POLICE BHAVAN KALABURAGI

POLICE BHAVAN KALABURAGI

25 February 2015

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಭಾಗಮ್ಮ ಗಂಡ ಬಂಢೆರಾವ ಭೀಮಜಿ ಸಾ: ಬಿದ್ದಾಪೂರ ಕಾಲೊನಿ ಕಲಬುರಗಿ ಇವರ ಮಗನಾದ ಬಸವರಾಜ ಇತನು ಕಾಣೆಯಾದ ಬಗ್ಗೆ ದೂರು ನೀಡಿದ್ದು ಅಲ್ಲದೇ ನನ್ನ ಮಗನಾದ ಬಸವರಾಜ ಇತನು ಪ್ರೀತಿಸಿ ಕವಿತಾ ಗಂಡ. ದಿ:ಗೋಪಾಲರಾವ ಫಾಲ್ಕೆ ಇವಳೊಂದಿಗೆ ದಿನಾಂಕ 15/10/05 ರಂದು ಮದುವೆಯಾಗಿದ್ದು, ನಂತರ ಅವಳ ಗಂಡ ಅಪಘಾತದ ಕೇಸಿನ ಸಂಬಂಧ ಮಾಹಾಂತೇಶ ದೇಸಾಯಿ ವಕೀಲರಿಗೆ ಕೇಸು ಕೊಟ್ಟಿದ್ದು, ಹಾಗೂ ಇತರರು ಕವಿತಾಳೊಂದಿಗೆ ಅನೈತಿಕ ಸಂಬಂಧ ಹೊಂದಿರುವೀ ಅಂತಾ ಅವಳೊಂದಿಗೆ ಜಗಳಾ ಮಾಡುತ್ತಿರುವುದರಿಂದ ಅದೇ ವೈಷಮ್ಯ ಹೊಂದಿ, ದಿನಾಂಕ  23/02/15 ರಂದು  ಅನಿತಾ ಭಂಡಾರಿ ಇವಳಿಂದ  ತಿಳಿದು ಬಂದಿದ್ದೆನೆಂದೆರೆ, ಫಿರ್ಯಾದಿದಾರಳ ಮಗ ಬಸವರಾಜನಿಗೆ ದಿನಾಂಕ 27/05/2010 ರಂದು 43 ದಿವಸಗಳವರೆಗೆ ವೃತ ಮಾಡಿ ಮನೆಯಿಂದ ಉಪಳಾಂವ ಗುಡ್ಡದ ಅಮ್ಮನಾದ ಸರಸ್ವತಿ ಇವರ ಮಠಕ್ಕೆ ಹೋಗುವಾಗ ಬಸವರಾಜ ಮತ್ತು ಈರಣ್ಣಾ ಮಾಲಿಪಾಟೀಲ್ ಇಬ್ಬರೂ ಕೂಡಿಕೊಂಡು ಒಂದು ಅಟೋ ರಿಕ್ಷಾದಲ್ಲಿ ಹೋಗಿದ್ದು, ಕವಿತಾ ಇವಳು ಮಹಾಂತೆಶ ದೇಸಾಯಿ ಹಾಗೂ ಇತರರೊಂದಿಗೆ ಅನೈತಿಕ ಸಂಬಂದ ಹೊಂದಿರುವದರಿಂದ ಅದನ್ನು ಬಸವರಾಜನು ವಿರೋಧಿಸಿದ್ದಕ್ಕೆ, ಕವಿತಾ ಇವಳು ಉಪಳಾಂವ ಗುಡ್ಡದ ಅಮ್ಮ ಸರಸ್ವತಿ ಮತ್ತು ಗೊಪಾಲ ಹಾಗೂ ಲಕ್ಷ್ಮಣ ಇವರುಗಳಿಗೆ 1,50,000/-ರೂ ಹಣ ಕೊಟ್ಟು ಕೊಲೆ ಮಾಡುವಂತೆ ಹೇಳಿದ್ದರಿಂದ ದಿನಾಂಕ:27/05/2010 ರಂದು ಉಪಳಾಂವ ಗುಡ್ಡದ ಮಠದಲ್ಲಿ ಸರಸ್ವತಿ ಅಮ್ಮ ಮತ್ತು ಅವಳ ತಮ್ಮನಾದ ಗೊಪಾಲ ಹಾಗೂ ಅವಳ ತಂದೆಯಾದ ಲಕ್ಷ್ಮಣ ಚಿಂಚೊಳಿ ಇವರುಗಳು ಕೂಡಿಕೊಂಡು ಕವಿತಾಳಿಂದ ಹಣ ಪಡೆದುಕೊಂಡು ಉಪಳಾಂವ ಗುಡ್ಡದ ಮಠದಲ್ಲಿ ಕೊಲೆ ಮಾಡಿ ಸ್ಯಾಂಟ್ರೊ ಕಾರ ನಂ ಕೆಎ 285001 ನೆದ್ದರಲ್ಲಿ ಚಿಂಚೊಳಿ ಹತ್ತಿರ ಇರುವ ಶುಗರ ಫ್ಯಾಕ್ಟರಿ ಪಕ್ಕದಲ್ಲಿರುವ ಒಂದು ಹಳ್ಳದಲ್ಲಿ ತಗೆದುಕೊಂಡು ಹೋಗಿ ಹೂತು ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ: 28-01-2015ರಂದು ತಾನು ಕೆಲಸ ನಿಮಿತ್ಯ ಬೇರೆ ಊರಿಗೆ ಹೋಗಿದ್ದು ಅಂದು ಸಾಯಂಕಾಲ 5-30 ಪಿಎಮ್ ಗಂಟೆಗೆ ತನ್ನ ಡ್ರೈವರ್ ಕಾರ ರಾತ್ರಿ ನಿಲ್ಲಿಸಬೇಕು ಅಂತಾ  ಕೇಳಲು ತಾನು ಸುಲ್ತಾನಪೂರ ಕ್ರಾಸ್ ಹತ್ತಿರ ಇರುವ ಬಸವೇಶ್ವರ ಗ್ಯಾರೇಜ ಹತ್ತಿರ ನಿಲ್ಲಿಸು ಅಂತಾ ಹೇಳಲು ಡ್ರೈವರ್ ಬಸವೇಶ್ವರ ಗ್ಯಾರೇಜ ಹತ್ತಿರ ಲಾಕ್ ಮಾಡಿ ನಿಲ್ಲಿಸಿ ಕುಮಸಿ ಊರಿಗೆ ಹೋಗಿದ್ದು ಅಂದು ತಾನು ತಡರಾತ್ರಿಯಾಗಿ ಮನೆಗೆ ಬಂದಿದ್ದು ದಿನಾಂk 29-01-2015  ರಂದು  ರಾತ್ರಿ  ಗ್ಯಾರೇಜನಲ್ಲಿ ಮಲಗಿದ್ದ ಸಂದೀಪ ಫೋನ ಮಾಡಿ ನಿಮ್ಮ ಟವೇರಾ ಕಾಣಿಸುತ್ತಿಲ್ಲ ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ತಕ್ಷಣ  ಬನ್ನಿ ಅಂತಾ ಹೇಳಲು ನಾನು ಗ್ಯಾರೇಜಗೆ ಹೋಗಿ ನೋಡಲು ನನ್ನ ಟವೇರಾ ವಾಹನ ಕಾಣಿಸಲಿಲ್ಲ ಕಲಬುರಗಿಯ ಸುತ್ತಮುತ್ತ ಜಹೀರಾಬಾದ ಎಲ್ಲ ಕಡೆ ಹುಡುಕಾಡಿದರು  ಪತ್ತೆಯಾಗಿರುವುದಿಲ್ಲಾ ನನ್ನ ಟವೇರಾ ವಾಹನ ನಂ ಕೆಎ. – 32 ಎಮ್-5741 ಬಿಳಿ ಬಣ್ಣದ ಚೆಸ್ಸಿ ನಂ MA64B6G767HD56337 ಇಂಜಿನ ನಂ MA64B6G767HD56337 ಇದ್ದು ಅ.ಕಿ. 2,00,000/- ರೂ ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಶಿವಶಂಕರ್ ತಂದೆ ನೀಲಕಂಠರಾವ್ ಪಾಟೀಲ್  ಸಾ: ಎಂಪಳ್ಳಿ ಗ್ರಾಮ ತಾ: ಚಿಂಚೋಳಿ ಜಿ:ಕಲಬುರಗಿ ಹಾ:: ದೇವಿ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀ ಶರಣಬಸಪ್ಪ ತಂದೆ ರೇವಣಸಿದ್ದಪ್ಪ ಶೇಳಗಿ ಸಾ: ಹನುಮಾನ ಗುಡಿ ಹತ್ತಿರ ಚೆನ್ನವೀರ ನಗರ  ಕಲಬುರಗಿ ರವರು  ದಿನಾಂಕ 05-02-2015 ರಂದು ರೇವಣಸಿದ್ದೇಶ್ವರ ಕಾಲೋನಿಯಲ್ಲಿರುವ ರೇವಣಸಿದ್ದೇಶ್ವರ ಗುಡಿಯ ಹಿಂಬಾಗದ ಮಹದೇವ ನಿಲಯದಲ್ಲಿರುವ ತನ್ನ ತಂಗಿಯ ಮನೆಗೆ ಬಂದಿದ್ದು ಮರಳಿ ಮನೆಗೆ ಹೋಗಲು ತಡರಾತ್ರಿಯಾಗಿದ್ದರಿಂದ ತನ್ನ ಕೆಎ-32 ಎನ್ 0430 ನಂಬರಿನ ಬುಲೇರೋ ವಾಹನವನ್ನು ಲಾಕ ಮಾಡಿಕೊಂಡು ಹೋಗಿ ಮಲಗಿಕೊಂಡಿದ್ದು ದಿನಾಂಕ: 06/02/2015ರಂದು ಬೆಳಿಗ್ಗೆ 6-30 ಗಂಟೆಗೆ ಎದ್ದು ಮನೆಯ ಹೊರಗಡೆ ಬಂದು ನೋಡಲು ತಾನು ನಿಲ್ಲಿಸಿದ  ಬುಲ್ಯೇರೋ ವಾಹನ ಕಾಣಿಸಲಿಲ್ಲ. ತಕ್ಷಣ ಗಾಬರಿಯಿಂದ ನನ್ನ ಮಾವ ವಿಜಯಕುಮಾರ ಮತ್ತು ಮಲ್ಲಿಕಾರ್ಜುನ ಇವರನ್ನು ಕರೆದುಕೊಂಡು ಆರ.ಎಸ್.ಕಾಲೋನಿ, ಮಹಾಗಾಂವ, ಹಾಗರಗಾ ಕ್ರಾಸ್, ಜೇವರ್ಗಿ, ಸೇಡಂ, ಆಳಂದ ಮುಂತಾದ ಕಡೆ ತಿರುಗಾಡಿ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ನ್ನ ಬುಲೇರೋ ಜೀಪ ನಂ ಕೆಎ-32 ಎನ್-0430 ನಂಬರಿನ ಬಿಳಿ ಬಣ್ನದ ಚೆಸ್ಸಿ ನಂ MA1P52GHKB5E77254 ಮತ್ತು ಇಂಜಿನ ನಂ GHB4E54831 ಇರುವ ಅ.ಕಿ= 300000/- ರೂ. ಬೆಲೆ ಬಾಳುವ ಬುಲ್ಯೇರೋ ವಾಹನವನ್ನು ಮತ್ತು ಅದರಲ್ಲಿದ್ದ ಪಂಚಾಯತ ರಾಜ ಇಂಜಿನಿಯರಿಂಗ ಉಪವಿಭಾಗ ಕಲುಬುರಗಿಯವರಿಗೆ ಸಂಬಂಧಪಟ್ಟ 8350 ನಂಬರಿನ ಅಳತೆ ಪುಸ್ತಕವನ್ನು ಸಹ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ  24.02.2015 ರಂದು ಮುಂಜಾನೆ 05:00 ಗಂಟೆಗೆ ನನ್ನ ಮಗನಾದ ಮಲ್ಲಪ್ಪ ತಂದೆ ಬಸಣ್ಣ ಕೀರಣಗಿ ಈತನು ಜೇವರ್ಗಿ ಸಿಮಾಂತರದಲ್ಲಿ ಇರುವ ನಮ್ಮ ಹೋಲದಲ್ಲಿ ಹತ್ತಿ ಬೇಳೆಗೆ ನೀರು ಬಿಡುತ್ತಿರುವಾಗ ಕಸದಲ್ಲಿದ್ದ ಹಾವು ಆಕಸ್ಮಿಕವಾಗಿ ಮಲ್ಲಪ್ಪನ ಬಲಗಾಲಿನ ಹಿಮ್ಮಡಿಯ ಹತ್ತಿರ ಕಚ್ಚಿದ್ದು ಉಪಚಾರ ಕುರಿತು ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಉಪಚಾರ ಫಲಕಾರಿಯಾಗದೆ ಇಂದು ದಿನಾಂಕ 24.02.2015 ರಂದು 06:30 ಗಂಟೆಗೆ ಹಾವು ಕಚ್ಚಿದ ವಿಷದ ಬಾಧೇಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ. ಬಸಣ್ಣ ತಂದೆ ಮಲ್ಲಪ್ಪ ಕೀರಣಗಿ ಸಾ|| ಜೋಪಡ ಪಟ್ಟಿ ಏರಿಯಾ ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: