ಅಪಘಾತ
ಪ್ರಕರಣಗಳು :
ಗ್ರಾಮೀಣ
ಠಾಣೆ : ಶ್ರೀ ಶರಣಬಸಪ್ಪ ತಂದೆ
ಹಣಮಂತ ಗೊಬ್ಬುರೆ ಸಾ:ಕಡಗಂಚಿ ತಾ:ಆಳಂದ ಇವರು ದಿನಾಂಕ:-01/04/2015 ರಂದು ಬೆಳಿಗ್ಗೆ ಫಿರ್ಯಾದಿ
ಶರಣಬಸಪ್ಪ ಹಾಗು ಮೃತ ಮಹೇಶ ತಂದೆ ಕಾಳಪ್ಪ ಚೆಂಗಟಿ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ್ ನಂ
ಎಂ.ಎಚ್-14 ಕ್ಯೂ-6108 ನೇದ್ದರ ಮೇಲೆ ಕಡಗಂಚಿಯಿಂದ ಸುಂಟನೂರಕ್ಕೆ ಸೆಂಟ್ರಿಂಗ ಕೆಲಸ ಕುರಿತು
ಹೋಗುವಾಗ ಬೆಳಿಗ್ಗೆ 09:30 ಗಂಟೆಗೆ ಮೃತ ಮಹೇಶ ಇತನು ಸುಂಟನೂರ ಕ್ರಾಸ ಹತ್ತಿರ ತನ್ನ ಮೋಟಾರ
ಸೈಕಲ್ ತಿರುಗಿಸುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಆಳಂದ ಕಡೆಯಿಂದ ಅರ್ಜುನ ತಂದೆ
ಲಕ್ಷ್ಮಣ ಸಿಂಗೆ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನಂ ಎಂ.ಎಚ್-12 ಎಪ್.ಜೆ-2843
ನೇದ್ದನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ಕುಳಿತುಕೊಂಡು
ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಪಡಿಸಿದ ಪರಿಣಾಮ ಮಹೇಶ ಇತನಿಗೆ ತಲೆಗೆ ಭಾರಿ ಒಳಪೆಟ್ಟಾಗಿ ಮೂಗಿನಿಂದ ಕಿವಿಯಿಂದ
ಬಾಯಿಯಿಂದ ರಕ್ತ ಬಂದು ಬೇಹೊಸ ಆಗಿದ್ದು ಫಿರ್ಯಾದಿ ಹಾಗು ಆಪಾದಿತ ಅರ್ಜುನ ಇಬ್ಬರಿಗು ಕೂಡಾ
ಗಾಯಗಳಾಗಿದ್ದು ಸದರಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದಾಗ
ವೈದ್ಯಾದಿಕಾರಿಗಳು ಮಹೇಶನಿಗೆ ನೋಡಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 31-03-2015 ರಂದು 10-30 ಗಂಟೆಗೆ ನಗರದ ಮುಸ್ಲಿಂ ಚೌಕ ಸನಾ
ಹೋಟೆಲ ಹತ್ತಿರ ರೋಡಿನ ಮೇಲೆ ಮಹ್ಮದ ಇಲಿಯಾಸ ತಂದೆ ಅಬ್ದುಲ ವಾಹಿದ ಇತನು ತನ್ನ ಮೋಟಾರ ಸೈಕಲ ನಂ.
ಕೆ.ಎ 32 ಇ.ಸಿ 5537 ನೇದ್ದರ ಮೇಲೆ ಹಿಂದೆ ತನ್ನ ಅಕ್ಕನಾದ ರೇಷ್ಮಾಭಾನು ಇವಳನ್ನು ಕೂಡಿಸಿಕೊಂಡು
ಮಿಜಗುರಿ ರೋಡಿನ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ರೋಡ
ದಾಟುತ್ತಿದ್ದ ಮಸ್ತಾಕ ಅಹ್ಮದ ತಂದೆ ಬಸೀರ ಅಹ್ಮದ, ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತಾನು
ಸಹ ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದಿರುತ್ತಾನೆ. ಅಪಘಾತದಲ್ಲಿ ಮಸ್ತಾಕ ಅಹ್ಮದ ಈತನಿಗೆ
ತೆಲೆಗೆ ಭಾರಿ ಪೆಟ್ಟಾಗಿದ್ದು, ಆರೋಪಿತನಿಗೆ ಸಹ ಪೆಟ್ಟಾಗಿದ್ದು ದಿನಾಂಕ 31-03-2015 ರಂದು
ರಸ್ತೆ ಅಪಘಾತದಲ್ಲಿ ಭಾರಿಗಾಯಹೊಂದಿದ ಮಸ್ತಾಕ ಅಹ್ಮದ ತಂದೆ ಬಸೀರ ಅಹ್ಮದ ಈತನು ಕಲಬುರಗಿ ನಗರದ
ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ 01-04-2015 ರಂದು 09-10 ಎ.ಎಮ್
ಕ್ಕೆ ಉಪಚಾರ ಫಲಕಾರಿ ಆಗದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ
ಠಾಣೆ : ದಿನಾಂಕ ೦1.04.2015 ರಂದು ಜೇವರಗಿ ಪಟ್ಟಣದ ಅಗ್ನಿ ಶಾಮಕ ಠಾಣೆಯ ಮುಂದುಗಡೆ
ಜೇವರ್ಗಿ ಶಹಾಪುರ ಮೇನ್ ರೋಡ್‌ನಲ್ಲಿ ಮಾರುತಿ ಸುಝಕಿ ರಿಟ್ಜ ಕಾರ್ ಟಿ.ಪಿ ನಂ ಕೆ.ಎ28ಎನ್.ಟಿ21215 ನೇದ್ದರ ಚಾಲಕನು ಅತಿ
ವೇಗ ಮತ್ತು ಅಲಕ್ಷ್ಯತನದಿಂದ ಕಾರ್ ಅನ್ನು ಚಾಲಯಿಸಿ ಒಮ್ಮಲೆ ಯಾವುದೆ ಮುನ್ಸುಚನೆ ಇಲ್ಲದೆ ಬ್ರೇಕ್ ಹಾಕಿದ್ದರಿಂದ ಅವನ
ಹಿಂದೆ ಬರುತ್ತಿದ್ದ ಮೋಟಾರು ಸೈಕಲ್ ನಂ ಕೆ.ಎ32ಇಸಿ 5083 ನೇದ್ದರ ಸವಾರನು ತನ್ನ ಬೈಕ್ ಅನ್ನುಅತಿ
ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಮೇಲೆ ನಮೂದಿಸಿದ ಕಾರಿಗೆ ಡಿಕ್ಕಿ ಪಡಿಸಿ ಶಾಂತಾಬಾಯಿ ಮತ್ತು
ಮೌನೇಶ ಇವರಿಗೆ ಸಾಧಾ ಮತ್ತು ಭಾರಿ ರಕ್ತ ಗಾಯಪಡಿಸಿರುತ್ತಾನೆ ಅಂತಾ ಶ್ರೀ ಶರಣಪ್ಪ ತಂದೆ ನಾಗಪ್ಪ ಹೊನಗುಂಟಿ ಸಾ|| ಹಸನಾಪುರ ತಾ|| ಕಲಬುರಗಿ ರವರು
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ
ಠಾಣೆ : ಶ್ರೀ ಪವನ ತಂದೆ ಮಲ್ಲಿನಾಥ ರೇವೂರ, ಆಳಂದ ಕಾಲೂನಿ, ಆಳಂದ ರೋಡ ಕಲಬುರಗಿ ರವರು ದಿನಾಂಕ 01-04-2015 ರಂದು ಮುಂಜಾನೆ ಆಳಂದ
ರೋಡಿನಲ್ಲಿ ಬರುವ ಶೇಟ್ಟಿಕಾಂಪ್ಲೆಕ್ಸ ಎದರುಗಡೆ ರೋಡಿನ ಮೇಲೆ ಫಿರ್ಯಾದಿಯು ತನ್ನ ಮೋಟಾರ ಸೈಕಲ
ನಂ ಕೆ.ಎ 32 ಜೆ 4782 ನೇದ್ದನ್ನು ಚಲಾಯಿಸಿಕೊಂಡು ಶಹಾಬಜಾರ ನಾಕಾ ಕಡೆ ಬರುತ್ತಿದ್ದಾಗ ಆಳಂದ ಚೆಕ್ ಪೊಸ್ಟ
ಕಡೆಯಿಂದ ಒಂದು ಅಟೋರಿಕ್ಷಾ ಚಾಲಕ ತನ್ನ ಅಟೋರಿಕ್ಷಾವನ್ನು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಹೋಗಿ ಹಿಂದಿನಿಂದ ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತನ್ನ
ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ
ಠಾಣೆ : ದಿನಾಂಕ 30.03.2015 ರಂದು ಮುಂಜಾನೆ ಶ್ರೀ ಭೀಮಣ್ಣ
ತಂದೆ ಹಣಮಂತ ದೊಡ್ಡಮನಿ ರವರು ತಮ್ಮ ಮನೆಯ ಮುಂದೆ ನಿಂತಾಗ
ನನ್ನ ಮಗ ರಾಜಕುಮಾರ ಮತ್ತು ನನ್ನ ಹೆಂಡತಿ ಮಹಾದೇವಿ ಇವರು ಕೂಡಿ ನನಗೆ ನೀನು ಈ ಮನೆಯಲ್ಲಿ
ಬರಬೇಡ ಅಂತ ತಡೆದು ನಿಲ್ಲಿಸಿ ಕೈಯಿಂದ ಬಡಿಗೆಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ
ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ
ಮಾಡಿ ಆತ್ಮಹತ್ಯಮಾಡಿಕೊಳ್ಳಲು ಪ್ರಚೋದನೆ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ.
ಲಕ್ಷ್ಮೀ ಗಂಡ ಅಂಜಲಪ್ಪ ವಡ್ಡರ, ಸಾ:ಮಾದವಾರ ಗ್ರಾಮ ಇವರಿಗೆ ತಂದೆ-ತಾಯಿಯವರು ಮಾದವಾರ ಗ್ರಾಮದ ಅಂಜಲಪ್ಪ ತಂದೆ ಹಣಮಂತ
ವಡ್ಡರ ಇತನೊಂದಿಗೆ 9 ವರ್ಷದ ಹಿಂದೆ ಮದುವೆ ಮಾಡಿಕೊಟ್ಟಿದ್ದು ಎರಡು ಗಂಡು ಮಕ್ಕಳಿರುತ್ತಾರೆ.
ಒಂದು ವರ್ಷದವರೆಗೆ ಅತ್ತೆ-ಮಾವ & ಗಂಡ ಚೆನ್ನಾಗಿ ನೋಡಿಕೊಂಡು, ನಂತರ ನನ್ನ ಗಂಡ ಅಂಜಲಪ್ಪ
ಮತ್ತು ಅತ್ತೆಯಾದ ವೆಂಕಟಮ್ಮ, ಮಾವನಾದ ಹಣಮಂತ ಇವರು ನನಗೆ ಅಡುಗೆ ಮಾಡಲು ಬರುವದಿಲ್ಲ, ನೀನು
ಚೆನ್ನಾಗಿ ಇಲ್ಲ, ಮನೆಗೆಲಸ ಮಾಡಲು ಬರುವದಿಲ್ಲ, ರಂಡಿ ಭೋಸಡಿ, ಅಂತ ಬೈದು ಮಾನಸೀಕಿ ಹಾಗೂ ದೈಹಿಕ
ಕಿರುಕುಳ ನೀಡಿದ್ದಲ್ಲದೇ, ಸುಟ್ಟುಕೊಂಡು ಸಾಯಿ ರಂಡಿ ಅಂತ ಪದೇ-ಪದೇ ಬೈದು, ಕೈಯಿಂದ ಹೊಡೆ ಬಡೆ
ಮಾಡಿರುತ್ತಾರೆ.ಈ ವಿಷಯ ನಮ್ಮ ತವರು ಮನೆಯಲ್ಲಿ ನನ್ನ ತಂದೆ-ತಾಯಿಗೆ ತಿಳಿಸಲು ಸದರಿಯವರು ಸಂಸಾರ
ಇದ್ದ ಮೇಲೆ ಸಣ್ಣಪುಟ್ಟ ಜಗಳಗಳು ನಡೆಯುತ್ತವೆ ಅಂತ ಬುದ್ದಿ ಹೇಳಿ ಕಳೂಹಿಸಿ, ನನ್ನ ಮಗಳಿಗೆ
ಬೈಯುವದು, ಹೊಡೆಬಡೆ ಮಾಡಬೇಡಿರಿ ಅಂತ ಕೈ ಮುಗಿದು ಕೇಳಿಕೊಂಡಿದ್ದರೂ ಸಹಾ ನನಗೆ ಹಾಗೇಯೇ ದೈಹಿಕ
ಮತ್ತು ಮಾನಸೀಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ. ದಿ:29-03-2015 ರಂದು 10-00 ಎ.ಎಮ್.ಕ್ಕೆ ನಾನು ನನ್ನ
ಗಂಡನ ಮನೆಯಲ್ಲಿ ಕೆಲಸದಲ್ಲಿ ತೊಡಗಿದ್ದಾಗ ನನ್ನ ಗಂಡ ಅತ್ತೆ-ಮಾವ ಇವರು ನನಗೆ ಅಡುಗೆ ಮಾಡಲು
ಬರುವದಿಲ್ಲ, ನೀನು ಚೆನ್ನಾಗಿ ಇಲ್ಲ, ಮನೆಗೆಲಸ ಮಾಡಲು ಬರುವದಿಲ್ಲ, ಅಂತ ಹೇಳಿ ತಲೆಯ ಕೂದಲು
ಹಿಡಿದು ಹೊಡೆಬಡೆ ಮಾಡಿರುತ್ತಾರೆ. ನಮ್ಮ ಅತ್ತೆ ನೀನು ಬೆಂಕಿ ಹಚ್ಚಿಕೊಂಡು ಸಾಯಿ ರಂಡಿ ಅಂತ
ಬೈದಳು. ಸದರಿಯವರ ಕಿರುಕುಳ ತಾಳಲಾರದೇ ನಾನು ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಮೈಮೇಲೆ
ಸುರಿದುಕೊಂಡು ಕಡ್ಡಿ ಕೊರೆದು ಸುಟ್ಟುಕೊಂಡಿದ್ದು ಇರುತ್ತದೆ ನಂತರ ನನ್ನ ಗಂಡ ಹಾಗೂ ಓನಿಯವರು
ಕೂಡಿ ಬೆಂಕಿ ಆರಿಸಿದ್ದು ನನ್ನ ಮೈಗೆ ಎದೆಗೆ, ಟೊಂಕಕ್ಕೆ, ಹೊಟ್ಟೆಗೆ, ಗುಪ್ತಾಂಗಕ್ಕೆ, ಕೈಗಳಿಗೆ
ಸುಟ್ಟಗಾಯಗಳಾಗಿದ್ದರಿಂದ, ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ಕಾರಣ ನನಗೆ ಮಾನಸೀಕ ಹಾಗೂ
ದೈಹಿಕ ಕಿರುಕುಳ ನೀಡಿ, ಮೈಸುಟ್ಟುಕೊಂಡು ಉಪಚಾರ ಪಡೆಯುತ್ತಾ
ದಿನಾಂಕ 01-04-2014 ರಂದು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 01-04-2015 ರಂದು ಘತ್ತರಗಾ ಗ್ರಾಮದ ಅಂಬೆಡ್ಕರ
ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1
ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ
ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು
ಸಿಬ್ಬಂದಿ ಮತ್ತು ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಘತ್ತರಗಾ ಗ್ರಾಮದ
ಅಂಬೆಡ್ಕರ ಸರ್ಕಲದಿಂದ ಸ್ವಲ್ಪ ದೂರು ಮರೆಯಾಗಿ ನಿಂತು ನೋಡಲು ಅಂಬೆಡ್ಕರ ಸರ್ಕಲ ಮುಂದೆ
ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ
ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು
ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ದರೇಪ್ಪ ತಂದೆ ಭೀಮರಾಯ ಸಾಲುಟಗಿ ಸಾ: ಘತ್ತರಗಾ ಅಂತಾ
ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 480/- ರೂಪಾಯಿ ನಗದು ಹಣ ಹಾಗೂ ಅಂಕಿ
ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ದ್ವೀ ಚಕ್ರ
ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 27/03/2015 ರಂದು ರಾತ್ರಿಶ್ರೀ ಆನಂದ ರೆಡ್ಡಿ ತಂದೆ ಭೀಮರೆಡ್ಡಿ ರೆಡ್ಡಿ ಸಾ: ಮನೆ ನಂ. 11-1041/114/39ಬಿ ವಿಜಯನಗರ
ಕಾಲೋನಿ ಬ್ರಹ್ಮಪೂರ ಕಲಬುರಗಿ ರವರು ತಮ್ಮನ ಮೋಟರ
ಸೈಕಲ್ ಕೆಎ- 33 ಎಚ್- 8708 ಇದರ ಇಂಜಿನ ನಂ.AF5C61329855 ಚೆಸ್ಸಿ ನಂ. MD625KF5561CO3473 ಪರಪಲ್ ಕಲರ ಮಾಡೆಲ್ 2006 ಅ.ಕಿ. 20000/- ರೂ. ನೇದ್ದನ್ನು
ತೆಗೆದುಕೊಂಡು ನ್ಯೂ ತ್ರಿಶೂಲ್ ಬಾರ ಮುಂದುಗಡೆ ನಿಲ್ಲಿಸಿ ಪೋನ ಬಂದಿದ್ದರಿಂದ ಮಾತನಾಡುತ್ತಾ
ಸ್ವಲ್ಪ ದೂರದಲ್ಲಿ ಹೋಗಿ ಬಂದು 9-40 ಪಿ.ಎಂ.ಕ್ಕೆ ನೋಡಲು ನಾನು ನಿಲ್ಲಿಸಿದ ಸ್ಥಳದಲ್ಲಿ
ಟಿವಿಎಸ್ ಸ್ಟಾರ ಸೀಟಿ ಮೋಟಾರ ಸೈಕಲ್ ಇರಲಿಲ್ಲ. ಇದರ ಬಗ್ಗೆ ಎಲ್ಲಾ ಕಡೆ ಮಾಹಿತಿ ತಿಳಿಸಿ ಮತ್ತು
ನನ್ನ ಸಂಬಂಧಿಕರಲ್ಲಿ ಮನೆಯ ಅಕ್ಕಪಕ್ಕದವರಲ್ಲಿ ಗೆಳೆಯರಲ್ಲಿ ಮೊಟರ ಸೈಕಲ್ ಬಗ್ಗೆ ವಿಚಾರಿಸಲಾಗಿ
ನನ್ನ ಮೊಟರ ಸೈಕಲ್ ಎಲ್ಲಿ ಸಿಗಲಿಲ್ಲಾ ನಂತರ ನ್ಯೂ ತ್ರಿಶೂಲ್ ಬಾರದಲ್ಲಿ ಅಳವಡಿಸಿದ ಸಿಸಿಟಿವಿ
ಕ್ಯಾಮರಾ ನೋಡಲು ಯಾರೋ ಇಬ್ಬರೂ ಅಪರಿಚಿತರು ನಮ್ಮ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment