ಗುಂಡು ಹಾರಿಸಿ
ಕೊಲೆ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 24/02/2015 ರಂದು ಶ್ರೀ ದಿಲೀಪ ತಂದೆ ಶಂಕರ ಪವಾರ ಸಾ|| ಪ್ರತಾಪ ನಗರ ತಾ|| ಉತ್ತರ ಸೋಲ್ಲಾಪೂರ ಜಿ||
ಸೋಲ್ಲಾಪೂರ (ಎಮ್.ಹೆಚ್) ರವರ ಮತ್ತು ನಮ್ಮ ಪಕ್ಕದ ತೀರೆ ತಾಂಡಾದವನಾದ
ದತ್ತಾತ್ರೇಯ ತಂದೆ ಸುಭಾಷ ರಾಠೋಡ ಇಬ್ಬರು ಕೂಡಿ ಮನೆಗಳ ಲೈಟ ಪೀಟಿಂಗ ಮಾಡುವ ಕೆಲಸ ಮಾಡುತ್ತಿದ್ದು
ಈಗ 4 ದಿನಗಳ ಹಿಂದೆ ನನ್ನ ಜೊತೆಗೆ ಕೆಲಸ ಮಾಡುವ ದತ್ತು ರಾಠೋಡ ಈತನ ಮಾವ ನಾಗೇಶ ಇವನು ನಮ್ಮ
ಹತ್ತಿರ ಬಂದು ನಾನು ಹೊಸ ಮನೆ ಕಟ್ಟುತ್ತಿದ್ದೆನೆ, ಆ ಮನೆಗೆ ನೀವುಗಳು ಲೈಟ ಪೀಟಿಂಗ ಮಾಡಲು ಬರಬೇಕು ಎಂದು ವ್ಯವಹಾರ ಮಾತಾಡಿದ್ದರಿಂದ
ನಾವಿಬ್ಬರು ಒಪ್ಪಿ ಲೈಟ ಪೀಟಿಂಗ ಮಾಡಲು ಅಫಜಲಪೂರ ತಾಲೂಕಿನ ಬಳೂರ್ಗಿ ತಾಂಡಾಕ್ಕೆ ಈಗ 4 ದಿನಗಳ ಹಿಂದೆ ಬಂದು ನಾಗೇಶ ಚವ್ಹಾಣ ಈತನ
ಮನೆಯಲ್ಲಿ ಲೈಟ ಪೀಟಿಂಗ ಮಾಡುತ್ತಾ ಇದ್ದಿರುತ್ತೆವೆ.ಹೀಗಿದ್ದು ನಿನ್ನೆ ದಿನಾಂಕ 23-02-2015
ರಂದು ಸಂಜೆ 9:30 ಗಂಟೆ ಸುಮಾರಿಗೆ ನಾಗೇಶ ಚವ್ಹಾಣ ಇವರ ಹಳೆ ಮನೆಯಲ್ಲಿ ಊಟ ಮಾಡಿಕೊಂಡು ನಾನು ಮತ್ತು
ದತ್ತಾತ್ರೇಯ ತಂದೆ ಸುಬಾಷ ರಾಠೋಡ, ದತ್ತು ತಂದೆ ಹರಿಶ್ಚಂದ್ರ ರಾಠೊಡ ಹಾಗೂ ಮನೆಯ ಮಾಲಿಕನಾದ ನಾಗೇಶ ತಂದೆ ನಾಮದೇವ ಚವ್ಹಾಣ
ನಾಲ್ಕು ಜನರು ನಾವು ಲೈಟ ಪೀಟಿಂಗ ಮಾಡುತ್ತಿದ್ದ ಹೊಸಮನೆಯಲ್ಲಿ ಬಂದು ಮಲಗಿಕೊಂಡಿರುತ್ತೆವೆ.
ಅಂದಾಜು ಇಂದು ದಿನಾಂಕ 24-02-2015
ರಂದು ಮದ್ಯ ರಾತ್ರಿ 01:00 ಗಂಟೆ ಸುಮಾರಿಗೆ ನಾವು ಮಲಗಿಕೊಂಡಿದ್ದ ರೂಮಿನ ಬಾಗಿಲನ್ನು ಯಾರೊ ಬಡೆಯುತ್ತಿದ್ದ ಸಪ್ಪಳ
ಕೇಳಿ ನಮ್ಮ ಜೋತೆಗೆ ಮಲಗಿದ್ದ ನಾಗೇಶ ಚವ್ಹಾಣ ಇವನು ಎದ್ದು ಕಿಡಕಿಯಲ್ಲಿ ಯಾರು ಎಂದು ಕೇಳಿದನು.
ಹೊರಗಡೆ ಇದ್ದವರು ನೀರು ಕೊಡಿ ಎಂದು ಕೇಳಿದರು, ಆಗ ನಾಗೇಶನು ನೀರು ಇಲ್ಲ ಅಂತಾ ಹೇಳಿದನು, ಆಗ ಹೊರಗೆ ಇದ್ದವರು ಏರು ದ್ವನಿಯಲ್ಲಿ ಬೈಯುತ್ತಿದ್ದರು ಆಗ ನಾಗೇಶನು ಬಾಗಿಲು ತಗೆದು ಹೊರಗೆ
ಹೋದನು. ನಾವು ಉಳಿದ ಮೂರು ಜನರು ಅಲ್ಲೆ ಮಲಗಿಕೊಂಡಿದ್ದೆವು. ನಾಗೇಶ ಚವ್ಹಾಣ ಈತನು ಹೊರಗೆ ಹೋದ
ನಂತರ ಯಾರೊ ಅವನ ಜೋತೆಗೆ ಕನ್ನಡದಲ್ಲಿ ಏರು ದ್ವನಿಯಲ್ಲಿತಾಡುತ್ತಾ ಮಾತಾಡುತ್ತಾ ಒಮ್ಮೆಲೆ ಗುಂಡು
ಹಾರಿಸಿದಂತೆ ಡಮ್ಮ ಡಮ್ಮ ಎನ್ನುವ ಬಾರಿ ಶಬ್ದ ಕೆಳಿಸಿತು ಆಗ ನಾವುಗಳು ಎದ್ದು ಹೊರಗೆ ಬಂದು
ನೊಡಲಾಗಿ ಯಾರೊ ಎರಡು ಜನ ವ್ಯಕ್ತಿಗಳು ಕತ್ತಲಲ್ಲಿ ಓಡಿ ಹೊದರು, ಹಾಗೂ ಅಲ್ಲೆ ಸದರಿ ಮನೆಯ ಬಾಗಿಲದ ಮುಂದೆ ನಾಗೇಶನು ಬಿದ್ದು ಒದ್ದಾಡುತ್ತಿದ್ದನು, ಅವನನ್ನು ನಾವು ನೋಡಲಾಗಿ ಅವನ ಬಲಗಣ್ಣಿನ ಕೇಳಗೆ ಬಾರಿ ಗಾಯವಾಗಿ ರಕ್ತ ಸೊರುತ್ತಿತ್ತು, ಸದರಿ ಸಮಯದಲ್ಲಾದ ಗುಂಡಿನ ಶಬ್ದಕ್ಕೆ ಸುತ್ತ ಮುತ್ತಲಿನ ಜನರು ಹಾಗೂ ಅವನ ತಂದೆ ನಾಮದೇವ
ತಾಯಿ ಗೋದಾವರಿ ಹಾಗೂ ಲಕ್ಷ್ಮಣ ಚವ್ಹಾಣ ಹಾಗೂ ಇತರರು ಅಲ್ಲಿಗೆ ಬಂದರು. ನಂತರ ಸದರಿಯವರು ಮತ್ತು
ನಾವು ಎಲ್ಲರೂ ಕೂಡಿ ನಾಗೇಶನನ್ನು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಅಫಜಲಪೂರದ ಸರ್ಕಾರಿ
ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ವೈದ್ಯಾದಿಕಾರಿಗಳ ಸಲಹೆ ಮೇರೆಗೆ
ನಾಗೇಶನನ್ನು ಹೆಚ್ಚಿನ ಉಪಚಾರಕ್ಕಾಗಿ ಸೊಲ್ಲಾಪೂರದ ಅಶ್ವೀನಿ ಆಸ್ಪತ್ರೆಗೆ
ಕಳುಹಿಸಿಕೊಟ್ಟಿರುತ್ತೆವೆ.ಸದರಿ ನಾಗೇಶ ತಂದೆ ನಾಮದೇವ ಚವ್ಹಾಣ ವ|| 25 ವರ್ಷ ಈತನನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಯಾರೊ ಇಬ್ಬರು ದುಸ್ಕರ್ಮಿಗಳು ಯಾವುದೊ
ದ್ವೇಷದಿಂದ ಯಾವುದೊ ಒಂದು ಆಯುದದಿಂದ ನಾಗೇಶನ ಮೇಲೆ ಗುಂಡು ಹಾರಿಸಿ ಬಾರಿ ರಕ್ತಗಾಯ ಪಡಿಸಿ ಕೊಲೆ
ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಸರಕಾರಿ
ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಹೊನ್ನೇಶ ಅಳ್ಳಗಿ ಸಹಾಯಕ ಇಂಜಿನಿಯರ್ ಪಂಚಾಯತ ರಾಜ ಇಂಜನಿಯರ್
ಉಪ ವಿಭಾಗ ಅಫಜಲಪೂರ ಇವರು ದಿನಾಂಕ 30-01-2015
ರಂದು 12:15
ಪಿ ಎಮ್ ಕ್ಕೆ ಅಫಜಲಪೂರದ ತಮ್ಮ ಕಾರ್ಯಾಲಯದಲ್ಲಿದ್ದಾಗ ಗೌರ (ಬಿ)
ಗ್ರಾಮ ಪಂಚಯಾತಿಯ ಮಾಜಿ ಅದ್ಯಕ್ಷರಾದ ರುದ್ರಗೌಡ ಪಾಟಿಲ ರವರು ಕಾರ್ಯಾಲಯಕ್ಕೆ ಬಂದು
ಪಿರ್ಯಾದಿದಾರರಿಗೆ ಗೌರ (ಬಿ) ಗ್ರಾಮ ಪಂಚಯಾತಿಯ ವ್ಯಾಪ್ತಿಯಲ್ಲಿ ಮಾಡಿದ ನರೇಗಾ ಯೋಜನೆಯ
ಕಾಮಾಗಾರಿಗಳ ಎಸ್.ಕ್ಯೂ ಎಮ್ / ಡಿ.ಕ್ಯೂ.ಎಮ್ ಖಾಲಿ ನಮೂನೆಗಳ ಮೇಲೆ ಸಹಿ ಮಾಡಿಕೊಡುವಂತೆ
ಹೇಳಿದ್ದು, ಅದಕ್ಕೆ ಪಿರ್ಯಾದಿದಾರರು ಗೌರ (ಬಿ) ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೆ ಸರಿಯಾದ
ಕಾಮಗಾರಿಗಳು ಆಗಿಲ್ಲ ಆದ್ದರಿಂದ ನಾನು ನಿಲ್ ರಿಪೊರ್ಟ ಕೊಡುತ್ತೆನೆ ಅಂತಾ ಹೇಳಿದಕ್ಕೆ ಸದರಿ
ರುದ್ರಗೌಡ ಪಾಟಿಲ ಈತನು ಪಿರ್ಯಾದಿದಾರರಿಗೆ ಜೀವ ಬೇದರಿಕೆ ಹಾಕಿ ಖಾಲಿ ಎಸ್.ಕ್ಯೂ ಎಮ್ /
ಡಿ.ಕ್ಯೂ.ಎಮ್ ನಮೂನೆಗಳ ಮೇಲೆ ಸಹಿ ಪಡೆದುಕೊಂಡು
ಸರ್ಕಾರಿ ಕೆಲಸದಲ್ಲಿ ಅಡೆ ತಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು
:
ಸಂಚಾರಿ ಠಾಣೆ : ದಿನಾಂಕ 23-02-2015
ರಂದು ಶ್ರೀ ಸಿದ್ದರಾಮ ತಂದೆ ಪಂಡಿತರಾಯ ಕಲಶೆಟ್ಟಿ, ಸಾಃ ಕಾವೇರಿ ನಗರ ರವರು ಮತ್ತು ತನ್ನ ಮಗನಾದ ಗುರುಬಸವ ವಃ 09 ವರ್ಷ ಇಬ್ಬರು ಕೂಡಿ ಶಹಾಬಜಾರ ಮರಗಮ್ಮಾ ಗುಡಿಯ ಹತ್ತಿರ
ಪಾನಿಪುರಿ ತಿನ್ನಲು ಹೋಗುತ್ತಿದ್ದಾಗ ಶಹಾಬಜಾರ ನಾಕಾ ಕಡೆಯಿಂದ ಮೋಟಾರ ಸೈಕಲ ನಂ ಕೆ.ಎ 36 ಆರ್ 3388 ನೇದ್ದನ್ನು ಶಹಾಬಜಾರ ನಾಕಾ
ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗನಾದ ಗುರುಬಸವ
ಈತನಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದೆ ಹೋಗಿ ನಿಂತಂತೆ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ
ಹೋಗಿದ್ದು ಅಪಘಾತದಲ್ಲಿ ಗುರುಬಸವ ಈತನಿಗೆ ಬಲಗಾಲು ಮೊಳಕಾಲಿಗೆ ತರಚಿದ ಮತ್ತು ರಕ್ತಗಾಯವಾಗಿರುತ್ತದೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಜಗದೇವಿ ಗಂಡ ಅಶೋಕ ಅಜಾತಪೂರ ಸಾ: ಮನೆ ನಂ 129 ಅಂಬೇಡ್ಕರ್ ಆಶ್ರಯ ಯೋಜನೆ ಕಾಲೋನಿ
ರಾಣೆಸ ಫೀರ ದರ್ಗಾ ಎದುರುಗಡೆ ಕಲಬುರಗಿ ರವರು ದಿನಾಂಕ 23-02-2015 ರಂದು ಮದ್ಯಾಹ್ನ ನ್ಯೂ ವಾದಿರಾಜ
ಲಾಡ್ಜ್ ಎದುರಿಗೆ ಇರುವ ಹೋಟೇಲನಲ್ಲಿ ಊಟ ಮಾಡಿ ವಾಪಸ್ಸ ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ
ಹೋಗಬೆಕೆಂದು ರೋಡಿನ ಎಡಬದಿಯಿಂದ ನಡೆದುಕೊಂಡು
ಹೋಗುವಾಗ ಜಿಲ್ಲಾ ಪಂಚಾಯತ ಕಾರ್ಯಾಲಯ ಎದುರಿನ
ರೋಡ ಮೇಲೆ ಕಾರ ನಂ ಕೆಎ-32-ಎಮ್-7283 ನೇದರ ಚಾಲಕನು ಸುಪರ ಮಾರ್ಕೇಟ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಹಿಂದಿನಿಂದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾದಿಯ ಟೋಂಕಕ್ಕೆ ಗುಪ್ತ ಪೆಟ್ಟು ಏಡಗೈ ಮುಂಗೈಗೆ ತರಚಿದ
ಗಾಯಗೊಳಿಸಿ ಕಾರ ಚಾಲಕ ಕಾರ ಸಮೇತ ಓಡಿ ಹೊಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ
ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಈರಣ್ಣ ತಂದೆ ಬಸಣ್ಣಾ ಉಕ್ಕನಾಳ ಸಾ|| ಮುದಬಾಳ (ಬಿ) ತಾ|| ಜೇವರ್ಗಿ ರವರು ದಿನಾಂಕ
23.02.2015 ರಂದು ಮಧ್ಯಾಹ್ನ 12:30 ಗಂಟೆಗೆ ಮೃತ ಭೀಮಣ್ಣ ತಂದೆ
ಬಸಣ್ಣ ಉಕನಾಳ ಸಾ|| ಮುದಬಾಳ ಬಿ ಈತನು ಮುದಬಾಳ ಬಿ ಸಿಮಾಂತರದ ಮಾನು ರಾಠೋಡ ಈತನ ಹೊಲದ ಪಕ್ಕದ ಮುಖ್ಯ ಕೇನಾಲ್ ನಲ್ಲಿ ನೀರು
ಕುಡಿಯಲು ಹೋಗಿ
ಆಕಸ್ಮಿಕವಾಗಿ ಕಾಲು ಜಾರಿ ಕೇನಾಲ್ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು ಸದರಿಯವನ ಮೃತ
ದೇಹವು ಇಂದು ಸಾಯಂಕಾಲ 16:30 ಗಂಟೆಗೆ ನೀರಿನಿಂದ ಹೋರಗೆ ತೆಗೆದಿದ್ದು
ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.
No comments:
Post a Comment