ಅಪಘಾತ
ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ
ಮಾರೂತಿರಾವ ಬಂಢಾಗರ್ ಸಾ: ಸರಪೋಸ್ ಕಿಣ್ಣಿ ಇವರು ದಿನಾಂಕ 07/12/2015 ರಂದು ಬೆಳಿಗ್ಗೆ ಗ್ರಾಮದ ಹನುಮಾನ ದೇವರ ಗುಡಿಗೆ
ಹೋಗಿದ್ದು, ಅಲ್ಲಿ ನಮ್ಮ ಗ್ರಾಮದ ರಮೇಶ ಬಿರಾದಾರ, ಕಾಶಿನಾಥ ನೂಲಿಕಾರ್, ಬಸ್ಸಯ್ಯ ಮಠಪತಿ ಇವರು ಹನುಮಾನ ಗುಡಿಯ
ಹತ್ತಿರ ಇದ್ದು, ನಾವು ಮಾತನಾಡುತ್ತಿರುವಾಗ ನಮ್ಮ ಮೊಮ್ಮಗಳಾದ
ಮೋನಾಶ್ರೀ ಇವಳು ಆಟ ವಾಡುತ್ತಾ ಹನುಮಾನ ದೇವರ ಗುಡಿಯ ಕಡೆಗೆ ಬರುತ್ತಿದ್ದು, ಅದೆ ವೇಳೆಗೆ ತಾಂಡಾದ ಕಡೆಯಿಂದ ಬರುತ್ತಿದ್ದ ಒಂದು ಜೀಪ ಚಾಲಕನು ತನ್ನ ಜೀಪನ್ನು ಅತೀವೇಗ
ಮತ್ತು ಆಲಕ್ಷತನದಿಂದ ನಡೆಸುತ್ತಾ ಬಂದು ಆಟವಾಡುತ್ತಿದ್ದ ನನ್ನ ಮೊಮ್ಮಗಳಿಗೆ ಡಿಕ್ಕಿಕೊಟ್ಟು
ಅಪಘಾತ ಪಡಿಸಿದ್ದು, ಆಗ ನನ್ನ ಮೊಮ್ಮಗಳು ರಸ್ತೆಯ ಮೇಲೆ ಬಿದ್ದು ಜೀಪಿನ
ಕೆಳಗೆ ಹೋಗಿ, ಜಿಪೀಗೆ ಸಿಕ್ಕಿ ಎಳೆದಾಡಿದ್ದು ಸದರಿ ಘಟನೆಯನ್ನು ನೋಡಿ
ಅಲ್ಲಿಯೆ ಇದ್ದ ನಾನು, ರಮೇಶ ಬಿರಾದಾರ, ಕಾಶಿನಾಥ ನೂಲಿಕಾರ್, ಹಾಗೂ ಬಸ್ಸಯ್ಯ ಮಠಪತಿ ಎಲ್ಲರು ಕೂಡಿ
ಕೂಡಿಕೊಂಡು ನನ್ನ ಮೊಮ್ಮಗಳ ಹತ್ತಿರ ಹೋಗಿ ನೋಡಲು, ನನ್ನ ಮೊಮ್ಮಗಳ
ಎಡಗಡೆ ಕಪಾಳ ಮೇಲೆ ಭಾರಿ ಕಂದುಗಟ್ಟಿ ರಕ್ತಗಾಯವಾಗಿದ್ದು, ಅವಳ ಎರಡು
ಪಾದಗಳಿಗೆ, ಬಲಗಾಲ ಹಿಮ್ಮಡಿ ಹತ್ತಿರ ರಕ್ತಗಾಯವಾಗಿದ್ದು, ಮೂಗಿನಿಂದ ಮತ್ತು ಬಾಯಿಯಿಂದ ರಕ್ತ ಬರುತ್ತಿದ್ದು, ನಂತರ
ನನ್ನ ಮೊಮ್ಮಗಳಿಗೆ ಡಿಕ್ಕಿ ಕೊಟ್ಟ ಜೀಪ ನಂಬರ ನೋಡಲು MH
26 - G 0065 ಅಂತ
ಇತ್ತು. ಅದರ ಚಾಲಕ ನಮ್ಮ ಗ್ರಾಮದ ಸಂಗಪ್ಪ ತಂದೆ ಸಿದ್ರಾಮಪ್ಪ ನಾರಾಯಣಪೂರ ಇದ್ದು, ಸದರಿಯವನು ಸ್ವಲ್ಪ
ಹೊತ್ತು ನಿಲ್ಲಿಸಿ ನಂತರ ಜೀಪನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದು ಇರುತ್ತದೆ. ನನ್ನ
ಮೊಮ್ಮಗಳು ಅವಳಿಗೆ ಆದ ಘಾಯದಿಂದ ನರಳಾಡುತ್ತಾ ಸ್ವಲ್ಪ ಹೊತ್ತಿನಲ್ಲಿ ಸ್ಥಳದಲ್ಲಿಯೆ
ಮೃತಪಟ್ಟಿದ್ದು ಇರುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ :
ದಿನಾಂಕ 06-12-2015 ರಂದು ಸಾಯಂಕಾಲ ಹುಮನಾಬಾದದಲ್ಲಿ ನಾನು ಮತ್ತು ನನ್ನ ಮಗಳು ಸುಪ್ರಿಯಾ
ಮತ್ತು ನನ್ನಮಗ ಸಂಗಮೇಶ ಮೂವರು ಕೂಡಿಕೊಂಡು ಜಗದೇವಿ ಇವರ ಜೋತೆಯಲ್ಲಿ ಫಾರ್ಚನೂರ ಕಾರ್ ನಂ ಎಪಿ-28-ಡಿ ಎಮ್-5577 ನೇದ್ದರಲ್ಲಿ ಕಲಬಯರಗಿ
ನಗರದಲ್ಲಿರುವ ನಮ್ಮ ಸಂಭಂದಿಕರ ಮನೆಗೆ ಹೋಗುವ
ಕುರಿತು ಹುಮನಾಬಾದ ನಿಂದ ಹೊರಟು ಬರುವ
ಮಾರ್ಗ ಮಧ್ಯದಲ್ಲಿ ನಾವು ಕುಳಿತ ಪಾರ್ಚೂನರ ಕಾರ್
ಚಾಲಕ ಹೆಸರು ಕೇಳಿ ಗೋತ್ತಾದ ರಘು ಈತನು ತನ್ನ ವಶದಲ್ಲಿದ್ದ ಪಾರ್ಚೂನರ
ಕಾರ್ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿದ್ದು ಆಗಾ ನಾನು ಮತ್ತು ಕಾರಿನಲ್ಲಿದ್ದ ಇತರರು ನಿಧಾನವಾಗಿ ಚಲಾಯಿಸಿಲು ಹೇಳಿದರು ಸಹ ಅತಿವೇಗದಿಂದ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಕಮಲಾಪೂರ
ಮುಂದೆ ಇರುವ ಖುದರೆ ಮುಖ ಹೊಡ್ಡಿನಲ್ಲಿ
ಪಾರ್ಚೂನರ ಕಾರ್ ನಂ ನಂ ಎಪಿ-28-ಡಿ
ಎಮ್-5577 ನೇದ್ದನ್ನು ಅತಿವೇಗ ಮತ್ತು
ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಮುಂದೆ ಬರುತ್ತಿದ್ದ ಒಂದು ಇಂಡಿಕಾ
ಕಾರಿಗೆ ಸೈಡ್ ಕಟ್ ಹೊಡೆದಂತೆ ಮಾಡಿ ಅದಕ್ಕೆ ಡಿಕ್ಕಿ ಪಡಿಸಿ ಒಮ್ಮಲೆ
ಜಂಪ ಮಾಡಿ ಮುಂದೆ
ಹೋಗಿ ಪಲ್ಟಿ ಮಾಡಿದನು , ಸದರಿ ಅಪಘಾತದಿಂದಾಗಿ
ನಾವು ಕುಳಿತ ಫಾರರ್ಚುನರ ಕಾರ್ ಪಲ್ಟಿಯಾಗಿ
ಬಿದ್ದಿರುತ್ತದೆ, ಆಗ ನಾವು ಸಾವರಿಸಿಕೊಂಡು ನೊಡಲಾಗಿ ನನಗೆ ಎಡಗೈ
ಮೊಣಕಟ್ಟಿಗೆ ರಕ್ಷಗಾಯವಾಗಿದ್ದು, ಅಲ್ಲಲಿ
ಗುಪ್ತಗಾಯವಾಗಿದ್ದು, ನನ್ನ ಮಗನಾದ ಸಂಗಮೇಶ
ಇತನ ಮೂಗಿನ ಹತ್ತಿರ ಮತ್ತು ತೆಲೆಗೆ ಭಾರಿ ರಕ್ತಗಾಯವಾಗಿದ್ದು ,ಬೇಹುಷ ಆಗಿದ್ದನು ,ಮಗಳು ಸುಪ್ರಿಯಾ ಇವಳಿಗೆ
ಒಳಪೆಟಾಗಿದ್ದು, ಯಾವುದೇ ಹೋರ
ಗಾಯಗಳಾಗಿರುವದಿಲ್ಲ,
ನಮ್ಮ ತಾಯಿ ಜಗದೇವಿ ಇವಳಿಗೆಹಣೆಯಮೇಲೆ
ಭಾರಿ ರಕ್ತಗಾಯ ,ಬಲಗಣ್ಣಿನ ಹತ್ತಿರ ಬಲಭಾಗದ ಬಾಯಿ ಹತ್ತಿರ ರಕ್ತಗಾಯ ಬಲಗಾಲು ಪಾದದ ಮೇಲೆ ತರಚಿದ ಗಾಯ
ಎಡಗಾಲ ಹೆಬ್ಬರಳಿನ ಹತ್ತಿರ ತರಚಿದ ಗಾಯ
ಎರಡು ಕಾಲುಗಳಿಗೆ ತರಚಿದ ಗಾಯವಾಗಿದ್ದು, ಮಹೇಶ ಈತನಿಗೆ ತೆಲೆಗೆ ಭಾರಿ ಗುಪ್ತಗಾಯವಾಗಿತ್ತು, ಚಾಲಕ ರಘು ಇತನಿಗೆ ಬಲಭಾಗದ ತೆಲೆಗೆ ರಕ್ತಗಾಯ ಕುತ್ತಿಗೆಗೆ
ಒಳಪೆಟಾಗಿತ್ತು, ಕಸ್ತೂರಿಬಾಯಿ ಇವಳಿಗೆತೆಲೆಗೆ ಭಾರಿ ರಕ್ತಗಾಯ, ಎಡಗೈ ಮಣಿ ಕಟ್ಟಿಗೆ
ರಕ್ತಗಾಯವಾಗಿತ್ತು,
ಪುತಳಾಬಾಯಿಗೆಬಲಗೈ ಮಾಣ ಕಟ್ಟಿಗೆ
ರಕ್ತಗಾಯ ಬೆನ್ನಿಗೆ ಗುಪ್ತಗಾಯವಾಗಿತ್ತು, ಶಿವರಾಜ ಈತನಿಗೆ ಮುಖದ ಮೇಲೆ ಭಾರಿ
ರಕ್ತಗಾಯ ಬಲಗೈಗೆ ಭಾರಿ ರಕ್ತಗಾಯ ,ಬಲಗಾಲ ಮುರಿದಿದ್ದು ಎಡಗಾಲಿನ
ಮೂರು ಬೆರಳುಗಳಿಗೆ ರಕ್ತಗಾಯವಾಗಿ
ಸ್ಥಳದಲ್ಲಿಯೆ ಮೃತಪಟ್ಟಿದ್ದು . ನಮ್ಮ ಎದುರಗಡೆ
ಯಿಂದ ಬಂದ ಕಾರಿನಲ್ಲಿ ಕುಳಿತವರಲ್ಲಿಒಬ್ಬನಿಗೆ
ಮುಖದ ಮೇಲೆ ರಕ್ತಗಾಯ,ಎದೆಗೆ
ಗುಪ್ತಗಾಯವಾಗಿದ್ದು ,
ಅದರ ಚಾಲಕನಿಗೆ ಹಣೆಯ ಮೇಲೆ ಎಡಗೈ
ಹಸ್ತಕ್ಕೆ ರಕ್ತಗಾಯವಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಅಶೋಕ
ನಗರ ಠಾಣೆ : ಶ್ರೀ.
ಅಶೋಕಕುಮಾರ ತಂದೆ ಗುಂಡಪ್ಪಾ ಚಂದನ ಸಾ: ಕಾಂತಾ ಕಾಲೋನಿ ಕಲಬುರಗಿ ರವರ ಮಗನಾದ ಅಭಿಷೇಕನು
ಶ್ರೀಗುರು ವಿದ್ಯಾ ಪೀಠ ದಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ದಿನಾಲು
ಸ್ಕೂಲ ವ್ಯಾನದಲ್ಲಿ ಶ್ರೀಗುರು ವಿದ್ಯಾ ಪೀಠ ಇಟಗಾ ಕ್ರಾಸಗೆ ಹೊಗಿ ಬರುತ್ತಾನೆ. ದಿನಾಂಕ
07/12/2015 ರಂದು ಮುಂಜಾನೆ 7-00 ಗಂಟೆಗೆ
ಸ್ಕೂಲ ವ್ಯಾನದಲ್ಲಿ ಶಾಲೆಗೆ ಹೊಗಿ ಸಂಜೆ 6-00 ಗಂಟೆಗೆ ಮರಳಿ ಮನೆಗೆ ಬಂದಿದ್ದು ಸ್ಕೂಲ
ಬ್ಯಾಗನ್ನು ಮನೆಯಲ್ಲಿಟ್ಟು ‘ಇಲ್ಲೆ ಹೊರಗಡೆ ಹೊಗಿ ಬರುತ್ತೆನೆ” ಎಂದು ತನ್ನ ತಾಯಿ
ಶ್ರೀಮತಿ ವಿದ್ಯಾ ರವರಿಗೆ ಹೇಳಿ ಹೊಗಿದ್ದು, ರಾತ್ರಿಯಾದರೂ
ಸಹ ಮರಳಿ ಮನೆಗೆ ಬಂದಿರುವುದಿಲ್ಲಾ. ನಾವು ಎಲ್ಲಾ ಕಡೆ ಹುಡುಕಾಡಿದ್ದು ಅವನ ಗೆಳೆಯರಿಗೆ ಫೋನ
ಮಾಡಿ ಕೇಳಿದ್ದು ಎಲ್ಲೂ ಸಿಕ್ಕಿರುವುದಿಲ್ಲಾ. ನಂತರ ಮನೆಯಲ್ಲಿದ್ದ ಅವನ ಸ್ಕೂಲ ವ್ಯಾಗನ್ನು ಚಕ್
ಮಾಡಿದಾಗ ಒಂದು ಪತ್ರ ಬರೆದಿಟ್ಟಿದ್ದು ಅದರಲ್ಲಿ ನನ್ನ ಪ್ರಿನ್ಸಿಪಾಲರು ನನಗೆ ತುಂಬಾ ತೊಂದರೆ
ಕೊಡುತ್ತಿದ್ದ ನನಗೆ ಶಾಲೆಯಲ್ಲಿ ಇರಲು ಸರಿ ಹೊಂದುತಿಲ್ಲಾ, ನಾನು ಮರಳಿ ಮನೆಗೆ ಬರುವುದಿಲ್ಲಾ. ನನ್ನನ್ನು ಹುಡುಕಬೇಡಿ
ಸ್ಕೂಲ ಫೀ ಕೊಟ್ಟಿದ್ದ 10,000/-
ರೂ. ತೆಗೆದುಕೊಂಡು ಹೊಗುತ್ತಿದ್ದು ಈ ಬಗ್ಗೆ ನನ್ನನ್ನು ಹುಡುಕಬೇಡಿ ನಾನು ಸಂತೋಷದಿಂದ ಅಲ್ಲೆ ಇದ್ದು
ಬಿಡುತ್ತೆನೆ. ಯಾವುದೇ ಪೊಲೀಸ ಕಂಪ್ಲೇಂಟ ಕೊಡಬೇಡಿ, ನಾನು
ಮನೆಗೆ ಬರುವುದಿಲ್ಲಾ ಅಂತಾ ಇತರೆ ಅಂಶಗಳನ್ನು ಬರೆದಿಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಶ್ರೀ
ಮಹ್ಮದ ಅಬ್ದುಲ್ ಮೈಮೂದ್ ತಂದೆ ಹಾಜಿ ರಸೂಲ್ ಪಟೇಲ್ ಸಾಃ ಪ್ಲಾಟ್
ನಂ. 95 ಹೌಸಿಂಗ್ ಬೋರ್ಡ ಕಾಲೋನಿ ಕಲಬುರಗಿ ಇವರು ತಮ್ಮ ರಾಯಲ್
ಎನಫೀಲ್ಡ ಮೋಟಾರ ಸೈಕಲ ನಂ ಕೆಎ.32 ಇಡಿ 5959 ಅ.ಕಿ. 1,00,000/- ರೂ ನೇದ್ದನ್ನು ದಿನಾಂಕಃ
12/11/2015 ರಂದು ಮದ್ಯಾಹ್ನ 1.30 ಪಿಎಂ ಕ್ಕೆ ಬಾರಾಹಿಲ್ಸ್ ನಲ್ಲಿರುವ ಮಜೀದ್-ಎ-ಅರಾಫತ್ ಮಜೀದ್
ಮುಂದುಗಡೆ ನಿಲ್ಲಿಸಿ ನಮಾಜ್ ಮುಗಿಸಿಕೊಂಡು ಮರಳಿ 2.00 ಪಿಎಂ ಕ್ಕೆ ಬಂದು ನೋಡಲಾಗಿ ತಾವು
ನಿಲ್ಲಿಸಿದ್ದ ಸ್ಥಳದಲ್ಲಿ ಮೋಟಾರ್ ಸೈಕಲ್ ಇರಲಿಲ್ಲ, ಎಲ್ಲಾ ಕಡೆ ಹುಡುಕಾಡಲಾಗಿ
ಸಿಕ್ಕಿರುವುದಿಲ್ಲ ಯಾರೋ ಕಳ್ಳರು ದಿನಾಂಕ 12/11/2015 ರಂದು 1.30 ಪಿಎಂ ದಿಂದ 2.00 ಪಿಎಂ
ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ
ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment