POLICE BHAVAN KALABURAGI

POLICE BHAVAN KALABURAGI

24 March 2017

Kalaburagi District Reported Crimes

ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಫಕರೊದ್ದಿನ್ ಸಾಬ ತಂದೆ ಮಹಿಬೂಬಸಾಬ ಖುರೇಶಿ ಸಾ: ಕಮಲಾಪೂರ ತಾ.ಜಿ  ಕಲಬುರಗಿ  ಇವರು ಕಮಲಾಪೂರ ಗ್ರಾಮದ ಬಸ್ಸ ನಿಲ್ದಾಣ ಹತ್ತಿರ ನಾನು ಮಟನ ಅಂಗಡಿ ಇಟ್ಟುಕೊಂಡಿದ್ದು ನನ್ನಂತೆ ನಮ್ಮ ಅಣ್ಣತಮ್ಮಕಿಯ 1. ಗೌಸ @ ಗೌಸೊದಿನ್ ತಂದೆ ಮಕಬುಲಸಾಬ ಖುರೇಶ 2. ಮೈನೊದಿನ್ ತಂದೆ ಯಾಕುಬಸಾಬ ಖುರೇಶ 3. ಶಬ್ಬಿರ ತಂದೆ ಯಾಕುಬಸಾಬ ಖುರೇಶ 4. ಸಲೀಮ ತಂದೆ ಆದಮಸಾಬ ಖುರೇಶ ಇವರು ಕೂಡಾ ಮಟನ ಅಂಗಡಿ ಹಾಕಿಕೊಂಡಿದ್ದು ಮತ್ತು ಚಂದ್ರಕಾಂತ ವರನಾಳ ಇವರು ಕಟಿಂಗ್ ಅಂಗಡಿ, ಶ್ರೀಮತಿ ಭೀಮಾದೇವಿ ಕೊರವೇರ ಮತ್ತು ಬಬ್ಬು ತಂದೆ ಜಾಫರ ಪಿರಾ ಇವರು ಓಕಳಿ ಕ್ರಾಸ ಹತ್ತರಿ ಜ್ಯೂಸ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಬಂದಿದ್ದು ಇರುತ್ತದೆ ಹಾಗೂ ಹಣಮಂತ ಗೌಡ ಇವರು ಬೇಕರಿ ಅಂಗಡಿ ಇಟ್ಟುಕೊಂಡಿದ್ದು ಇರುತ್ತದೆ. ಎಂದಿನಂತೆ ಈ ಹಿಂದೆ ದಿನಾಂಕ 20.03.2017 ರಂದು ಬೆಳ್ಳಿಗ್ಗೆ 8 ಗಂಟೆಯ ನಾನು ನನ್ನ ಅಂಗಡಿಗೆ ಬಂದು ವ್ಯಾಪಾರ ಮಾಡಿಕೊಂಡಿದ್ದು ನನ್ನಂತೆ ಉಳಿದವರು ಕೂಡಾ ತಮ್ಮ ತಮ್ಮ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು ಅಂದು ಸಾಯಂಕಾಲ 7 ಗಂಟೆಯ ಸುಮಾರಿಗೆ ಓಕಳಿ ಕ್ರಾಸ ಹತ್ತಿರ ಇರುವ ಬಬ್ಬು ಪಿರಾ ಇವರ ಅಂಗಡಿಯ ಮುಂದೆ ಒಂದು ಟಾಟಾ ಸುಮೊ ನಂ ಕೆಎ 32 ಎಮ್ 5195 ನೇದ್ದು ನಿಂತ್ತಿದ್ದು ಅದರಲ್ಲಿದ್ದ 4-5 ಜನರು ಕೆಳಗೆ ಇಳಿದು ಬಬ್ಬು ಇವರ ಅಂಗಡಿಯಲ್ಲಿ ಜ್ಯೂಸ ಕುಡಿದಿದ್ದು ಕುಡಿದ ಸ್ವಲ್ಪ ಸಮಯದಲ್ಲಿ ಸದರಿ ಟಾಟಾ ಸುಮೊದಲ್ಲಿ ಬಂದಿರುವವರು ಹಣ ಕುಡುವ ವಿಷಯವಾಗಿ ಬಬ್ಬು ಸಂಗಡ ಜಗಳ ಮಾಡುತ್ತಿದ್ದು ಅವರಲ್ಲಿ ಕೆಲವರು ಬಬ್ಬು ಇವರ ಜೋಸ ಅಂಗಡಿಯಲ್ಲಿ ಇದ್ದ ಖುರ್ಚಿ ಗ್ಲಾಸಗಳನ್ನು ಒಡೆದು ಹಾಕುತ್ತಿದ್ದು ಮತ್ತು ಪಕ್ಕದಲ್ಲಿದ್ದ ಹಣಮಂತ ಗೌಡ ಇವರ ಬೇಕರಿ ಮುಂದೆ ಇಟ್ಟಿದ ಸೊಡಾ ಬಾಟಲಿಗಳನ್ನು ತೆಗೆದುಕೊಂಡು ರಸ್ತೆಯ ಮೇಲೆ ಒಡೆದು ಹಾಕುತ್ತಿದ್ದು ಆಗ ನಾನು ಮೈನೊದಿನ್, ಶಬ್ಬೀರ, ಸಲೀಮ ಇತರರು ಕೂಡಿಕೊಂಡು ಸದರಿಯವರ ಹತ್ತಿರ ಹೋಗಿ ಯಾಕಿ ಜಗಳ ಮಾಡುತ್ತಿರಿ ನೀವು ಹೀಗೆ ಮಾಡುವದು ಸರಿ ಇರುವದಿಲ್ಲ ಅಂತ ನಾವು ಹೇಳಿದ್ದು ಅಗ ಅವರಲ್ಲಿ ಒಬ್ಬನು ನನ್ನನು ಹಿಡಿದುಕೊಂಡು ಏ ರಂಡಿ ಮಗನೆ ನೀನು ಯಾರು ಕೇಳುವವನು ಅಂತ ಬೈಯುತ್ತಾ ನನಗೆ ಹಿಡಿದುಕೊಂಡಿದ್ದು ಉಳಿದ 4 ಜನರು ನನ್ನ ಸಂಗಡ ಬಂದವರ ಕಡೆಗೆ ಸೊಡಾ ಬಾಟಲಿಗಳು ಬಿಸಾಡಿ ಅವರಿಗೆ ಓಡಿಸಿದ್ದು ನಂತರ ಎಲ್ಲರು ಕೂಡಿಕೊಂಡು ಈ ರಂಡಿ ಮಗನ ಸೊಕ್ಕು ಇದ್ದ ಹಾಗೆ ಕಾಣುತ್ತದೆ ಇವನಿಗೆ ಖಲಾಸ ಮಾಡಿದರೆ ಕಮಲಾಪೂರದಲ್ಲಿ ನಮ್ಮ ಹವಾ ಆಗುತ್ತದೆ ಅಂತ ಅನ್ನುತ್ತಾ ನನಗೆ ಹಿಡಿದುಕೊಂಡವನು ನನ್ನ ಕುತ್ತಿಗೆಯನ್ನು ಒತ್ತಿಯಾಗಿ ಹಿಡಿದು ನನಗೆ ಕೊಲೆ ಮಾಡಲು ಪ್ರಯತ್ನಿಸಿದ್ದು ಆಗ ನನಗೆ ಉಸಿರಾಡಲು ಬಹಳ ತೊಂದರೆ ಯಾಗುತ್ತಿದ್ದರಿಂದ ನಾನು ನನ್ನಲ್ಲಿಯ ಎಲ್ಲಾ ಶಕ್ತಿಯನ್ನು ಉಪಯೋಗಿ ಅವನಿಗೆ ನೋಕಿ ಕೊಟ್ಟು ಅಲ್ಲಿಂದ ಓಡಿ ಬಸ್ಸ ನಿಲ್ದಾಣಕ್ಕೆ ಹೋಗಿದ್ದು ಅದೆ ವೇಳೆಗೆ ಬಸ್ಸ ನಿಲ್ದಾಣದಲ್ಲಿ ಇದ್ದ ಬಸ್ಸಿಗೆ ಕುಳಿತು ಕಲಬುರಗಿಗೆ ಹೋಗಿ ಅಂಜಿ ಕಲಬುರಗಿಯಲ್ಲಿ ಉಳಿದುಕೊಡಿದ್ದು ಇರುತ್ತದೆ. ಇಂದು ದಿನಾಂಕ 23.03.2017 ರಂದು ಮಧ್ಯಾನ 1 ಗಂಟೆಯ ನಾನು ಕಮಲಾಪೂರಕ್ಕೆ ಬಂದು ನಮ್ಮ ಅಂಗಡಿ ಹೋಗಿ ನೋಡಲು ಬಬ್ಬು ಇವರ ಅಂಗಡಿಯ ಪಕ್ಕದಲ್ಲಿ ಅದೆ ಟಾಟಾ ಸೊಮೊ ತೆಗೆದುಕೊಂಡು ಬಂದವರು ಟಾಟಾ ಸೊಮೊವನ್ನು ಅಲ್ಲೆ ಬಿಟ್ಟು ಹೋಗಿದ್ದು ಈಗ ಸಧ್ಯ ಸದರಿ ಟಾಟಾ ಸೊಮೊ ಅಲ್ಲೆ ಇದ್ದು ಅದರ ಮುಂದಿನ ಗ್ಲಾಸ ಒಡೆದಿದ್ದು ಇರುತ್ತದೆ. ನನ್ನಗೆ ಕೊಲೆ ಮಾಡಲು ಪ್ರಯತ್ನಿಸಿದವರನ್ನು ನೋಡಿದರೆ ಗುರುತಿಸುತ್ತೆನೆ. ನನ್ನ ಕುತ್ತಿಗೆ ಒತ್ತಿ ಕೊಲೆ ಮಾಡಲು ಪ್ರಯತ್ನಿಸಿದ ಮತ್ತು ಬಬ್ಬು ಹಾಗೂ ಹಣಮಂತ ಗೌಡ ಇವರ ಅಂಗಡಿಯ ಖುರ್ಚಿಗಳು ಮತ್ತು ಸೊಡಾ ಬಾಟಲಿಗಳನ್ನು ಓಡೆದು ಹಾಳು ಮಾಡಿದ ಟಾಟಾ ಸುಮೊ ನಂ ಕೆಎ 32 ಎಮ್ 5195 ನೇದ್ದರಲ್ಲಿ ಬಂದ ಅಪರಿಚಿ 5 ಜನರ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ ಹತ್ತಿ ಫ್ಯಾಕ್ಟರಿ ಸುಟ್ಟ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಶೈಲೇಶ ತಂದೆ ಬಳಿರಾಮ ವಾಕೊಡೆ ಸಾ: ಎನ್.ವಿ ಲೇಔಟ ಕಲಬುರಗಿ ರವರ ಅಣ್ಣ ತಮ್ಮಕಿಯ ಮಾರುತಿ ತಂದೆ ಗಂಗಾಧರ ವಾಕೊಡೆ ಇವರು ಕಮಲಾಪೂರ ಗ್ರಾಮದ ಸರ್ವೆ  ನಂ 339/2 ನೇದ್ದರಲ್ಲಿ ದಿನಾಂಕ 30.06.2016 ರಿಂದ ಮಂಗಲಂ ಇಂಡಸ್ಟ್ರೀಜ್ ಹೆಸರಿನ ಟೈರ ಪೇರೊಸಿಸ್ ಆಯಲ್ ಪ್ಯಾಕ್ಟರಿ ಹಾಕಿದ್ದು. ಸದರಿ ಪ್ಯಾಕ್ಟರಿಯನ್ನು ಮಾಲಿಕಾರ ಮಾರುತಿ ಇವರು ಬಾಂಬೆಯಲ್ಲಿ ಇರುತ್ತಿದ್ದರಿಂದ ಸದರಿ ಪ್ಯಾಕ್ಟರಿಯನ್ನು ನಾನೆ ನೋಡಿಕೊಂಡು ಬಂದಿದ್ದು ಇರುತ್ತದೆ.  ನಮ್ಮ ಫ್ಯಾಕ್ಟರಿಯಲ್ಲಿ 1. ಪಿಂಟು ತಂದೆ ಚಂದರ ಯಾದವ ಸಾ: ಬಿಹಾರ 2. ಮಹೇಂದ್ರ ತಂದೆ ಮಿಸ್ಟರ ಯಾದವ, 3, ರಾಮರೂಪ ಯಾದವ ತಂದೆ ಕಾಮೂ ಯಾದವ 4. ಲಖನ ಯಾದವ ತಂದೆ ಕೈಲಯಾದವ 5. ಜೋಗಿಂದರ ತಂದೆ ಬೇಚುಯಾದವ 6. ಪಿಂಟು ತಂದೆ ರಾಮಚಂದ್ರ ಯಾದವ 7. ಸಂಜಯ ತಂದೆ ಗಣೇಶ ಯಾದವ ಹಾಗೂ ಇನ್ನು ಕೆಲವರು ನಮ್ಮ ಪ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು ಇರುತ್ತದೆ. ನಮ್ಮ ಪ್ಯಾಕ್ಟರಿಯ ವಾಚಮ ಅಂತ ರಮೇಶ ತಂದೆ ದಸ್ತಯ್ಯ ಗುತ್ತೆದಾರ ಸಾ:ಬ್ಯೂಯಾರ ಇವರು ಕೆಲಸ ಮಾಡಿಕೊಂಡು ಬಂದಿದ್ದು ದಿನಾಂಕ 21.03.2017 ರಿಂದ ನಿನ್ನೆ ದಿನಾಂಕ 22.03.2017 ರಂದು ಬೆಳ್ಳಿಗ್ಗೆ 11 ಗಂಟೆಯವರೆಗೆ ಪ್ರಾರಂಭ ನಂತರ ಪ್ಯಾಕ್ಟರ ಬಂದ ಮಾಡಿದ್ದು ಇರುತ್ತದೆ. ನಿನ್ನೆ ಮಧ್ಯಾನ 2:30 ಗಂಟೆಯ ಸುಮಾರಿಗೆ ನಮ್ಮ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ 1. ಪಿಂಟು ಭಾರತಿ ತಂದೆ ಭಿವನ ಭಾರತಿ ಸಾ: ಬಿಹಾರ ಮತ್ತು 2 ಸಂಜಯ ತಂದೆ ಶ್ರೀಗಣೇಶ ಯಾದವ ಸಾ: ಬಿಹಾರ ಇವರು ರಿಯಾಕ್ಟರ ನಂಬರ 2 ನೇದ್ದು ತೆಗೆಯಲು ಹೊದಾಗ ಆಕಸ್ಮಿಕವಾರಿ ರಿಯಾಕ್ಟರದಿಂದ ಬೆಂಕಿ ಹೊರಗೆ ಪ್ಯಾಕ್ಟರಿಗೆ ಬಂಕಿ ಹತ್ತಿದ್ದರಿಂದ ಇಬ್ಬರು ಬೆಂಕಿ ಹತ್ತಿ ಪ್ಯಾಕ್ಟರಿಗು ಬೆಂಕಿ ಹತ್ತಿದ್ದು ಪ್ಯಾಕ್ಟರಿಯಲ್ಲಿ ಇದ್ದ ಉಳಿದ ಕೆಲಸಗಾರಗು ಹೊರಗೆ ಓಡಿ ಹೋಗಿದ್ದು ಪಿಂಟು ಮತ್ತು ಸಂಜಯ ಇವರ ಮೈಗೆ ಬೆಂಕಿ ಹತ್ತಿದ್ದರಿಂದ ಅವರ ಮೈ ಮೇಲೆ ಸುಟ್ಟಗಾಯಗಳಾಗಿದ್ದು ಇರುತ್ತದೆ. ನಂತರ ನಾನು 108 ಅಂಬುಲೇನ್ಸಕ್ಕೆ ಕರೆ ಮಾಡಿದ್ದು ಮತ್ತು ಬೆಂಕಿ ಆರಿಸುವ ಕುರಿತು ಅಗ್ನಿಶಾಮಕ ಠಾಣೆಗೆ ಪೋನ ಮಾಡಿ ವಿಷಯ ತಿಳಿಸಿದ್ದು ಸ್ವಲ್ಪ ಸಮಯದಲ್ಲಿ ಅಂಬುಲೇನ್ಸ ಸ್ಥಳಕ್ಕೆ ಬಂದಿದ್ದು ಆಗ ನಾನು ಪಿಂಟು ಮತ್ತು ಸಂಜಯ ಇವರಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಬಸವೇಶ್ವರ ಆಸ್ಪತ್ರೇಗೆ ಕರೆದುಕೊಂಡು ನಂತರ ಅಗ್ನಿಶಾಮಕ ಸಿಬ್ಬಂದಿಯವರು ಬಂದು ನಮ್ಮ ಪ್ಯಾಕ್ಟರಿಗೆ ಹತ್ತಿದ ಬೆಂಕಿಯನ್ನು ಆರಿಸಿದ್ದು ಇರುತ್ತದೆ. ಬೆಳ್ಳಿಗ್ಗೆ ನಾನು ಫ್ಯಾಕ್ಟರಿಗೆ ಬಂದು ನೋಡಲು ಪ್ಯಾಕ್ಟರಿಗೆ ಬಂಕಿ ಹತ್ತಿದ್ದರಿಂದ ಪ್ಯಾಕ್ಟರಿಯಲ್ಲಿ ಇದ್ದ 1. ರಿಯಾಕ್ಟರ ಕೂಲಿಂಗ್ ಮಶೀನ್ ಅಂದಾಜ ಕಿಮ್ಮತ್ತು 3 ಲಕ್ಷ ರೂಪಾಯಿ 2. ಎರಡು ವಿಂಚ್ ಮಷೀನ್ಗಳು ಅಂದಾಜ ಕಿಮ್ಮತ್ತು 36,000/- ರೂಪಾಯಿ 3. 30 ಟನ್ ಟೈರಗಳಗು ಅಂದಾಜ ಕಿಮ್ಮತ್ತು 2,70,000/- ರೂಪಾಯಿ. ವೈಯರ್, ಲೈಟಿಂಗ್ ಮತ್ತು ಇತರೆ ಸಲಕರಣೆಗಳು ಅಂದಾಜ ಕಿಮ್ಮತ್ತು 20,000/- ರೂಪಾಯಿ ಹೀಗೆ ಒಟ್ಟು 6 ಲಕ್ಷ 26 ಸಾವೀರ ರುಪಾಯಿ ಸಾಮಾನುಗಳು ಸಂಪೂರ್ಣ ಸುಟ್ಟು ಹಾಳಾಗಿದ್ದು ಇರುತ್ತದೆ. ಅಂತಾ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

No comments: