ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ಚೌಕ ಠಾಣೆ : ದಿನಾಂಕ 22.06.2015 ರಂದು
ರಾತ್ರಿ ವೇಳೆಯಲ್ಲಿ ನಡೆದ ಕೊಲೆ ಕೇಸಿನ ಆರೋಪಿ ಪತ್ತೆ ಮಾಡುವ ಕುರಿತು ಶ್ರೀ ಉಮಾಶಂಕರ.ಬಿ ಪಿ.ಐ ಚೌಕ
ಪೋಲೀಸ ಠಾಣೆ ಕಲಬುರಗಿ ರವರು ಹಾಗು ಠಾಣೆಯ ಸಿಬ್ಬಂದಿ
ಮೋಸಿನ್ ಪಿಸಿ 811, ಮತ್ತು ವಾಹನ ಚಾಲಕ ಶರೀಫ ರವರೊಂದಿಗೆ ಚೌಕ ಪೊಲೀಸ ಠಾಣಾ ಹದ್ದಿಯಲ್ಲಿ ಸರಕಾರಿ ಜಿಪ್
ನಂ ಕೆಎ 32 ಜಿ 639 ನೇದ್ದರಲ್ಲಿ ದಿನಾಂಕ 25.06.2015
ರಂದು ರಾತ್ರಿ ವೇಳೆಯಲ್ಲಿ ವಿಶೇಷ ಪೆಟ್ರೋಲಿಂಗ್ ಮಾಡುತ್ತಿರುವಾಗ ಬೆಳಗಿನ ಜಾವ 1-30 ಗಂಟೆಗೆ ಖಚಿತ ಬಾತ್ಮಿ ಬಂದಿದ್ದೆನೆಂದರೆ
ಠಾಣಾ ವ್ಯಾಪ್ತಿಯಲ್ಲಿ ಹುಮನಾಬಾದ ರಿಂಗ ಲಾರಿ ತಂಗುದಾಣದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ರಿಂಗ ರೋಡಿಗೆ
ಕೆಲವು 5-6 ಜನರು ದರೋಡೆ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅಡಗಿ ಕುಳಿತ ಬಗ್ಗೆ ಖಚಿತ ಮಾಹಿತಿ
ಸಿಕ್ಕ ಮೇರೆಗೆ ಸಿಬ್ಬಂದಿಯವರೊಂದಿಗೆ ಹುಮನಾಬಾದ ರಿಂಗ ರೋಡ
ಲಾರಿ
ತಂಗುದಾಣದ ಪಕ್ಕದಲ್ಲಿ ಹೋಗಿ ಠಾಣೆಯ ಹಸೇನ ಬಾಷಾ ಪಿ.ಎಸ್.ಐ (ಕಾ.ಸು) ಹಾಗು ಮತ್ತು ಬೀಟ ಕರ್ತವ್ಯದ
ಸಿಬ್ಬಂದಿಯವರಾದ ಶಿವಶರಣಪ್ಪ ಎ.ಎಸ್.ಐ, ಪ್ರಕಾಶ ಪಿಸಿ 1132, ಅಸ್ಲಂಬಾಷಾ ಪಿಸಿ
434, ರವರಿಗೆ ಮತ್ತು ಮಾಹಾಂತೇಶ ಪಿಸಿ 716, ಬಂದೇನವಾಜ ಪಿಸಿ
429,
ಕರಣಸಿಂಗ
ಪಿಸಿ 422 ಇವರಿಗೆ ಸದರಿ ವಿಷಯ ಫೊನ ಮುಖಾಂತರ ಮಾಹಿತಿ ನೀಡಿದ್ದು ಅವರು ತಮ್ಮ ದ್ವಿಚಕ್ರಗಳ ವಾಹನಗಳ
ಮೇಲೆ ಹುಮನಾಬಾದ ರಿಂಗ ರೋಡ ಲಾರಿ ತಂಗುದಾಣದ ಪಕ್ಕದಲ್ಲಿ ಬಂದಿದ್ದು ನಂತರ ಎಲ್ಲರೂ
ಕೂಡಿಕೊಂಡು ಬಾತ್ಮಿ ಬಂದ ಸ್ಥಳಕ್ಕೆ ಬೆಳಗಿನ ಜಾವ ರಿಂಗ ರೊಡ ಹತ್ತಿರ ಹೊಗಿ ಜಾಡು ಹಿಡಿದು ನೋಡಲು
ಹುಮನಾಬಾದ ರಿಂಗ ರೋಡ ಪಕ್ಕದಲ್ಲಿರುವ ಲಾರಿ ತಂಗುದಾಣದ ತಗ್ಗಿನಲ್ಲಿ ದರೋಡೆಖೊರರು ಗುಜುಗುಜು ಮಾತಾಡುವ
ಶಬ್ದ ಕೆಳಿಸಿತು ಆಗ ನಾವೆಲ್ಲರು ಬರುವದನ್ನು ಗಮನಿಸಿ ಓಡರೋ ಓಡರೋ ಭಾಗೋ ಭಾಗೋ ಅನ್ನುತ್ತಾ ಒಂದೇ ಸವನೆ
ಓಡ ತೊಡಗಿದರು. ಕೂಡಲೆ ನಾವೆಲ್ಲರು ಬೆನ್ನಟಿ ಒಟ್ಟು 4 ಜನರಿಗೆ ಹಿಡಿದುಕೊಂಡಿದ್ದು, ಒಬ್ಬನು ಕತ್ತಲಲ್ಲಿ ಮುಳ್ಳು ಕಟ್ಟೆಯಲ್ಲಿ
ಓಡಿಹೋಗಿ ತಪ್ಪಿಸಿಕೊಂಡಿದ್ದು ಸದರಿ 4 ಜನರನ್ನು ರಿಂಗ ರೋಡಿನ ಮೇಲೆ ಕರೆದುಕೊಂಡು ಬಂದು ಅವರ ಹೆಸರು ಮತ್ತು ವಿಳಾಸವನ್ನು
ವಿಚಾರಿಸಲಾಗಿ, ಒಬ್ಬನು ತನ್ನ ಹೆಸರು 1) ಸಲ್ಲೀಂ
ತಂದೆ ಮಹ್ಮದ ಸಲಾಂ ಸಾಃ ಹನುಮಾನ ಗುಡಿ ಹತ್ತಿ ಲಾಲಗಿರಿ ಕ್ರಾಸ್ ಕಲಬುರಗಿ 2) ಸಿದ್ದು @ ರೇವಣಸಿದ್ದಪ್ಪ
ತಂದೆ ರವಿಕುಮಾರ ಶೆಳ್ಳಗಿ ಸಾಃ ದುಬೈ ಕಾಲೋನಿ ಕಲಬುರಗಿ
3) ರವಿ @ ರವಿಚಂದ್ರ ತಂದೆ ವಿರೇಶ ವಿಶ್ವಕರ್ಮ
ಸಾಃ ಲೋಹರ ಗಲ್ಲಿ ಮಹಾದೇವ ನಗರ ಕಲಬುರಗಿ 4) ಪ್ರಲ್ಹಾದ
ತಂದೆ ಅಂಬಾದಾಸ ಗಾಯಕವಾಡ ಸಾಃ ಮರಗಮ್ಮ ಗುಡಿ ಹತ್ತಿರ ಕಲಬುರಗಿ ಈ 4 ಜನರಿಗೆ ಓಡಿ ಹೋದವನ ಬಗ್ಗೆ ಹೆಸರು
ವಿಳಾಸ ವಿಚಾರಿಸಲಾಗಿ ಅವನ ಹೆಸರು 5) ಈಶ್ವರ ತಂದೆ ಶಿವಶರಣಪ್ಪ
ಮುಡಬಿ ಸಾ: ಸಂಜೀವ ನಗರ ಅಂತಾ ತಿಳಿಸಿದರು.
ನಂತರ ಸದರಿಯವರ ಅಂಗ ಶೋದನೆಯನ್ನು ಮಾಡಲಾಗಿ ಒಂದು ತಲವಾರಗಳು ಮಚ್ಚು ಮತ್ತು ಲಾಂಗಲಳು ಮತ್ತು ಮುಖಕ್ಕೆ
ಕಟ್ಟಿಕೊಳ್ಳುವ ಕರಿ ಬಣ್ಣದ ಬಟ್ಟೆ ಕಾಗದದಲ್ಲಿ ಕಟ್ಟಿದ ಖಾರದ ಎರಡು ಪುಡಿಗಳನ್ನು ವಶಪಡಿಸಿಕೊಂಡು ಸದರಿಯವರೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ
ಠಾಣೆ : ದಿನಾಂಕ 25-06-2015 ರಂದು ಕರಜಗಿ ಗ್ರಾಮದಲ್ಲಿ ಕರಜಗಿ
ಗ್ರಾಮದ ಜಗನ್ನಾಥ ತಂದೆ ಹಣಮಂತ ಲೋಣಾರ ಮತ್ತು ಅವನ ತಂಗಿ ಮಾಹಾದೇವಿ ತಂದೆ ಹಣಮಂತ ಲೋಣಾರ ಇವರು
ದಿನಾಲು ಬೆಳಗಿನ ಜಾವದಲ್ಲಿ ಮತ್ತು ಇನ್ನಿತರ ಸಮಯದಲ್ಲಿ ಜಗನ್ನಾಥ ಈತನು ಬಸವೇಶ್ವರ ಚೌಕ ಹತ್ತಿರ
ಮತ್ತು ಮಾಹಾದೇವಿ ಇವಳು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ನಿಂತುಕೊಂಡು ಹೊಗಿ
ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಅವರನ್ನು ನಂಬಿಸಿ ಜನರನ್ನು
ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ
ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿರುತ್ತಾರೆ. ಈಗ ಮಟಕಾ ಬರೆದುಕೊಳ್ಳುತ್ತಿದ್ದಾರೆ ಅಂತಾ
ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಕರಜಗಿ
ಗ್ರಾಮಕ್ಕೆ ಹೋಗಿ, ಕರಜಗಿ ಗ್ರಾಮದ
ಬಸವೇಶ್ವರ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ, ನಿವು ನನ್ನನ್ನು ನಂಬಿರಿ ಇದು
ನಿಮ್ಮ ದೈವ ಲಿಲೆ ಧನ ಲಕ್ಷ್ಮೀ ನಿಮ್ಮ ಮನೆಯ ಬಾಗಿಲಿಗೆ ಬಂದು ನಿಂತಿದ್ದಾಳೆ, ಬನ್ನಿ ಹಣ ಕೊಟ್ಟು ನಿಮ್ಮ
ಅದೃಷ್ಟದ ನಂಬರನ್ನು ಬರೆಸಿ ನಾನು ನಿಮಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರನ್ನು ವಂಚಿಸುತ್ತಾ ಕೈಯಲ್ಲಿ
ಹಣ ಹಿಡಿದುಕೊಂಡು, ಜನರಿಂದ ಹಣ
ಪಡೆಯುತ್ತಾ ಅಂಕಿ ಸಂಖ್ಯೆ ಬರೆದುಕೊಟ್ಟು ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು
ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಜಗನ್ನಾಥ
ತಂದೆ ಹಣಮಂತ ಲೋಣಾರ ಸಾ: ಕರಜಗಿ ಅಂತಾ
ತಿಳಿಸಿದನು, ಸದರಿ
ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿ, ಸದರಿಯವನ ಸ್ವ ಖುಷಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ವ್ಯಕ್ತಿ ನಾನು ಸುಮಾರು
ದಿನಗಳಿಂದ ಮಟಕಾ ಬರೆದುಕೊಳ್ಳುತ್ತೆನೆ, ಹಾಗೂ ನನ್ನ ತಂಗಿ
ಮಾಹಾದೇವಿ ಇವಳು ನಮ್ಮ ಮನೆಯ ಮುಂದೆಯೆ ಕುಳಿತುಕೊಂಡು, ಹೊಲಕ್ಕೆ ಹೋಗಿ ಬರುವ ಜನರಿಗೆ ಮತ್ತು ನಮ್ಮ ಮನೆಯ
ಹತ್ತಿರ ತಿರುಗಾಡುವ ಜನರನ್ನು ಕರೆದು ಅವಳು ಸಹ ಜನರನ್ನು ನಂಬಿಸಿ ಜನರಿಂದ ಹಣ ಪಡೆದು, ಜನರನ್ನು ವಂಚಿಸಿ ಮೊಸದಿಂದ ಮಟಕಾ ಬರೆದುಕೊಳ್ಳುತ್ತಾಳೆ, ನಾನು ಜನರು ಬರೆಸಿದ ಮಟಕಾ
ಹಣದಲ್ಲಿ 1,00,000/- ರೂ (ಒಂದು ಲಕ್ಷ ರೂಪಾಯಿ) ಹಣವನ್ನು ನಮ್ಮ
ಮನೆಯಲ್ಲಿ ಮುಚ್ಚಿ ಇಟ್ಟಿರುತ್ತೆನೆ. ಹಾಗೂ ನಾನು ಮತ್ತು ನನ್ನ ತಂಗಿ ಮಾಹಾದೇವಿ ಇಬ್ಬರು
ಬರೆದುಕೊಂಡ ಮಟಕಾ ಹಣವನ್ನು ಮತ್ತು ಮಟಕಾ ನಂಬರಗಳನ್ನು ಗಿರಿಮಲ್ಲಪ್ಪ ಗಂಗೊಂಡ ಸಾ: ನಾಗಣಸೂರ ತಾ:
ಅಕ್ಕಲಕೋಟ ಈತನು ನಮ್ಮ ಊರಿಗೆ ಬಂದು ತಗೆದುಕೊಂಡು ಹೋಗುತ್ತಾನೆ, ನಾವು ಮಟಕಾವನ್ನು
ಗಿರಿಮಲ್ಲಪ್ಪನಿಗೆ ಕೊಡುತ್ತೆವೆ ಅಂತಾ ತಿಳಿಸಿದನು ಮತ್ತು ನಾನು ಈಗಾಗಲೆ ಜನರಿಂದ ಹಣ ಪಡೆದು
ಮಟಕಾ ಬರೆದುಕೊಂಡ ಹಣದಲ್ಲಿ 1,00,000/- ಹಣವನ್ನು ಮನೆಯಲ್ಲಿಟ್ಟಿದ್ದು, ತಾವುಗಳು ನನ್ನ ಜೋತೆಗೆ
ಬಂದಲ್ಲಿ ಸದರಿ 1,00,000/- ರೂ (ಒಂದು ಲಕ್ಷ ರೂಪಾಯಿ) ಹಣವನ್ನು ತೋರಿಸಿ
ಹಾಜರುಪಡಿಸುತ್ತೆನೆ ಅಂತಾ ತನ್ನ ಸ್ವ ಖುಷಿ ಹೇಳಿಕೆ ನೀಡಿದನು. ನಂತರ ಸದರಿ ಜಗನ್ನಾಥ ಈತನನ್ನು
ದಸ್ತಗಿರಿ ಮಾಡಿ, ಸದರಿಯವನನ್ನು
ಚೆಕ್ ಮಾಡಲಾಗಿ ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ, ನಗದು ಹಣ 36,100/- ರೂ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ನೋಟ್ ಬುಕ್ ಮತ್ತು ಒಂದು ಪೆನ್ನ
ಹಾಗೂ ಒಂದು ಮೋಬೈಲ ಪೋನ್ ಅಕಿ- 1000/- ರೂ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡೆನು.
ನಂತರ ಸದರಿ ಆರೋಪಿತನು ತನ್ನ ಸ್ವ ಖುಷಿ ಹೇಳಿಕೆಯಲ್ಲಿ ತಿಳಿಸಿದಂತೆ ಮಟಕಾ ಜೂಜಾಟಕ್ಕೆ
ಸಂಭಂದಪಟ್ಟ ಮನೆಯಲ್ಲಿಟ್ಟ 1,00,000/- ರೂ (ಒಂದು ಲಕ್ಷ ರೂಪಾಯಿ) ಹಣವನ್ನು ಹಾಜರು
ಪಡಿಸುತ್ತೆನೆ ಅಂತಾ ತಿಳಿಸಿದ ಮೇರೆಗೆ, ಸದರಿ ಆರೋಪಿತನನ್ನು ಸದರಿ ಹಣವನ್ನು ಹಾಜರುಪಡಿಸಲು ತಿಳಿಸಿದ ಮೇರೆಗೆ, ಸದರಿ ಆರೋಪಿತನು ನನ್ನ ಜೋತೆಗೆ
ಬನ್ನಿ ಅಂತಾ ಹೇಳಿ ಬಸವೇಶ್ವರ ಸರ್ಕಲದಿಂದ ನಮ್ಮನ್ನು ಕರೆದುಕೊಂಡು ನಮ್ಮ ಮುಂದೆ ಮುಂದೆ ಹೊರಟನು, ನಾವೆಲ್ಲರು ಅವನ ಹಿಂದಿನಿಂದ
ಹೊರಟೇವು. ಸದರಿ ಆರೋಪಿತನಾದ ಜಗನ್ನಾಥ ಈತನು ಸ್ವಲ್ಪ ದೂರು ಕರೆದುಕೊಂಡು ಹೋಗಿ ದೂರಿನಿಂದ ಮುಂದೆ
ಕಾಣುತ್ತಿರುವುದೆ ನಮ್ಮ ಮನೆ, ನಮ್ಮ ಮನೆಯ
ಮುಂದೆ ಬೋರವೇಲ್ ಹತ್ತಿರ ಕುಳಿತಕೊಂಡು ಮಟಕಾ ಬರೆದುಕೊಳ್ಳುತ್ತಿದ್ದವಳೆ ನಮ್ಮ ತಂಗಿ ಮಾಹಾದೇವಿ
ಇರುತ್ತಾಳೆ ಅಂತಾ ತಿಳಿಸಿದನು. ಆಗ ನಾವೆಲ್ಲರು ಸದರಿ ಮಹಿಳೆಯನ್ನು ನೋಡಲಾಗಿ, ಸದರಿ ಮಹಿಳಿಯೆ ಬೊರವೇಲ್
ಹತ್ತಿರ ಕುಳಿತುಕೊಂಡು ಹೋಗಿ ಬರುವ ಜನರಿಗೆ ಮತ್ತು ಹೊಲಗಳಿಗೆ ಹೋಗುವ ಜನರಿಗೆ ಕರೆದು, ಜನರನ್ನು ವಂಚಿಸುತ್ತಾ ಜನರಿಂದ
ಹಣ ಪಡೆಯುತ್ತಾ ಅಂಕಿ ಸಂಖ್ಯೆ ಬರೆದುಕೊಟ್ಟು ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಳು. ಸದರಿ
ಮಹಿಳೆಯ ಮೇಲೆ ದಾಳಿ ಮಾಡಿ ಹಿಡಿದು ಸದರಿಯವಳ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಾಹಾದೇವಿ
ತಂದೆ ಹಣಮಂತ ಲೋಣಾರ ಸಾ: ಕರಜಗಿ ಅಂತಾ
ತಿಳಿಸಿದಳು. ಸದರಿ ಮಹಿಳೆಯನ್ನು ವಿಚಾರಣೆಗೊಳಪಡಿಸಿ, ಸದರಿಯವಳ ಸ್ವ ಖುಷಿ ಹೇಳಿಕೆ ಪಡೆದುಕೊಂಡಿದ್ದು, ಸದರಿಯವಳು ನಾನು ಸುಮಾರು ದಿನಗಳಿಂದ ಮಟಕಾ ಬರೆದುಕೊಳ್ಳುತ್ತೆನೆ, ನಾನು ದಿನಾಲು ನಮ್ಮ ಮನೆಯ
ಮುಂದೆ ಕುಳಿತುಕೊಂಡು, ಹೊಲಕ್ಕೆ ಹೋಗಿ
ಬರುವ ಜನರಿಗೆ ಮತ್ತು ನಮ್ಮ ಮನೆಯ ಮುಂದೆ ತಿರುಗಾಡುವ ಜನರಿಗೆ ಕರೆದು ನಂಬಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ
ಬರೆದುಕೊಟ್ಟು ಮಟಕಾ ಬರೆದುಕೊಳ್ಳುತ್ತೆನೆ, ಹಾಗೂ ನನ್ನ ಅಣ್ಣ ಜಗನ್ನಾಥ ಈತನು ನಮ್ಮ ಊರಿನಲ್ಲಿ ಜನಸಂದಣಿ ಏರಿಯಾಗಳಲ್ಲಿ ತಿರುಗಾಡಿ ಹಾಗೂ
ನಿಂತುಕೊಂಡು ಅವನು ಸಹ ಜನರನ್ನು ನಂಬಿಸಿ ಜನರಿಂದ ಹಣ ಪಡೆದು, ಜನರನ್ನು ವಂಚಿಸಿ ಮೊಸದಿಂದ ಮಟಕಾ ಬರೆದುಕೊಳ್ಳುತ್ತಾನೆ, ನಾನು ಜನರು ಬರೆಸಿದ ಮಟಕಾ ಹಣದಲ್ಲಿ 50,000/- ರೂ (ಐವತ್ತು ಸಾವಿರ ರೂಪಾಯಿ) ಹಣವನ್ನು ನಮ್ಮ
ಮನೆಯಲ್ಲಿ ಮುಚ್ಚಿ ಇಟ್ಟಿರುತ್ತೆನೆ ಅಂತಾ ತಿಳಿಸಿದಳು. ಮತ್ತು ನಾನು ಈಗಾಗಲೆ ಜನರಿಂದ ಹಣ ಪಡೆದು
ಮಟಕಾ ಬರೆದುಕೊಂಡ ಹಣದಲ್ಲಿ 50,000/- ಹಣವನ್ನು ಮನೆಯಲ್ಲಿಟ್ಟಿದ್ದು, ತಾವುಗಳು ನನ್ನ ಜೋತೆಗೆ ನಮ್ಮ ಮನೆಯಲ್ಲಿ ಬಂದಲ್ಲಿ ಸದರಿ 50,000/- ರೂ (ಐವತ್ತು ಸಾವಿರ ರೂಪಾಯಿ) ಹಣವನ್ನು ತೋರಿಸಿ
ಹಾಜರುಪಡಿಸುತ್ತೆನೆ ಅಂತಾ ತನ್ನ ಸ್ವ ಖುಷಿ ಹೇಳಿಕೆ ನೀಡಿದಳು. ನಂತರ ಸದರಿಯವಳನ್ನು ದಸ್ತಗಿರಿ
ಮಾಡಿ, ಮ.ಹೆಚ್.ಸಿ
ರವರಿಂದ ಚೆಕ್ ಮಾಡಿಸಲಾಗಿ ಸದರಿಯವಳ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ, 6360/- ರೂ ನಗದು ಹಣ ಮತ್ತು
ಒಂದು ಪೆನ್ನ ಹಾಗೂ ಒಂದು ಮಟಕಾ ಚೀಟಿ ದೋರೆತವು. ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತ
ಮಾಡಿಕೊಂಡು, ಸದರಿ ಆರೋಪಿತಳನ್ನು ವಶಕ್ಕೆ ಪಡೆದುಕೊಂಡೆವು. ಸದರಿ
ಆರೋಪಿತರಿಂದ 1) ಒಟ್ಟು 1,92,460/- ರೂ (ಒಂದು ಲಕ್ಷ ತೊಂಬತ್ತೇರಡು ಸಾವಿರದ ನಾಲ್ಕು
ನೂರಾ ಅರವತ್ತು ರೂಪಾಯಿ) ಗಳನ್ನು 2) 1 ಅಂಕಿ ಸಂಖ್ಯೆ ಬರೆದ ಮಟಕಾ ನೋಟ ಬುಕ್, 3) ಒಂದು ಅಂಕಿ ಸಂಖ್ಯೆ ಬರೆದ
ಮಟಕಾ ಚೀಟಿ 4) ಒಂದು ಕಾರಬನ್ ಕೆ9 ಕಂಪನಿಯ ಮೋಬೈಲ ಪೋನ್ ಅಕಿ-1000/- ರೂ 5) 2 ಪೆನ್ನಗಳನ್ನು
ವಶಪಡಿಸಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ ಪ್ರಕರಣ :
ಚಿತ್ತಾಪೂರ ಠಾಣೆ : ದಿನಾಂಕ 25-06-2015 ರಂದು ಸಾಯಾಂಕಾಲ ಶ್ರೀನಿವಾಸ ಬಾರ ಹತ್ತಿರ
ಅಣ್ಣಪ್ಪ ಗುತ್ತೆದಾರ ಇವನು ನಿಂತಿದ್ದನ್ನು ನೋಡಿ
ಶ್ರೀ ಕುಮಾರ ತಂದೆ ದೇವುಜಿ ಚವ್ಹಾನ ಸಾ : ಮೊಗಲಾ ತಾಂಡಾ ತಾ : ಚಿತ್ತಾಪೂರ ರವರು ತನಗೆ ಕೊಡಬೇಕಾದ 1000/- ರೂ
ಸಾಲದ ಹಣವನ್ನು ಕೇಳಲು ತನ್ನ ಅಣ್ಣನೊಂದಿಗೆ ಹೋದಾಗ ಸದರಿ ಅಣ್ಣಪ್ಪನು ನಿಮ್ಮ ಯಾವ ಸಾಲ ಕೊಡುವುದಿದೆ ಲಮಾಣಿ ಭೋಸಡಿ ಮಕ್ಕಳೆ ಅಂತ ಜಾತಿ ಎತ್ತಿ ಅವಾಚ್ಯವಾಗಿ ಬೈದು ತನ್ನ
ಕೈಯಲ್ಲಿದ್ದ ಬ್ಲೇಡನಿಂದ ಕುತ್ತಿಗೆಯ ಎಡಬಾಗಕ್ಕೆ ಹೊಡೆದು ಭಾರಿ ರಕ್ತಗಾಯ ಮಾಡಿರುತ್ತಾನೆ. ಕೊಲೆ
ಮಾಡುವ ಉದ್ದೇಶದಿಂದ ಬ್ಲೇಡನಿಂದ ಹೊಡೆದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ಮೃತಪಟ್ಟ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 25.06.2015 ರಂದು ಮದ್ಯಾನ 1.00 ಗಂಟೆಯ ಸುಮಾರಿಗೆ ಮದರಿ ಸೀಮಾಂತರ ನಮ್ಮ ಹೊಲದಲ್ಲಿ ನನ್ನ ಗಂಡ ಮಲ್ಲಪ್ಪ ಗಡೆದಾರ ಕಸ ತೆಗಯುತ್ತಿದ್ದಾಗ ಕಸ ಗುಂಪಿಯಲ್ಲಿನ ವಿಷಪೂರಿತ ಹಾವು ಆಕಸ್ಮಿಕವಾಗಿ ಅವನ ಬಲಕೈ ಕಿರುಬೆರಳಿಗೆ ಕಚ್ಚಿದ್ದು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಜೇವರಗಿಗೆ ತೆಗದುಕೊಂಡು ಹೊಗುವಾಗ ಮಾರ್ಗ ಮದ್ಯದಲ್ಲಿ ಮದ್ಯಾಹ್ನ ಹಾವು ಕಚ್ಚಿದ ವಿಷದ ಬಾದೆಯಿಂದ ಮೃತಪಟ್ಟಿರುತ್ತಾನೆ ಘಟನೆ ಆಕಸ್ಮಿಕವಾಗಿ ಆಗಿರುತ್ತದೆ ಅಂತಾ ಶ್ರೀಮತಿ ಭಾಗಮ್ಮ ಗಂಡ ಮಲ್ಲಪ್ಪ ಗಡೆದಾರ ಸಾಃ ಮದರಿ ತಾಃ ಜೇವರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment