POLICE BHAVAN KALABURAGI

POLICE BHAVAN KALABURAGI

15 April 2015

Kalaburagi District Reported Crimes

ಅಪಘಾತ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀಮತಿ ನಿರ್ಮಲಾ ಗಂಡ ಮಾಧವ ಪವಾರ ಸಾ: ಕಳಕಾ, ಪೊಸ್ಟ- ಭೋರಿ, ತಾ|| ಕಂದಹಾರ, ಜಿ|| ನಾಂದೇಡ, ಮಹಾರಾಷ್ಟ್ರ ಇವರು ತಮ್ಮ ಬಾಜು ಗ್ರಾಮದವರಾದ ದಿಗಂಬರ ತಂದೆ ನಾಗನಾಥ ವಡಜೆ ಇವರ ಟೋಳಿಯಲ್ಲಿ ಕಬ್ಬು ಕಡಿಯುವ ಸಲುವಾಗಿ ನಿಂಬರ್ಗಾ ಗ್ರಾಮ ಸೀಮಾಂತರದಲ್ಲಿ ನಾನು, ನನ್ನ ಗಂಡನಾದ ಮಾಧವ ತಂದೆ ಪುಂಟಲೀಕ ಪವಾರ, ನನ್ನ ಮಗನಾದ ಪ್ರದೀಪ ತಂದೆ ಮಾಧವ ಪವಾರ ಎಲ್ಲರೂ ಸೇರಿ ಬಂದು ನಿಂಬರ್ಗ ಗ್ರಾಮ ಸೀಮಾಂತರ ಅಶೋಕ ತಂದೆ ಈರಣ್ಣಾ ಜವಳಿ ಇವರ ಹೊಲದಲ್ಲಿ ಶೇಡ ಹಾಕಿದ್ದೇವು, ದಿನಾಂಕ 13/04/2015 ರಂದು ಸಾಯಂಕಾಲ ನನ್ನ ಗಂಡನು ನಿಂಬರ್ಗಾ ಗ್ರಾಮಕ್ಕೆ ಹೋಗಿ ಊಟ ತರುತ್ತೇನೆ ಅಂತ ಹೇಳಿ ಹೋಗಿರುತ್ತಾನೆ, ಅಂದಾಜ ರಾತ್ರಿ 1030 ಪಿ.ಎಮ ಕ್ಕೆ ನಮ್ಮ ಟೋಳಿ ಮಾಲೀಕನಾದ ದಿಗಂಬರ ಇವನು ಶೇಡ್ಡಿಗೆ ಬಂದು ನಿಂಬರ್ಗಾ ಪೆಟ್ರೊಲ ಪಂಪ ಹತ್ತರ ಡಾಂಬರ ರಸ್ತೆಯ ಮೇಲೆ ಮಾಧವನಿಗೆ ಯಾವುದೊ ಒಂದು ವಾಹನ ಅಪಘಾತ ಮಾಡಿಕೊಂಡು ಹೋಗಿರುತ್ತದೆ ಅವನು ಮೃತಪಟ್ಟಿರುತ್ತಾನೆ ಅಂತ ತಿಳಿಸಿದ ಮೇರೆಗೆ ನಾನು ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಗಂಡನ ತಲೆಗೆ ಭಾರಿ ರಕ್ತಗಾಯವಾಗಿ ಎರಡು ಕಿವಿಯಿಂದ ರಕ್ತ ಹೋಗಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 14-04-2015 ರಂದು ರಾತ್ರಿ ನನ್ನ ಮಗ ಇಮ್ರಾನ ಮತ್ತು ನನ್ನ ತಮ್ಮನಾದ ಸಯ್ಯದ ಆಶೀಪ ಅಲಿ  ಇಬ್ಬರೂ ಎಮ,ಆರ,ಎಮ್,ಸಿ ಕಾಲೇಜ ಎದುರುಗಡೆ ರೋಡ ಮೇಲೆ ಹೋಗುತ್ತೀರುವಾಗ  ಡಾ|| ಅಂಬೇಡ್ಕರ್ ರವರ ಜಯಂತ್ಸೋತ್ಸವ ಮೆರವಣೆಗೆ ನೋಡುತ್ತಾ ರೋಡ ಪಕ್ಕದಲ್ಲಿ ನಿಂತಿರುವಾಗ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕ್ರಾಸ ಕಡೆಯಿಂದ ಯಾವುದೋ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಇಮ್ರಾನ ಪಟೇಲ ಇತನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಆತನಿಗೆ  ತೆಲೆಯ ಹಿಂದುಗಡೆ ಪೆಟ್ಟು ಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಇರುತ್ತದೆ ಅಂತಾ ಶ್ರೀಮತಿ ರಫತ್ ಸುಲ್ತಾನ ಗಂಡ ಲಾಲ ಪಟೇಲ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 14/02/2015 ರಂದು ತನ್ನ ಬಸವ ಜ್ಯೋತಿ ಕಿರಾಣಿ ಅಂಗಡಿ ಮುಚ್ಚಿ ಕಾಶಿ ಯಾತ್ರಾ ಹೋಗಿದ್ದು ದಿನಾಂಕ 16/02/2015 ರಂದು ರಾತ್ರಿ 1.30 ಎಎಮ್ ಸುಮಾರಿಗೆ ಯಾರೋ ಕಳ್ಳರು ನನ್ನ ಕಿರಾಣಿ ಅಂಗಡಿಯಲ್ಲಿ ಇದ್ದ ಕಿರಾಣಿ ಸಾಮಾನುಗಳು ಕಳ್ಳತನ ಮಾಡಿರುತ್ತಾರೆ ಅಂತ ಫಿರ್ಯಾದಿಗೆ ಪೋನ ಮೂಲಕ ವಿಷಯ ತಿಳಿದು ನಂತರ ಫಿರ್ಯಾದಿದಾರನು ಸ್ಥಳಕ್ಕೆ ಬಂದು ತನ್ನ ಕಿರಾಣಿ ಅಂಗಡಿ ನೋಡಿದಾಗ ಅದರಲ್ಲಿದ್ದ  ಅ.ಕಿ.1,19,830/- ರೂ ನಷ್ಟು ಕಿರಾಣಿ ಸಾಮಾನುಗಳನ್ನು ಯಾರೋ  ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ  ಶ್ರೀ ಶಿವಶರಣಪ್ಪಾ ತಂದೆ ತಿಪ್ಪಣ್ಣ ಲಾವಣಿ ಸಾ : ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: