ಕಳವು
ಪ್ರಕರಣ :
ಜೇವರ್ಗಿ
ಠಾಣೆ : ದಿನಾಂಕ 28.03.2015 ರಂದು 20:45 ಗಂಟೆಯಿಂದ 29.03.2015
ರಂದು 06:00 ರ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ರೇವನೂರ ಸಿಮಾಂತರದ ಹೊಲ ಸರ್ವೇ ನಂ 42/2 ನೇದ್ದರಲ್ಲಿನ ವೊಡಾಫೋನ್ ಟಾವರಿನ ಸೆಲ್ಟರ್ ರೂಮ್ ನ
ಬಾಗಿಲ ಚಾವಿ ಮುರಿದು ಒಳಗೆ ಹೋಗಿ ಒಳಗಡೆ ಇದ್ದ ಒಟ್ಟು 24 ಬ್ಯಾಟರಿಗಳು ಅಂ.ಕಿ 24.000/ರೂ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಮಲ್ಲಿಕಾರ್ಜುನ. ತಂದೆ ಶಿವಶರಣಪ್ಪ ಕಲಬುರಗಿ ಸಾ|| ಕಾವೇರಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 31-03-2015 ರಂದು 10-30 ಎ ಎಮ್ ಕ್ಕೆ ಮುಸ್ಲಿಂ ಚೌಕ ಸನಾ ಹೋಟೆಲ ಹತ್ತಿರ ರೋಡಿನ
ಮೇಲೆ ಮುಸ್ತಾಕ ಅಹಮದ ಇತನು ನಡೆದುಕೊಂಡು
ಹೋಗುತಿದ್ದಾಗ ಆರೋಪಿ ತನ್ನ ಮೋ,ಸೈ ನಂ ಕೆ ಎ 32 ಇಸಿ 5537 ನೇದ್ದನ್ನು ಮಿಜಗುರಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಹೋಗಿ ಡಿಕ್ಕಿ ಪಡಿಸಿ ಅಪಘಾತಮಾಡಿದ್ದು ಅಪಘಾತದಲ್ಲಿ ತಾನು ಸಹ ಗಾಯ ಹೋಂದಿ ಮಹ್ಮದ
ಮುಸ್ತಾಕ ಇತನಿಗು ಸಹ ಭಾರಿ ಗಾಯಗೋಳಿಸಿರುತ್ತಾನೆ ಅಂತಾ ಶ್ರೀ ಅಜಮ ಪಟೇಲ ತಂದೆ ಮಹ್ಮದ ಅಲಿ ಸಾ: ಇಸ್ಲಾಮಾಬಾದ ಕಾಲೋನಿ ಕಲಬುರಗಿ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 30.03.2015 ರಂದು ನನ್ನ ಮಗ ರವಿಕುಮಾರ ಈತನು ನಡೆಸುತ್ತಿದ್ದ ನಮ್ಮ ಬುಲೇರೋ ವಾಹನ ನಂ ಕೆ.ಎ32ಎನ್.5722 ನೇದ್ದರಲ್ಲಿ ನಾನು ಮತ್ತು ನನ್ನ ಗಂಡ ಗಂಗಯ್ಯ ಕುಳಿತುಕೊಂಡು ಕೆಲಸದ ನಿಮಿತ್ಯ
ಜೇವರ್ಗಿಗೆ ಬರುವಾಗ ಜೈನಾಪುರ ಕ್ರಾಸ್ ಹತ್ತಿರ ಆಂದೋಲಾ ಕೆಲ್ಲೂರು ರಸ್ತೆಯ ಮೇಲೆ ಬರುತ್ತಿದ್ದಾಗ
ರಸ್ತೆಯ ಮೇಲೆ ದನಗಳು ಅಡ್ಡ ಬಂದಿದ್ದರಿಂದ ನನ್ನ ಮಗ ರವಿಕುಮಾರನು ಬುಲೇರೊ ಜೀಪ್ ಅನ್ನು ಅತಿ ವೇಗ
ಮತ್ತು ಅಲಕ್ಷ್ಯತನಿಂದ ನಡೆಸಿ ದನಗಳಿಗೆ ಉಳಿಸಲು ಹೋಗಿ ಒಮ್ಮೆಲೆ ಜೀಪ್‌ನ್ನು ಕಟ್ ಹೋಡೆದು
ರೋಡಿನ ಪಕ್ಕದ ಗಿಡಕ್ಕೆ ಡಿಕ್ಕಿ ಪಡಿಸಿ ನನಗೆ ಮತ್ತು ನನ್ನ ಗಂಡನಿಗೆ ಸಾಧಾ ಮತ್ತು ಭಾರಿ ರಕ್ತ
ಗಾಯ ಪಡಿಸಿರುತ್ತಾನೆ ಅಂತಾ ಶ್ರೀಮತಿ ಶಾಂತಾಬಾಯಿ ಗಂಡ ಗಂಗಯ್ಯ ಗುತ್ತೆದಾರ ಸಾ|| ಆಂದೋಲಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 14-03-2015
ರಂದು ಬೆಳಿಗ್ಗೆ 04-00 ಗಂಟೆ ಸುಮಾರಿಗೆ ಎಸ.ವಿ.ಪಿ. ಸರ್ಕಲ ಹತ್ತೀರ ಮಲಗಿದ್ದವನು ಎದ್ದುಕೊಂಡು
ರೈಲ್ವೇ ಸ್ಟೇಷನ ಕಡೆಗೆ ಚಹಾ ಕುಡಿಯುವ ಸಲುವಾಗಿ ನಡೆದುಕೊಂಡು ಹೋಗುವಾಗ ಎಸ.ವಿ.ಸರ್ಕಲ ಹತ್ತೀರ
ರೋಡ ಮೇಲೆ ಯಾವುದೋ ಒಂದು ಕಾರ ಚಾಲಕನು ತನ್ನ
ಕಾರನ್ನು ಕೇಂದ್ರ ಬಸ ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಜಗತ ಸರ್ಕಲ ರೋಡ ಕಡೆ ಹೋಗುವ
ಕುರಿತು ಬಂದು ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಬಲಗಾಲ ತೊಡೆಗೆ ಪೆಟ್ಟುಗೊಳಿಸಿ ಕಾರ ಸಮೇತ
ಓಡಿ ಹೋಗಿರುತ್ತಾನೆ ಅಂತಾ ಶ್ರೀ ಚಂದ್ರಶೇಖರ ತಮದೆ ಅಪ್ಪಣ್ಣಾ ರಾಮಗೊಂಡ ಸಾ: ಮುತ್ತಗಿ
ಗ್ರಾಮ ತಾ: ಚಿತ್ತಾಪೂರ ಜಿ: ಕಲಬುರಗಿ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment