POLICE BHAVAN KALABURAGI

POLICE BHAVAN KALABURAGI

05 September 2015

Kalaburagi District Reported Crimes.

ಚೌಕ  ಠಾಣೆ : ದಿನಾಂಕ: 04.09.2015 ರಂದು ರಾತ್ರಿ 07-00 ಗಂಟೆಗೆ ಶ್ರೀ. ಶ್ರೀಶೈಲ ತಂದೆ ಚಂದ್ರಶೇಖರ ಮಚ್ಚೆಟ್ಟಿ ವಯ; 20 ವರ್ಷ ಜಾ:ಲಿಂಗಾಯತ ಉ: ಬಂಡಿ ಹೋಟೇಲ ಕೆಲಸ ಸಾ: ಮನೆ ನಂ: 1543/7, ದೇವಣಿ ಶಾಲೆಯ ಹತ್ತಿರ ಭವಾನಿ ನಗರ ಕಲಬುರಗಿ ಇವರು ಠಾಣೆಗೆ ಹಾಜರಾತಿ ತಮ್ಮದೊಂದು ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ, ನಾನು ಮತ್ತು ನನ್ನ ತಂದೆ ಚಂದ್ರಶೇಖರ ಮತ್ತು ಅಣ್ಣ ಸಚಿನ ಕೂಡಿಕೊಂಡು ನಮ್ಮ ಕುಟುಂಬದ ನಿರ್ವಹಣೆ ಕುರಿತು ದಿನಾಲು ಮನೆಯಲ್ಲಿ ಇಡ್ಲಿ,ವಡಾ, ದೋಸಾ, ಆಲೂಭಾತ, ಚಟ್ನಿ , ಸಾಂಬಾರಗಳನ್ನು ತಯಾರಿಸಿಕೊಂಡು ನಮ್ಮ ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಕಲಬುರಗಿಯ ಹುಮನಾಬಾದ ರಿಂಗ್ ರೋಡಿನ ಹತ್ತಿರ ಇರುವ ಟಾಟಾ ಶೋ ರೂಮಿನ ಎದುರಿನ ರಸ್ತೆಯ ಪಕ್ಕದಲ್ಲಿ ಹೋಗಿ ಅಲ್ಲಿ ಪುರಿಯನ್ನು ಕರೆದು ಬಂಡಿ ಹೋಟೇಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ.ಹೀಗಿದ್ದು ದಿನಾಂಕ: 02.09.2015 ರಂದು ಬೆಳೆಗ್ಗೆ ಎಂದಿನಂತೆ ನಾನು ಮತ್ತು ನನ್ನ ಅಣ್ಣ ಸಚಿನ ಕೂಡಿಕೊಂಡು ನಮ್ಮ ಮನೆಯಲ್ಲಿ ಇಡ್ಲಿ ,ವಡಾ,   ದೋಸಾ, ಆಲೂಭಾತ, ಚಟ್ನಿ ಮತ್ತು ಸಾಂಬಾರ ಹೀಗೆ ಆಹಾರ ಪದಾರ್ಥಗಳನ್ನು ತಯಾರಿಸಿಕೊಂಡು ನಮ್ಮ ತಳ್ಳುವ ಬಂಡಿಯಲ್ಲಿ ಇಟ್ಟುಕೊಂಡು ಹುಮನಾಬಾದ ರಿಂಗ್ ರೋಡ ಹತ್ತಿರ ಇರುವ ಟಾ.ಟಾ ಶೋ ರೂಮ್ ಹತ್ತಿರ ಹೋಗಿ ಪುರಿಗಳನ್ನು ಕರೆಯುತ್ತಾ ಬಂಡಿ ಹೋಟೇಲ್ ವ್ಯಾಪಾರ ಮಾಡುತ್ತಿದ್ದು, ಬೆಳೆಗ್ಗೆ 09-15 ಗಂಟೆಯ ಸುಮಾರಿಗೆ ನಾನು ಪುರಿಗಳನ್ನು ಕರೆಯುತ್ತಿದ್ದಾಗ ನನ್ನ ಅಣ್ಣ ಸಚಿನ ಇವರು ಬಂಡಿ ಹೋಟೇಲದಲ್ಲಿ ಗಿರಾಕಿಗಳಿಗೆ ಟಿಫಿನ್ ಹಾಕಿ ಕೊಡುತ್ತಿದ್ದಾಗ ಶ್ರೀ. ಮಾರುತಿ ಮಾನ್ಪಡೆ, ಕಾರ್ಮಿಕ ಮುಖಂಡರು ಕಲಬುರಗಿ ಮತ್ತು ಅವರ ಸಂಗಡ ಇನ್ನೊಬ್ಬರೂ ನನ್ನ ಬಂಡಿ ಹೋಟೇಲಕ್ಕೆ ಬಂದು ಏ ಸೂಳೆ ಮಗನೆ, ಇವತ್ತು ಭಾರತ ಬಂದ್ ಮುಷ್ಕರ ಇದೇ ಅಂತಾ ಗೊತ್ತಿದ್ದರೂ ನೀನು ನಿನ್ನ ಹೋಟೇಲ್ ತೆರೆದು ಹೇಗೆ ವ್ಯಾಪಾರ ಮಾಡುತ್ತಿದ್ದೀ ಈಗ ತಕ್ಷಣ ನಿನ್ನ ಬಂಡಿ ಹೋಟೇಲ್ ಮುಚ್ಚು ಮಗನೇ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದು, ಆಗ ನಾನು ಅವರಿಗೆ ಭಾರತ ಬಂದ್  ಇರುವುದು ನನಗೆ ಗೊತ್ತಿಲ್ಲ, ಹುಮನಾಬಾದ ರಿಂಗ್ ರೋಡದಲ್ಲಿ ಎಲ್ಲಾ ಹೋಟೇಲಗಳು ತೆರೆದು ವ್ಯಾಪಾರ ಮಾಡುತ್ತಿರುವಂತೆ ನಾನೂ ಸಹ ಹೋಟೇಲ್ ವ್ಯಾಪಾರ ಮಾಡುತ್ತಿದ್ದೇನೆ. ಬಂದ ಇರುವ ಸಮಯದಲ್ಲಿ ಯಾರೂ ಒತ್ತಾಯಪೂರ್ವಕವಾಗಿ ಅಂಗಡಿ ಬಂದ ಮಾಡಿಸಬಾರದು ಅಂತಾ ನನಗೂ ಸಹ ಗೊತ್ತಿದೆ,  ಈಗ ತಾವು ಬಂದು ಹೋಟೇಲ್ ಮುಚ್ಚು ಅಂತಾ ಹೇಳುತ್ತಿದ್ದೀರಿ, ನಾನು ನನ್ನ ಹೋಟೇಲ್ ಮುಚ್ಚುತ್ತೇನೆ ಅಂತಾ ಹೇಳುತ್ತಿದ್ದಾಗ, ಮಾರುತಿ ಮಾನ್ಪಡೆ ರವರು ನನಗೆ ಕಾನೂನು ಹೇಳುತ್ತಿ ಮಗನೆ ಅಂತಾ ತಮ್ಮ ಕೈಯಿಂದ ನನ್ನ ಎಡ ಕಪಾಳದ ಕಿವಿಯ ಮೇಲೆ ಜೋರಾಗಿ ಹೊಡೆದು ಗುಪ್ತಗಾಯ ಪಡಿಸಿದರು. ಆಗ ಅವರ ಜೋತೆಯಲ್ಲಿದ್ದ ಇನ್ನೊಬ್ಬರು ಹುಮನಾಬಾದ್ ರಿಂಗ್ ರೋಡಿನ ಹತ್ತಿರ ಒತ್ತಾಯಪೂರ್ವಕವಾಗಿ ಅಂಗಡಿ ಹೋಟೇಲ್ ಗಳನ್ನು ಬಂದ್ ಮಾಡಿಸುತ್ತಿರುವ ತಮ್ಮ ಸಂಗಡಿಗರನ್ನು ಕೂಗಿ ಕರೆದಿದ್ದು, ಅವರುಗಳೆಲ್ಲ ಬಂದವರೇ ನಾನು ನನ್ನ ಬಂಡಿ ಹೋಟೇಲ್ ಮುಚ್ಚುತ್ತೇನೆ ಅಂತಾ ಎಷ್ಟು ಹೇಳಿದರೂ ಕೇಳದೇ ನನ್ನ ಬಂಡಿಯಲ್ಲಿದ್ದ ಇಡ್ಲಿ,ವಡಾ, ಪುರಿ, ದೋಸಾ, ಆಲೂಭಾತ, ಚಟ್ನಿ , ಸಾಂಬಾರಗಳನ್ನು ನೆಲಕ್ಕೆ ಚೆಲ್ಲಾಡಿ ಗಿರಾಕಿಗಳಿಗೆ ಕುಳಿತುಕೊಳ್ಳಲು ಇಟ್ಟಿದ್ದ ಪ್ಲಾಸ್ಟೀಕ್  ಕುರ್ಚಿ, ಸ್ಟೂಲಗಳನ್ನು ಮುರಿದು ಹಾಳು ಮಾಡಿದ್ದು , ಇದರಿಂದ ನನಗೆ ಆಹಾರ ಪದಾರ್ಥ  ಮತ್ತು ಟೇಬಲ್ ಕುರ್ಚಿ ಕೂಡಿಕೊಂಡು ಅಂದಾಜು 10,000=00 ರೂಪಾಯಿಯಷ್ಟು ನಷ್ಟ ಮಾಡಿರುತ್ತಾರೆ. ಅಷ್ಟರಲ್ಲಿ ನನ್ನ ಬಂಡಿ ಹೋಟೇಲದಲ್ಲಿ ಟಿಫಿನ್ ಮಾಡಲು ಬಂದಿದ್ದ ರಾಜು ಜೈನ್  ಮತ್ತು ಅಲ್ಲಿಯೇ ಗಿರಾಕಿಗಳಿಗೆ ಟಿಫಿನ್ ಕೊಡುತ್ತಿದ್ದ ನನ್ನ ಅಣ್ಣ ಸಚಿನ  ಮಚ್ಚೇಟ್ಟಿ ಕೂಡಿ ಜಗಳ ಬಿಡಿಸುತ್ತಿದ್ದಾಗ ಶ್ರೀ,. ಮಾರುತಿ ಮಾನ್ಪಡೆ ಮತ್ತು ಅವರ ಸಂಗಡಿಗರು ಕೂಡಿಕೊಂಡು  ನೀನು ಈ ಘಟನೆ ಬಗ್ಗೆ ಪೊಲೀಸ್ ಕೇಸ್ ಮಾಡಿದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕುತ್ತಾ ಹೋಗಿರುತ್ತಾರೆ. ಈ ಘಟನೆ ದಿನಾಂಕ: 02.09.2015 ರಂದು ಬೆಳೆಗ್ಗೆ  09-15 ಗಂಟೆ ಸುಮಾರಿಗೆ ಜರುಗಿರುತ್ತದೆ. ಅಂದು ನಾನು ಮನೆಯಲ್ಲಿಯೇ ನನ್ನ ನೋವಿಗೆ ಉಪಚಾರ ಪಡೆದುಕೊಂಡಿರುತ್ತೇನೆ. ಈ ಘಟನೆ ಜರುಗಿದಾಗ ನನ್ನ ತಂದೆಯವರು ಮನೆಯಲ್ಲಿ ಇಲ್ಲದೇ ಇದ್ದಿದ್ದರಿಂದ ಅವರಿಗೆ ವಿಚಾರಿಸಿ ದೂರು ಕೊಡಲು ಯೋಚಿಸಿದ್ದು, ಇಂದು ದಿನಾಂಕ: 04.09.2015 ರಂದು ತಡವಾಗಿ ನನ್ನ ತಂದೆಯವರು ಸೋಲಾಪುರದಿಂದ ಮನೆಗೆ ಬಂದಿದ್ದು ಅವರಿಗೆ ಘಟನೆಯ ಬಗ್ಗೆ ವಿಚಾರಿಸಿದ್ದು ಅಲ್ಲದೇ ನನಗೆ ಎಡಗಡೆ ಕಿವಿಯು ಅತಿಯಾಗಿ ನೋಯುತ್ತಿದ್ದರಿಂದ ನಾನು ಉಪಚಾರ ಕುರಿತು ನನ್ನ ತಂದೆಯೊಂದಿಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೋಗಿ ಹೊರ ರೋಗಿಯಾಗಿ ಉಪಚಾರ ಪಡೆದಿರುತ್ತೇನೆ. ಕಾರಣ ದಿನಾಂಕ: 02.09.2015 ರಂದು ಬೆಳೆಗ್ಗೆ 09-15 ಗಂಟೆಯ ಸುಮಾರಿಗೆ ಭಾರತ್ ಬಂದ್ ಮುಷ್ಕರ ಇರುವ ಸಮಯದಲ್ಲಿ ಶ್ರೀ, ಮಾರುತಿ ಮಾನ್ಪಡೆ ಕಾರ್ಮಿಕ ಮುಖಂಡರು, ಕಲಬುರಗಿ ಮತ್ತು ಅವರ ಸಂಗಡಿಗರೂ ಕೂಡಿಕೊಂಡು ಹುಮನಾಬಾದ ರಿಂಗ್ ರೋಡಿನ ಟಾಟಾ ಶೋ ರೂಮ್ ಎದುರಿನ ನನ್ನ ಬಂಡಿ ಹೋಟೇಲಕ್ಕೆ ಬಂದು ನನಗೆ ಒತ್ತಾಯಪೂರ್ವಕವಾಗಿ ಬಂಡಿ ಹೋಟೇಲ್ ಬಂದ ಮಾಡುವಂತೆ ಒತ್ತಾಯಿಸುತ್ತಾ ಬಂಡಿಯಲ್ಲಿದ್ದ ಆಹಾರ ಪದಾರ್ಥಗಳನ್ನು ನೆಲಕ್ಕೆ ಚೆಲ್ಲಿ ಮತ್ತು ಪ್ಲಾಸ್ಟೀಕ್ ಕುರ್ಚಿ, ಸ್ಟೂಲಗಳನ್ನು ಮುರಿದು ಹಾನಿ ಮಾಡಿ ನನಗೆ ಹಲ್ಲೆ ಮಾಡಿ ಜೀವದ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಅಂತಾ ವಗೈರೆ ಇದ್ದ ಫಿರ್ಯಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆ ಗುನ್ನೆ ನಂ: 146/2015 ಕಲಂ 323.427. 504.506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಾಗಿರುತ್ತದೆ. 

No comments: