POLICE BHAVAN KALABURAGI

POLICE BHAVAN KALABURAGI

08 July 2014

Gulbarga District Reported Crimes

ಅಶೋಕ ನಗರ ಪೊಲೀಸರಿಂದ ರಿಂಗ್ ರೋಡ ಮೇಲೆ ರಾತ್ರಿ ಸುಲಿಗೆ ಮಾಡುವವರ  ಬಂಧನ  :
ಅಶೋಕ ನಗರ ಠಾಣೆ : ಅಶೋಕ ನಗರ ಪೊಲೀಸ ಠಾಣಾ ವ್ಯಾಪ್ತಿಯ ರಾಮ ಮಂದಿರ ಹತ್ತಿರದ ರಿಂಗ್ ರೋಡ ರಸ್ತೆ ಮೇಲೆ ದಿನಾಂಕ: 02/06/2014 ರಂದು ರಾತ್ರಿ 11-30 ಗಂಟೆ ಸುಮಾಗೆ ಶ್ರೀ ಸಾಹೇಬಗೌಡ ತಂದೆ ರೇವಪ್ಪಾ ಬೋಗಡಿ ಮಾಜಿ ಮಹಾನಗರ ಪಾಲಿಕೆಯ ಸದಸ್ಯರು ಸಾ: ಮಜ್ಜಿಗೆ ಲೇಔಟ ಸಾದ್ವಿಗಲ್ಲಿ  ಶಹಾಬಜಾರ ಗುಲಬರ್ಗಾ ರವರು ಒಬ್ಬರೆ ಮನೆಗೆ ಹೋಗುತ್ತಿರುವಾಗ ಮೂರು ಜನ ಅಪರಿಚಿತ ದ್ವೀಚಕ್ರ ವಾಹನ ಸವಾರರು ಹಲ್ಲೆ ಮಾಡಿ ಜಬರದಸ್ತಿಯಿಂದ ಚೋರಗುಮ್ಮಜ ಹತ್ತಿರ ಒಯ್ದು ಹಣ, ಬಂಗಾರದ ಉಂಗುರಗಳು ಮೊಬೈಲ ಹಾಗೂ ನಗದು ಹಣ 1100 ರೂ/- ಕಸಿದುಕೊಂಡು ಹೋದ ಬಗ್ಗೆ ಅಶೋಕನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದರ ಪ್ರಕರಣದ ಆರೋಪಿ ಪತ್ತೆ ಕುರಿತು ಮಾನ್ಯ  ಶ್ರೀ ಅಮೀತಸಿಂಗ್ ಐ.ಪಿ.ಎಸ್. ಎಸ್.ಪಿ.. ಗುಲಬರ್ಗಾ, ಮತ್ತು ಶ್ರೀ ಮಹಾನಿಂಗ ನಂದಗಾಂವಿ ಡಿವೈಎಸ್.ಪಿ ಉಪ ವಿಬಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ  ಅಶೋಕನಗರ ಪೊಲೀಸ ಠಾಣೆಯ ಶ್ರೀಮತಿ ವಿಜಯಲಕ್ಷ್ಮಿ ಪಿಐ, ಸತ್ಯನಾರಾಯಣ ಪಿ.ಎಸ್.ಐ (ಅ.ವಿ), ಸಿಬ್ಬಂದಿ ಜನರಾದ ರವಿಕುಮಾರ ಹೆಚ್.ಸಿ 433  ಸುರೇಶ ಪಿಸಿ 534,  ಶಿವಪ್ರಕಾಶ ಪಿಸಿ 615, ಚಂದ್ರಕಾಂತ ಪಿಸಿ 176, ಮಹ್ಮದ ಅನೀಸ ಪಿಸಿ 12, ಹಣಮಂತ ಪಿಸಿ 1166,ಬಸವರಾಜ ಪಿಸಿ 765, ಡ್ರೈವರ ಶಿವಯ್ಯ ಎಪಿಸಿ 10 ರವರು ಪೊಲಿಸ ತಂತ್ರಾಂಶದ ಮುಖಾಂತರ ಪ್ರಕರಣವನ್ನು ಭೇದಿಸಿ ರಾತ್ರಿ ವೇಳೆ ರಿಂಗ್ ರೋಡ ರಸ್ತೆಯ ಮೇಲೆ ಸುಲಿಗೆ ಮಾಡುವ ಆರೋಪಿತರಾದ 1) ಪುಂಡಲಿಂಗ ತಂದೆ ಹಾಜಪ್ಪಾ ಕಾಂಬ್ಳೆ ಸಾ: ಕುಷ್ಟರೋಗ ಕಾಲೋನಿ ಆಳಂದ ರಸ್ತೆ ಗುಲಬರ್ಗಾ 2) ಪ್ರಸಾದ @ ಬಂಟಿ ತಂದೆ ಮೋಹನ ರಾವ ದೇಶಮುಖ ಸಾ: ದೇವಿನಗರ ಗುಲಬರ್ಗಾ 3) ಸುರೇಶ ತಂದೆ ಹಣಮಂತ ದೇವನೂರ ಸಾ: ಕುಷ್ಟರೋಗ ಕಾಲೋನಿ ಆಳಂದ ರೋಡ ಗುಲಬರ್ಗಾ 4) ಅನೀಲಕುಮಾರ ತಂದೆ ಮಹಾನಿಂಗಯ್ಯ ಸ್ವಾಮಿ ಸಾ: ದೇವಿ ನಗರ ಹನುಮಾನ ಗುಡಿಯ ಹತ್ತಿರ ಗುಲಬರ್ಗಾ ರವರನ್ನು ಹಿಡಿದು ಅವರಿಂದ   ಬಂಗಾರದ ಉಂಗುರ 5 ಗ್ರಾಂ, ಬೆಳ್ಳಿಯ ಉಂಗುರ 5 ಗ್ರಾಂ, ಮೊಬೈಲ್ ಫೊನಗಳು ಮತ್ತು ಅಪರಾಧ ಎಸಗಲು ಉಪಯೋಗಿಸಿದ ಎರಡು ದ್ವೀಚಕ್ರ ವಾಹನಗಳು ಹೀಗೆ ಒಟ್ಟು ಅ.ಕಿ. 1,00,000 ರೂ/- ಮೌಲ್ಯದ ಬಂಗಾರ ಮೋಬೈಲ್ ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 
ಆರೋಪಿತನ ಬಂಧನ :
ಅಶೋಕ ನಗರ ಠಾಣೆ : ಅಶೋಕ ನಗರ ಪೊಲೀಸ ಠಾಣಾ ವ್ಯಾಪ್ತಿಯ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಮಹಾರಾಜಾ ಹೋಟೆಲ ಪಕ್ಕದಲ್ಲಿ ವಿಲಾಸ ತಂದೆ ಪಾಂಡುರಂಗ ಧೋತ್ರೆ  ಸಾ: ವಡ್ಡರಗಲ್ಲಿ ಬ್ರಹ್ಮಪೂರ ಗುಲಬರ್ಗಾ  ಇತನ ಮೇಲೆ ಅಪರಿಚಿತ ವ್ಯಕ್ತಿ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಬಗ್ಗೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಸದರ  ಪ್ರಕರಣದಲ್ಲಿ ಮಾರಣಾಂತಿಕ ಹಲ್ಲೆಮಾಡಿದ ಅಪರಿಚಿತ ವ್ಯಕ್ತಿಯನ್ನು ಪತ್ತೆಹಚ್ಚಲು ಪಿ.ಐ ಅಶೋಕ ನಗರ ಮತ್ತು ಪಿ.ಎಸ್.ಐ. ಅಪರಾಧ ರವರು ಗಾಗು ಸಿಬ್ಬಂದಿಯವರು ಆರೋಪಿತನಾದ  ಸನ್ನಿ ತಂದೆ ಸುರೇಶ ರೆಡ್ಲಾನ್ ಸಾ; ಪುನೆ ಮಹಾರಾಷ್ಟ್ರ ಇತನಿಗೆ 12 ಗಂಟೆ ಅವಧಿಯಲ್ಲಿ ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 07-07-2014 ರಂದು ಹಿತ್ತಲ ಶಿರೂರ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಎ.ಎಸ್.ಐ. ನಿಂಬರ್ಗಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹಿತ್ತಲಶಿರೂರ ಗ್ರಾಮಕ್ಕೆ ಹೋಗಿದ್ದು ಅಲ್ಲಿಗೆ ಸಿಪಿಐ ಸಾಹೇಬರು ಆಳಂದರವರು ಕೂಡ ಬಂದಿದ್ದು ಎಲ್ಲರೂ ಸೇರಿ ಹನುಮಾನ ದೇವರ ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ  ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಧಾನಪ್ಪ ತಂದೆ ನಿಂಗಪ್ಪ ಭೂಸನೂರ ಸಾ|| ಹಿತ್ತಲಶಿರೂರ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ  ನಗದು ಹಣ 1635/-,  ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಮರಳಿ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ನರೋಣಾ ಠಾಣೆ : ಶ್ರೀ ಮರೇಪ್ಪಾ ತಂ ಹಣಮಂತಪ್ಪಾ ಸಜ್ಜನ, ಸಾ:ಚಿಂಚನಸೂರ,  ರವರು ದಿನಾಂಕ 06-07-2014 ರಂದು ರಾತ್ರಿ 08 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಓಣಿಯ ಪರುಶುರಾಮ ತಂ ವಿಠಲ ದಾಡಿ, ಶ್ರೀಶೈಲ ತಂ ಪಾಂಡುರಂಗ ಮದನಕರ, ಹಾಗೂ ಸಿದ್ರಾಮ ತಂ ಚಂದ್ರಶ್ಯಾ ಚಿಂಚೋಳಿ ರವರುಗಳೂ ಕೂಡಿಕೊಂಡು ಮಾತನಾಡುತ್ತಾ ನಮ್ಮ ಗ್ರಾಮದ ಅಂಬೇಡ್ಕರ ಕಟ್ಟೆಯ ಹತ್ತಿರ ನಿಂತಿಕೊಂಡಿರುವಾಗ ನಮ್ಮ ಗ್ರಾಮದವರಾದ ಕಾಶಿನಾಥ ತಂ ಅಪ್ಪರಾವ ರಾಮನ್‌, ರೇವಣಸಿದ್ದಪ್ಪ ತಂ ಅಪ್ಪರಾಯ ರಾಮನ್, ನಾಗೀಂದ್ರ ತಂ ಅಪ್ಪರಾಯ ರಾಮನ್, ಅಪ್ಪರಾಯ ತಂ ಸಿದ್ರಾಮ ರಾಮನ್, ಶರಣಪ್ಪ ತಂ ಅಪ್ಪರಾಯ ರಾಮನ್, ಪರುಶುರಾಮ ತಂ ಸಿದ್ದಪ್ಪ ರಾಮನ್. ಲೋಕೆಶ ತಂ ಪರುಶೂರಾಮ ರಾಮನ್, ಗುಂಡಪ್ಪ ತಂ ಮದರಪ್ಪ ರಾಮನ್, ಶಿವಾನಂದ ತಂ ಮದ್ರಪ್ಪ ರಾಮನ್, ಸುನೀಲಕುಮಾರ ತಾಯಿ ಅಂಬಮ್ಮ ಕಡೋಳ, ಸತೀಶ ತಂ ಸೂರ್ಯಕಾಂತ ರಾಮನ ರವರುಗಳೂ ಎಲ್ಲರು ಗುಂಪು ಕಟ್ಟಿಕೊಂಡು ಬಂದು ಕಾಶಿನಾಥನು ನನಗೆ ಏ ಬೋಸಡೆ ಮಗನೆ ಮರ್ಯಾ ನೀನು ಶಿವಶರಣಪ್ಪ ಮಾತು ಕೇಳು ಕಾಂಗ್ರೇಸ್ ಪಾರ್ಟಿಕಡೆಗೆ ಹೋಗಿ ಅವರು ಹೇಳಿದಂತೆ ಕೆಲಸ ಮಾಡುತ್ತಿದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನೊಂದಿಗೆ ಜಗಳ ತಗೆದು ನನಗೆ ಖಲಾಸ ಮಾಡುವ ಉದ್ದೇಶದಿಂದ ಅಲ್ಲೆ ಬಿದ್ದಿರುವ ಕಲ್ಲನ್ನು ತಗೆದುಕೊಂಡು ಹಣೆಯ ಮೇಲ್ಭಾಗಗಕ್ಕೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ಶ್ರೀಮತಿ ಅಂಬಮ್ಮ ಕಡೋಳಿ, ಸಾ:ಚಿಂಚನಸೂರ, ರವರ ಮಗ ಸುನಿಲಕುಮಾರ ರವರು ದಿನಾಂಕ: 06/07/2014 ರಂದು ನಮ್ಮ ಗ್ರಾಮದ ಸಂಜುಕುಮಾರ ತಂ ಮಾಪಣ್ಣ ಮದನಕರ್ ಇವರ ಮದುವೆ ಇದ್ದು  ಅವರ ಮದುವೆಗೆ ನಾನು ನಮ್ಮ ಓಣಿಯ ಅರುಣಕುಮಾರ ತಂ ಅಪ್ಪರಾಯ ರಾಮನ್  ಹಾಗೂ ಇತರರು ಕೂಡಿ ಮದುವೆಗೆ ಹೋಗಿ ಮದುವೆ ಮುಗಿದ ನಂತರ ಮೇರವಣಿಗೆ ಕಾರ್ಯಕ್ರಮ ಇಟ್ಟಿಕೊಂಡಿದ್ದು ಸಂಜೆ 7-30 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಸ್ನೇಹಿತರಾದ ಅರುಣ್ ಕುಮಾರ ತಂ ಅಪ್ಪಾರಾಯ ರಾಮನ್‌, ನಾಗೀಂದ್ರಪ್ಪ ತಂ ಅಪ್ಪರಾಯ ರಾಮನ್ ಗುಂಡಪ್ತ ರಾಮನ್ ಶಿವಾನಂದ ತಂ ಶಿವರಾಯ ಭೈರಮಡಗಿ ರವರುಗಳು ಕೂಡಿ ಮಾತನಾಡುತ್ತಾ ನಮ್ಮ ಗ್ರಾಮದಲ್ಲಿರುವ ಅಂಬೇಡ್ಕರ ಸರ್ಕಲ್ ಹತ್ತಿರ ನಮ್ಮ ಜಾತಿಯವರಾದ ಶೀವಶರಣಪ್ಪ ತಂ ಚಂದಪ್ಪ ಸಜ್ಜನ, ಪಿಂಟು ಸಜ್ಜನ, ಗೌತಮ್ಮ ತಂ ನಾಗಪ್ಪ ಸಜ್ಜನ, ದೇವಿಂದ್ರ ತಾಯಿ ಪುತಳಾಬಾಯಿ ಕಡೋಳೀ, ಪ್ರೇಮಕುಮರ ತಂ ಪ್ರಲ್ಹಾದ ಹೊಡಲ್‌, ಅನೀಲಕುಮಾರ ತಂ ಅಣ್ಣಪ್ಪ ಚೀಲಾ, ಶರಣಬಸಪ್ಪಾ ತಂ ಮರೇಪ್ಪ ಭಾವಿ, ಅಜಯಕುಮಾರ ತಂ ಪೀರಪ್ಪ ಸಜ್ಜನ್, ರಾಕೇಶ ತಂ ಲಕ್ಷ್ಮಣ ಭಾವಿ, ಚಂದ್ರಕಾಂತ ತಂ ಮಛೆಂದ್ರ ಸಜ್ಜನ, ಪರುಷುರಾಮ ತಂ ವಿಠಲ್ ದಾಡಿ, ಇವರುಗಳು ಎಲ್ಲರೂ ಗುಂಪು ಕಟ್ಟಿಕೊಂಡು ಬಂದು ನನಗೆ ಏ ಬೋಸಡಿ ಮಗನೆ ಸುನೀಲ್ಯಾ ನಮ್ಮ ಕಾಂಗ್ರೇಸ ಪಾರ್ಟಿ ಬಿಟ್ಟು ಬಿಜೆಪಿ ಪಾರ್ಟಿಯವರ ಕಡೆ ತಿರುಗಾಡುತ್ತಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಶಿವಶರಣಪ್ಪನು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜೊಗ್ಗಾಡುತ್ತಿದ್ದಾಗ ನನ್ನ ಪಕ್ಕದಲ್ಲಿ ಇದ್ದ ನನ್ನ ಗಳೆಯನಾದ ಅರುಣ್‌ಕುಮಾರ ಎ ಅನೀಲ ಕುಮಾರನು ಜಗಳ ಬಿಡಿಸಿಲು ಬಂದಾಗ ಶಿವಶರಣನನು ತನ್ನ ಸೊಂಟದಲ್ಲಿದ್ದ ಚಾಕುವಿನಿಂದ ಅವನ ಹೊಟ್ಟೆಗೆ ಹಾಗೂ ಹೊಟ್ಟೆಯ ಎಡೆಗಡೆ ಮಗ್ಗಲಿಗೆ ಜೋರಾಗಿ ಚುಚ್ಚಿ ರಕ್ತಗಾಯ ಪಡಿಸಿರುತ್ತಾನೆ ಪಿಂಟು ಹಾಗು ಅಜಯಕುಮಾರ ಇವರು ಕೂಡಿಕೊಂಡು ನನಗೆ ನೆಲಕ್ಕೆ ಕೆಡವಿ ಕೈಯಿಂದ ಕಪಾಳದ ಮೇಲೆ ಕಲ್ಲಿನಿಂದ ಎಡಗಡೆ ರೊಟ್ಟೆಗೆ ಹೊಡೆದು ಗಾಯ ಪಡಿಸಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮೋಸ ಮಾಡಿದ ಪ್ರಕರಣ :
ರೋಜಾ ಠಾಣೆ : ಶ್ರೀಮತಿ ಶಶಿಕಲಾ ಗಂಡ ಸಂಗನಬಸಪ್ಪಾ ಬಿರಾದಾರ ಸಾ: ಮನೆ ನಂ. 5-381 ಕಾಲಾಹುಡಾ ರಾಮಜೀನಗರ ಗುಲಬರ್ಗಾ ಇವರು ನ್ಯಾಯಾಲಯಕ್ಕೆ ಹಾಜರಾಗಿ ಖಾಸಗಿ ದೂರು ನೀಡಿದ್ದೇನೆಂದರೆ ದಿನಾಂಕ: 28/06/2014 ರಂದು 1:00 ಪಿಎಮ್ ಕ್ಕೆ ಸ್ವಾಮಿ ಸಂತೋಷ ರಾಮೋದ ತಂದೆ ಸುಬ್ಬಾರಾಯ ರಾಮೋದ ಸಾ: ಮನೆ ನಂ.ಎಫ.2 ಎಸ.ಬಿ. ಟೆಂಪಲ್ ರೋಡ ಸಂಗಮೇಶ್ವರ ನಗರ ಗುಲಬರ್ಗಾ ಹಾಗೂ ಅವನ ಆಪ್ತ ಸಹಾಯಕ ಸಂತೋಷ ಕುಮಾರ ಯು.ಪಿ ಇಬ್ಬರೂ ಕೂಡಿ ನಮ್ಮ ರಾಮಜೀ ನಗರದ ಮಹಿಳಾ ಸ್ವ ಸಹಾಯ ಸಂಘ ರೋಜಾ ಕ್ಕೆ ಬಂದು ನಮ್ಮ ಸಂಘದಲ್ಲಿ ಹಿಂದೆ ಪಡೆದಂತೆ ಸಾಲ ಪಡೆದುಕೊಂಡು ಸಾಲ ಹಿಂದಿರುಗಿಸುತ್ತಾ ಬಂದಿದ್ದು ಅದೇ ತೆರನಾಗಿ ದಿನಾಂಕ: 28/06/2014 ರಂದು 1:00 ಪಿಎಮ್ ಕ್ಕೆ ಆರೋಪಿ ಸ್ವಾಮಿ ಸಂತೋಷ ರಾಮೋದ ಈತನು 50,00,000/-ರೂಪಾಯಿಗಳು ಮತ್ತು ಆರೋಪಿ ನಂ.2 ಅವನ ಆಪ್ತ ಸಹಾಯಕ ಸಂತೋಷ ಯು.ಪಿ ಸಾ: ಸ್ವಾಮಿ ಸಂತೋಷ ರಾಮೋದ ಆರ್/ಒ ಮನೆ ನಂ.ಎಫ.2 ಎಸ.ಬಿ. ಟೆಂಪಲ್ ರೋಡ ಸಂಗಮೇಶ್ವರ ನಗರ ಗುಲಬರ್ಗಾ  ಈತನು 30,00,000/-ರೂಪಾಯಿ ಸಾಲ ಪಡೆದುಕೊಂಡು ಸದರಿ ಆರೋಪಿತರು ಸಾಲ ಪಡೆದುಕೊಂಡು ಮರು ಪಾವತಿ ಮಾಡುವ ದಿನಾಂಕಕ್ಕೆ ಮರುಪಾವತಿ ಮಾಡದೇ ಇರುವದರಿಂದ ನಾವು ಸುಮಾರುಸಲ ಅವರು ವಾಸವಿದ್ದ ಮನೆ ನಂ. ಎಫ.-2 ಎಸ್.ಬಿ ಟೆಂಪಲ್ ರೋಡ ಆನಂದ ಹೋಟೆಲ ಹತ್ತಿರ ಸಂಗಮೇಶ್ವರ ಕಾಲೋನಿಗೆ ಭೇಟಿ ನೀಡಿ ಅವರ ವಿಳಾಸಕ್ಕೆ ಹೋಗಿ ನೋಡಿದಾಗ ಅವರು ತಾವು ಇದ್ದ ವಿಳಾಸದಲ್ಲಿ ಇರದೇ ಮನೆ ಖಾಲಿಮಾಡಿಕೊಂಡು ಓಡಿ ಹೋಗಿರುತ್ತಾರೆ. ನಮ್ಮ ಮಹಿಳಾ ಸಂಘದಲ್ಲಿ ತೆಗೆದುಕೊಂಡ ದುಡ್ಡನ್ನು ಒಂದು ವರ್ಷ ಅಥವಾ ಒಂದುವರೆ ವರ್ಷದಲ್ಲಿ ಒಂದಕ್ಕೆ ಎರಡರಂತೆ ಮಾಡಿಕೊಂಡುತ್ತೇವೆ ಎಂದು ನಂಬಿಸಿ ಆರೋಪಿ ನಂ. 1 ಮತ್ತು 2 ನೇದ್ದವರು ನಮ್ಮ ಸ್ವ ಸಹಾಯದಿಂದ 50 ಲಕ್ಷ ಮತ್ತು 30 ಲಕ್ಷ ರೂಪಾಯಿ ಹಣ ಸಾಲ ಪಡೆದು ಮರುಪಾವತಿಸದೇ ನಂಬಿಸಿ ಮೋಸಮಾಡಿ ಓಡಿ ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ರೈತ ಹಾಗು ಎತ್ತು ಸಾವು ಪ್ರಕರಣ :
ಕಾಳಗಿ ಠಾಣೆ : ಶ್ರೀ ಸೂರ್ಯಕಾಂತ ತಂದೆ ರೇವಣಸಿದ್ದಪ್ಪ ನಾಯ್ಕೋಡಿ ಸಾ:ಹುಲಗೇರಾ ಇವರು ದಿನಾಂಕ 07-07-2014 ರಂದು 10-30 ಎ,ಎಂಕ್ಕೆ ನಾನು ನನ್ನ ಮಗ ಜಗನ್ನಾಥ ವಯ:23 ವರ್ಷ ಕೂಡಿ ಹೊಲದಲ್ಲಿ ಎಡೆ ಹೊಡೆಯಲು ಹೋಗಿದ್ದು, ಜಗನ್ನಾಥನು ಹೊಲದಲ್ಲಿ ಎಡೆ ಹೊಡೆಯುತ್ತಿದ್ದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನಾನು ಖಾಸಗಿ ಕೆಲಸಕ್ಕಾಗಿ ರಟಕಲಕ್ಕೆ ಹೋಗಿದ್ದು ಸಾಯಾಂಕಲಾ 4-30 ಗಂಟೆಯ ಸುಮಾರಿಗೆ ನಮ್ಮೂರಿನ ಫತ್ರು ಮುಲ್ಲಾ ಪೋನ ಮಾಡಿ ಜಗನ್ನಾಥನ ಮೇಲೆ ಸಿಡಿಲು ಬಿದ್ದು, ಜಗನ್ನಾಥ ಹಾಗೂ 1 ಎತ್ತು ಹೋಲದಲ್ಲಿ ಮೃತ್ತ ಪಟ್ಟಿದ್ದು ಇದೆ ಅಂತ ತಿಳಿಸಿದ ಮೇರೆಗೆ ನಾನು ನನ್ನ ಹೊಲಕ್ಕೆ ವಾಪಸ ಬಂದು ನೋಡಲು ನನ್ನ ಹೊಲದಲ್ಲಿ ಸಿಡಿಲು ಬಡಿದು ನನ್ನ ಮಗ ಜಗನ್ನಾಥ ಹಾಗೂ ನನ್ನ 1 ಎತ್ತು ಅಕಿ:40 ಸಾವಿರದ್ದು ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶೀವಶರಣಪ್ಪ ತಂದೆ ಧೂಳಪ್ಪ ಸ್ವಾದಿ ಸಾ|| ಮನೆ ನಂ 1-871/2 ವೇಂಕಟೇಶ್ವರ ನಗರ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆ ಗುಲಬರ್ಗಾ ಇವರು ದಿನಾಂಕ: 27-06-2014 ರಂದು ಬೆಳಿಗ್ಗೆ 10.00 ಗಂಟೆಗೆ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಬಂದಿದ್ದು ತಮ್ಮ ಟಿ.ವಿ.ಎಸ್‌ ಕಂಪನಿಯ ಸ್ಕೂಟಿ ನಂ ಕೆ.ಎ 32 ಕೆ. 3626 ನೇದ್ದನ್ನು ಶರಣಬಸವೇಶ್ವರ ದೇವಸ್ಥಾನದ ಕಾಂಪಾಂಡ್‌ ಒಳಗಡೆ ನಿಲ್ಲಿಸಿ ದೇವಸ್ಥಾನದ ಒಳಗೆ ಹೊಗಿ ದರ್ಶನ ಮಾಡಿಕೊಂಡು ವಾಪಸ್ಸು ಬರುವದರಲ್ಲಿ ತಮ್ಮ ಬೈಕ್‌ ಟಿ.ವಿ.ಎಸ್‌ ಕಂಪನಿಯ ಸ್ಕೂಟಿ ನಂ ಕೆ.ಎ 32 ಕೆ. 3626 ಅ.ಕಿ 10000/- ಬೆಲೆಬಾಳುವದನ್ನು ಯಾರೋ ಅಪರಿಚಿತ ಕಳ್ಳರು ಕಳವುಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು  :
ಫರತಾಬಾದ ಠಾಣೆ : ²æà ಮಹೇಶ ತಂದೆ ಗುಂಡಪ್ಪಾ ಸಾಹು ಸಾ|| ಕುರಿಕೊಟಾ ತಾ|| ಜಿ|| ಗುಲಬರ್ಗಾ ರವರು ದಿನಾಂಕ: 07-07-2014  ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಗೆಳೆಯನಾದ  ಚಿತ್ತಾಪೂರ ತಾಲೂಕಿನ ಹುಳಗೇರ ಗ್ರಾಮದ ವೈಜನಾಥ ಮತ್ತು ನಮ್ಮ ಕಾರ ಚಾಲಕನಾದ ಆನಂದ  ಮೂರು ಜನರು ಸೇರಿಕೊಂಡು ನಮ್ಮ ಇನ್ನೋವ ಕಾರ ನಂ.ಕೆಎ 17 ಎಮ್ 9972 ನೆದ್ದರಲ್ಲಿ ಜೇವರ್ಗಿಗೆ ವೈಯಕ್ತಿಕ  ಕೆಲಸದ ನಿಮಿತ್ಯ ಹೋಗಿದು ಸದರಿ ಕಾರನ್ನು ನಮ್ಮ ಕಾರ ಚಾಲಕನಾದ ಆನಂದ ಈತನು ಚಲಾಯಿಸುತ್ತಿದ್ದನು.  ನಾವು ಜೇವರ್ಗಿಯಲ್ಲಿ  ಕೆಲಸ ಮುಗಿಸಿಕೊಂಡು ಮರಳಿ ಗುಲಬರ್ಗಾಕ್ಕೆ ಬರುತ್ತಿರುವಾಗ ಮದ್ಯಾಹ್ನ 2.30 ಗಂಟೆಯ ಸುಮಾರಿಗೆ  ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಮೇಲೆ ಸರಡಗಿ(ಬಿ) ಖಣಿ ಹತ್ತಿರ ನಮ್ಮ ಕಾರ ನಂ. ಕೆಎ 17 ಎಮ್ 9972 ನೇದ್ದನ್ನು ಚಲಾಯಿಸುತ್ತಿದ್ದ ನಮ್ಮ ಕಾರ ಚಾಲಕನಾದ ಆನಂದ ಈತನು ಕಾರನ್ನು ಜೇವರ್ಗಿ ಕಡೆಯಿಂದ ಗುಲಬರ್ಗಾ ಕಡೆಗೆ ಅತೀವೆಗ ಮತ್ತು ಆಲಕ್ಷ್ಯತನದಿಂದ ನಡೆಯಿಸಿದರಿಂದ ಕಾರಿನ ಬಲಗಡೆಯ ಮುಂದಿನ ಟೈರ ಬಸ್ಟ ಆಗಿದ್ದರಿಂದ  ತನ್ನ ನಿಯಂತ್ರಣ ತಪ್ಪಿ ಕಾರನ್ನು  ರಸ್ತೆಯ ಎಡ ಬದಿಯ ಬೇವಿನ ಮರಕ್ಕೆ ಡಿಕ್ಕಿ ಪಡಿಸಿ  ಕಾರನ್ನು  ಪಲ್ಟಿ ಗೊಳಿಸಿರುತ್ತಾನೆ.  ಇದರಿಂದ ಕಾರಿನಲ್ಲಿ ಚಾಲಕನ ಪಕ್ಕಕೆ ಮುಂದಿನ ಸೀಟಿಗೆ ಕುಳಿತ ನನಗೆ ಬಲಗಡೆ ಹಣೆಯ ಭಾಗಕ್ಕೆ ,ಗದ್ದಕ್ಕೆ ರಕ್ತಗಾಯವಾಗಿದ್ದು ,ಬೆನ್ನಿನ ಸೋಂಟಕ್ಕೆ ಒಳಪೆಟ್ಟಾಗಿರುತ್ತದೆ. ಕಾರಿನಲ್ಲಿ ಹಿಂದೆ ಕುಳಿತ ವೈಜನಾಥ ಈತನು ನೆಲದ ಮೇಲೆ ಬಿದ್ದಿದರಿಂದ ಆತನ ಮೇಲೆ ಕಾರು ಬಿದ್ದದರಿಂದ ಆತನ ಹಣೆಗೆ ಮತ್ತು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾಹಾಗಾಂವ ಠಾಣೆ : ದಿನಾಂಕ 06-07-2014 ರಂದು ಶ್ರೀ ಶರಣಬಸಪ್ಪಾ ತಂದೆ ಬಸಪ್ಪಾ ಕುಂಬಾರ ಸಾ : ಭೂಸಣಗಿ ರವರು ಮಾಹಾಗಾಂವ ಕ್ರಾಸದಲ್ಲಿ ಇರುವ ದಾಭಾದಲ್ಲಿ ಊಟಮಾಡಿ ಮೂತ್ರ ವಿಸರ್ಜೆನೆಗೆ ದಾಭಾದ ಎದುರಿಗೆ ಹುಮಾನಾಬಾದ ಮುಖ್ಯ ರಸ್ತೆ ಧಾಟಿ ಹೊರಟಾಗ ಗುಲಬರ್ಗಾ ಕಡೆಯಿಂದ ಯಾವುದೋ ವಾಹನ ಚಾಲಕ ಅತೀ ವೇಗ ಅಲಕ್ಷತನದಿಂದ ನಡೆಸುತ್ತಾ ಬಂದು ಶರಣಬಸಪ್ಪನಿಗೆ ಅಪಘಾತ ಪಡಿಸಿ ಗಾಯಗೊಳಿಸಿ ವಾಹನ ನಿಲ್ಲಿಸದೆ ಹಾಗೆ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ನಿಲಮ್ಮಾ ಗಂಡ ಅಪ್ಪಸಾಬ ರವರು  ದಿನಾಂಕ 05-07-2014 ರಂದು ಮದ್ಯಾಹ್ನ 12-50 ಗಂಟೆಗೆ ಕೇಂದ್ರ ಬಸ್ ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ ನಂ ಕೆಎ-32 ಎಫ-1649 ನೇದ್ದರ ಒಳಗಿನಿಂದ ಬಸ್ಸಿನ ಬಾಗಿಲಿನಿಂದ ಕೆಳಗೆ ಇಳಿಯುವಾಗ  ಒಂದು ಕಾಲು ಕೆಳಗೆ ಒಂದು ಕಾಲು ಬಸ್ಸಿನ ಸಿಡಿಯಲ್ಲಿರುವಾಗ ಬಸ ಚಾಲಕನು ಒಮ್ಮಲೇ ಬಸ ಚಲಾಯಿಸಿಕೊಂಡು ಅತೀವೇಗವಾಗಿ ಅಲಕ್ಷತನದಿಂದ ಚಲಾಯಿಸಿದಾಗ ಫಿರ್ಯಾದಿಯು ಬಸ್ಸಿನ ಬಾಗಿಲಿನಿಂದ ಕೆಳಗೆ ಬಿದ್ದು ಭಾರಿಗಾಯಹೊಂದಿದ್ದು ಸದರ  ಬಸ ಚಾಲಕ ನಿಂತಂತೆ ಮಾಡಿ  ಬಸ ಚಲಾಯಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: