ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ವಿಜಯಕುಮಾರ
ತಂದೆ ದೇವಿಂದ್ರಪ್ಪ ಸಾ : ಸಂಜಿವ ನಗರ ನೇಹರು
ಗಂಜ್ ಕಲಬುರಗಿ ರವರು ದಿನಾಂಕ 31.01.2015 ರಂದು ದಿನಾಂಕ 31.01.2015 ರಂದು
ಬೆಳಗ್ಗೆ ರವರು ಮತ್ತು ರಾಜಕುಮಾರ, ಬಸವಂತಪ್ಪ ಎಲ್ಲರು
ಕೂಡಿಕೊಂಡು ಸಾತಲಿಂಗಪ್ಪ ಈತನು ನಡೆಸುವ ಮಿನಿ ಲಾರಿ ನಂ ಕೆ.ಎ32ಬಿ1879 ನೇದ್ದರಲ್ಲಿ ಕುಳಿತುಕೊಂಡು
ನಂದ್ಯಾಳ ಗ್ರಾಮದಿಂದ ಕಲಬುರಗಿಗೆ ಜೇವರ್ಗಿ ಮುಖಾಂತರ ಹೋಗುತ್ತಿದ್ದಾಗ ಜೇವರ್ಗಿ ಬಸ್ ಡಿಪೊ ದಾಟಿ
ರೋಡಿನಲ್ಲಿ ಚಾಲಕನು ತನ್ನ ಮಿನಿ ಲಾರಿಯನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ
ರೋಡಿನಲ್ಲಿ ಕಟ್ ಹೋಡೆದು ರೋಡಿನ ಎಡ ಸೈಡಿನಲ್ಲಿ ಪಲ್ಟಿ ಮಾಡಿದ್ದರಿಂದ ನಮಗೆ ಭಾರಿ ಮತ್ತು ಸಾದಾ
ಗಾಯಗಳು ಆಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ಶೇಖ ಮೊಹಿದುರ ತಂದೆ ಶೇಖ ಮಿಟ್ಟು ಸಾ:ಚಾಂದಪಾರಾ ಗ್ರಾಮ
ಪೋಸ್ಟ:ವಿಕಬನ್ನಾ ಜಿ:ಮಲಮಾಲ್ದಾ ವೆಸ್ಟಬೆಂಗಾಲ ರಾಜ್ಯ ಹಾ.ವ:ಓರಿಯಂಟ ಫ್ಯಾಕ್ಟರಿ ಕ್ಯಾಂಪಸ್
ಚಿತ್ತಾಪುರ ನಾವು ಓರಿಯಂಟ
ಫ್ಯಾಕ್ಟರಿಗೆ ಕರೆಂಟ ಪೂರೈಕೆ ಕುರಿತು ಕೆ.ವಿ.ಎಲೆಕ್ಟ್ರಿಕಲ ಖಾಸಗಿ ಕಾಂಟ್ರಾಕಟರ ಒಂದರಲ್ಲಿ 4
ತಿಂಗಳಿಂದ ಕೆಲಸ ಮಾಡಿಕೊಂಡು ಓರಿಯಂಟ ಕಂಪನಿಯಲ್ಲಿಯೇ ಶೆಡ್ ಹಾಕಿಕೊಂಡು ಇರುತ್ತೇವೆ. ನಮ್ಮ
ಗ್ಯಾಂಗನಲ್ಲಿ ವಡಿವೇಲ್ ಅಂತಾ ಸುಪರವೈಸರ ಇದ್ದು ಅವರ ಕೈಕೆಳಗೆ 1) ನಾನು ಅಲ್ಲದೇ 2) ಸೀಲು 3)
ಶೇಕ್ ಬೈಸಿರುಲ್ 4) ನಸೀಮ 5) ಸನಾವುಲ್ 6) ಶೇಖ ಜುಲು 7)ಸಿರಾಜುಲ್ 8) ಕಾಲು 9) ಬಾರಿಕ್ 10)
ಸಾರಿಕ 11) ಅತೀಫುಲ್ 12) ಸಾರಜನ್ 13) ತಾಜುಲ್ 14) ಅಸರುಲ್ 15) ಬಿಲಾಲ ಎಲ್ಲರೂ ಕೂಡಿಕೊಂಡು
ಇಂದು ದಿನಾಂಕ 30-1-2015 ರಂದು ಬೆಳಿಗ್ಗೆ ಸೇಡಂಕ್ಕೆ ಬಂದು ಕೆಪಿಟಿಸಿಎಲ್ ಗ್ರಿಡನಲ್ಲಿ
ಮಧ್ಯಾನದವರೆಗೆ ಕೆಲಸ ಮಾಡಿ ನಂತರ ಸಾಯಂಕಾಲ 4-30 ಗಂಟೆ ಸುಮಾರಿಗೆ ಸೇಡಂದಿಂದ ನಮ್ಮ ಕಂಪನಿಯ
ಶೆಡ್‌ಗೆ ಹೋಗಲು ನಮ್ಮ ಕೆ.ವಿ.ಎಲೆಕ್ಟ್ರಿಕಲ್ ಹೊಸಪೇಟೆ ರವರ ಪಿಕಪ್ ಗಾಡಿ ನಂಬರ ಕೆಎ-35
ಬಿ-1571 ನೇದ್ದರಲ್ಲಿ ಎಲ್ಲರೂ ಕುಳಿತುಕೊಂಡು ಅಲ್ಲದೇ ನಮ್ಮ ಕೆಲಸದ ಸಾಮಾನುಗಳನ್ನು ಗಾಡಿಯಲ್ಲಿ
ಹಾಕಿಕೊಂಡು ಸೇಡಂದಿಂದ ಹೊರಟೆವು. ನಮ್ಮ ಪಿಕಪ್ ಗಾಡಿಯ ಚಾಲಕನು ಈಗ್ಗೆ ಹೊಸದಾಗಿ ಬಂದು ಮೂರು
ದಿವಸಗಳಾಗಿದ್ದು ಅವನಿಗೆ ನಮಗೆ ಪರಿಚಯವಿರುವದಿಲ್ಲ. ಅವನ ಹೆಸರು ಕೂಡಾ ಗೊತ್ತಿರುವದಿಲ್ಲ. ಸದರಿ ಚಾಲಕನು
ತನ್ನ ಹತೋಟಿಯಲ್ಲಿದ್ದ ಪಿಕಪ ಗಾಡಿಯನ್ನು ಅತೀ ವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಿದ್ದು
ಕಂಡು ಸದರಿಯವನಿಗೆ ನಿಧಾನವಾಗಿ ಗಾಡಿ ನಡೆಸಹತ್ತಿದ್ದನು. 5-00 ಪಿ.ಎಮ.ಕ್ಕೆ ಮಳಖೇಡ ಗ್ರಾಮ
ದಾಟಿದ ನಂತರ ಮಳಖೇಡ ಚಿತ್ತಾಪುರ ರೋಡಿನ ಮೊದಲನೆ ಬ್ರಿಜ್ ದಾಟಿದ ಬಳಿಕ ಇನ್ನೊಂದು ಬ್ರಿಜ್ ಸಮೀಪ
ಒಮ್ಮೆಲೆ ಬಲಗಡೆ ಕಟ್ ಮಾಡಿದಾಗ ನಮ್ಮ ಪಿಕಪ್ ವಾಹನವು ಅತೀ ವೇಗದಲ್ಲಿ ಇರುವದರಿಂದ ಒಮ್ಮೆಲೆ
ಎಡಮಗ್ಗಲಾಗಿ ನಮ್ಮ ಜೀಪ ರೋಡಿನಲ್ಲಿ ಬಿದ್ದಾಗ ನಾವೆಲ್ಲರೂ ರೋಡಿ ಮೇಲೆ ಬಿದ್ದಿದ್ದು ನಮ್ಮ ಪಿಕಪ್
ವಾಹನದಲ್ಲಿದ್ದ ಸಾಮಾನುಗಳು ಸಹ ನಮ್ಮಗಳ ಮೇಲೆ ಬಿದ್ದವು. ಅಲ್ಲದೇ ವೈರ ರೋಪ ನಮ್ಮ ಪಿಕಪ್ ಗಾಡಿಯ
ಗಾಲಿಗಳಿಗೆ ಸಿಲುಕಿ ವಾಹನ ಚಾಲ್ತಿಯಲ್ಲಿದ್ದುದರಿಂದ ಅದರ ಗಾಲಿಗಳಿಗೆ ಸುತ್ತಿಕೊಂಡಿದ್ದು
ಇರುತ್ತದೆ. ಆಗ ನಮ್ಮೆಲ್ಲರಿಗೆ ಸಾದಾ ಹಾಗು ಭಾರಿ ರಕ್ತಗಾಯ ಹಾಗು ಒಳಪೆಟ್ಟುಗಳಾಗಿದ್ದು ನನಗೆ
ಬಲಗಾಲ ಮೊಳಕಾಲಿಗೆ ಒಳಪೆಟ್ಟಾಗಿದ್ದು ಬೆನ್ನಿಗೆ ರಕ್ತಗಾಯವಾಗಿದ್ದು ಇರುತ್ತದೆ. ನನ್ನ ತಮ್ಮನಾದ
ಸೀಲು ಈತನಿಗೆ ಬಲಮೊಳಕಾಲಿಗೆ ಬಲಗೈ ಮೊಳಕೈಗೆ ತರಚಿದ ರಕ್ತಗಾಯವಾಗಿರುತ್ತದೆ. ಅಲ್ಲದೇ ನಮ್ಮ
ಜೊತೆಗೆ ಪಿಕಪ್ ವಾಹನದಲ್ಲಿದ್ದ ಶೇಖ ಬೈಸಿರುಲ್ ತಂದೆ ಶೇಖ ನಬೀರುದ್ದಿನ ಈತನ ಮೇಲೆ ನಮ್ಮ
ವಾಹನದಲ್ಲಿ ಕಬ್ಬಿಣದ ಭಾರಿ ಸಾಮಾನುಗಳು ಬಿದ್ದು ತಲೆಗೆ ಭಾರಿ ರಕ್ತಗಾಯ ಮತ್ತು ಮೈಯಲ್ಲಿ ಭಾರಿ
ಗುಪ್ತ ಪೆಟ್ಟು ಹಾಗು ಎಡಗಾಲು ತೊಡೆಯ ಮೂಳೆ ಮುರಿದಂತೆ ಕಾಣುತ್ತಿದ್ದು ಆಗ ಎಲ್ಲರಿಗೆ ಒಂದು 108
ಅಂಬುಲೆನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾಕ್ಕೆ
ಹೋಗುತ್ತಿರುವಾಗ ಮಳಖೇಡ ಹತ್ತಿರ ಶೇಖ ಬಶೀರುಲ್ ಈತನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ಸತೀಶ ತಂದೆ ಮಾಣಿಕಪ್ಪಾ ಕೊಳ್ಳಿ, ಸಾಃ ಹಪ್ತ ಗುಂಬಜ ದರ್ಗಾ ರೋಡ ಕಲಬುರಗಿ, ರವರು ದಿನಾಂಕ 30-01-2015 ರಂದು
ಬಸವೇಶ್ವರ ಕಾಲೂನಿ 4 ನೇ ಕ್ರಾಸ ಹತ್ತಿರ ಬೇಕರಿ ಎದರುಗಡೆ ರೋಡಿನ ಪಕ್ಕದಲ್ಲಿ ತನ್ನ 5 ವರ್ಷದ
ಮಗಳಾದ ದಿವ್ಯಾ ಇವಳೊಂದಿಗೆ ನಿಂತಾಗ ಒಂದು ಬಿಳಿ ಕಾರ ನಂ. ಕೆ.ಎ 23 ಎಮ್. 6742 ನೇದ್ದರ ಚಾಲಕ
ತನ್ನ ಕಾರನ್ನು ಭಾಕರ ಫಂಕ್ಷನ್ ಹಾಲ ರಿಂಗ ರೋಡ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗಳಾದ ದಿವ್ಯಾ ವಃ 5 ವರ್ಷ ಇವಳಿಗೆ ಡಿಕ್ಕಿ ಹೊಡೆದು ಅಪಘಾತ
ಮಾಡಿ ತನ್ನ ಕಾರ ಸಮೇತ ಓಡಿ ಹೋಗಿದ್ದು ಅಪಘಾತದಿಂದ ಫಿರ್ಯಾದಿ ಮಗಳಿಗೆ ತಲೆಗೆ ಪೆಟ್ಟಾಗಿ
ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಹ್ಮದಗೌಸ ತಂದೆ ಮಹ್ಮದ ಮೈನೋದ್ದೀನ ಸಾ:
ಬಹಾದ್ದೂರಪೂರಾ ಜುಪಾರಾ ಹೈದ್ರಾಬಾದ ತೆಲಂಗಾಣ ರಾಜ್ಯ
ರವರು ದಿನಾಂಕ 30-01-2015 ರಂದು
ರಾತ್ರಿ ಕಲಬುರಗಿ ರೇಲ್ವೆ ಸ್ಟೇಶನದಿಂದ ಅಟೋರಿಕ್ಷಾ ನಂಬರ ಕೆಎ-32 ಎ-9016 ನೇದ್ದರಲ್ಲಿ ನಾನು
ಮತ್ತು ನಮ್ಮ ಓಣಿಯ ಮಹ್ಮದ ಅಯುಬ ಹಾಗು ಅವರ ಹೆಂಡತಿಯಾದ ಪರೀವನಿನ ಬೇಗಂ ಮತ್ತು ಅವರ ಮಗ ರೆಹಾನ
ರವರು ಕುಳಿತು ಶ್ರೀ ಖಾಜಾ ಬಂದೇನವಾಜ ದರ್ಗಾಕ್ಕೆ
ಹೋಗುವಾಗ ರೇಲ್ವೆ ಸ್ಟೇಶನ ಎದುರುಗಡೆ ಬರುವ ಸಿಟಿ ಬಸ ನಿಲ್ದಾಣದ ಎದುರಿನ ರೋಡ ಮೇಲೆ ಹಿಂದಿನಿಂದ
ಕಾರ ನಂಬರ ಕೆಎ-32 ಎಮ್-5472 ರ ಚಾಲಕ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನಾವು ಕುಳಿತ ಅಟೋರಿಕ್ಷಾ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದರಿಂದ
ಅಟೋರಿಕ್ಷಾ ವಾಹನವು ಪಲ್ಟಿಯಾಗಿ ಕೆಳಗೆ ಬಿದ್ದಿದರಿಂದ್ದ ನನಗೆ ಎಡಗಾಲು ಹಿಮ್ಮಡಿಗೆ
ಭಾರಿರಕ್ತಗಾಯ, ಎಡಗಾಲು ಹೆಬ್ಬರಳಿಗೆ ರಕ್ತಗಾಯ ಹಾಗು ಮಹ್ಮದ ಅಯುಬ ಇವರಿಗೆ ಎಡಗೈ ಹಸ್ತದ ಹಿಂದುಗಡೆ
ರಕ್ತಗಾಯಗೊಳಿಸಿ ಕಾರ ಚಾಲಕ ತನ್ನ ಕಾರನ್ನು ಚಲಾಯಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಹೆಚ್ಚುವರಿ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರ್ಗಿ ಠಾಣೆ : ಶ್ರೀ ಮರೆಪ್ಪ ತಂದೆ ಸಿದ್ರಾಮ ಜೀರ ಸಾ : ಬೀರಾಳ ಬಿ ತಾ : ಜೇವರ್ಗೀ ರವರು ದಿನಾಂಕ
27.01.2015 ರಂದು 10:00 ಗಂಟೆಗೆ ನಮ್ಮ ಓಣಿಯ ಅಂಬೇಡ್ಕರ್ ಕಟ್ಟೆಯ ಹತ್ತಿರ ಮರೆಪ್ಪ ತಂದೆ
ಭೀಮರಾಯ ಬೊಂಬಾಯಿ ಮತ್ತು ಸಂಗಡ 26 ಜನರು ಗುಂಪು ಕಟ್ಟಿಕೊಂಡು ಬಂದವರೆ ನನಗೆ ಏ ಬೋಸಡಿ ಮಕ್ಕಳೆ
ಮಕ್ಕಳೆ ಈ ಜಾಗದಲ್ಲಿ ನಾವು ಯಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡುತ್ತೆವೆ ಯಾರಾದರು ಬಂದರೆ ಒಂದು
ಕೈ ನೋಡಯೆ ಬಿಡುತ್ತೆವೆ ಅಂತ ನಮಗೆ ಅವಾಚ್ಯ ಶಬ್ದಗಳಿಂದ ಬೈಯ ಹತ್ತಿದರು ನಾನು ಅವರಿಗೆ ಈ
ಜಾಗದಲ್ಲಿ ಬ್ಯಾಡ ಬೇರೆ ಕಡೆಗೆ ಕಟ್ಟಿಕೊಳ್ಳಿರಿ ಅಂತ ಅಂದಾಗ ಮರೆಪ್ಪ ಬೊಂಬಾಯಿ ಈತನು ನನಗೆ ಅಂಗಿ
ಹಿಡಿದು ಜಗ್ಗಾಡಿ ಹೊಡೆದಿರುತ್ತಾನೆ. ನನ್ನ ಜೋತೆಯಲ್ಲಿದ್ದವರಿಗು ಹೊಡೆಯಲು ಬಂದಿರುತ್ತಾರೆ.
ಅವರೆಲ್ಲರು ಈ ಜಾಗದಲ್ಲಿ ನಾವು ಯಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡುತ್ತೆವೆ ಯಾರಾದರು ಕೇಳಿದೆ
ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ
ಠಾಣೆ : ²æà ಮೀರಾಸಾಬ ತಂದೆ ರಾಜಾಸಾಬ ಬೂದಿಹಾಳ ಸಾ :| ಉಡಚಾಣ ರವರು ದಿನಾಂಕ 27-01-2015 ರಂದು ನಮ್ಮೂರ ನೀಲಪ್ಪ
ನಾಯ್ಕೋಡಿ ರವರ ಹೋಟೆಲ ಮುಂದೆ ಹೋಗುತ್ತಿದ್ದಾಗ ನಮ್ಮ ತಮ್ಮ ನಬೀಸಾಬ ಮತ್ತು ಅವನ ಮಕ್ಕಳಾದ
ಸೈಯದಸಾಬ, ಖಾನಮಾಬಿ ಗಂಡ ಹುಸೇನಸಾಬ ಜಮಾದಾರ, ಮಮ್ತಾಜಬಿ ಗಂಡ ಶರಿಫೋದ್ದಿನ ಮರತೂರ ಹಾಗು ಸೋಸೆ ರೇಷ್ಮಾ ಗಂಡ ಮಹಿಬೂಬಸಾಬ ಬೂದಿಹಾಳ
ರವರೆಲ್ಲರು ಅಕ್ರಮಕೂಟ ರಚಿಸಿಕೊಂಡು ನನ್ನ ಎದುರುಗಡೆ ಬಂದು ನನಗೆ ತಡೆದು ನಿಲ್ಲಿಸಿ ಅವರಲ್ಲಿ
ನಬೀಸಾಬ ಇವನು ನನಗೆ ಏನೋ ಸೂಳಿ ಮಗನಾ ನಮ್ಮ ಪಾಲಿಗೆ ಬಂದ 16 ಗುಂಟೆ ಜಮೀನು ನಿನಗೆ ಬಿಟ್ಟು ಕೊಡಬೇಕಾ, ಇವತ್ತ ನಿನಗ ಜೀವ ಸಹಿತ ಬಿಡಲ್ಲಾ
ಮಗನಾ ಅಂತಾ ಅಂದು ಕೈ ಯಿಂದ ಕಪಾಳ ಮೇಲೆ ಹೊಡೆದನು.
ಸೈಯದಸಾಬ ಇವನು ತನ್ನ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆದನು, ಖಾನಮಾಬಿ ಇವಳು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಬಲಗಾಲ ಪಿಂಡ್ರಿಯ ಮೇಲೆ ಹೊಡೆದು ತರಚಿದ
ರಕ್ತಗಾಯ ಪಡಿಸಿದಳು, ಮಮ್ತಾಜಬಿ ಇವಳು ತನ್ನ ಕೈಯಿಂದ
ನನ್ನ ತಲೆಯ ಹಿಂದೆ ಹೊಡೆದು ಗುಪ್ತ ಪೆಟ್ಟು ಪಡಿಸಿದಳು, ರೇಷ್ಮಾ ಇವಳು ಈ ಮುದುಕನ ಸೊಕ್ಕ
ಬಹಳ ಇದೆ ಹೊಡೆದು ಖಲಾಸ ಮಾಡರಿ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಶಾಂತಮ್ಮ ಗಂಡ ಸದಾನಂದ ಮುಕುಡಿ, ಸಾ:ಹಂದರಕಿ ಗ್ರಾಮ, ತಾ:ಸೇಡಂ ಇವರು ನಮ್ಮೂರಿನ ಸದಾನಂದ ಮುಕಡಿ ಇತನೊಂದಿಗೆ ಪ್ರೀತಿಸಿ 15 ವರ್ಷಗಳ ಹಿಂದೆ ಮೊತಕಪಲ್ಲಿ ಭೀಮಸೇನ
ಗುಡಿಯಲ್ಲಿ ಲಗ್ನ ಮಾಡಿಕೊಂಡಿದ್ದು ಇರುತ್ತದೆ.
ಮದುವೆಯಾಗಿ 10 ವರ್ಷಗಳವರೆಗೆ ನಾವಿಬ್ಬರು ಸುಖಸಂಸಾರ ನಡೆಸಿದೇವು, ನಮಗೆ ಇಬ್ಬರು
ಮಕ್ಕಳಿರುತ್ತಾರೆ. ಈಗ ನಾಲ್ಕೈದು ವರ್ಷಗಳಿಂದ ನನಗೆ ನನ್ನ ಗಂಡ ಮಾನಸೀಕವಾಗಿ ಹಾಗೂ ದೈಹಿಕವಾಗಿ
ಕಿರುಕುಳ ನೀಡುತ್ತಾ ಬಂದಿದ್ದು
ದಿನಾಂಕ:19-06-2014 ರಂದು ಬೆಳಗ್ಗೆ 10-00 ಗಂಟೆಯ ಸುಮಾರಿಗೆ ನನ್ನ ಗಂಡನಾದ ಸದಾನಂದ
ತಂದೆ ತಿಪ್ಪಣ್ಣ ಮುಕುಡಿ ಇವರಿಗೆ ಉಪಚಾರದ ಕುರಿತು ಸೇಡಂ ದವಾಖಾಗೆ ನಾನು ಹಾಗೂ ನನ್ನ ಮೈದುನನಾದ
ಅನೀಲ್ ಕುಮಾರ ಇಬ್ಬರೂ ಕೂಡಿಕೊಂಡು ನಮ್ಮೂರ ಡ್ರೈವರ್ ಆಯುಶ ಕಲಾಲ ಇತನ ಜೀಪಿನಲ್ಲಿ ಕರೆದುಕೊಂಡು
ಸೇಡಂ ದವಾಖಾನಿಗೆ ಹೊರಟಿದ್ದೇವು ಮಾರ್ಗ ಮಧ್ಯೆದಲ್ಲಿ ಕಲಕಂಬಾ ಗೇಟ್ ಹತ್ತಿರ ನನ್ನ ಗಂಡನು ನನಗೆ “ರಂಡಿ ಭೋಸಡಿ ನೀ ಯಾಕ ನನ್ನ ಹಿಂದೆ ಬರುತ್ತಿದ್ದಿ” ಅಂತ ಜಗಳ ತೆಗೆದನು ಆಗ ನಾನು ಗಂಡ ಇದ್ದಿದ್ದಿ ಅಂತ ಬರತಾ
ಇದ್ದೀನಿ ಅಂತ ಅಂದೇನು. ಆಗ ನನ್ನ ಮೈದುನನಾದ ಅನೀಲಕುಮಾರ ತಂದೆ ತಿಪ್ಪಣ್ಣ ಮುಕಡಿ ಇತನು ನನ್ನ
ಅಣ್ಣನಿಗೆ ಎದುರು ಮಾತಾಡ್ತಿ ರಂಡಿ ಅಂತ ಬೈದು, ನನಗೆ ಕುತ್ತಿಗೆ ಹಿಸುಕಿ ಕೊಲೆ ಮಾಡಲು
ಪ್ರಯತ್ನಿಸಿದಾಗ ನಾನು ಬೇಹೋಷ ಆಗಿದ್ದು, ನಂತರ ಸೇಡಂಕ್ಕೆ ಬಂದಾಗ ನನಗೆ ಪ್ರಜ್ಞೆ ಬಂದಿದ್ದು ಆಗ
ನಾನು ನೀರು-ನೀರು ಅಂತ ಚೀರಾಡಿದ್ದು, ಅದನ್ನು ಕೇಳಿ ನನ್ನ ಗಂಡ ಹಾಗೂ ಮೈದುನ ಇಬ್ಬರೂ ಕೂಡಿ ನನಗೆ
ಅಲ್ಲೂರು ಗ್ರಾಮದ ನಮ್ಮ ಕಾಕನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟರು. ನಂತರ ನನ್ನ ಗಂಡ ಸದಾನಂದ
ಇತನು ಕರೆಯಲು ಬಂದಾಗ ನಾನು ಆತನೊಂದಿಗೆ ಪುನಃ ಗಂಡನ ಮನೆಗೆ ಬಂದು ಉಳಿದೇನು. ನಾನು ಊರಲ್ಲಿ
ಯಾರಿಗಾದರು ಮಾತಾಡಿದರೆ ಅವರಿಗೇಕೆ ಮಾತಾಡುತ್ತಿ ಅಂತ ನನ್ನ ಮೇಲೆ ಸಂಶಯ ಪಟ್ಟು ನನ್ನ ಗಂಡ ನನಗೆ
ಮಾನಸೀಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಿದ್ದಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment