ಅತ್ಯಾಚಾರ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ:22/02/2015 ರಂದು ನಮ್ಮ ತಾಯಿ ಹೊಲಕ್ಕೆ ಹೋಗಿದ್ದಳು ನಮ್ಮ ಅಕ್ಕ ತಂಗಿ ಇವರು ಬೇರೆಯವರ ಮನೆಗೆ ಹೋಗಿದ್ದರು ಸಾಯಂಕಾಲ 7-00 ಗಂಟೆಯ ಸುಮಾರಿಗೆ
ನಾನು ನಮ್ಮ ಮನೆಯ ಹತ್ತಿರದ ಬೈಲು ಜಾಗದಲ್ಲಿ ಸಂಡಾಸಕ್ಕೆ ಹೋಗಿದ್ದೆ ಅಲ್ಲಿ ಇನ್ನೂ ಸಂಡಾಸಕ್ಕೆ ಕೂಡಬೇಕು
ಎನ್ನುವಸ್ಟರಲ್ಲಿ ನಮ್ಮೂರಿನ ಶಂಭು ತಂದೆ ಬಸವರಾಜ ಇತನು ಬಂದು ನನ್ನ ಬಾಯಿಯನ್ನು ಒತ್ತಿ ಹಿಡಿದು ನನ್ನನ್ನು
ಜಬರದಸ್ತಿಯಿಂದ ಎತ್ತಿಕೊಂಡು ಹೋಗಿ ತಗ್ಗಿನಲ್ಲಿ ಕೇಳಗೆ ಕೇಡವಿ ನನ್ನ ಬಟ್ಟೆ ಬಿಚ್ಚಿ ಜಬರದಸ್ತಿಯಿಂದ
ನನ್ನ ಸಂಗಡ ಸಂಭೋಗ ಮಾಡಿದ್ದು ನಂತರ ಅವನು ಈ ವಿಷಯ ಯಾರಿಗಾದರೂ ಹೇಳಿದ್ದರೆ ನಿನಗೆ ಖಲಾಸ್ ಮಾಡುತ್ತೇನೆ.
ಅಂತ ಜೀವದ ಬೇದರಿಕೆ ಹಾಕಿ ಹೋದನು ನಂತರ ನಾನು ಆಳುತ್ತ ಮನೆಗೆ ಬಂದು ಮನೆಯಲ್ಲಿ ಕುಳಿತಿದ್ದು ನಮ್ಮ
ತಾಯಿ ಅಕ್ಕ ,ತಂಗಿ ಬಂದ ನಂತರ ಅವರಿಗೆ ಈ ವಿಷಯ ಹೇಳಿದೆ ನಾನು ಸಂಡಾಸಕ್ಕೆ
ಹೋದಾಗ ಜಬರದಸ್ತಿಯಿಂದ ಎತ್ತು ಕೊಂಡು ಹೋಗಿ ನನ್ನ ಸಂಗಡ ಸಂಬೋಗ ಮಾಡಿದ್ದು ಶಂಭು ತಂದೆ ಬಸವರಾಜ ಈತನ
ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಕುಮಾರಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನೆಲೋಗಿ ಠಾಣೆ : ದಿನಾಂಕ:22/02/2015 ರಂದು ಸಾಯಂಕಾಲ ಶ್ರೀ ಗುಣಕಾರ ತಂದೆ ಶೇಖಪ್ಪ ನಡಗಟ್ಟಿ ಸಾ-ನೆಲೋಗಿ ತಾ-ಜೇವರ್ಗಿ ಜಿ-ಕಲಬುರಗಿ ರವರು ಸೊನ್ನ ಕ್ರಾಸಸದಿಂದ ತಮ್ಮ ಊರ ಸೋಮರಾಯ ಅಂಕಲಗಿ ಇವರು
ಕೂಡಿಕೊಂಡು ನಮ್ಮ ಓಣಿಯ ಬೂತಾಳಿ ತಂದೆ ಓಗೆಪ್ಪ ನಡಗಟ್ಟಿ
ಇತನ ಟಂ ಟಂ ನಂ:ಕೆಎ-32-ಬಿ-1297 ಬಂದಿತ್ತು ಆಗವನು ನೆಲೋಗಿ ಹೋಗುತ್ತದೆ ಅಂತ ಹೇಳಿದಾಗ ನಾನು ಮತ್ತು
ಸೋಮರಾಯ ಅಂಕಲಗಿ ಕುಳಿತೆವು ಟಂ ಟಂ ಅಲ್ಲಿಂದ ಹೊರಟು ನೆಲೋಗಿ ಕಡೆ , ನೆಲೋಗಿ ಕ್ರಾಸ ಸ್ವಲ್ಪ ದೂರದಲ್ಲಿ ಇದ್ದಾಗ ಎದುರಿನಿಂದ
ಅಂದರೆ ಹಿಪ್ಪರಗಿ ಕಡೆಯಿಂದ ಒಂದು ಲಾರಿ ಬಂದಿತ್ತು ಅದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ
ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನಮ್ಮ ಟಂ ಟಂಗೆ ಡಿಕ್ಕಿ ಹೊಡೆದಾಗ ನಮ್ಮ ಟಂ ಟಂ ರೋಡಿನ
ಮಗ್ಗಲಿಗೆ ಬಿದ್ದಿತ್ತು ಆಗ ಲಾರಿ ಚಾಲಕನು ಲಾರಿಯ ರೋಡಿನ ಮಗ್ಗಲಿಗೆ ನಿಲ್ಲಿಸಿ ಓಡಿ ಹೊದನು
ಸೋಮರಾಯನಿಗೆ ನೋಡಲಾಗಿ ತಲೆಗೆ ಮತ್ತು ಕಪ್ಪಾಳಕೆ ಭಾರಿಪೆಟ್ಟಾಗಿ ರಕ್ತಗಾಯವಾಗಿದ್ದು ಮೊನೇಶ ಜಳಕಿ ,ಅಶೋಕ ನಡಗಟ್ಟಿ,ಮಾದೇವಪ್ಪ ಅಡವಿ ಇವರು ಬಂದರು
ಲೈಟನ ಬೆಳಕಿನಲ್ಲಿ ಲಾರಿ ನಂಬರ ಕೆಎ-32-ಬಿ-1616 ಅಂತ ಇತ್ತು ನಂತರ ಸೋಮರಾಯಯನ್ನು 108
ಅಂಬುಲೇನ್ಸದಲ್ಲಿ ಹಾಕಿಕೊಂಡು ಕಲಬುರರ್ಗಿ ಆಸ್ಪತ್ರೆಯ ಹೊರಟಾಗ ಮಾರ್ಗ ಮಧ್ಯದಲ್ಲಿ ರಾಮ ಮಂದಿರ
ಹತ್ತಿರ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 22-02-2015 ರಂದು ನನ್ನ ಮಗ ಪ್ರಶಾಂತ ಇತನು ರಾತ್ರಿ ತನ್ನ ಮೋಟಾರ ಸೈಕಲ ನಂ
ಕೆಎ-32-ಇಹೆಚ್-0737 ನೇದ್ದನ್ನು ಎಸ.ವಿ.ಪಿ. ಸರ್ಕಲ್ ಕಡೆಯಿಂದ ಚಲಾಯಿಸಿಕೊಂಡು ಜಗತ ಸರ್ಕಲ್
ಕಡೆಗೆ ಹೋಗುವಾಗ ಪಂಜಾಬ ಪುಟವೇರ್ ಶೋ ರೋಮ
ಎದುರುಗಡೆ ರೋಡ ಮೇಲೆ ಜಗತ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂ ಕೆಎ-32-ಇ.ಎಫ್-4268 ನೆದ್ದರ
ಚಾಲಕನಾದ ಅಬ್ದುಲ ಅಲಿಮ ಇತನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಯಾವುದೆ ಸನ್ನೆ ಮಾಢದೆ ಇಂಡಿಕೇಟರ ಹಾಕದೆ ಒಮ್ಮಲೇ ಕೋರ್ಟ ರೋಡ ಕಡೆಗೆ ತಿರುಗಿಸಿ ಅಡ್ಡಾವಾಗಿ
ಬಂದು ಪ್ರಶಾಂತ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಢಿ ಪ್ರಶಾಂತ ಇತನ ಬಲಗಡೆ ತೆಲೆಗೆ
ಮುಖಕ್ಕೆ ಭಾರಿ ಪೆಟ್ಟುಗೊಳಿಸಿದ್ದು ಮತ್ತು ತಾನು ಗಾಯ ಹೊಂದಿದ್ದು ಇರುತ್ತದೆ ಅಂತಾ ಶ್ರೀಮತಿ
ನಿರ್ಮಲಾ ಗಂಡ ವೀರಣ್ಣಾ ಸಾ: ಬಂಬು ಬಜಾರ ಲಕ್ಷ್ಮಿ ನಗರ ಗಂಜ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
No comments:
Post a Comment