ಜೇವರ್ಗಿ ಠಾಣೆ : ದಿನಾಂಕ
04.09.2015 ರಂದು 11:30 ಗಂಟೆಗೆ ಫಿಯಾರ್ಧಿದಾರನು ಠಾಣೆಗೆ ಹಾಜರಾಗಿ ಒಂದು ಗಣಕಿಕೃತ ದೂರು
ಅರ್ಜಿ ಹಾಜರ ಪಡಿಸಿದ್ದು ಅದರ ಸಾರಾಂಶವೆನೆಂದರೆ “ ನನ್ನ ತಂದೆಯಾದ ಭೀಮರಾಯ ತಂದೆ ಮಲ್ಲಪ್ಪ ದೊಡ್ಡಮನಿ ವಯಾ|| 34
ವರ್ಷ ಸಾ|| ಅವರಾದ ಇವರಿಗೆ ಸುಮಾರು ವರ್ಷಗಳಿಂದ ಆಗಾಗ ಹೊಟ್ಟೆ
ನೋವು ಕಾಣಿಸಿಕೊಳ್ಳುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ್ದು ಕಡಿಮೆ ಆಗಿರಲಿಲ್ಲ. ಇಂದು ದಿ: 04.09.2015 ರಂದು ಮುಂಜಾನೆ 07:30 ಗಂಟೆಯ ಸುಮಾರಿಗೆ
ನಮ್ಮ ತಂದೆಯವರು ಖಂಡಪ್ಪ ಮುತ್ಯಾನ ಗುಡಿಗೆ ಹೋಗಿ ಬರುತ್ತೆನೆ
ಅಂತ ಹೇಳಿ ಹೋದವರು ಖಂಡಪ್ಪ ಮುತ್ಯಾನ ಗುಡಿಯ ಹತ್ತಿರ ಬನ್ನಿ ಮರಕ್ಕೆ ತಾವು ಉಟ್ಟಿದ್ದ ದೋತರದಿಂದ
ಊರಲು ಹಾಕಿಕೊಂಡು ಸತ್ತಿದ್ದರು. ನಮ್ಮ ತಂದೆಗೆ ತನಗಿದ್ದ ಹೊಟ್ಟೆ ನೋವುತಾಳಲಾರದೆ ಅವನು ಮನೆಯಿಂದ
ನಮಗೆ ಏನು ಹೇಳದೆ ಮುಂಜಾನೆ 08:30 ಗಂಟೆಯಿಂದ 09:00 ಗಂಟೆಯ ಮಧ್ಯದ ಅವಧಿಯಲ್ಲಿ ಊರಲು
ಹಾಕಿಕೊಂಡು ಮೃತಪಟ್ಟಿದ್ದು ಸದರಿಯವರ ಮರಣದಲ್ಲಿ ನಮಗೆ ಯಾರ ಮೇಲು ಯಾವುದೆ ಸಂಶಯ ವಗೈರೆ
ಇರುವದಿಲ್ಲ, ಮುಂದಿನ ಕಾನೂನು ಕ್ರಮ ಕೈಕೊಳ್ಳಬೇಕು” ಅಂತ ವಗೈರೆ ಸಾರಾಂಶದ ಮೇಲಿಂದ ಯುಡಿಆರ್ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.
No comments:
Post a Comment