POLICE BHAVAN KALABURAGI

POLICE BHAVAN KALABURAGI

02 February 2015

Kalaburagi District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಧರ್ಮಣ್ಣ ತಂದೆ ಬಸಲಿಂಗಪ್ಪ ಬಡಿಗೇರ ಸಾ :  ಲಖಣಾಪುರ  ರವರು ದಿನಾಂಕ: 01.02.2015 ರಂದು ಸಾಯಂಕಾಲ ಮುದಬಾಳ ಬಿ ಮೇನ್‌ ಕೆನಾಲ್ ಹತ್ತಿರ ರೋಡಿನಲ್ಲಿ ನನ್ನ ಅಣ್ಣ ಚಂದ್ರಶೇಖರ ಈತನು ತನ್ನ ಮೋಟಾರು ಸೈಕಲ್‌ ನಂ ಕೆಎ-32-ಇ.ಎಫ್-7604 ನೇದ್ದರ ಮೇಲೆ ಅವನ ಹೆಂಡತಿ ತಮ್ಮನಾದ ಭಿಮರಾಯ ಬಡಿಗೇರ ಸಾ: ರಾಸಣಗಿ ಇತನಿಗೆ ಕೂಡಿಸಿಕೊಂಡು ಜೇವರಗಿಯಿಂದ ನಮ್ಮೂರಿಗೆ ಬರುತ್ತಿದ್ದಾಗ, ಅದೇ ವೇಳೆಗೆ ಎದುರುಗಡೆಯಿಂದ ಅಂದರೆ ಶಹಾಪುರ ಕಡೆಯಿಂದ ಲಾರಿ ನಂ ಕೆಎ32-5546 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನಮ್ಮ ಅಣ್ಣನು ಚಲಾಯಿಸುತ್ತಿದ್ದ ಮೋಟಾರು ಸೈಕಲ್‌ಗೆ ಡಿಕ್ಕಿ ಪಡಿಸಿದ್ದರಿಂದ ಅವರು ಮೋಟಾರು ಸೈಕಲ್‌ ಸಮೇತ ರೊಡಿನ ಮೇಲೆ ಬಿದ್ದರು ಅದೇ ವೇಳೆಗೆ ಜೇವರ್ಗಿ ಕಡೆಯಿಂದ ಕಾರ್‌ ನಂ ಕೆಎ33ಎಮ್3470 ನೇದ್ದರ ಚಾಲಕನು ತನ್ನ ಕಾರ್‌ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ರೋಡಿನ ಮೇಲೆ ಬಿದ್ದ ಅವರಿಗೆ ಡಿಕ್ಕಿಪಡಿಸಿದ್ದರಿಂದ ಸದರಿಯವರಿಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದು ನಂತರ ಲಾರಿ ಮತ್ತು ಕಾರ್‌ ನೇದ್ದರವುಗಳ ಚಾಲಕರು ತಮ್ಮ ವಾಹನಗಳನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಡಬೂಳ ಠಾಣೆ : ಶ್ರೀಮತಿ ವಾಹೀದಾಬೇಗಂ ಗಂಡ ಬಾಬುಮಿಯ್ಯಾ ಮುಲ್ಲಾ ಸಾ:ಕೊಡ್ಲಿ ಇವರು ಬೊಳೆವಾಡ ಗ್ರಾಮದ ತಮ್ಮ ಸಂಬಂಧಿ ಖಾಜಾ ಹುಸೇನ ಮುಲ್ಲಾ ಇವರು ಗ್ಯಾರಮಿ ಹಬ್ಬ ಮಾಡಿದ ಕಾರಣ ಊಟ ಮಾಡಿಕೊಂಡು ಬರಲು ತಾನು ಹಾಗೂ ಆಕೆಯ ತಮ್ಮ ಸೈಯ್ಯದ ಹುಸೇನ ಇತನ ಮೋಟರ ಸೈಕಲ ನಂ.ಎಪಿ-28 ಡಿಡಿ-7710 ನೇದ್ದರ ಮೇಲೆ ವಾಹೀದಾ ಬೇಗಂ ಇವಳ  ಹಿರಿಯ ಮಗಳಾದ ತಬಸುಮ ಹಾಗೂ ತಮ್ಮನ ಮಗಳಾದ ನಿಮಶಾ ಫಾತಿಮಾ ಎಲ್ಲರೂ ಕೂಡಿ ಮೋಟರ ಸೈಕಲ ಮೇಲೆ ಬೊಳೆವಾಡ ಗ್ರಾಮಕ್ಕೆ ಬಂದು ಕಾರ್ಯಕ್ರಮದಲ್ಲಿ ಊಟ ಮಾಡಿ ಅದೇ ಮೋಟರ ಸೈಕಲ ಮೇಲೆ ಎಲ್ಲರೂ ಕುಳಿತುಕೊಂಡು ಅದರಲ್ಲಿ ತಮ್ಮನ ಮಗಳಾದ ನಿಮಶಾ ಫಾತಿಮಾ ಮುಂದೆ ಟ್ಯಾಂಕಿನ ಮೇಲೆ ಕುಳಿತು ಬೊಳೆವಾಡ ರಸ್ತೆಯಿಂದ ವಚ್ಚಾ ಗ್ರಾಮ ಇನ್ನು ಸ್ವಲ್ಪ ಮುಂದೆ ಇರುವಂತೆ ಹೊರಟಿದ್ದು ಎದುರುಗಡೆಯಿಂದ ಒಂದು ಬಿಳಿ ಬಣ್ಣದ ಕಾರ ಚಾಲಕ ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಮೋಟರ ಸೈಕಲಗೆ ಜೋರಾಗಿ  ಡಿಕ್ಕಿ ಪಡಿಸಿದ ಪರಿಣಾಮ ಇದರಿಂದ ಮುಂದೆ ಕುಳಿತ ನಿಮಶಾ ಫಾತಿಮಾ ಇವಳಿಗೆ ಎಡಕಪ್ಪಾಳ ಹತ್ತಿರ ಭಾರಿ ಗುಪ್ತಗಾಯ,ಎಡಗಣ್ಣಿನ ಹತ್ತಿರ ರಕ್ತಗಾಯ,ತಲೆಗೆ ಭಾರಿ ಗುಪ್ತಗಾಯವಾಗಿ ಕಿವಿಯಿಂದ,ಮೂಗಿನಿಂದ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು. ವಾಹೀದಾಬೇಗಂ ಇವಳಿಗೆ ಅಲಲ್ಲಿ ತೆರಚಿದ ರಕ್ತಗಾಯ ತಬಸುಮ ಇವಳಿಗೆ ಬಲಗಾಲ ಹಿಂಬಡಿ ಹಿಂದೆ ರಕ್ತಗಾಯ ಹಾಗೂ ತಮ್ಮ ಸೈಯ್ಯದ ಹುಸೇನ ಇತನಿಗೆ ಬಲಗಾಲ ಹತ್ತಿರ ಭಾರಿ ಗುಪ್ತಗಾಯ ಹಾಗೂ ಅಲಲ್ಲಿ ರಕ್ತಗಾಯವಾಗಿದ್ದು ಸದರಿ ಕಾರ ನಂ ನೋಡಲಾಗಿ ಟಿಎಸ-09ಎಚಟಿಆರ2668 ಅಂತ ಇದ್ದು ಚಾಲಕನು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 15-01-2015 ರಂದು ಶ್ರೀ ಜಲೀಲ ಅಹ್ಮದ ತಂದೆ ಮಕಬೂಲ ಅಹ್ಮದ  ಸಾಃ ಸಂತ್ರಸಡಾಡಿ ಜಿಡಿಎ ಕಾಲೋನಿ ಕಲಬುರಗಿ, ರವರು ಸಂತ್ರಾಸವಾಡಿ ರೋಡಿನಲ್ಲಿರುವ ನೈಸ್ ಕೆಫೆ ಹೋಟೆಲ್ ಎದರುಗಡೆ ರೋಡಿನ ಮೇಲೆ ಫಿರ್ಯಾದಿ ನಡೆದುಕೊಂಡು ರೋಡ ದಾಟುತ್ತಿದ್ದಾಗ ಆರೋಪಿತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಎಚ್ 3530 ನೇದ್ದನ್ನು ಎಸ್.ಟಿ.ಬಿ.ಟಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ರೋಡ ದಾಟುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 01-02-2015 ರಂದು ಶ್ರೀಮತಿ ರಾಜಶ್ರೀ ಗಂಡ ಸಿದ್ದು ಜಮಾದಾರ, ಸಾಃ ವಿರೇಶ ನಗರ ಸೇಡಂ ರೋಡ ಕಲಬುರಗಿ, ಇವರ  ಗಂಡ ಸಿದ್ದು ತಂದೆ ಭೀಮಶಾ ಜಮಾದಾರ, ಈತನು ತನ್ನ ಅಟೋರಿಕ್ಷಾ ನಂ. ಕೆ.ಎ 32 ಎ 3434 ನೇದ್ದನ್ನು ಗಂಜ ಬಸ್ ಸ್ಟಾಂಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ದರ್ಬಾರ ಹೋಟೆಲ ಮುಂದೆ ರೋಡಿನ ಮಧ್ಯದ ಡಿವೈಡರ ಕಟ್ಟೆಗೆ ಡಿಕ್ಕಿ ಹೊಡೆದು ಅಪಗಾತ ಮಾಡಿದ್ದು ಅಪಘಾತದಿಂದ ಗಾಯಾಳು ಸಿದ್ದು ಈತನಿಗೆ ತಲೆಯ ಹಿಂದೆ ಪೆಟ್ಟಾಗಿ ರಕ್ತಗಾಯವಾಗಿ ಬಲಗಣ್ಣಿನ ಹುಬ್ಬಿಗೆ ಮತ್ತು ಹಣೆಗೆ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: