ಅಂತರ ರಾಜ್ಯ ವಂಚನೆಕೋರರ ಬಂಧನ
ಪತ್ರಿಕಾ ಪ್ರಕಟಣೆ
ಆಂದ್ರ ಮೂಲದ ಹೈದ್ರಾಬಾದ ನಿವಾಸಿ ಶ್ರೀ ಪಿ.ರಮಣ್ಣರೆಡ್ಡಿ ತಂದೆ ವೆಂಕಟರಾಮಪ್ಪಾ ಪಿ ಪಸಕು ಇವರು ದಿ:11-04-2015 ರಂದು ಬೆಳಿಗ್ಗೆ ಬ್ರಹ್ಮಪೂರ ಪೊಲೀಸ್ ಠಾಣೆಗೆ ಹಾಜರಾಗಿ
ಸುಮಾರು 6 ತಿಂಗಳ ಹಿಂದೆ ತಾನುಕಲಬುರಗಿಯಲ್ಲಿ ಕೆಲಸದ ಮೇಲೆ ಬಂದಾಗ
ಬೆಂಗಳೂರಿನ ನಿವಾಸಿ ಪರಮೇಶ್ವರ ಎಂಬುವವರ ಮುಖಾಂತರ ಜಾಕೀರ ಹುಸೇನ ಮತ್ತು ಜಾವೀದ ಎಂಬುವರ ಪರಿಚಯವಾಗಿದ್ದು
ನಂತರ ಪಿ.ರಮಣ್ಣರೆಡ್ಡಿ ಇವರಿಗೆ ರೈಸ್ ಪುಲ್ಲಿಂಗ್ ಐಟಂ ತೆಗೆದುಕೊಳ್ಳು ಅದಕ್ಕೆ 10 ಲಕ್ಷ ರೂ ಖರ್ಚು ಬರುತ್ತದೆ ನಂತರ ನಿನಗೆ ಅದರಿಂದ 5 ಕೋಟಿ ರೂ ಲಾಭವಾಗಬಹುದು ಅಂತ ನಂಬಿಗೆ ಬರುವ ರೀತಿಯಲ್ಲಿ ಹೇಳಿ ಅದನ್ನು ಒಂದು ತಿಂಗಳ
ಅವಧಿಯಲ್ಲಿ ರೈಸ್ ಪುಲ್ಲಿಂಗ್ ಐಟಂ ತಂದು ಕೊಡುವುದಾಗಿ ಹೇಳಿ ಜನೇವರಿಯಲ್ಲಿ ಮುಂಗಡವಾಗಿ ನಗದು 5 ಲಕ್ಷ ರೂ ಹಣ ತೆಗೆದುಕೊಂಡಿದ್ದು ಅವಧಿ ಮೀರಿದರೂ ಅವರು ಮಾತಿನಂತೆ ನಡೆದುಕೊಳ್ಳದೇ ಮತ್ತು
ರೈಸ್ ಪುಲ್ಲಿಂಗ್ ಐಟಂ ಕೊಡದೇ ತಮಗೆ ಆರೋಗ್ಯ ಸರಿ ಇಲ್ಲಾ ಅಂತ ಹೇಳಿ ದಿನ ಹಾಕಿ ಅವರು
ಹೈದ್ರಾಬಾದದಲ್ಲಿದ್ದಾಗ ಫೋನ ಮಾಡಿ ಮತ್ತೆ 5 ಲಕ್ಷ ರೂ ತೆಗೆದುಕೊಂಡು ಬಾ ನಿನಗೆ ರೈಸ್ ಪುಲ್ಲಿಂಗ್ ಐಟಂ ಕೊಡುತ್ತೇವೆ ಅಂತ ಹೇಳಿ
ಕಲುಬುರಗಿಗೆ ಬರುವಂತೆ ಹೇಳಿದಾಗ ಪಿ. ರಮಣರೆಡ್ಡಿ ಇವರು ತನ್ನ ಸಹೋದರನಾದ ಮಹೇಶ ಇವರೊಂದಿಎಗ
ದಿನಾಂಕ 06-04-15 ರಂದು ಹಣದೊಂದಿಗೆ ಕಲಬುರಗಿಗೆ ಬಂದು ಸೆಂಟ್ರಲ್ ಪಾರ್ಕ
ಪಕ್ಕದಲ್ಲಿರುವ ಗೋಲ್ಡನ್ ರಿಜೇನ್ಸಿನಲ್ಲಿ ರೂಮ ಬಾಡಿಗೆ ಹಿಡಿದು ಉಳಿದಿದ್ದು ಎರಡು ದಿವಸದ ಮೇಲೆ ಜಾಕೀರ ಮತ್ತು ಜಾವೀದ ಇವರು ಪಿ ರಮಣರೆಡ್ಡಿ ಹತ್ತಿರ ಹೋಗಿ ನಿಮಗೆ ರೈಸ್ ಪುಲ್ಲಿಂಗ್ ಐಟಂ
ನ್ನು ಗುರುವಾರ ದಿವಸ ಕೊಡುವದಾಗಿ ಹೇಳಿ ಪುನಃ 1 ಲಕ್ಷ ರೂ ಬೇಕೆಂದು ಸುಳ್ಳು ಹೇಳಿ ಹಣ ತೆಗೆದುಕೊಂಡು ಹೋಗಿ ಪುನಃ ಮಾತಿನಂತೆ ಗುರುವಾರ ದಿವಸ
ಅವರು ರೈಸ್ ಪುಲ್ಲಿಂಗ್ ಐಟಂ ಕೊಡದೇ ಇದ್ದ ಕಾರಣ ಸದರಿಯವರ ಮೇಲೆ ಅನುಮಾನ ಬಂದು ಅವರಿಗೆ ಪೋನ ಮೂಲಕ ಸಂಪರ್ಕ ಮಾಡಿದಾಗ ದಿನಾಂಕ 11-04-2015 ರಂದು ಶನಿವಾರ ದಿವಸ ಬೆಳಿಗ್ಗೆ ಬಹುಮನಿ ಲಾಡ್ಜಿನ ರೂಮ ನಂ 104 ರಲ್ಲಿ ರೈಸ್ ಪುಲ್ಲಿಂಗ್ ಐಟಂ ಕೊಡುತ್ತೇವೆ ಅಲ್ಲಿಗೆ ಬಾ ಅಂತ ಹೇಳಿದ್ದು ಅವರ ಹೇಳಿಕೆ
ಮತ್ತು ನಡತೆಯಿಂದ ಅವರು ಭಯ ಪಟ್ಟು ಅವರಿಂದ ಮೋಸ ಹೋಗುವ ಸಾದ್ಯತೆ ಮನಗಂಡು ಈ
ಮಾಹಿತಿಯನ್ನು ತಕ್ಷಣ ಬ್ರಹ್ಮಪೂರ ಪೊಲೀಸ್ ಠಾಣೆಗೆ ತಿಳಿಸಿ ಸಹಾಯ ಕೋರಿದ್ದು, ಈ ಎಲ್ಲಾ ಮಾಹಿತಿ ಆಧಾರವಾಗಿ ಮಾನ್ಯ ಅಮಿತ ಸಿಂಗ್ ಐಪಿಎಸ್, ಪೊಲೀಸ್ ಅಧೀಕ್ಷಕರು ಕಲಬುರಗಿ, ಮತ್ತು ಶ್ರೀ ಬಿ. ಮಹಾಂತೇಶ ಹೆಚ್ಚುವರಿ ಪೊಲೀಸ್
ಅಧೀಕ್ಷಕರು ಕಲಬುರಗಿ ಇವರ ಮಾರ್ಗದರ್ಶನದಂತೆ ಶ್ರೀ ಮಹಾನಿಂಗ ಬಿ ನಂದಗಾಂವಿ ಡಿ.ಎಸ್.ಪಿ (ಎ)
ಉಪ-ವಿಭಾಗ ಕಲಬುರಗಿ ಇವರ ನೇತೃತ್ವದಲ್ಲಿ ಶ್ರೀ. ರಾಜಶೇಖರ ಹಳಿಗೋದಿ ಪಿ.ಐ ಸ್ಟೇಷನ ಬಜಾರ, ಶ್ರೀ.ಡಿ.ಸಿ ರಾಜಣ್ಣಾ ವೃತ ನಿರೀಕ್ಷಕರು ಗ್ರಾಮೀಣ ವೃತ, ಶ್ರೀ. ವಾಹೀದ ಕೊತವಾಲ್ ಪಿ.ಎಸ್.ಐ ರಾಘವೇಂದ್ರ ನಗರ ಪೊಲೀಸ ಠಾಣೆ.ಶ್ರೀ. ಮಹಾದೇವಪ್ಪ
ದಿಡ್ಡಿಮನಿ ಪಿ.ಎಸ್.ಐ ಅಶೋಕ ನಗರ ಪೊಲೀಸ ಠಾಣೆ, ಕುಮಾರಿ ಶೈಲಾ ಪ್ಯಾಟಿಶೇಟ್ಟರ ಮ.ಪಿ.ಎಸ್.ಐ ಮತ್ತು ಶ್ರೀಮತಿ ಎಸ್. ಎಸ್. ತೇಲಿ ಪಿಎಸ್ಐ
(ಕಾ.ಸೂ)ರವರು ತಮ್ಮ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ ,ರಾಮು ಪವಾರ, ಪ್ರಶಾಂತ, ಶಿವಲಿಂಗಪ್ಪ, ದೇವಿಂದ್ರಪ್ಪ, ಮಹೇಶ ರವರೊಂದಿಗೆ ಬಹುಮನಿ ಲಾಡ್ಜಿಗೆ ಧಾವಿಸಿ ದಾಳಿ ಮಾಡಿ ಆರೋಪಿಗಳಾದ 1] ಜಾವೀದ ತಂದೆ ಅಲ್ಲಾವೂದ್ದಿನ ಖೇಳಗಿ ಸಾ// ವಿಜಾಪೂರ 2] ಇಮ್ರಾನ ತಂದೆ ಖಾಜಾಸಾಬ ಇಂಡಿಕರ್ ಸಾ// ವಿಜಾಪೂರ 3] ಝರೆಪ್ಪಾ ತಂದೆ ವೀರಣ್ಣಾ ಗೌರೆ ಸಾ// ವಿಜಾಪೂರ 4] ಮಹ್ಮದ ತಂದೆ ಮಹಿಬೂಬ ಖುರೇಶಿ ಸಾ// ಸಾಂಗ್ಲಿ 5] ಹೇಮಂತ ತಂದೆ ಶಿವಾಜಿ ಗಾಯಕವಾಡ ಸಾ/ ಸಾಂಗ್ಲಿ 6] ಸುನೀಲ ತಂದೆ ಭೀಮರಾವ ನಲೋಡೆ ಜಿ/ ಸಾಂಗ್ಲಿ 7] ವೈಭವ ತಂದೆ ವಸಂತ ಪವಾರ ಜಿ/ ಸಾಂಗ್ಲಿ ಇವರನ್ನು ಹಿಡಿದುಕೊಂಡು ಅವರಿಂದ ನಗದು ಹಣ 4,00,000=00 ರೂ ಮತ್ತು ರೈಸ್ ಪುಲ್ಲಿಂಗ್ ಐಟಂ ಎಂದು ಹೇಳಲಾದ ಪ್ಯಾಕ ಮಾಡಿದ ವಸ್ತು ವಶಪಡಿಸಿಕೊಂಡಿದ್ದು
ದಾಳಿ ಕಾಲಕ್ಕೆ ಇನ್ನೊಬ್ಬ ಮುಖ್ಯ ಆರೋಪಿ ಯುಸೂಫ @ ಸಮೀರ ಮತ್ತು ಜಾಕೀರ ಹುಸೇನ ಎಂಬುವವರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ.
ರೈಸ್ ಪುಲ್ಲಿಂಗ್ ಐಟಂ ಎಂದು ಹೇಳಲಾದ ಪ್ಯಾಕ ಮಾಡಿದ ವಸ್ತು ಅಪಾಯಕಾರಿ ಆಗಿರುವುದಾಗಿ
ಆರೋಪಿಗಳ & ಪಿ ರಮಣರೆಡ್ಡಿ ಇವರ ವಿಚಾರಣೆಯಲ್ಲಿ ತಿಳಿದು ಬಂದಿದ್ದು
ಈ ವಸ್ತು ಬಾಂಬ ನಿಷ್ಕ್ರೀಯ ದಳ ಮತ್ತು ವೈಜ್ಞಾನಿಕ ತಜ್ಞರಿಂದ ಪರೀಕ್ಷಿಸುವ ಸಲುವಾಗಿ ಅದನ್ನು
ಯಥಾಸ್ತಿತಿ ಕಾಯ್ದಿರಿಸಲಾಗಿದೆ. ತನಿಖೆಯಲ್ಲಿ ಮಹಾರಾಷ್ಟ್ರ ಸಾತಾರ ಜಿಲ್ಲೆಯ ಜಾವೀದ ಎಂಬುವವನು
ಸಹ ಇದೇ ರೀತಿ ಮೇಲ್ಕಂಡ ಆರೋಪಿಗಳಿಗೆ ಇದೇ ವ್ಯವಹಾರಕ್ಕಾಗಿ 28 ಲಕ್ಷ 50 ಸಾವಿರ ರೂ ಕೊಟ್ಟು ಮೋಸ ಹೋಗಿರುವುದಾಗಿ ತಿಳಿದು ಬಂದಿದ್ದು
ಇನ್ನೂ ಸಾಕಷ್ಟು ಜನ ಆರೋಪಿಗಳಿಂದ ಮೋಸ ಹೋಗಿರುವ ಬಗ್ಗೆ ತನಿಖೆಯಲ್ಲಿ ತಿಳಿದು ಬಂದಿದ್ದು
ಆರೋಪಿಗಳ ಮೇಲೆ ನಂಬಿಗೆ ದ್ರೋಹ ಮತ್ತು ವಂಚನೆ ಅಪರಾಧ ಅಡಿಯಲ್ಲಿ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಿಕೊಂಡು ಎಲ್ಲಾ 7 ಜನ ಆರೋಪಿಗಳನ್ನು ತನಿಖೆ ನಂತರ ನ್ಯಾಯಾಂಗ ಬಂಧನಕ್ಕೆ
ಒಳಪಡಿಸಲಾಗಿದೆ.
ಅಪಘಾತ ಪ್ರಕರಣಗಳು:
ಜೇವರ್ಗಿ ಪೊಲೀಸ ಠಾಣೆ: ದಿನಾಂಕ 11.04.2015 ರಂದು ಸಿದ್ದರಾಮ ತಂದೆ ವಿಜಯಕುಮಾರ ನಾಗರೆಡ್ಡಿ
ಸಾ|| ಹಾವನುರ ಠಾಣೆಗೆ ಹಾಜರಾಗಿ ದಿನಾಂಕ 11-04-2015 ರಂದು ತಾನು ಟಿಪ್ಪರ್ ನಂ ಕೆ.ಎ32ಸಿ1999 ನೇದ್ದರಲ್ಲಿ ಕುಳಿತುಕೊಂಡು
ಕಲಬುರಗಿ ಕಡೆಗೆ ಹೋಗುತ್ತಿರುವಾಗ ಚಾಲಕನು ಟಿಪ್ಪರ್ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಾ
ಜೇವರ್ಗಿ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರುಗಡೆ ಜೇವರ್ಗಿ ಕಲಬುರಗಿ ಮೇನ್ ರೋಡ್ ಮೇಲೆ ಟಿಪ್ಪರನ ಮುಂದೆ ಹೋಗುತ್ತಿದ್ದ ಟಿಪ್ಪರ್ ಕೆ.ಎ33ಎ2451 ನೇದ್ದರ ಚಾಲಕನು ಒಮ್ಮೆಲೆ
ಬ್ರೇಕ್ ಹಾಕಿದ್ದರಿಂದ ನಮ್ಮ ಟಿಪ್ಪರ್ ಮುಂದಿನ ಟಿಪ್ಪರ್‌ಗೆ ಡಿಕ್ಕಿ ಪಡಿಸಿ ನಾವು ಕುಳಿತಿದ್ದ ಟಿಪ್ಪರನ
ಮುಂಬಾಗ ಪೂರ್ತಿ ಜಖಂ ಗೊಂಡಿತ್ತದೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಜೇವರ್ಗಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ: ದಿನಾಂಕ: 11/04/2015 ರಂದು ಸಾಯಂಕಾಲ 4=30 ಗಂಟೆಯ ಸುಮಾರಿಗೆ ಶ್ರೀಮತಿ ಶಂಕ್ರಮ್ಮಾ ಗಂಡ
ಭೀಮಶಾ ಸಾ: ಇಟಗಾ ಇವರು ಕಲಬುರಗಿಯ ಕೆ.ಇ.ಬಿ.ಆಫೀಸ್ ಹತ್ತಿರದ ಪರಿವಾರ ಹೊಟೇಲ ಎದುರಿನ ರೋಡ ಮೇಲೆ
ನಡೆದುಕೊಂಡು ಎಸ್.ವಿ.ಪಿ.ಸರ್ಕಲ್ ರೋಡ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಯಾವುದೋ ಮೋ/ಸೈಕಲ್
ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶ್ರೀಮತಿ ಶಂಕ್ರಮ್ಮಾ ಗಂಡ ಭೀಮಶಾ ಸಾ:
ಇಟಗಾಇವರಿಗೆ ಅಪಘಾತಮಾಡಿ ಗಾಯಗೊಳಿಸಿ ಮೋ/ಸೈಕಲ್ ಸಮೇತ ಓಡಿ ಹೋದ ಬಗ್ಗೆ ಸಲ್ಲಿಸಿದ ದುರು
ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ
No comments:
Post a Comment