ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ.ತಾಯಪ್ಪಾ ತಂದೆ ತಿಮ್ಮಣ್ಣಾ ದಂಡಗೂಳೆ ಸಾ;ಡಬರಾಬಾದ ಕ್ರಾಸ ಕಲಬುರಗಿ
ಇವರು ಲೇಬರ ಗುತ್ತೇದಾರ ಅಂತಾ ಕೆಲಸ ಮಾಡಿಕೊಂಡಿದ್ದು , ಈಗ ಸುಮಾರು 10-15 ದಿವಸಗಳಿಂದ ತನ್ನ
ಹತ್ತಿರ ಕೂಲಿಕೆಲಸಕ್ಕೆ ಹಣಮಂತ ಎಂಬುವನು
ಬಂದಿದ್ದು ಅವನು ಶರಣಬಸವೇಶ್ವರ ದೇವಸ್ಥಾನದ ಪೋಳೆಯಲ್ಲಿ
( ಆವರಣದಲ್ಲಿ) ಮಲಗುತಿದ್ದು ಅವನ ತಂದೆ ಹೆಸರು ವಿಳಾಸ ಗೊತ್ತಿರುವದಿಲ್ಲಾ ದಿನಾಂಕ 8-3-2015 ರಂದು ಸಾಯಂಕಾಲ 5-45 ಗಂಟೆಯ
ಸುಮಾರಿಗೆ ಮಳೆ ಬರುತ್ತಿದ್ದರಿಂದ 200/- ರೂ ಖರ್ಚಿಗೆ ತೆಗೆದುಕೊಂಡು ಹೋಗಿರುತ್ತಾನೆ ದಿನಾಂಕ.
9-3-2015 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ
ನಮ್ಮ ಹತ್ತಿರ ಕೆಲಸ ಮಾಡುವ ಹಣಮಂತ ಇತನಿಗೆ ರಾಮನಗರ ಕ್ರಾಸ ಹತ್ತಿರ ಹೇಮಚಂದ ಪ್ರೇಮಜಿ ಇವರ ಖುಲ್ಲಾ ಜಾಗೆಯಲ್ಲಿ ಯಾರೋ ದುಷ್ಕರಮಿಗಳು
ಯಾವುದೊ ದುರುದ್ದೇಶದಿಂದ , ವೈಷಮ್ಯದಿಂದ
ಕೊಲೆ ಮಾಡಿರುತ್ತಾರೆ ವಿಷಯಗೊತ್ತಾಗಿ ಹೋಗಿ ನೋಡಲಾಗಿ ಅವನ ಹಣೆಯ ಎಡಭಾಗದ ಮೇಲಭಾಗದಲ್ಲಿ ಭಾರಿ ಚುಚ್ಚಿದ ರಕ್ತಗಾಯವಾಗಿದ್ದು ಬೆಳ್ಳಗೆ ಎಲಬು ಕಾಣುತಿದ್ದು , ಹಣೆಯ ಮದ್ಯದಲ್ಲಿ ಚುಚ್ಚಿದ ಭಾರಿರಕ್ತಗಾವಯವಾಗಿ ಬೆಳ್ಳಗೆ ಎಲಬು ಕಾಣುತ್ತಿದೆ, ಮತ್ತು ಎಡಕಿವಿಯ ಕೆಳಭಾಗದಲ್ಲಿ ಹರಿದಿರುತ್ತದೆ, ಮುಖದ ಎಡಭಾಗದಲ್ಲಿ ಕಲ್ಲಿನಿಂದ ಜಜ್ಜಿದ ರಕ್ತ ಕಂದುಕಟ್ಟಿದ್ದ ಭಾರಿಗಾಯವಿರುತ್ತದೆ, ಬಾಯಿಗೆ ಪೆಟ್ಟಾಗಿ ರಕ್ತಸ್ರಾವವಾಗಿ ಮೃತಪಟ್ಟಿದ್ದು ಕೊಲೆಯಾದ ಹಣಮಂತ ವಯ;30-35 ವರ್ಷ ಉ;ಕೂಲಿಕೆಲಸ ವಿಳಾಸ ಗೊತ್ತಿರುವದಿಲ್ಲಾ , ಎತ್ತರ 5’ 5’’ ಉದ್ದನೆಯ ಮುಖ , ತಳ್ಳನೆಯ ಸದೃಢ ಮೈಕಟ್ಟು ಹೊಂದಿದ್ದು ,ಇತನಿಗೆ ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕೆ ಯಾವುದೋ ವೈಷಮ್ಯದಿಂದ ದಿನಾಂಕ 8-3-2015 ರಂದು 7-00 ಪಿ.ಎಂ.ದಿಂದ ದಿನಾಂಕ 9-3-2015 ರಂದು 7-00 ಎ.ಎಂದ ಮದ್ಯ ಅವಧಿಯಲ್ಲಿ ಯಾವುದೋ ಆಯುಧ ಮತ್ತು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಧೀಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ
ಮೇಲೆ ದಾಳಿ :
ಬ್ರಹ್ಮಪೂರ ಠಾಣೆ : ದಿನಾಂಕ: 09/03/2015 ರಂದು ಮದ್ಯಾಹ್ನ ಪೊಲೀಸ್
ಠಾಣೆಯ ವ್ಯಾಪ್ತಿಯ ಬಾಪೂನಗರ ಬಡಾವಣೆಯ ವಿಠಲ ಮಂದಿರ ಹತ್ತಿರ ಅನಧೀಕೃತ ಮದ್ಯ ಮಾರಾಟ
ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ದೊರೆತ ಮೇರೆಗೆ ಶ್ರೀ ಮಾರುತಿ ಎ.ಎಸ್.ಐ. ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ವಿಠಲ ಮಂದಿರ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಒಬ್ಬ ಮನುಷ್ಯ ಅನಧೀಕೃತ ಮದ್ಯ
ಮಾರಾಟ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿದಾಗ ಸದರಿಯವನು ತಪ್ಪಿಸಿಕೊಂಡು ಓಡಿ ಹೋಗಿದ್ದು,
ಅವನು
ಅನಧೀಕೃತವಾಗಿ ಮದ್ಯ ಮಾರುತ್ತಿದ್ದ ಸ್ಥಳದಲ್ಲಿ ಎಡರು ಕಾಟನ್ ಬಾಕ್ಸದಲ್ಲಿ ಓಲ್ಡ ಟಾವರನ್ 180 ಎಮ್.ಎಲ್,ನ ತಲಾ 48 ರಂತೆ ಒಟ್ಟು 96 ಟೇಟ್ರಾ ಪಾಕೀಟಗಳು
ದೊರೆತ್ತಿದ್ದು ಒಂದು ಪಾಕೀಟಿಗೆ 60 ರೂ ಯಂತೆ ಅವುಗಳ ಒಟ್ಟು
ಅ||ಕಿ|| 5.760/-ರೂಪಾಯಿ ಬೆಲೆ ಬಾಳುವ
ಮದ್ಯ ದೊರೆತಿದ್ದು ಅನಧೀಕೃತ ಮದ್ಯ ಮಾರಾಟ ಮಾಡುತ್ತಿದ್ದವನ ಹೆಸರು ವಿಚಾರಿಸಲು ರಮೇಶ ತಂದೆ
ವಿಜಯಕುಮಾರ ಕಾಳೆ ಸಾ|| ಬಾಪೂನಗರ ಕಲಬುರಗಿ ಅಂತಾ
ಗೊತ್ತಾಗಿದ್ದು ಸದರಿ ಮುದ್ದೇಮಾಲಿನೊಂದಿಗೆ ಬ್ರಹ್ಮಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ
ದುಂಡಪ್ಪಾ @ ದಿನೇಶ ತಂದೆ ಮಲ್ಲೇಶಪ್ಪಾ ಸಾ: ಇಂಟರನ್ಯಾಶನಲ ಹೋಟಲ ಹಿಂದುಗಡೆ ಟಮಕಿ ನಗರ ಕಲಬುರಗಿ ರವರು ದಿನಾಂಕ 08-03-2015 ರಂದು
ಸಾಯಂಕಾಲ 7-20 ಗಂಟೆ ಸುಮಾರಿಗೆ ನಾನು ಚಲಾಯಿಸುತ್ತೀರುವ ಮೋಟಾರ ಸೈಕಲ ನಂ ಕೆಎ-32-ಆರ್-2535
ನೇದ್ದರ ಮೇಲೆ ನನ್ನ ಹೆಂಡತಿ ಸುಜಾತ ಮಕ್ಕಳಾದ ದಾನೇಶ್ವರಿ, ಸಿಂದು ಹಾಗೂ ನನ್ನ ಅಳಿಯ ಗುರುಕಿರಣ
ರವರನ್ನು ಕುಡಿಸಿಕೊಂಡು ಮನೆಯಿಂದ ಸುಪರ ಮಾರ್ಕೆಟಕ್ಕೆ ಎಸ.ವಿ.ಪಿ. ಸರ್ಕಲ ಮುಖಾಂತರವಾಗಿ
ಹೋಗುವಾಗ ಮನಿ ವಿಧಾನ ಸೌಧದ ಪಕ್ಕದಲ್ಲಿರುವ ಎನ,ಸಿ.ಸಿ ಆಫೀಸ್ ಎದುರಿನ ರೋಡ ಮೇಲೆ ಹಿಂದಿನಿಂದ ಯಾವುದೋ
ಒಂದು ಆಟೊರಿಕ್ಷಾ ಚಾಲಕನು ತನ್ನ ಆಟೋರಿಕ್ಷಾ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ನನಗೆ ಬಲಗೈ ಮುಂಗೈ
ಹತ್ತೀರ ರಿಸ್ಟ ಹತ್ತೀರ ರಕ್ತಗಾಯ ಹಾಗೂ ಬಲಕಣ್ಣಿನ ಕೆಳಗಡೆ ತರಚಿದ ಗಾಯ ಹಾಗೂ ನನ್ನ ಹೆಂಡತಿ
ಸುಜಾತ ಹಾಗೂ ಅಳಿಯ ಗುರುಕಿರಣ ಇವರಿಗೆ ಗಾಯಗೊಳಿಸಿ ಆಟೋ ಚಾಲಕ ಆಟೋರಿಕ್ಷಾ ವಾಹನವನ್ನು
ಚಲಾಯಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಹೆಚ್ಚುವರಿ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ
ಸಂಚಾರಿ ಠಾಣೆ : ಶ್ರೀ
ನಾನಾಗೌಡ ತಂದೆ ಮಹಾಂತಗೌಡ ಪಾಟೀಲ ಸಾ: ಗಣೇಶ ನಗರ
ಕಲಬುರಗಿ ರವರು ದಿನಾಂಕ
08-03-2015 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಸಾಗರ ಇಬ್ಬರೂ ಕೂಡಿ ಸಾಗರ ಇತನು
ಚಲಾಯಿಸುತ್ತಿರುವ ಮೋಟಾರ ಸೈಕಲ ನಂ ಕೆಎ-32-ಡಬ್ಲೂ-8486 ನೇದ್ದ್ದರ ಮೇಲೆ ನಾನು ಹಿಂದುಗಡೆ
ಕುಳಿತು ಎಸ,ಎಸ,ಪಾಟೀಲ ರವರ ಮನೆಗೆ ಹೋಗಿ ವಾಪಸ್ಸ ಮನೆಗೆ ಬರುವ ಕುರಿತು ರಾಮ
ಮಂದಿರ ರಿಂಗ ರೋಡ ಮುಖಾಂತರ ಹೋಗುವಾಗ ಗಣೇಶ ನರ್ಸಿಂಗ ಹೋಮ ಎದುರುಗಡೆ ಬರುವ ಮೆಡಿಪ್ಲಸ ಮೆಡಿಕಲ್
ಸ್ಟೋರ ಎದುರು ರೋಡ ಮೇಲೆ ಎದುರಿನಿಂದ ಯಾವುದೊ ಒಂದು ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲ
ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ
ಅಪಘಾತ ಮಾಡಿದನು ಅಪಘಾತದಿಂದ ನನಗೆ ಬಲಗಾಲ
ಮೊಳಕಾಲಿನ ಕೆಳೆಗೆ ಭಾರಿ ಪೆಟ್ಟು ಬಿದ್ದು ರಕ್ತ ಬಂದಿತ್ತು, ಎಡಗೈ
ಮುಂಗೈ ಹತ್ತೀರ ತರಚಿದ ಗಾಯ, ಬಲಗಡೆ
ಹೆಡಕಿಗೆ ತರಚಿದ ಗಾಯಗಳಾಗಿದ್ದವು ಸಾಗರ ಇತನಿಗೆ ಯಾವುದೆ ಗಾಯಗಳು ಆಗಿರುವದಿಲ್ಲ. ಮೋಟಾರ ಸೈಕಲ ಸವಾರನು ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ವೆಂಕಟರಾವ ತಂದೆ ಶಾಮರಾವ ಕುಲಕರ್ಣಿ ಸಾ|| ಬಬಲಾದ ಹಾ||ವ|| ಬಿದ್ದಾಪೂರ ಕಾಲೋನಿ
ಕಲಬುರಗಿ ಇವರು ನಿಂಬರ್ಗಾ ಗ್ರಾಮದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ
ಕಲಬುರಗಿಯಿಂದ ತನ್ನ ಮಗನಾದ ಆಕಾಶ ಇತನು ರಾಣೋಜಿ ಇವರ ಮೋಟಾರ ಸೈಕಲ ನಂ. ಕೆ.ಎ 32, ಎಸ್ 7820 ನೇದ್ದರ ಮೇಲೆ ಹೊರಟಿದ್ದು ನಾನು ನಮ್ಮರಿನ ಗೌಡರ ಕಾರಿನಲ್ಲಿ ನನ್ನ ಮಗನ ಮೋಟಾರ ಸೈಕಲ
ಹಿಂದುಗಡೆ ಹೊರಟಿದ್ದು ದಿನಾಂಕ 08/03/2015 ರಂದು ಅಂದಾಜ ಮಧ್ಯಾಹ್ನ 01.15 ಪಿ.ಎಮ ಸುಮಾರಿಗೆ ಸದರಿ ಮೋಟಾರ ಸೈಕಲ ಪಟ್ಟಣ ಕ್ರಾಸಿನಿಂದ ಸ್ಟೇಶನ ಗಾಣಗಾಪೂರ ಕಡೆಗೆ
ಹೋಗುವ ರೋಡಿಗೆ ಬಾಬಾ ಫಕ್ರೊದ್ದೀನ ದರ್ಗಾ ಇನ್ನು ಸ್ವಲ್ಪ ದೂರದಲ್ಲಿದ್ದು ಎದುರುಗಡೆಯಿಂದ ಒಂದು
ಟಮ ಟಮ ನಂ. ಕೆ.ಎ 32, ಬಿ 9339 ನೇದ್ದರ ಚಾಲಕನು ಅತೀವೇಗ ಮತ್ತು ನಿಷ್ಕಾಳಜಿತನಿಂದ ನಡೆಸಿಕೊಂಡು
ಬಂದು ರಾಣೋಜಿ ಇವರು ನಡೆಸುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿದ್ದು ಕೆಳಗೆ ಬಿಳಿಸಿ ಅದರ
ಚಾಲಕನು ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಅಪಘಾತದಲ್ಲಿ ಫಿರ್ಯಾದಿಯ ಮಗನಾದ ಆಕಾಶನಿಗೆ ಬಲಗಾಲ
ಮೋಳಕಾಲಿಗೆ ಭಾರಿ ರಕ್ತಗಾಯ, ಎಡಗೈ ಮುಂಗೈಗೆ ತರಚಿದ ಗಾಯವಾಗಿದ್ದು, ರಾಣೋಜಿ ಇತನಿಗೆ ಬಲಗಡೆ ಎದೆಯ ಪೊಕ್ಕೆಗೆ ಭಾರಿ ಗುಪ್ತ ಪೆಟ್ಟು, ಬಲಗೈ ಹಸ್ತಕ್ಕೆ ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು
ಸಾರಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಸೋನಾಬಾಯಿ ಗಂಡ ಅಣ್ಣಪ್ಪ ಸನಾದಿ ಸಾ|| ಯಳಸಂಗಿ ಇವರು ರೇಶನ ಕಾರ್ಡ ಸಂಭಂಧ ತನ್ನ ಸೊಸೆಯಾದ ಕಮಲಾಬಾಯಿ
ಹಾಗೂ ಅವಳ ತಾಯಿಯಾದ ಪುತಳಾಬಾಯಿ ಇಬ್ಬರೂ ಸೇರಿ ದಿನಾಂಕ 08/03/2015 ರಂದು ರಾತ್ರಿ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಊದು ಕೊಳವೆಯಿಂದ ತಲೆಗೆ ಎಡಗೈಗೆ
ಬಲಮೊಳಕಾಲಿಗೆ ಹೊಡೆ ಬಡೆ ಮಾಡಿ ಭಾರಿ ರಕ್ತಗಾಯ ಮತ್ತು ಗುಪ್ತಗಾಯಪಡಿಸಿ ಜೀವ ಭಯ ಪಡಿಸಿ
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment