ವರದಕ್ಷಣೆ ಕಿರುಕಳ ಪ್ರಕರಣ
:
ಜೇವರಗಿ ಠಾಣೆ : ಶ್ರೀಮತಿ ಮಾಲಾಶ್ರೀ
ಗಂಡ ತಾನಾಜಿ ಜಮಾದಾರ ಸಾಃ ಹೊನ್ನಾಳ ತಾಃ ಜೇವರಗಿ ಹಾಃವಃ ಕೌಲಗಾ (ಬಿ) ಇವರ ತಾಯಿಯವರು ಜೇವರಗಿ
ತಾಲೂಕಿನ ಹೊನ್ನಾಳ ಗ್ರಾಮದ ತಾನಾಜಿ ಇವರೊಂದಿಗೆ ದಿ. 01.05.2016
ರಂದು ಬಳುಂಡಗಿ ರೇವಣಸಿದ್ದೇಶ್ವರ ದೇಸವಸ್ಥಾನದಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ. ಮದುವೆ
ಕಾಲಕ್ಕೆ ವರದಕ್ಷಣಿಯಾಗಿ 5 ತೊಲಿ ಬಂಗಾರ ಒಂದು ಲಕ್ಷ ಐವತ್ತು ಸಾವಿರ ರೂಪಾಯಿ ಹುಂಡಾ ಕೊಡುವ
ಮಾತಾಗಿತ್ತು ಮದುವೆ ಕಾಲಕ್ಕೆ ನಮ್ಮ ತಂದೆಯವರು ನನ್ನ ಗಂಡನಿಗೆ ವರದಕ್ಷಿಣೆಯಾಗಿ ಎರಡು ತೊಲೆ
ಬಂಗಾರ, ಒಂದು ಲಕ್ಷ ರೂಪಾಯಿ ಹುಂಡಾ, & ಮಂಚ
ಗಾದಿ ಟೀಜೋರಿ ಹಾಗು ಬೆಲೆ ಬಾಳುವ ಹಾಂಡೆ ಬಾಂಡೆಗಳು ಕೊಟ್ಟಿರುತ್ತಾರೆ. ಮದುವೆ ಕಾಲಕ್ಕೆ
ಮಾತಿನಂತೆ ಇನ್ನೂ ಮೂರು ತೊಲೆ ಬಂಗಾರ, ಐವತ್ತು ಸಾವಿರ ರೂಪಾಯಿ ಹುಂಡಾ
ಕೊಟ್ಟಿರುವುದಿಲ್ಲಾ. ಮದುವೆಯಾದ ನಂತರ ನಾನು ನನ್ನ ಗಂಡನ ಸಂಗಡ ಹೊನ್ನಾಳದಲ್ಲಿಯೇ
ವಾಸವಾಗಿದ್ದೆನು. 2 ತಿಂಗಳ ನಂತರ ನಾನು ಮತ್ತು ನನ್ನ ಗಂಡ ಇಬ್ಬರೂ ಪುನಾ ಕ್ಕೆ ಹೋಗಿ ಪುನಾದಲ್ಲಿ
ಜಾದವ ನಗರದಲ್ಲಿ ವಾಸವಾಗಿದ್ದೆವು. ಅಲ್ಲಿ ನನ್ನ ಗಂಡನು ಸಂಸಾರದ ವಿಷಯದಲ್ಲಿ ನನ್ನ ಸಂಗಡ ಜಗಳ
ಮಾಡಹತ್ತಿದನು. ಅದಕ್ಕೆ ಒಂದು ತಿಂಗಳ ನಂತರ ನಾನು ನನ್ನ ಗಂಡ ಇಬ್ಬರೂ ಪುನಾದಿಂದ ಹೊನ್ನಾಳಕ್ಕೆ
ಬಂದು ಹೊನ್ನಳಾದಲ್ಲಿಯೇ ಇದ್ದೇವು. ನನ್ನ ಗಂಡನು ನನಗೆ ನಿಮ್ಮ ತಂದೆ ತಾಯಿಯವರು ಮದುವೆಯಲ್ಲಿ
ನನಗೆ ಇನ್ನೂ ಮೂರು ತೊಲಿ ಬಂಗಾರ ಐವತ್ತು ಸಾವಿರ ರೂಪಾಯಿ ಕಡಿಮೆ ಕೊಟ್ಟಿರುತ್ತಾರೆ ಇನ್ನೂ ನಿಮ್ಮ
ತಂದೆಯವರಿಂದ ಮೂರು ತೊಲಿ ಬಂಗಾರ ಮತ್ತು ಐವತ್ತು ಸಾವಿರ ರೂಪಾಯಿ ತೆಗೆದುಕೊಂಡು ಬಾ ಎಂದು ನನ್ನ
ಸಂಗಡ ತಕರಾರು ಮಾಡಿ ಕೈಯಿಂದ ಹೊಡೆದು ಕಾಲಿನಿಂದ ಒದೆಯುತ್ತಿದ್ದನು. ಅದಕ್ಕೆ ನಾನು ನಮ್ಮ
ತಂದೆಯವರು ಬಡವರು ಇರುತ್ತಾರೆ ಅವರು ಎಲ್ಲಿಂದ ತಂದು ಕೊಡುತ್ತಾರೆ. ನನ್ನ ಮದುವೆ ಮಾಡಿ ಖರ್ಚು
ಮಾಡಿರುತ್ತಾರೆ ಅವರ ಹತ್ತಿರ ಹಣ ಬಂಗಾರ ಇರುವುದಿಲ್ಲಾ ಅಂದಾಗ ನನ್ನ ಗಂಡ ಎ ರಂಡೀ ನನಗೇನು
ಹೇಳುತಿ ಮದುವೆ ಮಾತಿನಂತೆ ನಿನು ನಿನ್ನ ತವರು ಮನೆಯಿಂದ ಬಂಗಾರ ಹಣ ತೆಗೆದುಕೊಂಡು ಬಂದರೆ ಸರಿ
ಇಲ್ಲವಾದರೆ ನಿನಗೆ ಖಲಾಸ ಮಾಡುತ್ತೆನೆಂದು ಬೆದರಿಕೆ ಹಾಕುತ್ತಿದ್ದನು. ಮತ್ತು ನನ್ನ ಅತ್ತೆ ಮಾವ
ಮೈದುನರು ಹಾಗೂ ಅವರ ಸಂಭಂದಿಕರು ಸಹ ನನಗೆ ನೀನ್ನ ತವರು ಮನೆಯಿಂದ ಹಣ ಬಂಗಾರ ತೆಗೆದುಕೊಂಡು ಬಾ
ಅಂತಾ ನನಗೆ ಹೊಡೆಯುವುದು ಮಾಡಿ ನನಗೆ ಮಾನಸೀಕ ದೈಹಿಕ ಕಿರುಕುಳ ಕೋಡುತ್ತಾ ಬಂದಿರುತ್ತಾರೆ. ನಾನು
ಮನೆ ಮರ್ಯಾದಿಗೆ ಅಂಜಿ ಮತ್ತು ನನ್ನ ಮುಂದಿನ ಭವಿಷ್ಯದ ಬಗ್ಗೆ ಯೊಚನೆ ಮಾಡಿ ಸುಮ್ಮನಿದ್ದೆನು. ದಿ.
16.08.2016 ರಂದು ಮುಂಜಾನೆ 9.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ
ನನ್ನ ಗಂಡ 1) ತಾನಾಜಿ ತಂದೆ ಶಂಕರ ಜಮಾದಾರ, ಮೈದುನರಾದ 2) ಶಿವಾಜಿ
ತಂದೆ ಶಂಕರ ಜಮಾದಾರ, 3) ಸಂಬಾಜಿ ತಂದೆ ಶಂಕರ ಜಮಾದಾರ,
ಮಾವ 4) ಶಂಕರ ತಂದೆ ಮಲ್ಲಪ್ಪ ಜಮಾದಾರ, 5) ಲಕ್ಮೀ
ಗಂಡ ಶಂಕರ ಜಮಾದಾರ, ನೇಗೆಣಿಯವರಾದ 6)ಜ್ಯೋತಿ ಗಂಡ ಸಂಬಾಜಿ ಜಮಾದಾರ,
7) ಸಂಗೀತಾ ಗಂಡ ಶಿವಾಜಿ ಜಮಾದಾರ, ನನ್ನ ಗಂಡನ
ಸಂಭಂದಿಕರಾದ 8) ಸಾಹೇಬಗೌಡ ತಂದೆ ಹಣಮಂತ ಶಹಾಪೂರ, 9) ಗಂಗಮ್ಮ ಗಂಡ
ಸಾಹೇಬಗೌಡ ಶಹಾಪೂರ ಸಾಃ ಬಳುಂಡಗಿ 10) ಶ್ಯಾಮಬಾಯಿ ಗಂಡ ಚನ್ನಮಲ್ಲಪ್ಪ ಬಡದಾಳ ಇವರೆಲ್ಲರೂ
ಕೂಡಿಕೊಂಡು ನನ್ನ ಸಂಗಡ ಜಗಳ ಮಾಡಹತ್ತಿದ್ದರು. ಅವರಿಗೆ ಯಾಕೆ? ಜಗಳ
ಮಾಡುತ್ತಿದ್ದಿರಿ ಅಂತಾ ಕೇಳಿದಾಗ ನನ್ನ ಗಂಡನು ಏ ರಂಡಿ ಮಾತಿನಂತೆ ಮದುವೆಯಲ್ಲಿ ಕೊಡಬೇಕಾದ
ಇನ್ನೂ ಮೂರು ತೊಲಿ ಬಂಗಾರ ಐವತ್ತು ಸಾವಿರ ರೂಪಾಯಿ ನೀನ್ನ ತವರು ಮನೆಯಿಂದ ತೆಗೆದುಕೊಂಡು ಬಾ
ಇಲ್ಲವಾದರೆ ನೀನು ನಮ್ಮ ಮನೆಯಲ್ಲಿ ಇರಬೇಡ ಅಂತಾ ಬೈದಿರುತ್ತಾನೆ. ಅಲ್ಲದೆ ನನ್ನ ಅತ್ತೆ ಮತ್ತು ಮಾವ
ಹಾಗೂ ಮೈದುನರು ನೀನು ನಮ್ಮ ಮನೆಗೆ ತಕ್ಕ ಹೆಣ್ಣು ಅಲ್ಲಾ ನಿನಗೆ ಸರಿಯಾಗಿ ಅಡುಗೆ ಕೆಲಸ ಮಾಡಲು
ಬರುವುದಿಲ್ಲಾ ಮಾತಿನಂತೆ ಮದುವೆಯಲ್ಲಿ ನಿನ್ನ ತವರು ಮನೆಯವರು
ಬಂಗಾರ, & ಹುಂಡಾ ಹಣ ಕಡಿಮೆ ಕೊಟ್ಟಿರುತ್ತಾರೆ ಇನ್ನೂ ಕೊಡಬೇಕಾದ
ಬಂಗಾರ & ಹಣ ನೀನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಇಲ್ಲವಾದರೆ ನೀನು ನೀನ್ನ ತವರು ಮನೆಗೆ ಹೋಗು ಅಂತಾ ಕಿರುಕುಳ
ಕೊಟ್ಟಿರುತ್ತಾರೆ. ಅಲ್ಲದೆ ಅವರ ಸಂಭಂಧಿಕರು ನನಗೆ ನೀನ್ನ ಗಂಡ ಮತ್ತು ಅತ್ತೆ, ಮಾವ, ಹಾಗೂ ಮೈದುನರು ಹೇಳಿದಂತೆ ಮಾಡಿದರೆ ನೀನ್ನ ಜೀವನ
ಚನ್ನಾಗಿರುತ್ತದೆ ಇಲ್ಲವಾದರೆ ನೀನ್ನ ಹಣೆಬರಹ ನೇಟ್ಟಗಿರಲ್ಲಾ. ಎಂದು ಅವರ ಪರವಾಗಿ ಮಾತನಾಡಿ
ಕಿರುಕುಳ ಕೊಟ್ಟಿರುತ್ತಾರೆ. ಅವರು ಹೀಗೆ ತೊಂದರೆ ಕೊಡುತ್ತಿದ್ದ ತ್ರಾಸ್ ತಾಳಲಾರದೆ ನಾನು ನಮ್ಮ
ತಂದೆ ತಾಯಿಯವರಿಗೆ ಹೇಳಿದಾಗ ನಮ್ಮ ತಂದೆ ತಾಯಿಯವರು ಮತ್ತು ನನ್ನ ಮದುವೆ ಕಾಲಕ್ಕೆ
ಹಾಜರಿದ್ದವರಾದ ಮುತ್ತಣ್ಣ ತಂದೆ ಶಿವಲಿಂಗಪ್ಪ ಸಂಗೊಂಡ, ಸಿದ್ದಣ್ಣ
ತಂದೆ ಚನ್ನಬಸ್ಸಪ್ಪ ಭೂದಿಹಾಳ, ಇವರು ಬಂದು ನನ್ನ ಗಂಡನಿಗೆ ಮತ್ತು
ನನ್ನ ಗಂಡನ ಮನೆಯವರಿಗೆ ಬುದ್ದಿ ಮಾತು ಹೇಳಿರುತ್ತಾರೆ. ಆದರೂ ಸಹ ಅವರು ಮಾತಿನಂತೆ ಇನ್ನೂ
ಕೊಡಬೇಕಾದ ಮೂರು ತೊಲೆ ಬಂಗಾರ, ಐವತ್ತು ಸಾವಿರ ರೂಪಾಯಿ ಹುಂಡಾ
ತೆಗೆದುಕೊಂಡು ಬಾ ಎಂದು ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುತ್ತಿದ್ದಾಗ ಅವರ ತ್ರಾಸ್
ತಾಳಲಾರದೆ ನಾನು ಹೊನ್ನಾಳದಿಂದ ಕೌಲಗಾ (ಬಿ) ಗ್ರಾಮಕ್ಕೆ ಬಂದು ನಮ್ಮ ತಂದೆ ತಾಯಿಯವರ ಹತ್ತಿರ
ವಾಸವಾಗಿರುತ್ತೆನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment