ಕಿರುಕಳ ನೀಡಿದ ಪ್ರಕರಣ :
ನಿಂಬರ್ಗಾ
ಠಾಣೆ : ಶ್ರೀ
ಶಿವಶರಣಪ್ಪ ತಂದೆ ರುಕ್ಮಣಪ್ಪ ಜಡಗೆನವರ ಸಾ||
ಸೀತನೂರ, ಇವರ
ಮಗಳಿಗೆ ಆಳಂದ ತಾಲೂಕಿನ ಬೊಮ್ಮನಳ್ಳಿ ಗ್ರಾಮದ ನಿಂಗಣ್ಣಾನೊಂದಿಗೆ ಸುಮಾರು 1 ವರ್ಷದ ಹಿಂದೆ
ಮದುವೆ ಮಾಡಿ ಕೊಟ್ಟಿದ್ದು ನಿಂಗಣ್ಣ,
ಅವರ ತಾಯಿ ಜಾಜಮ್ಮ, ಅವರ ಭಾವ ಮೈದುನರಾದ ಮಾಳಪ್ಪ ಮತ್ತು
ಬೀರಪ್ಪ ಇವರು ನಮ್ಮ ಮಗಳಿಗೆ ನೀನು ನಮ್ಮ ಮನೆತನಕ್ಕೆ ಹೊಂದಿಕೆ ಆಗುವದಿಲ್ಲ, ನೀನು ನೋಡಲು ಸರಿಯಾಗಿಲ್ಲ,
ಅಡುಗೆ ಮಾಡುವದಕ್ಕೆ ಬರೊದಿಲ್ಲ ಅಂತ ದಿನಾಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ.
ಈಗ ಸುಮಾರು 20 ದಿವಸಗಳ ಹಿಂದೆ ನಮ್ಮ ಮನೆಯಲ್ಲಿ ದೇವರ ಮಾಡುವ ಕಾರ್ಯಕ್ರಮ ಇರುವದರಿಂದ ನಮ್ಮ ಮಗಳನ್ನು
ನಮ್ಮ ಊರಿಗೆ ಕರೆದುಕೊಂಡು ಬಂದಿದ್ದು, ಆಗ
ನಮ್ಮ ಮಗಳು ತನಗೆ ತನ್ನ ಗಂಡ ಅತ್ತೆ ಎಲ್ಲರೊ ಸೇರಿ ನೀನು ನಮ್ಮ ಮನೆತನಕ್ಕೆ ಹೊಂದಿಕೆ ಆಗುವದಿಲ್ಲ, ನೀನು ನೋಡಲು ಸರಿಯಾಗಿಲ್ಲ,
ಅಡುಗೆ ಮಾಡುವದಕ್ಕೆ ಬರೊದಿಲ್ಲ ಅಂತ ದಿನಾಲು ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕವಾಗಿ ಮತ್ತು
ದೈಹಿಕವಾಗಿ ಕಿರುಕುಳ ಕೊಡುತ್ತಿರುವ ಬಗ್ಗೆ ತಿಳಿಸಿದ್ದು. ದಿ 22/06/2015 ರಂದು ನಮ್ಮ ಅಳಿಯ
ನಿಂಗಣ್ಣನು ನಮ್ಮೂರಿಗೆ ಬಂದಾಗ ಅವನಿಗೂ ಕೂಡ ನಮ್ಮ ಮಗಳಿಗೆ ತೊಂದರೆ ಕೊಡಬೇಡ ಚೆನ್ನಾಗಿ ನೋಡಿಕೊ
ಅಂತ ತಿಳಿ ಹೇಳಿ ಅವನ ಜೊತೆ ನನ್ನ ಮಗಳನ್ನು ಕೊಟ್ಟು ಕಳಿಸಿ ಕೊಟ್ಟಿದ್ದು. ದಿ 24/06/2014 ರಂದು ಸಾಯಂಕಾಲ ನಮ್ಮ ಅಣ್ಣತಮ್ಮಕೀಯ ಶರಣಪ್ಪ
ಇವರು ಫೋನ ಮಾಡಿ ನಮ್ಮ ಮಗಳು ಹೊಲದಲ್ಲಿ ವಿಷ ಸೇವನೆ ಮಾಡಿದ ಬಗ್ಗೆ ತಿಳಿಸಿದ್ದು. ಆಗ ನಾವು ಬಮ್ಮನಳ್ಳಿ
ಗ್ರಾಮಕ್ಕೆ ಬಂದು ವಿಚಾರಿಸಲಾಗಿ ಗ್ರಾಮದ ಕುರಕೋಟಿ ಇವರ ಹೊಲದಲ್ಲಿ ನಮ್ಮ ಮಗಳು ಅವಳ ಗಂಡ ಮತ್ತು
ಅತ್ತೆ ಇತರರ ಕಿರುಕುಳದಿಂದ ವಿಷ ಸೇವಿಸಿ ಮೃತಪಟ್ಟಿರುತ್ತಾಳೆ
ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ. ಹಣದ ಆಮಿಷ ಒಡ್ಡಿ ಬಾಲ್ಯ ವಿವಾಹವಾದ ಪ್ರಕರಣ
ಗ್ರಾಮೀಣ ಠಾಣೆ : ದಿನಾಂಕ. 24-6-2015 ರಂದು
ಪಾಳಾ ಗ್ರಾಮದಲ್ಲಿ ಬಾಲ್ಯ ವಿವಾಹ ಆದ
ಬಾಲಕಿ ಮತ್ತು ಮದುವೆಯಾದ ವ್ಯಕ್ತಿ ಮತ್ತು ಸಮ್ಮಂದಿಕರು ಇರುವ ಬಗ್ಗೆ ಮಾಹಿತಿ ತಿಳಿದು ಶ್ರೀ
ತಿಪ್ಪಣ್ಣ ತಂದೆ
ಪೀರಪ್ಪಾ ಸಿರಸಗಿ ಉ;ಸಿ.ಡಿ.ಪಿ.ಓ.ಕಲಬುರಗಿ ಸಾ; ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು (ಸಿ.ಡಿ.ಪಿ.ಓ)
ಕಲಬುರಗಿ ಮತ್ತು ಸಿಬ್ಬಂದಿ ಶಿವಲೀಲಾ .ಬಿ.ಕೆ. ಅಂಗನವಾಡಿ
ಮೇಲ್ವೀಚಾರಕರು ,ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಯವರಾದ ಬಸವರಾಜ ಟೆಂಗಳಿ ಜಿಲ್ಲಾ ಸಂಯೋಜಕರು ,
ಮಲ್ಲಪ್ಪಾ ರಾಜೂರ ಕೇಂದ್ರ ಸಂಯೋಜರು ,
ಜ್ಯೋತಿ ಎಸ್.ಕೆ. ಆಪ್ತ ಸಮಾಲೋಚಕರು ,ಸುಧಾ.ಪಿ.
ತಂಡದ ಸದಸ್ಯರು , ಕಲಬುರಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾನೂನು ಪರೀವಿಕ್ಷಣಾಧಿಕಾರಿ ಶ್ರೀ.
ಭರತೇಶ ಶೀಲವಂತರ ಹಾಗೂ ಶ್ರೀಮತಿ ಮಂಜುಳ ರೆಡ್ಡಿ ರಕ್ಷಣಾಧಿಕಾರಿಗಳು ಎಲ್ಲರೂ ಕೂಡಿಕೊಂಡು ಪಾಳಾ ಗ್ರಾಮಕ್ಕೆ ಹೋಗಿ ಶ್ರೀಮಂತ ತಳವಾರ ಇವರ ಮನೆಯ ಮೇಲೆ ದಾಳಿ ಮಾಡಲಾಗಿ ಮನೆಯಲ್ಲಿ ಒಬ್ಬ ಅಪ್ರಾಪ್ತ ಬಾಲಕಿ ಮದುವೆಯಾದವಳು ಇದ್ದು. ಮನೆಯವರೆಲ್ಲರನ್ನು ಕರೆದು ವಿಚಾರಣೆ ಮಾಡಲಾಗಿ ಮದುವೆಯಾದ
ಅಪ್ರಾಪ್ತ ಬಾಲಕಿಯ ಹೆಸರು ಕುಮಾರಿ ವಯಸ್ಸು 13 ವರ್ಷ ತನ್ನ
ತಾಯಿ ಲಕ್ಷ್ಮೀ ಗಂಡ ದೇವು ಕಬ್ಬಲಿಗೇರ , ಮತ್ತು ಶ್ರೀಮಂತ ತಳವಾರ ಪಾಳಾ ಗ್ರಾಮ ಇವರಿಬ್ಬರೂ ಹಣದ ಆಮಿಶಕ್ಕಾಗಿ ರಾಜಸ್ಥಾನ ಮೂಲದ
ವಿಜಯಸಿಂಗ, ಸುನೀಲ್ ಹಾಗೂ ಹೇಮರಾಜ ಇವರಿಂದ ರೂ 25,000/- ಗಳನ್ನು
ಪಡೆದಕೊಂಡು. ದಿನಾಂಕ. 9-6-2015 ರಂದು ನನಗೆ ವಿಜಯಸಿಂಗನೊಂದಿಗೆ ಮದುವೆ ಮಾಡುವದಾಗಿ ಪುಸಲಾಯಿಸಿ
ಜಬರದಸ್ತಿಯಿಂದ ಇಂಡಸ್ಟ್ರೀಯಲ್ ಏರಿಯಾದ ಬಸವಣ್ಣ
ಗುಡಿಯ ಹತ್ತಿರ ಜಬರದಸ್ತಯಿಂದ ಮದುವೆ ಮಾಡಿದ್ದು ನಂತರ ಇವರೆಲ್ಲರೂ ಕೂಡಿಕೊಂಡು ನನಗೆ ಪಾಳಾ
ಗ್ರಾಮಕ್ಕೆ ಕರೆದುಕೊಂಡು ಬಂದು ಶ್ರೀಮಂತ ತಳವಾರ ಇವರ ಮನೆಯಲ್ಲಿ ಉಳಿದುಕೊಂಡಿದ್ದು ಇವರ ಮನೆಯಲ್ಲಿ ರಾತ್ರಿವೇಳೆಯಲ್ಲಿ ವಿಜಯಸಿಂಗನ್ನು
ನನಗೆ ಜಬರದಸ್ತಿಯಿಂದ ಸಂಬೋಗ ಮಾಡಿರುತ್ತಾನೆ
ಅಂತಾ ತಿಳಿಸಿದಳು ನಂತರ ಮತ್ತು ಮದುವೆಯಾದ ವ್ಯಕ್ತಿಯನ್ನು ವಿಚಾರಿಸಲು ತನ್ನ ಹೆಸರು
ವಿಜಯಸಿಂಗ ಸಾ:ರಾಜಸ್ಥಾನ ಎಂದು ಹೇಳಿದ್ದು
ವಿಜಯಸಿಂಗನ ಸಹೋದರರಾದ ಸುನೀಲ್ ಮತ್ತು ಹೇಮರಾಜ ಇವರನ್ನು ವಿಚಾರಿಸಲು ದಿನಾಂಕ. 9-6-2015
ರಂದು ವಿಜಯಸಿಂಗನ ಮದುವೆಯು ಕುಮಾರಿ ವಯ;13 ವರ್ಷ
ಇವಳೊಂದಿಗೆ ಮದುವೆ ಮಾಡಿದ್ದು
ದಿನಾಂಕ.25-6-2015 ರಂದು ಪಾಳಾ ಗ್ರಾಮದಲ್ಲಿ
ಜಗದೇವಿ @ ಅಂಬಿಕಾ ವಯ;16 ಸಾ:
ದಂಡಗುಂಡ ಇವಳೊಂದಿಗೆ ಮಾಡುವ ಕುರಿತು ಪಾಳದಲ್ಲಿ ಎಲ್ಲರೂ ಉಳಿದುಕೊಂಡಿರುವದಾಗಿ ತಿಳಿಸಿದರು.ಆದುದರಿಂದ
ಈ ಮೇಲೆ ನಮೂದ ಶ್ರೀಮಂತ ತಳವಾರ ಸಾ;ಪಾಳಾ , ಲಕ್ಷ್ಮೀ ಗಂಡ ದೇವು ಕಬ್ಬಲಿಗೇರ ಸಾ;ಇಂಡಸ್ಟ್ರೀಯಲ್
ಏರಿಯಾ ಕಪನೂರ ,ಇವರು ಅಪ್ರಾಪ್ರ ಬಾಲಕಿಯನ್ನು ಮದುವೆ ಮಾಡುವದು ಕಾನೂನು ಬಾಹಿರವಾದದು ಅಂತಾ
ಗೊತ್ತಾಗಿದ್ದರೂ ಕೂಡಾ ಹಣದ ಆಮಿಶಕ್ಕಾಗಿ ರಾಜಸ್ಥಾನ ಮೂಲದ ವಿಜಯಸಿಂಗ, ಸುನೀಲ್ ಹಾಗೂ ಹೇಮರಾಜ ಇವರಿಂದ 25,000/- ರೂ. ತೆಗೆದುಕೊಂಡು ವಿಜಯಸಿಂಗನೊಂದಿಗೆ ಬಾಲ್ಯ ವಿವಾಹ
ಮಾಡಿದ್ದು , ಅಲ್ಲದೆ ರಾಜಸ್ಥಾನ ಮೂಲದ ವಿಜಯಸಿಂಗ,
ಸುನೀಲ್ ಹಾಗೂ ಹೇಮರಾಜ ಇವರು ಮದುವೆ ಮಾಡಿಕೊಳ್ಳುವದಾಗಿ ಪುಸಲಾಯಿಸಿ ಜಬರದಸ್ತಿಯಿಂದ
ಅಪಹರಿಸಿಕೊಂಡು ಹೋಗಿ ವಿವಾಹ ಮಾಡಿಕೊಂಡು ಪಾಳಾ ಗ್ರಾಮದ ಶ್ರೀಮಂತ ತಳವಾರ ಇವರ ಮನೆಯಲ್ಲಿ ವಿಜಯಸಿಂಗನು ಜಬರದಸ್ತಿಯಿಂದ ಸಂಬೋಗ ಮಾಡಿದ್ದು ಇವರ ವಿರುದ್ದ ಕ್ರಮ
ಕೈಕೊಳ್ಳುವಂತೆ ಶ್ರೀ ತಿಪ್ಪಣ್ಣ ತಂದೆ ಪೀರಪ್ಪಾ ಸಿರಸಗಿ ಸಿ.ಡಿ.ಪಿ.ಓ.ಕಲಬುರಗಿರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ: ದಿನಾಂಕ 24/06/2015 ರಂದು ಬೆಳಿಗ್ಗೆ ಶ್ರೀ ಸುಭಾಷ ತಂದೆ ಯಲ್ಲಪ್ಪ ಮಕ್ಕಳಕರ್ ಸಾ|| ಕಪಾಡಗಲ್ಲಿ
ಶಹಬಜಾರ ಕಲಬುರಗಿ ರವರು ಶಹಬಜಾರದ ಮಂಗಮ್ಮನ ಗುಡಿಯ ಹತ್ತಿರ ಕುಳಿತುಕೊಂಡಾಗ
ನಮ್ಮ ಓಣಿಯ ದೇವಾನಂದ ತಂದೆ
ಕಾಂತಪ್ಪ ಮಂಜೂಳಕರ ಇತನು ನನ್ನ ಹತ್ತಿರ ಬಂದು ತಿಳಿಸಿದ್ದೇನೆಂದರೆ, ನಿಮ್ಮ ತಂದೆಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆಗೆ ಸೇರಿಕೆ ಮಾಡಿರುವ
ವಿಷಯ ನನಗೆ ಗೋತ್ತಾಗಿ ನಾನು ಯುನೈಟೆಡ್ ಆಸ್ಪತ್ರೆಗೆ ಹೋಗಿ ನೋಡಲಾಗಿ ನಿಮ್ಮ ತಂದೆ ಯಲ್ಲಪ್ಪ ವರಿಗೆ
ಮೊಳಕಾಲಿಗೆ ಹಾಗೂ ಕೈ ಬೆರಳಿಗೆ ರಕ್ತಗಾಯ & ತರಚಿದ ಗಾಯವಾಗಿದ್ದು
ಅವರು ಮಾತನಾಡಲಿಲ್ಲ, ಅಲ್ಲಿಯೇ ಇನ್ನೊಂದು ಬೆಡ್ ಮೇಲೆ ಒಬ್ಬನು ಗಾಯಗೊಂಡಿದ್ದು
ಆತನು, ಆತನ ಜೊತೆಯಲ್ಲಿರುವ ನ್ನೋಬ್ಬ ವ್ಯಕ್ತಿ ಇದ್ದು ಅವರು ತಿಳಿಸಿದ್ದೇನೆಂದರೆ,
ನಿನ್ನೆ ದಿನಾಂಕ|| 23/06/2015 ರಂದು ಯಲ್ಲಪ್ಪ ತಂದೆ ನಾಗಪ್ಪ ಮಕ್ಕಳಕರ್ ಸಾ|| ಕಪಾಡಗಲ್ಲಿ
ಶಹಬಾಜರ ಕಲಬುರಗಿ ರವರು ಸ್ಟೇಶನ ಗಾಣಗಾಪೂರ ಕ್ರಾಸನ ಟೋಲ್ ನಾಕಾ ಹತ್ತಿರದ ಪೆಟ್ರೋಲ್ ಪಂಪದ ಹತ್ತಿರ ರಸ್ತೆ ದಾಟುತ್ತಿರುವಾಗ ಸ್ಟೇಶನ ಗಾಣಗಾಪೂರ ಕಡೆಯಿಂದ ಬರುತ್ತಿದ್ದ ಇನ್ನೂ ನಂಬರ ಬೀಳದ ಸಿಲವರ್ ಬಣ್ಣದ
ಹೊಸ ಹಿರೋ ಸ್ಪ್ಲೇಂಡರ್
ವಾಹನವನ್ನು ದಸ್ತಪ್ಪ ತಂದೆ ತಿಪ್ಪಣ್ಣ ಜಮಾದಾರ ಸಾವಳಗಿ (ಬಿ) ಈತನು ಅತಿ ವೇಗದಿಂದ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ರಸ್ತೆ ದಾಟುತ್ತಿದ್ದ ಯಲ್ಲಪ್ಪ ತಂದೆ ನಾಗಪ್ಪ ರವರಿಗೆ ಅಪಘತಪಡಿಸಿದ್ದು ಅವರಿಗೆ ರಕ್ತ & ಗುಪ್ತಗಾಯಗೊಂಡು ಬೆಹೋಷ್ ಆಗಿದ್ದು ಬಸವರಾಜ ತೆಗನೂರ ಸಾ||
ಕುಸನೂರ ಇವರ ಈ ಮೋಟಾರ್ ಸೈಕಲ್ ತೆಗೆದುಕೊಂಡು ನಾವು ಕೂಡ ಮಧ್ಯಾಹ್ನ ಅಪ್ಪಾ ಪೀರ
ದರ್ಗಾಕ್ಕೆ ಹೋಗಿ ಮರಳಿ ಬರುವಾಗ ಮೋಟಾರ್ ಸೈಕಲನ್ನು ಇತನು ನಡೆಸಿಕೊಂಡು ಬರುವಾಗ ಅಜ್ಜನೂ ರೋಡ ದಾಟಬೇಕು ಎನ್ನುವಾಗ ಮೋಟಾರ್
ಸೈಕಲ್ ಆಕಡೆ ಈ ಕಡೆಗೆ ಮಾಡುತ್ತಾ ಬರುವಾಗ ಅಜ್ಜನಿಗೆ ಅಪಘಾತ ಪಡಿಸಿದ್ದರಿಂದ ಅಲ್ಲದೇ ದಪ್ಪನಿಗೂ ಕೂಡಾ
ಗಾಯವಾಗಿದ್ದು ಮುಂದೆ ಯಾವುದೋ ಒಂದು ವಾಹನದಲ್ಲಿ ಬರಬೇಕೆಂದರೆ, ತಡವಾಗಿದ್ದಕ್ಕೆ
ಈಗ ಮುಂಜಾನೆ ಪುನಃ ವಿಚಾರಣೆ ಮಾಡಿಕೊಂಡು ಬಂದಿದ್ದು, ರಾತ್ರಿಯೇ ನಿಮ್ಮ
ತಂದೆಗೆ ಯುನೈಟೆಡ್ ಆಸ್ಪತ್ರೆಯವರ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇಂದು ಬೆಳಿಗ್ಗೆ
ಮೃತ ಪಟ್ಟಿರುತ್ತಾರೆ. ಅಂತಾ ತಿಳಿಸಿದ್ದಕ್ಕೆ ಕೂಡಲೇ ನಾನು,
ದೇವಾನಂದ ಮಂಜೂಳಕರ್ ನನ್ನ ತಮ್ಮ ರವಿ ತಂದೆ ಮಲ್ಲಿಕಾರ್ಜುನ , ಮರೇಪ್ಪಾ ತಂದೆ ತುಳಜರಾಮ ಎಲ್ಲರೂ ಕೂಡಿ ಬೆಳಿಗ್ಗೆ 10:45 ಗಂಟೆ ಸುಮಾರಿಗೆ ಸರ್ಕಾರಿ ಆಸ್ಪತ್ರೆಗೆ ಬಂದು ಶವಗಾರದ ಕೋಣೆಯಲ್ಲಿರುವ ಶವವನ್ನು ನೋಡಲಾಗಿ
ನನ್ನ ತಂದೆ ಯಲ್ಲಪ್ಪನದೇ ಇದ್ದು ಗುರುತಿಸಿರುತ್ತೇನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ
ಠಾಣೆ : ದಿನಾಂಕ 24-06-2015 ರಂದು ಕರಜಗಿ ಗ್ರಾಮದಲ್ಲಿ ಐ ಬಿ
ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ
80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ
ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ
ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ
ಮತ್ತು ಪಂಚರೊಂದಿಗೆ ಕರಜಗಿ ಗ್ರಾಮಕ್ಕೆ ಹೋಗಿ, ಕರಜಗಿ ಗ್ರಾಮದ ಐಬಿ ದಿಂದ ಸ್ವಲ್ಪ ದೂರು ಮರೆಯಾಗಿ
ನಿಂತು ನೋಡಲು, ಐಬಿ ಮುಂದುಗಡೆಯಿದ್ದ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ
ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ
ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮೋಸದಿಂದ ಮಟಕಾ
ಬರೆದುಕೊಳ್ಳುತ್ತಿದ್ದನು. ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ
ವಿಚಾರಿಸಲಾಗಿ ಶಿವಾಜಿ ತಂದೆ ನರಸಪ್ಪ ನಿಲೇಗಾಂವ ಸಾ: ಕರಜಗಿ ಅಂತಾ ತಿಳಿಸಿದ್ದು,
ಸದರಿಯವನನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿ, ಯಾರಿಗೆ ಕೊಡುತ್ತಿ ಎಂಬುದರ ಬಗ್ಗೆ
ವಿಚಾರಿಸಿದ್ದು, ಸದರಿ ವ್ಯಕ್ತಿ ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು, ಬರೆದುಕೊಂಡ
ಮಟಕಾ ಚೀಟಿಗಳನ್ನು ಮತ್ತು ಹಣವನ್ನು ಇಟ್ಟುಕೊಂಡಿರುತ್ತೆನೆ. ನಾಗಣಸೂರ ಗ್ರಾಮದ ಇಸ್ಮಾಯಿಲ ತಂದೆ
ಇಬ್ರಾಹಿಮ ಶೇಖ ಸಾ: ನಾಗಣಸೂರ ಈತನು 2 ದಿನಗಳಿಗೊಮ್ಮೆ ನಮ್ಮ ಗ್ರಾಮಕ್ಕೆ ಬಂದು ನಾನು ಬರೆದುಕೊಂಡ
ಮಟಕಾ ಚೀಟಿಗಳನ್ನು ಮತ್ತು ಹಣವನ್ನು ತಗೆದುಕೊಂಡು ಹೋಗುತ್ತಾನೆ, ನಾನು ಬರೆದುಕೊಂಡ ಮಟಕಾವನ್ನು ಇಸ್ಮಾಯಿಲ
ತಂದೆ ಇಬ್ರಾಹಿಮ್ ಶೇಖ ಸಾ: ನಾಗಣಸೂರ ತಾ: ಅಕ್ಕಲಕೋಟ ಈತನಿಗೆ ಕೊಡುತ್ತೆನೆ ಅಂತಾ ತಿಳಿಸಿದ್ದು ಸದರಿಯವನ
ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 850/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ
ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ
ಬಂದು ಪ್ರಕರಣ ದಾಖಲಿಸಲಾಗಿದೆ.
ಚೌಕ ಠಾಣೆ : ದಿನಾಂಕ: 24.06.2015 ರಂದು ಪ್ರಕಾಶ ಟಾಕೀಜ
ಹತ್ತಿರದ ಸೀಟಿ ವೈನಶಾಪ್ ಎದುರುಗಡೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1
ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು
ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಹಸೇನ ಬಾಷಾ ಪಿ.ಎಸ್.ಐ
(ಕಾ.ಸು) ಚೌಕ ಪೊಲೀಸ್ ಠಾಣೆ ಕಲಬುರಗಿ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಡಿ.ಎಸ್.ಪಿ (ಬಿ) ಉಪ ವಿಭಾಗ ಇವರ ಮಾರ್ಗದರ್ಶನದಂತೆ ನಮ್ಮ ಠಾಣೆಯ
ಪಿ.ಐ ಸಾಹೇಬರಾದ ಉಮಾಶಂಕರ ಬಿ. ರವರಿಗೆ ರವರ
ನೇತ್ರತ್ವದಲ್ಲಿ ಪ್ರಕಾಶ ಟಾಕೀಜ ಹತ್ತಿರದ ಗೋಡೆಯ
ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ
ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡೆಸಿಕೊಂಡು ದಾಳಿ
ಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಲಕ್ಷ್ಮಣ ತಂದೆ ಮಾರ್ಥಂಡರಾವ
ಅವದೂತ ಸಾ: ಮಾಹಾದೇವ ನಗರ ಶಹಾಬಜಾರ ಕಲಬುರಗಿ ಅಂತಾ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಜಪ್ತಿ
ಮಾಡಲಾಗಿ ಅವನ ಹತ್ತಿರ ನಗದು ಹಣ 3080/-ರೂಪಾಯಿ, ಒಂದು ಮಟಕಾ ಚೀಟಿ , ಒಂದು ಬಾಲಪೆನ್, ಒಂದು ಮೋಬೈಲ್ ಜಪ್ತಿಮಾಡಿಕೊಂಡು
ಸದರಿಯವನೊಂದಿಗೆ ಚೌಕ ಠಾಣೆಗೆ ಭಮದು ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ
ಸೇಡಂ ಠಾಣೆ : ದಿನಾಂಕ 23-06-2015
ರಂದು ಬೆಳ್ಳಿಗೆ 08-00 ಗಂಟೆಗೆ ನನ್ನ ಮಗನಾದ ಆಸೀಪ ತಂದೆ ಚಾಂದಪಾಶ್ಯಾ ಆಲಮಬ್ರದರ ಸಾಃ
ಕೊಲಕುಂದಾ ತಾಃ ಸೇಡಂ ಇತನು ನಮಗೆ ತಿಳಿಸಿದೆನೆಂದರೆ ನಾನು 10 ತರಗತಿ ಪಾಸ ಆಗಿದ್ದು ಮುಂದಿನ
ವಿದ್ಯಾಭ್ಯಾಸದ ಸಲುವಾಗಿ, ಸೇಡಂದ ವಿದ್ಯಾಮಂದಿರ ಶಾಲೆಗೆ ಹೋಗಿ ಟಿ.ಸಿ ತೆಗೆದುಕೊಂಡು ಬರುತ್ತೆನೆ ಮತ್ತು ನನ್ನ ಅಣ್ಣನ
ಗೆಳೆಯನಾದ ಮೌನೇಶ ಇತನಿಗೆ ಭೆಟಿಯಾಗಿ ವಾಪಸ ಮನೆಗೆ ಬರುತ್ತೇನೆ ಅಂತ ಹೇಳಿ ಹೋಗಿರುತ್ತಾನೆ.
ಸಂಜೆಯಾದರೂ ಮನೆಗೆ ಬರದ ಕಾರಣ ನಾವು ಗಾಬರಿಯಾಗಿ ಸೇಡಂಕ್ಕೆ ಬಂದು ಎಲ್ಲಾ ಕಡೆ ವಿಚಾರಿಸಿ
ತಿಳಿದುಕೊಂಡರು ಪತ್ತೆಯಾಗಿರುವದಿಲ್ಲ. ಮೌನೇಶ ಇತನಿಗೆ ವಿಚಾರಿಸಲಾಗಿ ಅವನು ತಿಳಿಸಿದೆನೆಂದರೆ.
ನಿಮ್ಮ ಮಗ ನಿನ್ನೆ ದಿನಾಂಕ 23-06-2015 ರಂದು 11-00 ಎ,ಎಮ್,ಕ್ಕೆ ನನ್ನ ಹತ್ತಿರ
ಬಂದು ಮಾತಾಡಿ ಕಲ್ಬುರ್ಗಿಗೆ ಹೊಗುತ್ತೇನೆ ಅಂತ ಸೇಡಂದಿಂದ ಹೋಗಿರುತ್ತಾನೆ ಅಂತ ತಿಳಿಸಿದನು.
ನನ್ನ ಮಗನ ಪೋನ ನಂ 8197074702 ನೇದಕ್ಕೆ ಕರೆ ಮಾಡಿದಾಗ ಪೋನ ಸ್ವಚ್ ಆಪ್ ಆಗಿರುತ್ತದೆ. ನನ್ನ
ಮಗನು ಯಾವತ್ತು ಮನೆಯಿಂದ ಹೊರೆಗಡೆ ಹೊದವನಲ್ಲ ಈ ರೀತಿ ಹೇಳದೆ ಕೆಳದೆ ಹೋಗಿರುವುದು ನೋಡಿದರೆ ನನ್ನ ಮಗನಿಗೆ ಯಾರೋ ಅಪಹರಣ
ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಚಾಂದಪಾಶ್ಯಾ ತಂದೆ ಮಹೀಬೂಬ ಅಲಿ ಆಲಮಬ್ರದರ ಸಾಃ
ಕೊಲಕುಂದಾ ತಾಃ ಸೇಡಂ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ
08-08-2014 ರಂದು ನಮ್ಮ
APMC ಇಂಚಾರ್ಜ ಸೆಕರೇಟ್ರಿಯಾದ ಮಹಾಂತಪ್ಪ ಕೋಡಿ ರವರಿಗೆ ನಾನು ತಿರುಪತಿ ದೇವರ ದರ್ಶನ ಸಲುವಾಗಿ ಹೋಗಿ ಬರುತ್ತೇನೆ ಅಂತಾ ಹೇಳಿ ನಮ್ಮ ಕುಟುಂಬದೊಂದಿಗೆ ಹೋಗಿರುತ್ತೇನೆ. ನಂತರ ದಿನಾಂಕ 13-08-2014 ರಂದು ಮರಳಿ ಕರ್ತವ್ಯಕ್ಕೆ ಬಂದು ನೋಡಿದಾಗ ನಮ್ಮ APMC ಯ ವೇ ಬ್ರಿಡ್ಜ ಕೋಣೆಯ ಬಾಗಿಲ ತೆಗೆದಿತ್ತು, ನಂತರ ನಾನು ಒಳಗೆ ಹೋಗಿ ನೋಡಿದಾಗ ಒಳಗಡೆ ಇದ್ದ ಕಂಪ್ಯೂಟರ ಮತ್ತು ಅದರ ಪೀಟೋಪಕರಣ ಹಾಗು ಇನವರ್ಟರ ಬ್ಯಾಟ್ರಿ ಇರಲಿಲ್ಲಾ, ನಂತರ ಈ ವಿಷಯವನ್ನು APMC ಇಂಚಾರ್ಜ ಸೆಕರೇಟ್ರಿಯಾದ ಮಹಾಂತಪ್ಪ ಕೋಡಿ ರವರಿಗೆ ಫೋನಿನಲ್ಲಿ ತಿಳಿಸಿದೆನು. ಸದರಿ ಕಂಪ್ಯೂಟರ ಮತ್ತು ಅದರ ಪೀಟೋಪಕರಣದ ಅಂದಾಜ ಕಿಮ್ಮತ್ತ 16,000/- ರೂ ಮತ್ತು ಇನವರ್ಟರ ಬ್ಯಾಟ್ರಿ ಅಂದಾಜ ಕಿಮ್ಮತ್ತ 6,000/- ರೂ ಇರಬಹುದು ಹೀಗೆ ಒಟ್ಟು 22,000/- ರೂ ಕಿಮ್ಮತ್ತಿನ ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ 12-08-2014 ರಂದು ರಾತ್ರಿ ವೇಳೆಯಲ್ಲಿ ವೇ ಬ್ರಿಡ್ಜ ಕೋಣೆಯ ಬಾಗಿಲ ಕೀಲಿ ಮುರಿದು ತೆಗೆದುಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಬಸವರಾಜ ತಂದೆ ಧೇನು ರಾಠೋಡ ಸಾ|| ಮಾದಾಬಾಳ ತಾಂಡಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment