ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ : 30-03-2015 ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಮಗನಾದ
ಶಿವಶರಣಪ್ಪ ಇತನು ಸೇಡಂಕ್ಕೆ ಹೊಗಿ ತನ್ನ ಶಾಲೆಯ ದಾಖಲಾತಿಗಳನ್ನು ತೆಗೆದುಕೊಂಡು ಬರುತ್ತೆನೆ.
ಅಂತಾ ಹೇಳಿ ಮೊಟಾರ ಸೈಕಲ ನಂ. ಕೆಎ-32 ಇ-8465 ನೇದ್ದರ ಮೇಲೆ ಸೇಡಂಕ್ಕೆ ಹೊಗಿದ್ದನು. ನಂತರ
ನಿನ್ನೆ ಸಾಯಂಕಾಲ 6-30 ಗಂಟೆಯ ಸುಮಾರಿಗೆ ನನ್ನ ಮಗನ ಗೆಳೆಯನಾದ ವಿರೇಶ ಆವಂಟಿ ಸಾ : ಸೇಡಂ ಇತನು
ಪೊನ್ ಮಾಡಿ ತಿಳಿಸಿದ್ದೆನೆಂದರೆ ಸಾಯಂಕಾಲ 6 ಗಂಟೆಯ ಸುಮಾರಿಗೆ ಸೇಡಂದ ದಾನಿಬಾಯಿ ಲೇಔಟ ಹತ್ತಿರ
ಇರುವ ವಾಟರ ಸರ್ವಿಸಿಂಗ ದುಖಾನ ಹತ್ತಿರ ಇದ್ದಾಗ ನಿಮ್ಮ ಮಗನಾದ ಶಿವಶರಣಪ್ಪ ಇತನು ಮೊಟಾರ ಸೈಕಲ
ಮೇಲೆ ಸೇಡಂ ಕಡೆಯಿಂದ ಕಲಬುರಗಿ ಕಡೆಗೆ ಚಲಾಯಿಸಿಕೊಂಡು ಹೊಗುತ್ತಿದ್ದನು ಆ ವೇಳೆಯಲ್ಲಿ ಕಲಬುರಗಿ
ಕಡೆಯಿಂದ ಒಬ್ಬ ಲಾರಿ ಚಾಲಕನು ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅತೀ ವೇಗ ಹಾಗೂ
ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಶಿವಶರಣಪ್ಪ ಇತನ ಮೊಟಾರ ಸೈಕಲಿಗೆ ಡಿಕ್ಕಿ
ಪಡಿಸಿದ್ದರಿಂದ ನಿಮ್ಮ ಮಗನಿಗೆ ತಲೆಗೆ ಭಾರಿ ರಕ್ತಗಾಯ, ಕಿವಿಯಿಂದ, ಬಾಯಿಯಿಂದ ರಕ್ತಸ್ರಾವವಾಗಿದ್ದು
ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿ ಕೈ ಮುರಿದಿರುತ್ತದೆ. ಬಲಗಾಲಿನ ಮೊಳಕಾಲಿಗೆ ಭಾರಿ
ರಕ್ತಗಾಯವಾಗಿ ಕಾಲು ಕಟ್ಟಾಗಿರುತ್ತದೆ, ಎಡಗಾಲಿನ ಕಪಗಂಡದ ಹತ್ತಿರ ಭಾರಿ ಗಾಯವಾಗಿ ಕಾಲು ಮುರಿದು ಸ್ಥಳದಲ್ಲಿಯೆ
ಮೃತಪಟ್ಟಿರುತ್ತಾನೆ. ಅಂತಾ ತಿಳಿಸಿದನು. ಸದರಿ ಅಪಘಾತಪಡಿಸಿದ ಲಾರಿ ನಂ. AP -04 TW-1079 ನೇದ್ದು ಇದ್ದು ಚಾಲಕನು ಅಪಘಾತಪಡಿಸಿ ಲಾರಿ ಅಲ್ಲಿಯೆ ನಿಲ್ಲಿಸಿ ಓಡಿ ಹೊಗಿರುತ್ತಾನೆ. ಅಂತಾ
ತಿಳಿಸಿದ್ದು ಸೇಡಂಕ್ಕೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಬಂದು ನೋಡಲಾಗಿ ವಿಷಯ ನಿಜವಿತ್ತು ಅಂತಾ
ಶ್ರೀಮತಿ ಲಲಿತಾ ಗಂಡ ಬಸವರಾಜ ಕುಂಬಾರ ಸಾ : ಪೇಠಶೀರೂರ ತಾ : ಚಿತ್ತಾಪೂರ ರವರು ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 30-03-2015 ರಂದು 9-30 ಪಿ ಎಮ್ ಕ್ಕೆ ಆಳಂದ ರೋಡಿನಲ್ಲಿ ಬರುವ ಶಿವಶಕ್ತಿ
ಖಾನಾವಳಿ ಎದುರು ರೋಡಿನ ಮೇಲೆ ಆರೋಪಿ ತನ್ನ ಗೂಡ್ಸ ಟಂ ಟಂ ,ನಂ ಕೆ ಎ 32 ಸಿ 3118 ನೇದ್ದನ್ನು ಆಳಂದ ಚೆಕ್ಕ ಪೊಷ್ಟ
ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕೆ ನಿಂತಿದ್ದ ಸುಭಾಶ್ಚಂದ್ರ ಇತನಿಗೆ ಡಿಕ್ಕಿ ಪಡಿಸಿ ಅಫಘಾತಪಡಿಸಿ
ಗಾಯ ಪೆಟ್ಟು ಗೊಳಿಸಿ ಹಾಗೆ ಚಲಾಯಿಸಿಕೊಂಡು ಹೋಗಿ ರೋಡಿನ ಪಕ್ಕಕೆ ನಿಂತಿದ್ದ ಅಟೋ ರೀಕ್ಷಾ ನಂ .
ಕೆ ಎ 32 6638 ನೇದ್ದಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಫಘಾತ ಮಾಡಿರುತ್ತಾನೆ ಅಂತಾ ಶ್ರೀ ಸುಭಾಶ್ಚಂದ್ರ ತಂದೆ ಸಿದ್ದಣ್ಣ ಕೋಹಿನೂರು ಸಾ|| ಶಿವಶಕ್ತಿ ಖಾನಾವಳಿ ಆಳಂದ ಚೆಕ್ಕ ಪೊಷ್ಟ ಹತ್ತಿರ
ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment