POLICE BHAVAN KALABURAGI

POLICE BHAVAN KALABURAGI

03 February 2015

Kalaburagi District Reported Crimes

ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ದಿನಾಂಕ-02/02/2015 ರಂದು ಶ್ರೀ ನಾಗರಾಜ ತಂದೆ ಫಕೀರಪ್ಪಾ ಮಣಿಗೀರಿ ಸಾ : ಕಣಸೂರ ರವರು ಮತ್ತು ಹೆಂಡತ್ತಿ ಜಗದೇವಿ ಇವಳಿಗೆ ಮೈಯಲ್ಲಿ ಆರಾಮ ಇಲ್ಲಾ ಹಾಗೂ ಇಂದು ಕಾಳಗಿ ಬಜಾರ ಇದೆ ತನಗೆ ದವಾಖಾನೆ ತೂರಿಸಿಕೊಂಡು ಬಜಾರ ಮಾಡಿಕೊಂಡು ಬರೋಣಾ ಅಂತಾ ಫಿರ್ಯಾಧಿಗೆ ತಿಳಿಸಿದಾಗ ತನ್ನ ಮೋ.ಸೈ ನಂ ಕೆಎ-32 ವಾಯಿ-1601 ನೇದ್ದರ ಮೇಲೆ ಕುಡಿಸಿಕೊಂಡು ಮನೆಯಿಂದ ಹೊರಟು ಕಣಸೂರ ಗ್ರಾಮದ ಬ್ರಿಜ ಹತ್ತಿರ ರೊಡಿನ ಮೇಲೆ ಹೋಗುತ್ತಿದಂತೆ ಅಶೋಕ ನಗರ ಕ್ರಾಸ್ ಕಡೆಯಿಂದ ಒಂದು ಲಾರಿ ಪೆಟ್ರೋಲ ಮತ್ತು ಡಿಸೇಲ ಟ್ಯಾಂಕ್ ಚಾಲಕ ತನ್ನ ಲಾರಿ ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನನ್ನ ಮೋ.ಸೈಕಲಗೆ ಡಿಕ್ಕಿ ಪಡಿಸಿದಾಗ ನಾನು ಮೋ.ಸೈಕಲ ಸಮೇತ ಬಲಬದಿಯಲ್ಲಿ ಬಿದ್ದೇನು. ಆಗ ನನ್ನ ಹೆಂಡತ್ತಿ ಜಗದೇವಿ ಲಾರಿ ಹಿಂದಿನ ಟೈರಗಳಲ್ಲಿ ಬಿದಿದ್ದು ನನ್ನ ಹೆಂಡತ್ತಿ ತಲೆ ಸಂಪೂರ್ಣ ಒಡೆದು ಮೇದಳು ಹೊರಗೆ ಬಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಸದರಿ ಲಾರಿ ಕಾಳಗಿ ಗ್ರಾಮದಲ್ಲಿ ಹಿಡಿದಿದ್ದು ಅದರ ನಂ ಕೆಎ-32 ಬಿ-7459 ಅಂತಾ ಇದ್ದು ಹಾಗೂ ಅದರ ಚಾಲಕನ ಹೆಸರು ಸಂಜೀವಕುಮಾರ ತಂದೆ ಕಾನು ರಾಠೋಡ ಸಾ: ಮುಕಿತಾಂಡಾ ಅಂತಾ ಗೊತ್ತಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 02-02-2015 ರಂದು, ಬಡದಾಳ ಗ್ರಾಮದಲ್ಲಿ ಭಾಗಮ್ಮ ದೇವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಡದಾಳ ಗ್ರಾಮಕ್ಕೆ ಹೋಗಿ, ಭಾಗಮ್ಮ ದೇವಿ ಗುಡಿಯಿಂದ ಸ್ವಲ್ಪ ದೂರದಲ್ಲಿ  ಮರೆಯಾಗಿ ನಿಂತುಕೊಂಡು ನೋಡಲಾಗಿ, ಭಾಗಮ್ಮ ದೇವಿ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೇಕ್ತಿ ನಿಂತುಕೊಂಡು, ಹೊಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ತನ್ನ ಹತ್ತಿರ ಇದ್ದ ರಟ್ಟಿನ ಬಾಕ್ಷನಿಂದ ಸರಾಯಿ ಪೌಚಗಳನ್ನು ತಗೆದು ಸಾರ್ವಜನಿಕರಿಗೆ ಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹತ್ತಿರ ಇದ್ದ ರಟ್ಟಿನ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸನಲ್ಲಿ ಒಟ್ಟು 43 ಓಲ್ಡ ಟವೆರನ್ ಕಂಪನಿಯ 180 ಎಮ್ ಎಲ್ ಅಳತೆಯ ಮದ್ಯ ತುಂಬಿದ ರಟ್ಟಿನ ಪೌಚಗಳು ಇದ್ದವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ಸದರಿ ವ್ಯೆಕ್ತಿಯ ಹೆಸರು ವಿಳಾಸ ವಿಚಾರಿಸಲು ತನ್ನ ಹೆಸರು ಮಶಾಕಸಾಬ ತಂದೆ ಹುಸೇನಸಾಬ ಬಡದಾಳ ಸಾ|| ಬಡದಾಳ ಗ್ರಾಮ ಎಂದು ತಿಳಿಸಿದ್ದು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಅಶೊಕ ನಗರ ಠಾಣೆ : ಶ್ರೀ ಗೋಪಾಲರಾವ .ಎಚ್. ಬಂಡಾರೆ ಸಹಾಯಕ ಔಷಧ ನಿಯಂತ್ರಕರು -2 ಕಲಬುರಗಿ ರವರು ದಿನಾಂಕ 02-02-2015 ರಂದು ಕಛೇರಿ ಸಿಎ ನಿವೇಶನ ಸಂ. 4/1 ಸರ್ವೆ ನಂ. 17 ಲೇಔಟ ಎಂ.ಎಸ್.ಕೆ ಮಿಲ್ ಕಂಪೌಂಡ ಗುಲಬರ್ಗಾ ಗೆ ಬಂದು ನೋಡಿದಾಗ ನಮ್ಮ ಕಛೇರಿಯ ಮುಖ್ಯ ದ್ವಾರದ ಕೊಂಡಿ ಮುರಿದಿದ್ದು ಕಛೇರಿ ಒಳಗಡೆ ಸಹಾಯಕ ಔಷಧ ನಿಯಂತ್ರಕರು -1 ರವರ ಕೊಠಡಿಯಲ್ಲಿಯ ಒಂದು ಎಚ್.ಸಿ.ಎಲ್ ಕಂಪನಿಯ ಒಂದು ಮಾನಿಟರ ಹಾಗು ಸಿಪಿಯು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು  ಅದರ ಅಂದಾಜು ಕಿಮ್ಮತ್ತು 24,000/- ರೂ ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: