತು  ನೋಡಲು 8 ಜನರು ದುಂಡಾಗಿ ಕುಳಿತು ಇಸ್ಪೇಟ್ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೇಟ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಂಆಡಿ  ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1) ಬಸವರಾಜ ತಂದೆ ಈರಣ್ಣ ಅಲೂರ ಸಾ|| ದೇವಿ ನಗರ ಕಲಬುರಗಿ 2)  ದತ್ತು ತಂದೆ ಮಹೇಶ ಪಾಟೀಲ ಸಾ|| ಸಂತೋಷ ಕಾಲೋನಿ ಕಲಬುರಗಿ 3) ರಾಜು ತಂದೆ ಬಸವರಾಜ ಪಾಟೀಲ ಸಾ|| ಸಂತೋಷ ಕಾಲೋನಿ ಕಲಬುರಗಿ  4) ಪ್ರಶಾಂತ ತಂದೆ ಬಸವಂತರಾಯ ಬೀರಾದಾರ ಸಾ|| ಕರುಣೇಶ್ವರ  ಕಾಲೋನಿ ಕಲಬುರಗಿ 5)  ಕಲ್ಯಾಣಪ್ಪ ತಂದೆ ಶರಣಬಸಪ್ಪ ನಾಗೂರೆ ಸಾ|| ಸಂತೋಷ ಕಾಲೋನಿ ಕಲಬುರಗಿ 6)  ಸಿದ್ದು ತಂದೆ ಚಂದ್ರಶ್ಯಾ ಕೊರಳ್ಳಿ ಸಾ|| ಸಂತೋಷ ಕಾಲೋನಿ ಕಲಬುರಗಿ 7)  ಶಿವಕುಮಾರ ತಂದೆ ಶರಣಯ್ಯಾ ಸ್ವಾಮಿ ಸಾ|| ದೇವಿ ನಗರ ಕಲಬುರಗಿ 8) ಜಗನಾಥ ತಂದೆ ಭೀಮರಾವ ಮಾಲಿ ಸಾ|| ಶಹಬಜಾರ ಕಲಬುರಗಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ  ಒಟ್ಟು 16300/-ರೂ ಹಾಗೂ 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.                                                      

No comments: