ವರದಕ್ಷಣೆ ಕಿರುಕುಳ
ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಅನಿತಾ ಗಂಡ ಶಿವಶರಣಪ್ಪಾ ಕಂದಳಿ ಸಾ : ಬಿಸಿಎಂ ಹಾಸ್ಟಲ ಪಕ್ಕದಲ್ಲಿ
ಘಾಟಗೇ ಲೇಔಟ ಸಿ.ಐ.ಬಿ ಕಾಲೋನಿ ಕಲಬುರಗಿ ಇವರ ಮದುವೆಯು 22-6-2012 ರಂದು ಶಾನಬಾಗ ಪಂಕ್ಷನ
ಹಾಲದಲ್ಲಿ ನನ್ನ ತಂದೆ ತಾಯಿಯವರು ತಾರಪೈಲದ
ಶಿವಶರಣಪ್ಪಾ ಕಂದಳಿ ಇತನ್ನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಮದುವೆಯಲ್ಲಿ 2 ತೊಲೆ ಬಂಗಾರ ಹಾಗೂ ಮೋಟಾರ ಸೈಕಲ ಹಾಗೂ ಗೃಹಬಳಕೆಯ
ಸಾಮಾನುಗಳು ಕೊಟ್ಟು ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನನ್ನ ಗಂಡ ಖಾಸಗಿಕೆಲಸ ಮಾಡುತ್ತಾನೆ
ನನಗೆ ಈಗ ಒಂದು ಗಂಡು ,ಒಂದು ಹೆಣ್ಣು ಮಗು ಇರುತ್ತವೆ. ಮದುವೆಯಾದ ಕೆಲವು ದಿವಸದವರೆಗೆ ನನ್ನ ಗಂಡ ಹಾಗೂ ಅವರ
ಮನೆಯವರು ನನ್ನೊಂದಿಗೆ ಚೆನ್ನಾಗಿದ್ದು, ನಂತರ ನನ್ನ ಗಂಡ ,ಅತ್ತೆ , ನಾದಿನಿ ,ಭಾವ ಹಣಮಂತ ಹಾಗೂ ಚಿಕ್ಕ ಮಾವನ ಮಗನಾದ ರಾಜು ಇವರೆಲ್ಲರೂ ಕೂಡಿಕೊಂಡು ನನಗೆ ದಿನಾಲು ನಿಮ್ಮ
ತಂದೆ ತಾಯಿಗೆ ನಿನ್ನೊಬ್ಬಳೆ ಮಗಳಿದ್ದಿ ,ನಿಮ್ಮ ತಂದೆ ನಿವೃತ್ತಿಯಾಗಿರುತ್ತಾರೆ ಆ ದುಡ್ಡು ನಮಗೆ
ಕೊಡಬೇಕು ಸದ್ಯ 5 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಅಂತಾ ಮಾನಸಿಕ ದೈಹಿಕ
ಕಿರುಕುಳ ಕೊಡುತ್ತಿದ್ದರು. ದಿನಾಂಕ 6-12-2015 ರಂದು ನನ್ನ ಗಂಡ ಶಿವಶರಣಪ್ಪಾ ಅತ್ತೆ ಸುಮಿತ್ರಾ ,ಭಾವ ಹಣಮಂತ ನಾದಿನಿ ಸುಜಾತಾ ಚಿಕ್ಕ ಮಾವನ ಮಗನಾದ ರಾಜು
ಇವರೆಲ್ಲರೂ ನನ್ನ ತವರು ಮನೆಗೆ ಬಂದು ರಂಡಿ 5 ಲಕ್ಷ ಹಣ ತೆಗೆದುಕೊಂಡು ಬಾ ಅಂದರೆ ಇಲ್ಲಿ ಬಂದು ಕುಳಿತಿದ್ದಿ
ಇವತ್ತು ನಿನಗೆ ಖಲಾಸ ಮಾಡಿ ಬಿಡುತ್ತೇನೆ ಅಂತಾ ನನ್ನ ಗಂಡ ನನ್ನ ಕೂದಲು ಹಿಡಿದು ಜಗ್ಗಾಡಿದ್ದು, ನನ್ನ ನಾದಿನಿ ಕೈಯಿಂದ ಕಪಾಳಿಗೆ
ಹೊಡೆದಿದ್ದು ಹಾಗೂ ನನ್ನ ಭಾವ ಹಣಮಂತ ಇತನು ಚಪ್ಪಲಿಯಿಂದ ಹೊಡೆದನು ನನ್ನ ಚಿಕ್ಕ ಮಾವ ರಾಜು ಇತನು ಬಡಿಗೆಯಿಂದ ತಲೆಯ ಬಲ ಭಾಗಕ್ಕೆ
ಹೊಡೆದು ರಕ್ತಗಾಯ ಮಾಡಿರುತ್ತಾನೆ. ನಮ್ಮ ತಂದೆಯಾದ ಅಯ್ಯಾಪ್ಪಾ, ತಾಯಿ ನಿರ್ಮಲಾ ಜಗಳ ಬಿಡಿಸಲು
ಬಂದರೆ ಅವರಿಗೂ ಕೂಡ ಅವಾಚ್ಯಶಬ್ದಗಳಿಂದ ಬೈದಿರುತ್ತಾರೆ. ನಂತರ ನಮ್ಮ ಮನೆಯ ಅಕ್ಕ ಪಕ್ಕದವರು
ಬಂದು ಜಗಳ ಬಿಡಿಸಿರುತ್ತಾರೆ. ಮದುವೆಯಾದಾಗಿನಿಂದ ತವರು ಮನೆಯಿಂದ 5 ಲಕ್ಷ ರೂಪಾಯಿ ವರದಕ್ಷಿಣೆ ಹಣ ತೆಗೆದುಕೊಂಡು ಬಾ ಅಂತಾ
ಮಾನಸಿಕ ದೈಹಿಕ ಕಿರುಕುಳ ಕೊಟ್ಟಿದ್ದು ಅಲ್ಲದೇ ಕೈಯಿಂದ , ಚಪ್ಪಲಿಯಿಂದ ಹಾಗೂ ಬಡಿಗೆಯಿಂದ
ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ,
ಮನುಷ್ಯ
ಕಾಣೆಯಾದ ಪ್ರಕರಣ :
ಚೌಕ ಠಾಣೆ : ಶ್ರೀ ಜಗಜೀವನ ಪ್ರಸಾದ ತಂದೆ ದಿ|| ಲಕ್ಷ್ಮಿನಾರಾಯಣ ಪ್ರಸಾದ
ಶೂಕ್ಲಾ ಸಾ: ಮದನ ಟಾಕೀಜ ಹತ್ತಿರ ಲೋಹಾರಗಲ್ಲಿ
ಆಸೀಫ್ ಗಂಜ್ ಕಲಬುರಗಿ ಇವರ ತಮ್ಮನಾದ ರಾಮಪ್ರಸಾದ ಶುಕ್ಲಾ ತಂದೆ ದಿ|| ಲಕ್ಷ್ಮಿನಾರಾಯಣ ಪ್ರಸಾದ
ಶೂಕ್ಲಾ ಇತನು ದಿನಾಂಕ 28.11.2015 ರಂದು
ಸಾಯಂಕಾಲ 6 ಗಂಟೆಗೆ ಮನೆಯಿಂದ ಹೊರ ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ. ನಾನು ಅಲ್ಲಿ ಇಲ್ಲಿ
ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment