ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ರಾಜಮಹೇಂದ್ರ ತಂದೆ ದಿಗಂಬರರಾವ ಪುಲೆ ಉಃ ಎಸ,ಬಿ,ಎಮ್, ಬ್ಯಾಂಕ ಮ್ಯಾನೇಜರ ಸೇಡಂ ಸಾಃ ಬಿದ್ದಾಪೂರ ಕಾಲೋನಿ ಕಲಬುರಗಿ ಹಾಃ ವಃ ಯಶೋಧ ಟಾವರ ಸೇಡಂ
ಇವರು ದಿನಾಂಕ 07-03-2015 ರಂದು 2-45 ಪಿ,ಎಮ್,ಕ್ಕೆ ನಾನು ಮತ್ತು ಸಿಬ್ಬಂದಿಯವರು ಕೂಡಿ ಬ್ಯಾಂಕಿನ
ಸೆಟರಿನ ಕೀಲಿ ಹಾಕಿಕೊಂಡು ಮನೆಗೆ ಹೋಗಿದ್ದು ದಿನಾಂಕ 08-03-2015 ರಂದು 10-15 ಎ,ಎಮ್,ಕ್ಕೆ ನಾನು ಮನೆಯಲ್ಲಿದ್ದಾಗ ನಮ್ಮ ಬ್ಯಾಂಕಿನ ಬಿಲ್ಡಿಂಗ
ಮಾಲಿಕನಾದ ವಿಜಯಕುಮಾರ ತಂದೆ ವೆಂಕಟೇಶರಾವ ಇವರು ಪೋನ ಮಾಡಿ ತಿಳಿಸಿದೆನೆಂದರೆ ರಾತ್ರಿ
ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡುವ ಉದ್ದೇಶದಿಂದ ನಿಮ್ಮ ಬ್ಯಾಂಕಿನ ಕಿಟಕಿಯ ರಾಡ್ ಮುರಿದು ಒಳಗಡೆ ಹೊದ ಬಗ್ಗೆ ಕಂಡುಬರುತ್ತದೆ. ಅಂತ ಪೋನ
ಮಾಡಿ ತಿಳಿಸಿದಾಗ ನಾನು ಮತ್ತು ಪ್ರಾದೇಶಿಕ ಕಛೇರಿಯ ಸಹಾಯಕ ವ್ಯವಸ್ಥಾಪಕರಾದ ಶ್ರೀ ನೀಲಕಂಠ ಬಾಬು
ಹಾಗೂ ಪ್ರವೀಣಕುಮಾರ ಎಲ್ಲರೂ ಕೂಡಿ ಸೇಡಂ ಶಾಖೆಗೆ ಬಂದು ನೋಡಲಾಗಿ ವಿಜಯಕುಮಾರ ಇವರು ಪೋನ ಮಾಡಿ
ತಿಳಿಸಿದ ವಿಷಯ ನಿಜವಿತ್ತು. ನಾವು ಪರಿಶಿಲಿಸಿದಾಗ ಕಳ್ಳರು ಕಿಟಕಿಯಿಂದ ನುಗ್ಗಿದಾಗಿ ತೊರಿ
ಬರುತ್ತದೆ. ಮತ್ತು ಕಪಾಟಿನಲ್ಲಿದ್ದ ಸೇಪ್ ಡೆಪಾಜಿಟ್ ವಾಲ್ಟ್ (ಭದ್ರತಾ ಕಪಾಟು) ಕೀಯನ್ನು
ತಗೆದುಕೊಂಡು ಭದ್ರಾತಾ ಕಪಾಟನ್ನು ತಗೆಯಲು ಪ್ರಯತ್ನಿಸಿರುವುದಾಗಿ ನಂತರ ಬೀಗ ಬರದ ಕಾರಣ 2 ಫೀಟಿನ
ರೈಲ್ವೆ ಕಬ್ಬಿಣದ ಪಟ್ಟಿ ಉಪಯೋಗಿಸಿ ತಗೆಯಲು ಪ್ರಯತ್ನ ಮಾಡಿರುತ್ತಾರೆ. ಭದ್ರತಾ ಕಪಾಟಿಗೆ
ಹಾನಿವುಂಟಾಗಿರುತ್ತದೆ. ಆದರೆ ಯಾವುದೇ ಆರ್ಥೀಕ ಹಾನಿವುಂಟಾಗಿರುವುದಿಲ್ಲಾ ಹಿಂದಿನ ಬಾಗಿಲಿನ
ಬೀಗವನ್ನು ಒಳಗಡೆಯಿಂದ ಹಾಕಿರಲಾಗಿರುತ್ತದೆ. ಅದರ ಕೀಯನ್ನು ದುರಪಯೋಗಪಡಿಸಿಕೊಂಡು ಬಾಗೀಲು ತಗೆದು
ಮತ್ತೆ ಹೊರಗಡೆ ಹೋಗಿರುವುದಾಗಿ ಕಂಡುಬಂದಿರುತ್ತದೆ. ಸದರ ಘಟನೆಯು ದಿನಾಂಕ 07-03-2015 ರಂದು
2-45 ಪಿ,ಎಮ್,ದಿಂದ ದಿನಾಂಕ 08-03-2015 ರಂದು 10-15 ಎ,ಎಮ್,ದವರೆಗೆ ಜರುಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ:
ಸಂಚಾರಿ ಠಾಣೆ : ದಿನಾಂಕ 08-03-2015 ರಂದು ಸುಪರ ಮಾರ್ಕೆಟ
ಎರಿಯಾದಲ್ಲಿರುವ ಬಿ.ಎಸ್.ಎನ್.ಎಲ್. ಆಫಿಸ್ ಹತ್ತಿರ ಪ್ರಭುಕಾಂತ ತಂದೆ ಗುರುಶಾಂತಪ್ಪಾ
ಬುಜುರುಕ್ಕೆ ಈತನು ತನ್ನ ಕಾರ ನಂ ಕೆ ಎ 32. ಎನ್ 5069 ನೇದ್ದನ್ನು ಮದನ ಟಾಕಿಸ್ ಕಡೆಯಿಂದ
ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಿ.ಎಸ್.ಎನ್.ಎಲ್. ಆಫೀಸ್ ಒಳಗಡೆ ಇರುವ ಗಿಡ
ಬಿಳುವುದನ್ನು ನೋಡಿ ಒಮ್ಮೆಲೆ ಬ್ರೆಕ್ ಹಾಕಿ ಬಿ.ಎಸ್.ಎನ್.ಎಲ್. ಆಫೀಸ್ ಕಂಪೌಂಡ ಗೋಡೆಗೆ ಡಿಕ್ಕಿ
ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಕಾರಿನ ಮುಂದಿನ ಎಡಭಾಗ ಸಂಪೊರ್ಣ ಜಖಂಗೊಂಡಿರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 06.03.2015 ರಂದು ಶ್ರೀ ಮಾನಪ್ಪ ತಂದೆ ಚಂದಪ್ಪ ಮ್ಯಾಗೇರಿ ಸಾ|| ಮಲ್ಲಾ ಕೆ ಗ್ರಾಮ ರವರು ತಮ್ಮ ಊರಿನ ಬಸ್ ನಿಲ್ದಾಣದ ಹತ್ತಿರ ಚಿಕನ್ ತರಲು ಹೋದಾಗ ಹಣಮಂತ ತಂದೆ ಸಾಯಬಣ್ಣ ಕೇಳಗೇರಿ ಸಂಗಡ 6 ಜನರು ಸಾ|| ಎಲ್ಲರು ಮಲ್ಲಾ ಕೆ ಎಲ್ಲರು ಕೂಡಿಕೊಂಡು ಬಂದು ಹಳೆಯ ದ್ವೇಷದಿಂದ ನನ್ನೊಂದಿಗೆ ಜಗಳ ಮಾಡಿ ಅವಾಚ್ಯಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಡಿ ಕಾಲಿನಿಂದ ಒದ್ದು ಮತ್ತು ನನಗೆ ಮುಂದಕ್ಕೆ ಹೋಗದಂತೆ ತಡೆದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment