ಕೊಲೆ ಆರೋಪಿತರ ಬಂಧನ :
ಚೌಕ ಠಾಣೆ : ದಿನಾಂಕ 07.04.2015
ರಂದು ರಾತ್ರಿ 9 ಗಂಟೆಯ ಸುಮಾರಿಗೆ ದುಬೈ ಕಾಲೋನಿಯಲ್ಲಿ
ಮಲ್ಲು @ ಮಲ್ಲಿಕಾರ್ಜುನ ಇತನಿಗೆ
ಚಂದ್ರು ಕೊತಲಿ, ಉಮೇಶ ಕೊತಲಿ,
ರಮೇಶ
ಕೊತಲಿ ಇವರು ಹಣಕಾಸಿನ ವ್ಯವಹಾರ ಮಾಡಿಕೊಂಡಿದ್ದು
ಈಗ ಸುಮಾರು ಒಂದು ತಿಂಗಳ ಹಿಂದೆ ಚಂದ್ರು ಇತನು ಮಲ್ಲು ಇತನು ನಡೆಸುತ್ತಿದ್ದ ಅಟೊವನ್ನು
ಮಾರಾಟ ಮಾಡಿದ್ದು, ಅದಕ್ಕೆ ಮಲ್ಲು ನನಗೆ
ನಡೆಸಲು ಬೇರೆ ಅಟೊ ಕೊಡಿಸು ಅಂತ ಚಂದ್ರು ಕೊತಲಿಗೆ ಪದೇ ಪದೇ ಕೇಳುತ್ತ ಬಂದಿದ್ದು, ಇದೆ ವಿಷಯವಾಗಿ
ಆರೋಪಿತರಾದ 1) ವೀರೆಶ @
ವೀರ್ಯೆ ತಂದೆ ದತ್ತು ಸಲಾರೆ ಸಾಃ ಕೊತ್ತಲಿ ತಾಃ ಆಳಂದ ಹಾಃವಃ ಫಿಲ್ಟರ್ ಬೆಡ್
ಹತ್ತಿರ ರಾಜು ಗಾಂದಿ ನಗರ ಕಲಬುರಗಿ, 2) ಸೈಬಣ್ಣ ತಂದೆ
ಗುಲಾಬಚಂದ ಸಗರ ಸಾಃ ದುಬೈ ಕಾಲೋನಿ ಕಲಬುರಗಿ 3) ಚಂದ್ರು @ ಚಂದ್ರಕಾಂತ ತಂದೆ
ಸಾತಲಿಂಗಪ್ಪ ಕೊತಲಿ 4) ರಮೇಶ ತಂದೆ ಸಾತಲಿಂಗಪ್ಪ ಕೊತಲಿ 5) ಉಮೇಶ ತಂದೆ ಸಾತಲಿಂಗಪ್ಪ ಕೊತಲಿ 6)
ಅಂಬು @ ಅಂಬರೀಶ ತಂದೆ ಸಿದ್ದಪ್ಪ ಕೊಳಕರ ಸಾ: ಎಲ್ಲರು ದುಬೈ ಕಾಲೋನಿ ಕಲಬುರಗಿ ರವರು
ಕೂಡಿಕೊಂಡು ಜಂಬ್ಯಾದಿಂದ ಹೊಡೆದು ಕೊಲೆ ಮಾಡಿದ್ದು,
ಮಾನ್ಯ ಶ್ರೀ ಬಿ. ಮಹಾಂತೇಶ
ಅಪರ ಎಸ್.ಪಿ.ಸಾಹೇಬ ಕಲಬುರಗಿ ಮಾರ್ಗದರ್ಶನದಲ್ಲಿ ಶ್ರೀ ಉದಯಕುಮಾರ ಎಂ.ಬಿ. ಡಿ.ಎಸ್.ಪಿ. ಸಾಹೇಬ
(ಬಿ) ಉಪ ವಿಭಾಗ ಕಲಬುರಗಿ ರವರು ಮತ್ತು ಚೌಕ
ಪೊಲೀಸ ಠಾಣೆಯ ಅಧಿಕಾರಿ ಪ್ರದೀಪಕೊಳ್ಳಾ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಮತ್ತು
ಸಿಬ್ಬಂದಿಯವರಾದ ಮಹಾಂತೇಶ ಪಿಸಿ 716, ಅಲೋಕ ಪಿಸಿ 1008
ಶಿವಾನಂದ ಯಡ್ರಾಮಿ ಪಿಸಿ 992, ಬಂದೇನವಾಜ ಪಿಸಿ 429,
ಮೊಶೀನ
ಪಿಸಿ 811 ಕೂಡಿಕೊಂಡು ರಾಣೇಸ್ಪಿರದರ್ಗಾ ಹತ್ತಿರ ಆರೋಪಿತರ ಇರವಿಕೆಯ ಬಗ್ಗೆ ಖಚಿತವಾದ ಮಾಹಿತಿಯ
ಮೇರೆಗೆ ದಿನಾಂಕ 13.04.15 ರಂದು 10 ಗಂಟೆಯ ಸುಮಾರಿಗೆ ದಸ್ತಗಿರಿ ಮಾಡಿ,
ದಸ್ತಗಿರಿ
ನಿಯಮ ಪಾಲಿಸಿ ನ್ಯಾಯಾಂಗ ಬಂದನ ಕುರಿತು ಕಳುಹಿಸಿದ್ದು ಇರುತ್ತದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಈರಮ್ಮ ಗಂಡ
ಭಂಡಯ್ಯ ಸ್ಥಾವರಮಠ ಸಾ: ಹಿತ್ತಲಶೀರೂರ ಇವರು ಮನೆ ಜಾಗದ ಸಂಬಂಧ ದಿನಾಂಕ 11-04-2015 ರಂದು ಕಲ್ಯಾಣಿ ತಂದೆ ಅಮೃತ ಸರಸಂಬಿ ಸಂಗಡ 05 ಜನರು ಎಲ್ಲರೂ ಸಾ|| ಹಿತ್ತಲಶಿರೂರ.
ರವರು ಕೂಡಿಕೊಂಡು ಜಗಳ ತಗೆಯುವ ಉದ್ದೇಶ ದಿಂದ ಅಕ್ರಮ ಕೂಟ ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ
ಬೈದು ತಲೆಯ ಮೇಲಿನ ಕೂದಲು ಹಿಡೆದು ಜಗ್ಗಾಡಿ ಮಾನ ಭಂಗಕ್ಕೆ ಯತ್ನಿಸಿ ಕೈಯಿಂದ ಹೊಡೆ ಬಡೆ ಮಾಡಿ ಜೀವ ಭಯ ಪಡೆಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment