POLICE BHAVAN KALABURAGI

POLICE BHAVAN KALABURAGI

04 September 2015

Kalaburagi District Reported Crimes.

ಅಫಜಲಪೂರ ಠಾಣೆ : ಈ ಕೇಸಿನ ಸಂಕ್ಷಿಪ್ತ ಸಾರಾಂಶವೇನೆಂದರೆ ಫಿರ್ಯಾದುದಾರರು ಭಾಗ್ಯವಂತಿ ದೇವಾಲಯ ಘತ್ತರಗಾದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು ದಿನಾಂಕ 01/09/2015 ರಂದು ರಾತ್ರಿ 10 ಗಂಟೆ ಸುಮಾರಿಗೆ ನಾನು ದೇವಸ್ಥಾನದ ಕಾರ್ಯಾಲಯದಲ್ಲಿ ಮಲಗಿಕೊಂಡಿರುತ್ತೇನೆ ನನ್ನಂತೆ ದೇವಸ್ಥಾನದಲ್ಲಿ ಕೆಲಸ ಮಾಡುವ ಎಸ್ ಡಿಸಿ ಮತ್ತು ಡಿ ಗ್ರೂಪ್ ಸಿಬ್ಬಂದಿಯವರಾದ 1) ಮಂಜುನಾಥ ತಂದೆ ಹಣಮಂತ ಹಡಪಾದ 2) ಅಣ್ಣಾರಾಯ ತಂದೆ ಲಕ್ಷ್ಮಣ ಚೌರಾದ 3) ಮಹಾಂತಪ್ಪ ತಂದೆ ಸಿದ್ರಾಮ ಮುಗಿನ ಇವರು ದೇವಸ್ಥಾನದ ರಾತ್ರಿ ಕರ್ತವ್ಯದಲ್ಲಿರುತ್ತಾರೆ.ಮದ್ಯರಾತ್ರಿ ಸುಮಾರಿಗೆ ಗುಡಿಯಲ್ಲಿ ಯಾರೋ ಚಿರಾಡಿದಂತೆ ಸಪ್ಪಳ ಕೇಳಿ ನಾನು ಎದ್ದು ನೋಡಲು ಗುಡಿಯ ಮೇಲಿನಿಂದ ಯಾರೋ ಎರಡು ಜನ ಓಡಿ ಹೋದರು ಆಗ ಅಲ್ಲೆ ಇದ್ದ ನಮ್ಮ ಸಿಬ್ಬಂದಿಯವರಾದ ಮಂಜುನಾಥ, ಅಣ್ಣಾರಾಯ ಮತ್ತು ಮಹಾಂತಪ್ಪ ಇವರಿಗೆ ವಿಚಾರಿಸಲು ಸದರಿಯವರು ತಿಳಿಸಿದ್ದೇನೆಂದರೆ ಈಗ ಓಡಿ ಹೋದ ವ್ಯಕ್ತಿಗಳು ಘತ್ತರಗಾ ಗ್ರಾಮದ 1) ಬಸವರಾಜ ತಂದೆ ಭಗವಂತ್ರಾಯ ಮದಬಾವಿ 2) ಭಾಗೇಶ ತಂದೆ ರಮೇಶ ಕಡಬಾ ಇವರಿದ್ದು ಸದರಿಯವರು ನಾವು ಮಲಗಿಕೊಂಡಿದನ್ನು ನೋಡಿ ಗರ್ಭ ಗುಡಿಯ ಮುಂಬಾಗದಲ್ಲಿರುವ ಕಾಣಿಕೆ ಹಂಡಿಯಲ್ಲಿ ದಾರಕ್ಕೆ ಪೇವಿಕೋಲ ಹಚ್ಚಿ ಕಾಣಿಕೆ ಹುಂಡಿಯಲ್ಲಿ ಬಿಟ್ಟು ದಾರದಿಂದ ಹುಂಡಿಯಲ್ಲಿರುವ ಹಣವನ್ನು ತಗೆಯುತಿದ್ದರು  ಪು:ನ ಪು:ನ ಇದೇ ರೀತಿ ಹುಂಡಿಯಲ್ಲಿ ದಾರವನ್ನು ಬಿಟ್ಟು ಹಣವನ್ನು ತಗೆದುಕೊಳ್ಳುತಿದ್ದಾಗ ಸಪ್ಪಳವಾಗಿ ನಾವೇಲ್ಲರು ಎದ್ದು ಸದರಿಯವರಿಗೆ ಹಿಡಿಯಬೇಕೆಂದು ಅವರ ಹತ್ತಿರ ಹೋಗುತಿದ್ದಾಗ ಅವರು ನಮ್ಮನ್ನು ನೋಡಿ ಗುಡಿ ಮೇಲಿನಿಂದ ಓಡಿ ಹೋಗಿರುತ್ತಾರೆ. ಸದರಿಯವರ ಮುಖವನ್ನು ನಾವು ಗುಡಿಯ ಲೈಟಿನ ಬೇಳಕಿನಲ್ಲಿ ಸ್ಪಸ್ಟವಾಗಿ ನೋಡಿರುತ್ತೇವೆ ಸದರಿ ಬಸವರಾಜ ಮತ್ತು ಬಾಗೇಶ ಇವರು ಕಾಣಿಕೆ ಹುಂಡಿಯಿಂದ ಅಂದಾಜು 2000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಆಗ ಅಂದಾಜು ಸಮಯ 00.30 ಗಂಟೆಯಾಗಿರಬಹುದು ಅಂತ ತಿಳಿಸಿದರು. 1) ಬಸವರಾಜ ತಂದೆ ಭಗವಂತ್ರಾಯ ಮದಬಾವಿ 2) ಭಾಗೇಶ ತಂದೆ ರಮೇಶ ಕಡಬಾ ಸಾ|| ಇಬ್ಬರು ಘತ್ತರಗಾ ಇವರು ದಿನಾಂಕ 02/09/2015 ರಂದು ಮದ್ಯರಾತ್ರಿ 00.30 ಗಂಟೆ ಸುಮಾರಿಗೆ ಘತ್ತರಗಾ ಗ್ರಾಮದ ಶ್ರೀ ಭಾಗ್ಯವಂತಿ ದೇವಸ್ಥಾನದಲ್ಲಿ ಗರ್ಭ ಗುಡಿಯ ಮುಂದೆ ಇರುವ ಕಾಣಿಕೆ ಹುಂಡಿಯಲ್ಲಿ ದಾರ ಹಾಕಿ ಅಂದಾಜು 2000/- ರೂ ಹಣವನ್ನು ಕಳ್ಳತನ ಮಾಡಿರುತ್ತಾರೆ ಸದರಿ ವಿಷಯದ ಬಗ್ಗೆ ನಮ್ಮ ಮೇಲಾದಿಕಾರಿಗಳಿಗೆ ತಿಳಿಸಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ.  ಕಾರಣ ಸದರಿ ದೇವಸ್ಥಾನಕ್ಕೆ ಭಕ್ತರು ಕೊಟ್ಟ ಹಣವನ್ನು ಕಳ್ಳತನ ಮಾಡಿದವರ ಮೇಲೆ ಕಾನೂನು ಕ್ರಮ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ರಾಘವೇಂದ್ರ ನಗರ  ಠಾಣೆ :  ದಿನಾಂಕ 03/09/15 ರಂದು ಮದ್ಯಾನ 1.00 ಗಂಟೆಯವರೆಗೆ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಗಾಯಾಳು ಶ್ರೀ ಅಮೀತಕುಮಾರ ತಂದೆ ದತ್ತಾತ್ರೆಯ ಬೋರೆ ವ||32 ವರ್ಷ ಜಾ|| ಮರಾಠ ಉ|| ಸೆಂಟ್ರಿಂಗ ಕೆಲಸ ಸಾ|| ಬ್ಯಾಂಕ ಕಾಲೋನಿ ಉಮರ್ಗಾ ತಾ|| ಉಮರ್ಗಾ ಜಿ|| ಉಸ್ಮಾನಬಾದ ಮಹಾರಾಷ್ಟ್ರ ಇವರ ಹೇಳಿಕೆ ಪಡೆದುಕೊಂಡ ಸಾರಂಶವೆನಂದರೆ ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆ  ಕಲಬುರಗಿ ನಗರದ ಜೆ,ಅರ್, ಬಡಾವಣೆಯಲ್ಲಿ ನನ್ನ ಸೋದರ ಮಾವನ ಮಗಳಾದ ವೈಶಾಲಿ ಗಂಡ ಜಗನಾಥ ಚವ್ಹಾಣ ಇರುತ್ತಾರೆ ಇವರ ಮಗಳಾದ ಪ್ರಿಯಾಂಕ ಇವಳಿಗೆ ಇಲ್ಲೆ ಕಲಬುರಗಿ ನಗರದಲ್ಲಿ ಶಿವಾನಂದ @ ಬುಕ್ಕಡಶಿವ್ಯಾ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ ಶಿವಾನಂದ ಇವನು ಆಗಾಗ ಅವರ ಅತ್ತೆಮಾವರ ಜೋತೆ ತಂಟೆ ತಕರಾರು ಮಾಡುತ್ತಾ ಬರುತ್ತಿದ್ದು ಅದಕ್ಕೆ ಆಗಾಗೆ ನಾನು ಮತ್ತು ನನ್ನ ಸಂಬಂದಿಕನಾದ ಅಕ್ಕಲಕೋಟ ಗ್ರಾಮದ ಅಪ್ಪಸಾಹೇಬ @ ಅಪ್ಪು ನಾವು ಬಂದು ಸಮದಾನ ಮಾಡಿ ಬುದ್ದಿಮಾತು ಹೇಳಿ ಹೋಗುತ್ತಿದ್ದೇವು ನಿನ್ನೆ ದಿನಾಂಕ 02/09/15 ರಂದು ರಾತ್ರಿ 8.00 ಗಂಟೆಯ ಸೂಮಾರಿಗೆ ವೈಶ್ಯಾಲಿ ಇವರ ಅಣ್ಣನಾದ ಅರುಣಕುಮಾರ ಇವರು ನನ್ನ ಹತ್ತಿರ ಬಂದು ನ ನಗೆ ತಿಳಿಸಿದ್ದೇನಂದರೆ ನನ್ನ ತಂಗ್ಗಿ ವೈಶ್ಯಾಲಿ ಇವಳ ಅಳಿಯನಾದ ಶಿವಾನಂದ @ಬುಕ್ಕಡ ಶಿವ್ಯಾ ಇವನು ದಿನಾಲು ನನ್ನ ತಂಗ್ಗಿ ಮಗಳ ಪ್ರಿಯಾಂಕ ಇವಳ ಜೋತೆಯಲ್ಲಿ ವಿನಹ ಕಾರಣ ತಂಟೆ ತಕರಾರು ಮಾಡುತ್ತಿದ್ದಾನೆ ತಾವು ಇಲ್ಲಿಗೆ ಬಂದು ಅವರಿಗೆ ಬುದ್ದಿಮಾತು ಹೇಳಿ ಹೋಗಬೇಕು ಅಂತಾ ಪೋನ ಮುಖಾಂತರ ಹೇಳಿರುತ್ತಾಳೆ ಈಗ ನಾನು ಮತ್ತು ನೀನು ಹಾಗೂ ಅಕ್ಕಲಕೋಟ ಗ್ರಾಮದ ನನ್ನ ಇನ್ನೊಬ್ಬ ತಂಗ್ಗಿಯ ಗಂಡ ಅಪ್ಪಸಾಬ @ ಅಪ್ಪು ಎಲ್ಲರೂ ಹೋಗಣ ಅಂತಾ ಹೇಳದರಿಂದ ರಾತ್ರಿ 9.00 ಗಂಟೆಯ ಸೂಮಾರಿಗೆ ನಾನು ಮತ್ತು ಅರುಣಕುಮಾರ ಅಲ್ಲಿಂದ ಬಿಟ್ಟಿದ್ದು ಮುಂದೆ ಅಕ್ಕಲಕೋಟದಿಂದ ಅಪ್ಪಸಾಬ @ ಅಪ್ಪು ಇವರು ಬಂದಿದ್ದು ನಾವೇಲ್ಲರೂ ನಿನ್ನೆ ರಾತ್ರಿ 11.00 ಗಂಟೆಯ ಸೂಮಾರಿಗೆ ಕಲಬುರಗಿ ನಗರದ ಶ್ರೀಮತಿ ವೈಶ್ಯಾಲಿ ಇವರ ಮನೆಗೆ ಬಂದಿರುತ್ತೇವೆ ಮನೆಯಲ್ಲಿ ಮಲಗಿಕೊಂಡಾಗ ಇಂದು ದಿನಾಂಕ 03/09/15 ರಂದು ರಾತ್ರಿ 3.00 ಗಂಟೆಯ ಸೂಮಾರಿಗೆ ಶಿವಾನಂದ @ ಬುಕ್ಕಡಶಿವ್ಯಾ ಅವನ ತಮ್ಮ ಪ್ರಕಾಶ ಇನ್ನೂ 3-4 ಜನರು ಬಂದವರೆ ವೈಶ್ಯಾಲಿರವರ ಮನೆಯ ಬಾಗೀಲು ಬಡೆಯುತ್ತಿರುವಾಗ ಹೋರಗೆ ಬಂದು ಶಿವಾನಂದ ಇವನಿಗೆ ಇಷ್ಟು ರಾತ್ರಿ ಏಕೆ ಬಂದಿದ್ದಿರಿ ನಿಮ್ಮ ಗಂಡ ಹೆಂಡತಿ ಜಗಳ ಇದ್ದರೆ ಬೆಳಗ್ಗೆ ಬಗೆ ಹರಿಸೋಣ ಅಂತಾ ಸಮಧಾನ ಮಾಡಿ ಕಳಿಸಿರುತ್ತೇವೆ ಇಂದು ಬೆಳಗ್ಗೆ 10.00 ಗಂಟೆಯ ಸೂಮಾರಿಗೆ ವೈಶ್ಯಾಲಿ ಇವರ ಮನೆಯ ಮುಂದೆ ನಾನು ಮತ್ತು ಅರುಣಕುಮಾರ, ಅಪ್ಪಸಾಹೇಬ @ ಅಪ್ಪು, ವೈಶ್ಯಾಲಿ , ಮತ್ತು ವೈಶ್ಯಾಲಿ ಇವಳ ಗಂಡ ಜಗನಾಥ, ಮತ್ತು ಅವಳ ಮಗಳಾದ ಪ್ರಿಯಾಂಕ ಎಲ್ಲರೂ ಮಾತನಾಡುತ್ತಾ ನಿಂತ್ತಾಗ ಶಿವಾನಂದ @ ಬುಕ್ಕಡಶಿವ್ಯಾ ಇತನು ತನ್ನ ಜೋತೆಯಲ್ಲಿ ಆತನ ತಮ್ಮನಾದ ಪ್ರಕಾಶ ಮತ್ತು ತಾಯಿ  ಶಕುಂತಲ ಮತ್ತು ತಂದೆ ಅಮೃತ ಹಾಗೂ ಇನ್ನೂ 5-6 ಜನರೊಂದಿಗೆ ಬಂದವನೆ ಬುಕ್ಕಡ ಶಿವ್ಯಾ ಇತನು ವೈಶ್ಯಾಲಿಗೆ ಏ ರಂಡಿ ನಿನ್ನ ಮಗಳು ಪ್ರಿಯಾಂಕ ಇವಳಿಗೆ ಏಕೆ ಕಳುಹಿಸುತ್ತಿಲ್ಲಾ ಅಂತಾ ಹೇಳಿದ್ದಾಗ ನೀನು ನನ್ನ ಮಗಳ ಜೋತೆಯಲ್ಲಿ ವಿನಹ ಕಾರಣ ಜಗಳ ಮಾಡುತ್ತಿ ಗಂಡ ಹೆಂಡತಿ ಸರಿಯಾಗಿ ಇರಬೇಕು ಅಂತಾ ಬುದ್ದಿಮಾತು ಹೇಳುತ್ತಿರುವಾಗ ಏ ರಂಡಿ ನೀನು ನನಗೆ ಏನು ಹೇಳುತ್ತಿ ಅಂತಾ ಕೈಯಿಂದ ಕಪಾಳದ ಮೇಲೆ ಹೊಡೆದನು ಆಗ ನಾನು ಮತ್ತು ಅಪ್ಪಸಾಹೇಬ ಮತ್ತು ಅರುಣಕುಮಾರ ಎಲ್ಲರೂ ಕುಡಿಕೊಂಡು ಏಕೆ ಜಗಳ ಮಾಡುತ್ತಿರಿ ನೀವು ಗಂಡ ಹೆಂಡತಿ ಸರಿಯಾಗಿ ಇರಬೇಕು ಅಂತಾ ಬುದ್ದಿಮಾತು ಹೇಳುತ್ತಿರುವಾಗ  ನೀವು ಯಾರು ನಮಗೆ ಹೇಳುವವರು ಅಂತಾ ಜಗಳಕ್ಕೆ ಬಿದ್ದು ಪ್ರಕಾಶ ಮಾನೆ ಇವನು ಒಂದು ಕಲ್ಲಿನಿಂದ ಅಪ್ಪಸಾಹೇಬ @ ಅಪ್ಪು ಇವನಿಗೆ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಮಾಡಿ  ಕೋಲೆ ಮಾಡಲು ಪ್ರಯತ್ನಿಸಿರುತ್ತಾನೆ ಶಿವಾನಂದ @ಬೊಕ್ಕಡಶಿವ್ಯಾ ಇವನು ಒಂದು ಕಲ್ಲು ತೆಗೆದುಕೊಂಡು ನನ್ನ ತಲೆಯ ಮೇಲೆ ಹೋಡೆದು ರಕ್ತಗಾಯ ಮಾಡಿರುತ್ತಾನೆ ಅಮೃತ ಮಾನೆ ಇವನು ಬಿಡಬ್ಯಾಡರಿ ಅಂತಾ ನನಗೆ ಕೈಯಿಂದ ಹೊಟ್ಟೆಯ  ಮೇಲೆ ಹೊಡೆದಿರುತ್ತಾನೆ ಮತ್ತೆ ಅಮೃತ ಮಾನೆ ಇವನು ವೈಶ್ಯಾಲಿ ಇವಳಿಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ ಶಕುಂತಲ ಇವಳು ಏ ರಂಡಿ ಬೋಸಡಿ ಅಂತಾ ವೈಶ್ಯಾಲಿಗೆ ಬೈಯುತ್ತಾ ಕೈಯಿಂದ ಬೆನ್ನಿನ ಮೇಲೆ ಹೊಡೆದಿರುತ್ತಾಳೆ ಶಿವಾನಂದ @ ಬೊಕ್ಕಡಶಿವ್ಯಾ ಇತನು ಒಂದು ಕಲ್ಲು ತೆಗೆದುಕೊಂಡು ಅಪ್ಪಸಾಹೇಬ @ ಅಪ್ಪು ಇವನ ತಲೆಯ ಹಿಂಬಾಗದ ಮೇಲೆ ಹೊಡೆದು ರಕ್ತಗಾಯಮಾಡಿರುತ್ತಾನೆ ಇನ್ನೂಳಿದ 5-6 ಜನರು ಅರುಣಕುಮಾರ ಇತನಿಗೆ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ನಾನು ಅವರಿಗೆ ನೋಡಿದರೆ ಗುರುತ್ತಿಸುತ್ತೇನೆ ಮತ್ತೆ ಶಿವಾನಂದ ಇತನು ಒಂದು ತಲವಾರ ತೆಗೆದು ನಿಮ್ಮಗೆ ಖಲಾಸ ಮಾಡುತ್ತೇನೆ ಅಂತಾ ಹೆದರಿಸುತ್ತಿದ್ದನು ಆಗ ಬಡಾವಣೆಯ ಜಾನಕರ ಬಸವರಾಜ ಮತ್ತು ಸುಭಾಶ ಇವರು ಬಂದು ಜಗಳ ಬಿಡಿಸಿರುತ್ತಾರೆ ಇಲ್ಲದಿದ್ದರೆ ಅವರು ನಮ್ಮಗೆ ಕೋಲೆ ಮಾಡಿ ಬಿಡುತ್ತಿದ್ದರು ಅಪ್ಪಸಾಹೇಬ ಇವರಿಗೆ ಭಾರಿ ರಕ್ತಗಾಯವಾಗಿದ್ದರಿಂದ ಮತ್ತು ನನಗೆ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತೇವೆ ನಾನು ಹಿಂದಿಯಲ್ಲಿ ಹೇಳಿಕೆ ಹೇಳಿದ್ದು ಕನ್ನಡದಲ್ಲಿ ಬರೆದು ನನಗೆ ಹಿಂದಿಯಲ್ಲಿ ಅನುವಾದ ಮಾಡಿ ಹೇಳಿದ್ದು ನಿಜವಿರುತ್ತದೆ ಕಾರಣ ಅವರ ಮೇಲೆ ಕಾನೂನು  ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

ಕಮಲಾಪೂರ  ಠಾಣೆ : ದಿನಾಂಕ 03.09.2015 ರಂದು ಮಧ್ಯಾನ 3:45 ಪಿ.ಎಮ್.ಕ್ಕೆ ಬಸವೇಶ್ವರ ಆಸ್ಪತ್ರೆಯಿಂದ ಆರ್.ಟಿ.ಐ ಎಮ್.ಎಲ್.ಸಿ ವಸೂಲಾದ ಪ್ರಯುಕ್ತ ಬಸವೇಶ್ವರ ಆಸ್ಪತ್ರೆಗೆ ಬೇಟಿಕೊಟ್ಟು ವಿಚಾರಿಸಲು ಗಾಯಾಳು ಸುಭಾಶ ತಂದೆ ಮಾಣಿಕಪ್ಪ ಹೊಸಮನಿ ಸಾ: ಕಲಕೊರಾ ಇತನು ಮೃತ ಪಟ್ಟಬಗ್ಗೆ ಆಸ್ಪತ್ರೆಯಲ್ಲಿ ಡೆತ್ ಎಮ್.ಎಲ್.ಸಿ ವಸೂಲಾಗಿದ್ದು, ನಂತರ ಮೃತನ ತಮ್ಮನಾದ ಸತೀಶ ತಂದೆ ಮಾಣಿಕಪ್ಪ ಹೊಸಮನಿ ಸಾ: ಕಲಕೊರಾ ಇವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 9 ಪಿ.ಎಮ್.ಕ್ಕೆ ಹಾಜರಾಗಿ ಸದರಿ ಫಿರ್ಯಾದಿಯ ಹೇಳಿಕೆ ಸಾರಾಂಶವೆನೆಂದರೆ ದಿನಾಂಕ 03.09.2015 ರಂದು ಬೆಳ್ಳಿಗ್ಗೆ 10 ಗಂಟೆಯ ಸುಮಾರಿಗೆ ನಮ್ಮ ಅಣ್ಣನಾದ ಸುಭಾಶ ಇತನು ನಮ್ಮ ಮೋಟಾರ ಸೈಕಲ ನಂ ಕೆಎ 32 ಇಸಿ 8808 ನೇದ್ದು ತೆಗೆದುಕೊಂಡು ಕಮಲಾಪೂರಕ್ಕೆ ಹೋಗಿದ್ದು ಇರುತ್ತದೆ. ಮಧ್ಯಾನ 12 ಗಂಟೆಯ ಸುಮಾರಿಗೆ ನಾನು ನಮ್ಮ ಗ್ರಾಮದಲ್ಲಿದ್ದಾಗ ನಮ್ಮ ಗ್ರಾಮದ ನನ್ನ ಗೆಳೆಯನಾದ ಈಶ್ವರ ತಂದೆ ನಿಂಗಶೇಟ್ಟಪ್ಪ ಬಿರಾದಾರ ಇತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ತಾನು ಬೆಳ್ಳಿಗ್ಗೆ 11:30 ಗಂಟೆಯ ಸುಮಾರಿಗೆ ಕಮಲಾಪೂರ ಬಸ್ಸ ನಿಲ್ದಾಣದ ಮುಂದೆ ನಿಂತಾಗ ನಿಮ್ಮ ಅಣ್ಣನಾಧ ಸುಭಾಶ ಇತನು ತನ್ನ ಮೋಟಾರ ಸೈಕಲ ನಂ ಕೆಎ 32 ಇಸಿ 8808 ನೇದ್ದು ತೆಗೆದುಕೊಂಡು ಓಕಳಿ ಕ್ರಾಸ ದಿಂದ ಕಮಲಾಪೂರ ಬಸ್ಸ ನಿಲ್ದಾಣ ಮಾರ್ಗವಾಗಿ ಹೋಗುತ್ತಿದ್ದಾಗ ಎದರುಗಡೆಯಿಂದ ಅಂದರೆ ಹುಮನಾಬಾದ ಕಡೆಯಿಂದ ಬರುತ್ತಿದ್ದ ಮಾರುತಿ ಕಾರ ಚಾಲಕನು ತನ್ನ ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಅಡ್ಡಾದಿದ್ದಿಯಾಗಿ ನಡೆಯಿಸುತ್ತಾ ಬಂದು ರಸ್ತೆಯ ಎಡಗಡೆಯಿಂದ ಹೊಗುತ್ತಿದ್ದ ನಿಮ್ಮ ಅಣ್ಣನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟಿದ್ದು ಡಿಕ್ಕಿ ಕೊಟ್ಟ ಪರಿಣಾಮ ನಿಮ್ಮ ಅಣ್ಣ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ಆಗ ಕಾರ ಚಾಲಕನು ಕಾರನ್ನು ಅಲ್ಲೆ ಬಿಟ್ಟು ಓಡಿ ಹೋಗಿದ್ದು ನಂತರ ನಾನು ನಿಮ್ಮ ಅಣ್ಣನ ಹತ್ತಿರ ಹೋಗಿ ನೋಡಲು ಸುಭಾಶ ಇತನ ಮೂಗಿನಿಂದ ರಕ್ತಬರುತ್ತಿದ್ದು, ಮೂಗಿನ ಮೇಲೆ.  ತಲೆಯ ಮೇಲೆ, ಕುತ್ತಿಗೆ ಹಿಂದೆ, ಎರಡು ಕೈಗಳಿಗೆ, ಮತ್ತು ಎರಡು ಕಾಲುಗಳಿಗೆ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಸ್ಥಳದಲ್ಲಿದ್ದ ಅಪಘಾತ ಪಡಿಸಿದ ಕಾರ ನಂಬರ ನೋಡಲು ಅದರ ನಂಬರ ಕೆಎ 38 ಎಮ್ 2729 ಮಾರುತಿ ಕಾಋ ಇದ್ದು ನಂತರ ತಾನು 108 ಅಂಬುಲೇನ್ಸ ವಾಹನಕ್ಕೆ ಕರೆ ಮಾಡಿದ್ದು ಅಂಬುಲೇನ್ಸ ಬಂದ ನಂತರ ಸುಭಾಶ ಇತನಿಗೆ ಹಾಕಿಕೊಂಡು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದೆನೆ ಅಂತ ತಿಳಿಸಿದ್ದು ಇರುತ್ತದೆ.ನಂತರ ನಾನು ಮತ್ತು ನಮ್ಮ ಇನ್ನೂಬ್ಬ ಅಣ್ಣನಾದ ವಿಲಾಸ ಹಾಗೂ ಸುಭಾಶನ ಹೆಂಡತಿ ಪೂಜಾ ಕುಡಿಕೊಂಡು ಬಸವೇಶ್ವರ ಆಸ್ಪತ್ರೆಗೆ ಬಂದು ನೋಡಲು ನಮ್ಮ ಅಣ್ಣ ಸುಭಾಶ ಇತನಿಗೆ ಈಶ್ವರ ಇತನು ತಿಳಿಸಿದಂತೆ ಗಾಯಗಳಾಗಿದ್ದು ಇರುತ್ತದೆ. ನಮ್ಮ ಅಣ್ಣ ಸುಭಾಶ ಇತನು ಉಪಚಾರ ದಿಂದ ಗುಣಮುಖ ಹೊಂದದೆ ಸಾಯಂಕಾಲ 5:02 ನಿಮಿಷ್ಯಕ್ಕೆ ಬಸವೇಶ್ವರ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು ಇರುತ್ತದೆ.  ಕಾರ ನಂ ಕೆಎ 38 ಎಮ್ 2729 ನೇದ್ದರ ಚಾಲಕನು ತನ್ನ ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸುತ್ತಾ ಬಂದು ನಮ್ಮ ಅಣ್ಣನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಕೊಟ್ಟು ನಮ್ಮ ಅಣ್ಣನಿಗೆ ದು:ಖಾಪತ ಗೊಳಿಸಿದರಿಂದ ನಮ್ಮ ಅಣ್ಣ ಮೃತ ಪಟ್ಟಿದ್ದು ಕಾರಣ ಸದರಿ ಕಾರ ಚಾಲಕ ವಿರುಧ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಹೇಳಿ ಗಣಿಕಿಕೃತ ಮಾಡಿಸಿದ ಹೇಳಿಕೆ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

No comments: