ಇಸ್ಪೀಟ
ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಜೇವರ್ಗಿ ಠಾಣೆ : ದಿನಾಂಕ 06.03.2015 ರಂದು ರದ್ದೆವಾಡಗಿ ಕ್ರಾಸ್ ಹತ್ತಿರ
ಜೇವರ್ಗಿ ಕೋಳಕೂರ ರೋಡ್ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಜೇವರ್ಗಿ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಿ ಇಸ್ಪೀಟ ಜೂಜಾಟದ
ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಪೀರ್ ಅಹ್ಮದ್ ತಂದೆ ಮಹಿಬೂಬ ಸಾಬ್ ಲೋಹಾರ್ ಸಂಗಡ 6 ಜನರು ಸಾ|| ಎಲ್ಲರು ಜೇವರ್ಗಿ ರವರನ್ನು ವಶಕ್ಕೆ ತೆಗೆದುಕೊಂಡು
ಸದರಿಯವರ ವಶದಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು
ಹಣ 9200/- ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ
ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ
ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 07/03/15 ರಂದು
ಸಂಜೆ ಶ್ರೀ ಸಾತಲಿಂಗ ತಂದೆ ವಿನಾಯಕರಾವ ಪಾಸೋಡಿ ಸಾ
: ಪಟ್ಟಣ ತಾ:ಜಿ: ಕಲಬುರಗಿ ತನ್ನ ಗೆಳೆಯರೊಂದಿಗೆ ಪಟ್ಟಣ ಗ್ರಾಮದ ಅಗಸಿ ಹತ್ತಿರ ಇರುವ
ಸಿದ್ದಾರೂಢ ಹಡಪದ ಇವರ ಹೋಟಲಕ್ಕೆ ಚಹಾ ಕುಡಿಯಲು ಹೋಗಲು
ಅಲ್ಲಿಗೆ ಆರೋಪಿತರಾದ ಮಲ್ಲಪ್ಪ ಬಿಸಗೊಂಡ ಮತ್ತು ರೇವಣಸಿದ್ಧಪ್ಪ ಮತ್ತಿಮೂಡ ಇವರಿಬ್ಬರು
ಫಿರ್ಯಾದಿ ನಮ್ಮ ಜಾತಿ ಹುಡುಗಿಗೆ ಬಣಿಜಗೆ ಹುಡುಗನೊಂದಿಗೆ ಮದುವೆ ಮಾಡಿಸಿ, ಸಾಕ್ಷಿ ಅಂತಾ ಯಾಕೇ
ಸಹಿ ಮಾಡಿದ್ದೀ, ಎಂಬ ದ್ವೇಷದಿಂದ ಸೆಂಟ್ರಿಂಗ ಬಡಿಗೆಯಿಂದ ಮಲ್ಲಪ್ಪ ಫಿರ್ಯಾದಿ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಮತ್ತು ರೇವಣಸಿದ್ಧಪ್ಪ
ಫಿರ್ಯಾದಿ ಎಡಗೈ ಮೇಲೆ ಹೊಡೆದು ಭಾರಿ
ಗುಪ್ತಗಾಯಗೊಳಿಸಿ ಮರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಅಂತಾ ಸಲ್ಲಿಸಿದ
ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 06.03.2015 ರಂದು ಶ್ರೀ ಭೀಮಪ್ಪ ತಂದೆ ಪೋತಪ್ಪ ತಳಕೇರಿ ಸಾ|| ಮಲ್ಲಾ (ಕೆ) ರವರು ತಮ್ಮ ಮನೆಯಲ್ಲಿದ್ದಾಗ ಮಾನಪ್ಪ ತಂದೆ ಚಂದಪ್ಪ ಮ್ಯಾಗೇರಿ ಸಂಗಡ 3 ಜನರು ಸಾ|| ಎಲ್ಲರು ಮಲ್ಲಾ ಕೆ ರವರು ಕೂಡಿಕೊಂಡು ಬಂದು ಹಳೆಯ ದ್ವೇಷದಿಂದ ನನ್ನೊಂದಿಗೆ ಜಗಳ ಮಾಡಿ ಅವಾಚ್ಯಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯಪಡಿಸಿರುತ್ತಾರೆ. ಮತ್ತು ನನಗೆ ಮುಂದಕ್ಕೆ ಹೋಗದಂತೆ ತಡೆದು ಕೈಯಿಂದ ಹೊಡೆದು ಕಾಲಿನಿಂದ ಒದ್ದು ಜೀವದ ಬೇದರಿಕೆ ಹಾಕಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment