POLICE BHAVAN KALABURAGI

POLICE BHAVAN KALABURAGI

27 June 2015

Kalaburagi District Reported Crimes

ಅಶೋಕ ನಗರ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿ ಜನರ ಕಾರ್ಯಾಚರಣೆ ನಗರದಲ್ಲಿ 9 ಮನೆ ಕಳ್ಳತನ ಮಾಡಿದ್ದ ಇಬ್ಬರು ಮನೆ ಕಳ್ಳರ ಬಂಧನ :
ಅಶೋಕ ನಗರ ಠಾಣೆ : ಅಶೋಕ ನಗರ ಪೊಲೀಸ ಠಾಣೆ ವ್ಯಾಪ್ತಿಯ ಸಾಯಿ ಮಂದಿರ ಹಿಂದುಗಡೆ ಸಂಗಮೇಶ್ವರ ನಗರ ಲೇಔಟದಲ್ಲಿ  ದಿನಾಂಕ 28/02/2015 ರಂದು ಶ್ರೀ. ಶರಣಪ್ಪಾ ಭೋಗಶೇಟ್ಟಿ  ನಿವೃತ್ತ ಸೇನಾಧಿಕಾರಿ ರವರ ಮನೆ ಮತ್ತು ದಿನಾಂಕ 09/01/2015 ರಂದು ಶ್ರೀಮತಿ.ಜಯಶ್ರೀ ಗಂಡ ಮೊಹನ ಗಚ್ಚಿನಮನಿ ರವರ ಮ ರೆಡ್ಡಿ ರವರು ಮನೆ ಕಳ್ಳತನ ವಾಗಿದ್ದು, ಬೇಸಿಗೆಯಲ್ಲಿ ನಗರದಲ್ಲಿ ಮೇಲಿಂದ ಮೇಲೆ  ಮನೆ ಕಳ್ಳತನ ಆಗುತ್ತಿದ್ದರಿಂದ  ಶ್ರೀ. ಅಮೀತ ಸಿಂಗ ಐಪಿಎಸ್  ಎಸ್.ಪಿ ಕಲಬುರಗಿಶ್ರೀ. ಜಯಪ್ರಕಾಶ  ಅಪರ ಎಸ್.ಪಿ ಕಲಬುರಗಿಶ್ರೀ. ಎಂ.ಬಿ ನಂದಗಾವಿ ಡಿ.ಎಸ್.ಪಿ (ಎ) ಉಪ ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ  ಅಶೋಕ ನಗರ ಪೊಲೀಸ ಠಾಣೆಯ ಶ್ರೀಮತಿ. ಸುಧಾ ಆದಿ ಪಿ.ಐಸೇವುನಾಯ್ಕ ಹೆಚ್ಸಿ 250, ಗುಂಡೇರಾಯ ಹೆಚ್ಸಿ 297, ಸುರೇಶ ಪಿಸಿ 534, ಗುರುಮೂತರ್ಿ ಪಿಸಿ 269, ನಿತ್ಯಾನಂದ ಪಿಸಿ 1028, ಶಿವಪ್ಪಾ ಎಪಿಸಿ 52  ರವರನ್ನೊಳಗೊಂಡ  ತಂಡವು, ಕಲಬುರಗಿ ನಗರದಲ್ಲಿ ಮನೆ ಕಳ್ಳತನ ಮಾಡುವ  ಆರೋಪಿತರಾದ 1) ರವಿ ತಂದೆ ಶಂಕರ ಕಾಂಬ್ಳೆ  ಸಾ: ಭಾಂಡೆ ಮಾರ್ಕೆಟ ಔರಾದ(ಬಿ) ಜಿ: ಬೀದರ,  2) ಗೊಪಿ @ ಗೊಪಿಕಿಶನ ತಂದೆ ನಾಮದೇವ ಸಕಟ್ ಸಾ: ಅಲ್ಲಾ ಗಲ್ಲಿ ಬಸವಕಲ್ಯಾಣ ಜಿ: ಬೀದರ ರವರಿಗೆ ದಸ್ತಗಿರಿ ಮಾಡಿ  1)ಅಶೋಕ ನಗರ ಪೊಲೀಸ ಠಾಣೆಯ 1) ಗುನ್ನೆ ನಂ. 28/2015,  2) ಗುನ್ನೆ ನಂ. 03/2015,  3) ಗುನ್ನೆ  ನಂ.164/2014 ಕಲಂ. 457, 380 ಐಪಿಸಿ 2)ರಾಘವೆಂದ್ರ ನಗರ ಪೊಲಿಸ ಠಾಣೆಯ 1) ಗುನ್ನೆ ನಂ. 42/2015,  2) ಗುನ್ನೆ ನಂ. 61/2015  3) ಗುನ್ನೆ   ನಂ. 72/2015 ಕಲಂ. 457, 380 ಐಪಿಸಿ 3)ಸ್ಟೇಷನ ಬಜಾರ ಪೊಲೀಸ ಠಾಣೆ ಗುನ್ನೆ ನಂ. 96/2015 ಕಲಂ. 457, 380 ಐಪಿಸಿ 4)ಗ್ರಾಮೀಣ ಪೊಲೀಸ ಠಾಣೆ 1) ಗುನ್ನೆ ನಂ. 38/2015, 39/2015 ಕಲಂ. 457, 380 ಐಪಿಸಿ  ಹೀಗೆ ಒಟ್ಟು 9 ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿ ಆರೋಪಿತರು ಕಳ್ಳತನ ಮಾಡಿದ್ದ ಬಂಗಾರದ ಆಭರಣಗಳನ್ನು ಮಹಾರಾಷ್ಟ್ರ ರಾಜ್ಯದ ನಾಂದೇಡ ಜಿಲ್ಲೆ, ಉದಗೀರ ಕಡೆಗಳಲ್ಲಿ ವಿಲೆವಾರಿ ಮಾಡಿದ್ದನ್ನು  ಒಟ್ಟು 6,62,000/- ರೂಪಾಯಿ ಮೌಲ್ಯದ ಒಟ್ಟು 245 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ  ಕಲಬುರಗಿ ಹೈಕೊರ್ಟ ಆವರಣದಲ್ಲಿ ಆದ ಎರಡು ಮನೆಕಳ್ಳತನ ಪ್ರಕರಣವನ್ನು ಭೇದಿಸಲಾಗಿದೆ.
ಹಣದ ಬ್ಯಾಗ ಕಿತ್ತುಕೊಂಡು ಕೊಲೆ ಮಾಡಿ ಪರಾರಿಯಾದ ಆರೋಪಿತರ ಬಂಧನ :
ಜೇವರ್ಗಿ ಠಾಣೆ : ಶ್ರೀ ನಾಗನಗೌಡ ತಂದೆ ಶಿವಶರಣಪ್ಪಗೌಡ ಹೊಸಮನಿ ಸಾ : ಗೌಂವಾರ ರವರು ದಿನಾಂಕ 09-10-2015 ರಂದು ರಾತ್ರಿ ಸಿದ್ದಾರ್ಥ ಲಾಡ್ಜ ಹಿಂಭಾಗ ಯಾರೋ ದುಷ್ಕರ್ಮಿಗಳು ನನ್ನ ತಮ್ಮ ಸಂಗನಗೌಡ ಹೊಸಮನಿ ಇತನಿಗೆ ಗುಂಡು ಹಾರಿಸಿ ಕೊಲೆ ಮಾಡಿ ಅವನ ಹತ್ತಿರ ಇದ್ದ ಹಣದ ಬ್ಯಾಗ ಕಸಿದುಕೊಂಡು ಹೋದ ಬಗ್ಗೆ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣದ ತನಿಖೆ ಕುರಿತು ಶ್ರೀ ಅಮಿತ್ ಸಿಂಗ ಐಪಿಎಸ್ ಪೊಲೀಸ ಅಧೀಕ್ಷಕರು ಕಲಬುರಗಿ, ಶ್ರೀ ಜಯಪ್ರಕಾಶ ಹೆಚ್ಚುವರಿ ಪೊಲೀಸ ಅಧೀಕ್ಷಕರು ಕಲಬುರಗಿ ಇವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ವಿಜಯ. ಪಿ. ಅಂಚಿ ಪೊಲೀಸ ಉಪಾಧೀಕ್ಷಕರು ಗ್ರಾಮಾಂತರ ಉಪ ವಿಭಾಗ ಕಲಬುರಗಿ ರವರ ನೇತ್ರತ್ವದಲ್ಲಿ ಶ್ರೀ ಎಸ್.ಎಸ್.ಹುಲ್ಲೂರ ಸಿ.ಪಿ.ಐ. ಜೇವರಗಿ ಶ್ರೀ ಪಂಡಿತ ಸಗರ ಪಿ.ಎಸ್.ಐ. ಜೇವರಗಿ, ಆನಂದರಾವ ಪಿಎಸ್ಐ ಯಡ್ರಾಮಿ, ಕಪೀಲದೇವ ಪಿ.ಎಸ್.ಐ.ನೆಲೋಗಿ ಹಾಗೂ ಸಿಬ್ಬಂದಿ ಜನರಾದ 1] ಶಶಿಕಾಂತ ಪಿ.ಸಿ. 2] ಪರಮೇಶ್ವರ ಪಿ.ಸಿ 3] ಶಿವರಾಯ ಪಿ.ಸಿ 4] ಮಲ್ಲಿಕಾರ್ಜುನ  ಪಿ.ಸಿ ಎಸ್.ಬಿ. 5] ಶ್ರೀನಾಥ ಪಿ.ಸಿ. 6] ರಘುವೀರಲಾಲ ಪಿ.ಸಿ. 7] ರವಿ ಎಪಿಸಿ ರವರು ಇವರುಗಳು ಮತ್ತು ಹುಣಸಗಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ದಸ್ತಗಿರಿ ಮಾಡಿದಂತ ಆರೋಪಿತರಾದ 1] ಮುನೀರಪಾಶಾ ಉರ್ಪ ಮುನ್ನಾ ತಂದೆ ಮಹೆಬೂಬಸಾಬ ಕಳ್ಳಿ ಸಾ: ಜೇವರಗಿ.  2) ಮಹಿಬೂಬ ತಂದೆ ಮಹಮೂದಸಾಬ್ ಖುರೇಷಿ ಸಾ: ಜೇವರಗಿ. 3) ಸದಾಶಿವ ತಂದೆ ಸಾಯಿಬಣ್ಣ  ಬಡಿಗೇರ್ ಸಾ: ಶಖಾಪೂರ ಹಾ:ವ: ಮೂಡಬೂಳ      4) ಸಿದ್ದು ತಂದೆ ಮರೆಪ್ಪ ಕಾಂಬಳೆ ಸಾ: ಮಂಗಳೂರ ತಾ: ಸಿಂದಗಿ.5) ಅಜಯಕುಮಾರ ಉರ್ಪ ಭೀಮು ಫೈಲವಾನ್ ಉರ್ಪ ಮುನ್ನಾ ಸುರೇಶ ತಂದೆ ಅಪ್ಪಾರಾವ  ತಾ: ಹುಮನಾಬಾದ  6) ವಾಚು ತಂದೆ ರಾವಜೀ ಚಿನ್ನಾ ರಾಠೋಡ ಸಾ: ಚಾಮನಾಳ ತಾಂಡಾ  ತಾ: ಸುರಪೂರ 7) ಖಾಸಿಂ ತಂದೆ ಶಹಾಬುದ್ದಿನ ಪಟೇಲ ಸಾಃ ಮಳ್ಳಿ, ಇವರಗಳನ್ನು ದಿನಾಂಕ 25-06-15 ರಂದು ಮಧ್ಯಹ್ನ ಪುನಃ ಪೊಲೀಸ ವಶಕ್ಕೆ ಪಡೆದುಕೊಂಡು ಆರೋಪಿತರನ್ನು ಕುಲಕೂಂಷವಾಗಿ ತನಿಖೆ ಮಾಡಲಾಗಿ ತನಿಖೆಯಲ್ಲಿ ಕಂಡು ಬಂದಿದ್ದೇನೆಂದರೆ ಆರೋಪಿತರೆಲ್ಲರೂ ಸೇರಿಕೊಂಡು ಆರೋಪಿತರಲ್ಲಿ ಕೆಲವರು ಮುಂಚಿತವಾಗಿನೇ ಜೇವರಗಿ ಪಟ್ಟಣದಲ್ಲಿ ಯಾವ ಯಾವ ವರ್ತಕರು ಎಷ್ಟು ಹಣ ಸಂಗ್ರಹಿಸಿ ಯಾವ ಮಾರ್ಗದ ಮುಖಾಂತರ ಹೋಗುತ್ತಾರೆ ಎಂಬುದನ್ನು ಮುಂಚಿತವಾಗಿನೇ ತಿಳಿದುಕೊಂಡು ಉಪಾಯ ಮಾಡಿ ದಿ: 9-10-14 ರಂದು ಜೇವರಗಿ ಪಟ್ಟಣದ ಸೀರಿ ಕಾಂಪ್ಲೇಕ್ಸ ಹತ್ತಿರ ಮೃತ ಸಂಗಣ್ಣಗೌಡ ಇತನು ತನ್ನ ಹಣವನ್ನು ತೆಗೆದುಕೊಂಡು ಮೋಟರಸೈಕಲ ಮೇಲೆ ಹೋಗುತ್ತಿರುವಾಗ ಹೋಗುವದನ್ನು ಆರೋಪಿತರಲ್ಲಿ ಕೆಲವು ಆರೋಪಿತರು ಮೋದಲೆ ಹೊಂಚುಹಾಕಿ ಕುಳಿತಂತ ಆರೋಫಿತರಿಗೆ ಮೋಬೈಲ್ ಮುಖಾಂತರ ತಿಳಿಸಿ ಮೃತ ಸಂಗಣ್ಣಗೌಡ ತನ್ನ ಅಂಗಡಿಯನ್ನು ಮುಚ್ಚಿ ಹಣ ಬ್ಯಾಗ ಸಮೇತ ಮೋಟರಸೈಕಲ ಮೇಲೆ ಹೋಗುತ್ತಿರುವಾಗ ಹೊಂಚು ಹಾಕಿ ಕುಳಿತಂತ ಆರೋಪಿತರು ಹಣ ಬ್ಯಾಗನ್ನು ಕಸಿದುಕೊಳ್ಳುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಮೋಟರಸೈಕಲಿಗೆ ತಮ್ಮ ಮೋಟರಸೈಕಲನ್ನು ಅಡ್ಡವಾಗಿ  ನಿಲ್ಲಿಸಿ ಪೂರ್ವ ನಿಯೋಜನೆಯಂತೆ ಮೃತ ಸಂಗಣ್ಣಗೌಡ ಇತನ ಸಂಗಡ ಜಗಳ ತೆಗೆದು ಮೋಟರಸೈಕಲ ಮೇಲಿಂದ ಕೆಳಗೆ ಇಳಿದು ಹಣ ಸಮೇತ ಇದ್ದ ಬ್ಯಾಗ ಕಿತ್ತಿಕೊಳ್ಳುತ್ತಿದ್ದಾಗ ಅವನು ಹಣದ ಬ್ಯಾಗ ಕೊಡದೆ ಇರುವದರಿಂದ ಇಬ್ಬರಿಗೂ ತೆಕ್ಕಿಕುಸ್ತಿಯಾಗಿ ಮೃತ ಸಂಗಣ್ಣಗೌಡ ಇತನು ಕಿತ್ತಿಕೊಂಡಂತ ಬ್ಯಾಗನ್ನು ಪುನಃ ಅವರ ಮೇಲೆ ಎರಗಿ ಮರಳಿ ಕಿತ್ತಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾಗ ಮೃತ ಸಂಗಣ್ಣಗೌಡನಿಗೆ ಕಂಟ್ರಿ ರಿವಲ್ವಾರನಿಂದ ಫೈಯರ ಮಾಡಿದಾಗ ಮೃತ ಸಂಗಣ್ಣಗೌಡ ಇತನು 4-5 ಹೆಜ್ಜೆ ಹೋಗಿ ಮೃತ ಪಟ್ಟಿರುತ್ತಾನೆ  ಹಣದ ಬ್ಯಾಗಿನೊಂದಿಗೆ ಮೋಟರಸೈಕಲ ಮೇಲೆ ಪರಾರಿಯಾಗಿರುತ್ತಾರೆ. ಅಂತಾ ಹೇಳಿದ್ದು ಸದರಿಯವರಿಂದ ನಗದು ಹಣ 11,850/- ರೂ   ಅಟೋ ನಂ ಕೆ.ಎ-32-8806 ಮೃತ ಸಂಗಣ್ಣಗೌಡನ ಚಲವಲನದ ಮೇಲೆ ನಿಗಾ ವಹಿಸಲು ಬಳಸಿದ ವಾಹನ ಮತ್ತು   ಮೋಟರಸೈಕಲ ನಂ ಕೆ.ಎ-28 ಎಸ್-1842 ಕೃತ್ಯವನ್ನು ಎಸಗಲು ಉಪಯೋಗಿಸಿದ  ಮೋಟರಸೈಕಲನ್ನು ವಶಪಡಿಸಿಕೊಂಡು ಸದರಿಯವರನ್ನು ನ್ಯಾಯಾಂಗ ಬಂಧನ ಕುರಿತು ಕಳುಹಿಸಿ ಕೊಡಲಾಗಿದೆ.  
ಅಪಘಾತ ಪ್ರಕರಣ :
ಆಳಂದ ಠಾಣೆ : ದಿನಾಂಕ:26/06/2015 ರಂದು ದೂರವಾಣಿ ಮೂಲಕ ಜಿರೋಳ್ಳಿ ಆಳಂದ ರೋಡಿನ ಅಜಮತ್ತುಲ್ಲಾ ಖಾದ್ರಿ ದೆವರ ಹೊಲದ ಪಕ್ಕದಲ್ಲಿ ಆಟೋ ರಿಕ್ಷಾ ಪಲ್ಟಿಯಾಗಿ ಒಬ್ಬ ಹೆಣ್ಣು ಮಗಳು ಸ್ಥಳದಲ್ಲೆ ಮೃತ ಪಟ್ಟಿದ್ದು ಇತರೆ ಗಾಯಾಳುದಾರರಿಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಆಳಂದಕ್ಕೆ ಕಳುಹಿಸಿದ್ದು ಇದೆ ಅಂತಾ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಮೃತಳಾದ ಸುರೇಖಾ ಗಂಡ ಸಂತೋಷ ರಾಠೋಡ ಸಾ: ಜಿರೋಳ್ಳಿ ತಾಂಡಾ ಇವಳ ಶವವು ಸಂಚಾರದ ಸುರಕ್ಷಾ ದೃಷ್ಟಿಯಿಂದ ಜಿಜಿಎಚ್‌ ಅಳಂದಕ್ಕೆ ಸಾಗಿಸಿ ಆಸ್ಪತ್ರೆಯಲ್ಲಿ  ಉಪಚಾರ ಪಡೆಯುತ್ತಿದ್ದ ಮೃತಳ ಗಂಡನಾದ ಸಂತೋಷ ತಂದೆ ರತನು ರಾಠೋಡ ಇವರು ನನ್ನ ಹೆಂಡತಿಯ ಬಾಣಂತನ 3 ದಿವಸಗಳ ಹಿಂದೆ ಆಗಿದ್ದು ಆಕೆಗೆ ತನ್ನ ತವರು ಮನೆಗೆ ಕರೆದುಕೊಂಡು ಹೋಗಲು ನಮ್ಮ ಅತ್ತೆ ಶಾಹುಬಾಯಿ ಗಂಡ ಸತೀಶ ಚವ್ಹಾಣ ಸಾ:ಬಲಸೂರ ತಾಂಡ ಇವಳು ನಿನ್ನೆ ನಮ್ಮ ತಾಂಡಕ್ಕೆ ಬಂದಿದ್ದು ದಿನಾಂಕ:26/06/2015 ರಂದು ಮದ್ಯಾಹ್ನ ನಮ್ಮೂರಲ್ಲಿದ ಆಟೋಚಾಲಕ ಸುರೇಶ ತಂದೆ ಸೋಮಲು ರಾಠೋಡ ಈತನ ಆಟೋ ನಂ: ಕೆ.ಎ:32 / 4963 ನೇದ್ದರಲ್ಲಿ ನಾನು ನನ್ನ ಹೆಂಡತಿ ಸುರೇಖಾ ಹಾಗೂ 3 ದಿನದ ಕೂಸು ಹೆಣ್ಣು ಮಗು ಹಾಗೂ ನಮ್ಮ ಅತ್ತೆ ಶಾಹುಬಾಯಿ ರಾಠೋಡ ಈತನು ಸದರಿ ವಾಹನ ಅತೀವೇಗದಿಂದ ಹಾಗೂ ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಓಡಿಸುವಾಗ ನಾವು ಸಾವಕಾಶವಾಗಿ ಚಲಾಯಿಸಿ ಕೊಂಡು ಹೋಗಲು ತಿಳಿಸಿದರು ಕೂಡಾ ಅತೀವೇಗದಲ್ಲಿ ಹೋಗುವಾಗ ಆಟೋರಿಕ್ಷಾದ ಮುಂದಿನ ಗಾಲಿ ಎಕ್ಸಲ್ ಸಮೇತ ಕಟ್ ಆಗಿ ಅಜಮತ್ ತುಲ್ಲಾ ಖಾದ್ರಿ ದೇವರ ಹೊಲದಲ್ಲಿ ಪಲ್ಟಿಯಾದ ಪರಿಣಾಮ ನನ್ನ ಹೆಂಡತಿಗೆ ಆಟೋ ರಿಕ್ಷಾವು ಆಕೆಯ ತಲೆಯ ಮೇಲೆ ಬಿದ್ದು ಕೆಳಗೆ ಸಿಕ್ಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ತುಕಾರಾಮರಾವ್ ಸರಾಫ್ ಸಾ:ಭಗವತಿನಗರ ಕಲಬುರಗಿ ದಿನಾಂಕ: 08/06/2015 ರಂದು ತಮ್ಮ ಮನೆಯ ಮುಂದೆ ನಿಲ್ಲಿಸಿದ ಹಿರೋ ಹೊಂಡಾ ಸ್ಲೆಂಡರ ಪ್ಲಸ್ ಕಪ್ಪು ಬಣ್ಣ ಕೆಎ-32 ಎಕ್ಸ- 4499 ಇಂಜನ ನಂ- MBLHA 10EYAHJ 37997 ಇದ್ದು ಇದನ್ನು ನಾನು 5 ವರ್ಷಗಳ ಹಿಂದೆ ಖರಿಧಿ ಮಾಡಿದ್ದು ನಾನು ಮಾರ್ಕೇಟಗೆ ಹೋಗಿ ಸಾಮಾನು ತೆಗೆದುಕೊಂಡು ಬಂದು ಮೋಟಾರ ಸೈಕಲ್ ನಮ್ಮ ಮನೆಯ ಮುಂದೆ ನಿಲ್ಲಿಸಿ ಸಾಮಾನುಗಳನ್ನು ಮನೆಯಲ್ಲಿ ಇಟ್ಟು ಪುನ: ಹೊರಗೆ ಬಂದಾಗ ನನ್ನ ಮೋಟಾರ ಸೈಕಲ್ ಕಾಣಲಿಲ್ಲ. ನಾನು ಗಾಬರಿಯಾಗಿ ಮುಂದೆ ಯಾರಾದರೂ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾರೆಂದು ನೋಡಿದೇನು ಅಲ್ಲಿ ಕಾಣಲಿಲ್ಲ. ಆದರೂ ಕೂಡಾ ಜೇವರ್ಗಿ ಕ್ರಾಸ, ಎಮ್.ಎಸ.ಕೆ.ಮೀಲ್, ರಾಮಮಂದಿರರವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಕೂಡಾ ಕಳವುವಾದ ನನ್ನ ಮೋಟಾರ ಸೈಕಲ್ ಸಿಕ್ಕಿರುವುದಿಲ್ಲ ಕಾರಣ ಮಾನ್ಯರಾದ ತಾವು ನನ್ನ ಕಳೆದ ಹೋದ ಮೋಟಾರ ಸೈಕಲ್ ಕೆಎ-32 ಎಕ್ಸ- 4499 ಹುಡುಕಿಕೊಡಬೇಕಾಗಿ ತಮ್ಮಲ್ಲಿ ವಿನಂತಿ.ಅಂದಾಜು ಕಿಮ್ಮತು ಅಕಿ- 25,000/- ಕಳೆದು ಹೋಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

No comments: