ಕೊಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ನಾಗರಾಜ ತಂದೆ ಸೂಗಪ್ಪಾ
ಗಲ್ಗೆ ಸಾಃ ಜಾಗೃತಿ ಕಾಲೋನಿ ಗುಲಬರ್ಗಾ ಇವರ ಮಾಲಿಕರಾದ ಪ್ರಮೋದ ಇವರು ದಿನಾಂಕಃ 06/07/2014 ರಂದು
ರಾತ್ರಿ 08:30 ಗಂಟೆಯ ಸಮಯಕ್ಕೆ ತಾವು ಉಟ್ಟ ಅಂಗಿ ತೆಗೆದಿಟ್ಟು ಬನೀನ್ ಹಾಗು ಪ್ಯಾಂಟಿನ ಮೇಲೆ
ಮೊಬೈಲ್ ದಲ್ಲಿ ಮಾತಾಡುತ್ತಾ ಹೋರಗಡೆ ಹೋಗಿದ್ದು ಅವರು ಹೋದ ಅಂದಾಜು 45 ನಿಮಿಷದ ಬಳಿಕೆ ಮಾಲಿಕರ
ಮನೆಯ ಪಕ್ಕದಲ್ಲಿರುವ ಗೊವಿಂದ ಮತ್ತು ಇತರರು ಚೀರಾಡುತ್ತಾ ಬಂದು ನಡೀರಿ-ನಡೀರಿ ಹೋಗೊಣಾ ಅಂತಾ
ಶಬ್ದ ಮಾಡಿ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿದ್ದು ಮತ್ತು ಗೋವಿಂದನ ಕೈಯಲ್ಲಿ ಚಾಕು
ಇದ್ದಿದ್ದು ರಕ್ತ ಹತ್ತಿದ್ದು ಮತ್ತು ಈ ಮೊದಲು 2-3 ತಿಂಗಳ ಹಿಂದೆ ಗೋವಿಂದ ಹಾಗು ನಮ್ಮ ಮಾಲಿಕ
ಪ್ರಮೋದ ಇವರ ನಡುವೆ ಯಾವುದೋ ವಿಷಯದಲ್ಲಿ ತರಕಾರು ಆಗಿದ್ದು, ತಕರರಾದ ವಿಷಯ ನಮಗೆ ಗೊತ್ತಿದ್ದು, ನಮ್ಮ ಮಾಲಿಕರಾದ ಪ್ರಮೋದ ತಂದೆ
ಶ್ರೀನಿವಾಸ ಇವರಿಗೆ ಇಂದು ದಿನಾಂಕಃ 06/07/2014 ರಂದು ಅಂದಾಜು 09:00 ಪಿ.ಎಂ ದ ಸುಮಾರಿಗೆ
ಯಾವುದೋ ವಿಷಯಕ್ಕೆ ತಂಟೆ ತಕರಾರು ಮಾಡಿ ಗೋವಿಂದ ಹಾಗು ಸ್ನೇಹಿತ ಕೂಡಿಕೊಂಡು ಹರಿತವಾದ
ಚಾಕುವಿನಿಂದ ಎದೆಗೆ ಹೊಡೆದು ರಕ್ತಗಾಯ ಪಡಿಸಿ ಮತ್ತು ಕಲ್ಲಿನಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ 06-07-2014 ರಂದು 2-30 ಪಿ.ಎಮ್ ಕ್ಕೆ ಟೇಕ
ಬುರಾನ ದರ್ಗಾ ಕ್ರಾಸ್ ಹತ್ತಿರ ಇರುವ ಲಾಲ್ ಗೇರಿ ಕ್ರಾಸ್ ಕಡೆ ಹೋಗುವ ರೋಡಿನ ಮೇಲೆ ಆರೋಪಿ
ಶ್ರೀಕಾಂತ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಎಪ್. 3446 ನೇದ್ದರ ಮೇಲೆ ಹಿಂದೆ ಚೌಡಯ್ಯಾ ಈತನನ್ನು ಕೂಡಿಸಿಕೊಂಡು ಲಾಲಗೇರಿ
ಕ್ರಾಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸುಪರ ಮಾರ್ಕೆಟ ಕಡೆಯಿಂದ ಶ್ರೀ ತೋಲುಸಾಬ ತಂದೆ ನಜೀರ ಅಹ್ಮದ ಸಾಃ ಲಾಲಗೇರಿ ಮಜೀದ
ಹತ್ತಿರ ಬ್ರಹ್ಮಪೂರ ಗುಲಬರ್ಗಾ ತನ್ನ ಅಟೋರಿಕ್ಷಾ ನಂ.
ಕೆ.ಎ 32 ಎ 2560 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎದರುಡೆಯಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ
ಫಿರ್ಯಾದಿಗೆ ಮತ್ತು ಚೌಡಯ್ಯ ತಂದೆ ಪ್ರಕಾಶ
ಜಮಾದಾರಗೆ ಹಾಗು ತಾನು ಗಾಯಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮಲ್ಲಯ್ಯ ತಂದೆ ಸಿದ್ರಾಮಯ್ಯ ಹಿರೇಮಠ ಇವರು ದಿನಾಂಕಃ
06/07/2014 ರಂದು 06:00 ಎ.ಎಂ. ಸುಮಾರಿಗೆ ನಾನು ಮತ್ತು ಕಾರ ಚಾಲಕ ಆನಂದ ಇಬ್ಬರೂ ಕೂಡಿ ಕಾರ
ನಂ. ಕೆ.ಎ 14 ಎನ್ 582 ನೇದ್ದನ್ನು ತೆಗೆದುಕೊಂಡು ಚಿತ್ತಾಪುರ ತಾಲ್ಲೂಕಿನ ನಾಗಯಲ್ಲಮ್ಮಾ
ದೇವಸ್ಥಾನಕ್ಕೆ ಹೋಗುತ್ತಿರುವಾಗ ಕಾರ ಚಾಲಕ ಆನಂದ ಈತನು ಕಾರನ್ನು ಅತಿವೇಗದಿಂದ ಬಹಳ ಜೋರಾಗಿ
ಚಲಾಯಿಸುತ್ತಿದ್ದಾಗ ಫಿರ್ಯಾದಿದಾರರು ಸದರಿ ಕಾರ ಚಾಲಕ ಆನಂದ ಈತನಿಗೆ ಕಾರನ್ನು ನಿಧಾನವಾಗಿ
ಚಲಾಯಿಸು ಅಂತಾ ಹೇಳಿದರೂ ಕೇಳದೇ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಟೊಯೊಟೋ ಶೋ
ರೂಮಿನ ಎದರುಗಡೆ ಇರುವ ರೋಡ್ ಡಿವೈಡರ್ ಕ್ಕೆ ಡಿಕ್ಕಿ ಪಡಿಸಿದನು. ಇದರಿಂದ ಕಾರಿನ ಮುಂಭಾಗ
ಪೂರ್ತಿಯಾಗಿ ಜಜ್ಜಿ ಹೋಗಿದ್ದು ಅಪಘಾತ ಪಡಿಸಿದ ನಂತರ ಕಾರ ಚಾಲಕನು ಕಾರನ್ನು ಸ್ಥಳದಲ್ಲಿಯೇ
ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಿಲಾಸ ತಂದೆ ಪಾಂಡುರಂಗ ಧೋತ್ರ ಸಾ: ವಡ್ಡರಗಲ್ಲಿ ಬ್ರಹ್ಮಪುರ
ಗುಲಬರ್ಗಾ ರವರು ದಿನಾಂಕ 06/07/2014 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ನಾನು ಮತ್ತು
ಹಣಮಂತ ದೇವಕರ ಇಬ್ಬರೂ ಬಸ್ ಸ್ಟ್ಯಾಂಡ ಹತ್ತಿರದ ಮಹಾರಾಜಾ ಹೊಟೆಲಕ್ಕೆ ಹೋಗಿ ಕಲ್ಯಾಣಿ ಗುತ್ತೆದಾರ
ರವರಿಂದ ಪಗಾರ ಹಣ ತೆಗೆದುಕೊಂಡು ಮಹಾರಾಜಾ ಹೊಟೇಲ ಪಕ್ಕದ ಟರ್ನಿಂಗದಲ್ಲಿ ನಡೆದು ಮನೆಗೆ
ಹೋಗುತ್ತಿರುವಾಗ ಎದುರುಗಡೆಯಿಂದ ಒಬ್ಬ ಕಪ್ಪು ಟಿ-ಶರ್ಟ ಮತ್ತು ಜಿನ್ಸ ಪ್ಯಾಂಟ ಹಾಕಿಕೊಂಡಿದ್ದ
ಅಪರಿಚಿತ ವ್ಯಕ್ತಿ ಬಂದವನೇ ಬೆಕಂತಾ ನನಗೆ ಡಿಕ್ಕಿ ಹೊಡೆದು ತಡೆದನು. ನಾನು ಕೇಳಿದಕ್ಕೆ ಅವನು
ಹಿಂದಿಯಲ್ಲಿ ಕೃಷ್ಣಾನ ಅದಮಿ ಹೂ ಛೋಡತಾ ನಹೀ ಬೈಯುತ್ತಾ ಒಮ್ಮೇಲೆ ಚಾಕು ತೆಗೆದು ನನ್ನ ಹೊಟ್ಟೆಗೆ
ಚುಚ್ಚಲು ಎತ್ತಿಸಿದ್ದು ನಾನು ತಪ್ಪಿಸಿಕೊಂಡಿದ್ದರಿಂದ ಆ ಚಾಕು ಎಟು ಎಡಗೈ ಮೋಳಕ್ಕೆ ಹತ್ತಿ ಭಾರಿ
ರಕ್ತಗಾಯವಾಗಿದೆ. ಮತ್ತು ಪುನ: ಎರಡು ಸಲ ಹೊಡೆದಿದ್ದರಿಂದ ಎಡ ಬಗಲಿಗೆ, ಎಡಗೈಗೆ ರಕ್ತಗಾಯವಾಗಿ ರುತ್ತದೆ. ಆಗ ನಾನು ಮತ್ತು ಹಣಮಂತ ಇಬ್ಬರೂ
ಅವನ ಕೈ ಹಿಡಿದು ಚಾಕು ಕಸಿದುಕೊಳ್ಳಲು ಯತ್ನಿಸಿ ದಾಗ ಚಾಕು ಬಿಟ್ಟು ತಪ್ಪಿಸಿಕೊಂಡು
ಹೋಗಿರುತ್ತಾನೆ. ಆಗ ವ್ಯಕ್ತಿಯ ಜೇಬಿನಲ್ಲಿದ್ದ ಒಂದು ಆಧಾರ ಕಾರ್ಡ ಚೀಟಿ ಸ್ಥಳದಲ್ಲಿ ಬಿದ್ದಿದ್ದು
ಅದರಲ್ಲಿ ಸನ್ನಿ ಸುರೇಶ ರಿಡ್ಡಲಾನ್ ವಿಳಾಸ ರೇಲ್ವೆ ಸ್ಟೇಷನ ಹತ್ತಿರ ಪಾರ್ಸಿ ಚಾವಲ ದೇಹು ರೋಡ
ಪುಣೆ ಅಂತಾ ಬರೆದಿದ್ದು ಆದಾರದ ಕಾರ್ಡ ನಂ. 433803437436 ಇರುತ್ತದೆ.ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ
ಪ್ರಕರಣ:
ಮಾಹಾಗಾಂವ ಠಾಣೆ : ದಿನಾಂಕ 05-07-14 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಶ್ರೀ ರಾಘು ತಂದೆ ತಾಯಪ್ಪ ದಂಡಗೋಳ ಕರ ಸಾ : ಹಾಳ ಸುತ್ತಾನಪೂರ ರವರ ಅಣ್ಣ ಅಜರ್ ಇವರು ಹರಸೂರ ತಾಂಡಾ ಕ್ರಾಸದಿಂದ ತನ್ನ
ಮೋಟಾರ ಸೈಕಲ ಕೆಎ 32 ಎಕ್ಸ 9775 ನೇದ್ದರ ಹಿಂದೆ ಕೂಡಿಸಿಕೊಂಡು ರಾತ್ರಿ 9-00 ಗಂಟೆ ಸುಮಾರಿಗೆ
ಹಾಳ ಸುಲ್ತಾನಪೂರ ಸರಕಾರಿ ಶಾಲೆ ಹತ್ತಿರ ಬಂದಾಗ ಅವರ ಹಿಂದಿನಿಂದ ಒಂದು ಕಾವಿ ಕಲರ ಕಾರು
ವೇಗವಾಗಿ ಬಂದು ಫಿರ್ಯಾದಿ ಮೋಟಾರ ಸೈಕಲಿಗೆ ಅಡ್ಡಗಟ್ಟಿ ನಿಲ್ಲಿಸಿ ಕಾರಿನಿಂದ 1. ರಾಜು @ ಪೃಥ್ವಿರಾಜ 2. ರಾಣ್ಯಾ ತಂದೆ ಚಂದ್ರಶೇಖರ
ಕಣ್ಣೂರ 3. ಸತೀಷ 4. ಶಾಂತಕುಮಾರ ತಂದೆ ನಾಗಪ್ಪಾ ಸಿಂಧೇ ಸಾ : ಎಲ್ಲರು ಹಾಳಸುತ್ತಾನಪೂರ ಇವರುಗಳು ಇಳಿದು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ರೊಕ್ಕಾ ಎಷ್ಟೇವೆ ತೇಗಿ
ಅಂತಾ ಕೇಳಿದ್ದು . ಅದಕ್ಕೆ ಫಿರ್ಯಾದಿ ರೊಕ್ಕಾ ಇಲ್ಲಾ ಅಂದಾಗ, ರಾಜು ತನ್ನ ಹತ್ತಿರವಿದ್ದ ಚಾಕುವಿನಿಂದ ಎಡಗೈ ಅಂಗೈ ಒಳಭಾಗದಲ್ಲಿ ಹೊಡೆದು
ರಕ್ತಗಾಯಗೊಳಿಸಿದ್ದು, ಅಜರ್ ಇವನಿಗೆ ರಾಣ್ಯಾ @ ಚಂದ್ರಶೇಖರ ಇತನು ರಾಡಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದು, ಸತೀಷ ಮತ್ತು ಶಾಂತಕುಮಾರ ಇವರಿಬ್ಬರು ಬಡಿಗೆಗಳಿಂದ ಬೆನ್ನ ಮೇಲೆ ಹೊಡೆದು ತಮ್ಮ ತಮ್ಮ ವಾಚ್ಯ
ಪಾಕೇಟದಲ್ಲಿದ್ದ ನಗದು ಹಣ 24,500 ರೂ.ಮತ್ತು ಶರ್ಟಿನ ಜೇಬಿನಲ್ಲಿದ್ದ ಮೋಬಾಯಿಲ್ ಮತ್ತು ಟೈಟಾನ
ವಾಚ ಹೀಗೆ ಒಟ್ಟು 31000 ರೂ. ಬೆಲೆವುಳ್ಳದು ಜಬರದಸ್ತಿಯಿಂದ ಕಸಿದುಕೊಂಡು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ
ಪ್ರಕರಣ :
ಸೇಡಂ ಠಾಣೆ : ಶ್ರೀ. ರೇವಣಸಿದ್ದಪ್ಪ ತಂದೆ ಕಾಶಪ್ಪ ಚೊಂಚ ಸಾ: ಊಡಗಿ ಗ್ರಾಮ ಇವರು ದಿನಾಂಕ:
04-07-2014 ರಂದು ನನ್ನ ಮಗ ಶಾಲೆಗೆ ಹೋಗುತ್ತಿರುವಾಗ ಮಲ್ಲಿಕಾರ್ಜುನ್ ತಂದೆ ದೇವಿಂದ್ರಪ್ಪ ತೆಲ್ಕೂರ
ಇತನು ನನ್ನ ಮಗನಿಗೆ ಬಾಯಿ ಮಾತಿನ ಜಗಳ ಮಾಡಿರುತ್ತಾನೆ. ದಿನಾಂಕ 06-07-2014 ರ ಬೆಳಗ್ಗೆ 8 ಗಂಟೆಯ
ಸುಮಾರಿಗೆ ನಾನು ದೇವಿಂದ್ರಪ್ಪ ಇತನ ಮನೆಗೆ ಹೋಗಿ ಮೊನ್ನೆ ದಿವಸ ನಿನ್ನ ಮಗ ನನ್ನ ಮಗನಿಗೆ ಜಗಳ ಮಾಡಿದ್ದಾನೆ
ಅಂತ ಹೇಳಿದ್ದಕ್ಕೆ ಆತ ನನಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಕೈಯಿಂದ ಹೊಡೆಬಡೆ
ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ಅವನ ಮಗ 1] ಮಲ್ಲಿಕಾರ್ಜುನ
ಮತ್ತು 2] ಸಿದ್ದಪ್ಪ ತಂಧೆ ಮಲ್ಲೇಶಿ ತೆಲ್ಕೂರ, 3] ರಾಜು ತಂದೆ ಸುಬ್ಬಣ್ಣ ಹೊಮಸನಿ, 4] ದಶರಥ ತಂದೆ
ಹಣಮಂತ ಗೊಟಗಿ, 5] ದೇವಿಂದ್ರಪ್ಪ ತಂದೆ ಹುಸೇನಪ್ಪ ಕರನಕೊಟ, 6] ಬಸವರಾಜ ತಂದೆ ಮರೆಪ್ಪ ದಂಡಗುಂಡ,
ಇವರೆಲ್ಲರೂ ಬಂದವರೇ ನನಗೆ ಒತ್ತಿ ಹಿಡಿದು, ಅವಾಚ್ಯವಾಗಿ ಬೈದು, ಕೈಯಿಂದ, ಕಲ್ಲಿನಿಂದ ಹೊಡೆದಿದ್ದಲ್ಲದೇ
ಜೀವದ ಬೆದರಿಕೆ ಹಾಕಿ ಅಷ್ಟರಲ್ಲಿ ದೇವಿಂದ್ರಪ್ಪ ತೆಲ್ಕೂರ ಇತನು ನನಗೆ ಕೊಲೆ ಮಾಡುವ ಉದ್ದೇಶದಿಂದ
ಕೊಡಲಿ ತೆಗೆದುಕೊಂಡು ಈ ಮಗನಿಗೆ ಇವತ್ತು ಜೀವ ಸಹಿತ ಬಿಡುವದಿಲ್ಲ ಅಂತ ಹೇಳಿ ನನ್ನ ತಲೆಗೆ ಹೊಡೆದು
ಭಾರಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment