ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಮಂಜುಳಾ ಗಂಡ ನೀಲಕಂಠಪ್ಪಗೌಡ ಪೊಲೀಸ್ ಪಾಟೀಲ ಸಾ: ದುಗನೂರ ಇವರು ದಿನಾಂಕ 07-06-14
ರಂದು ಬೆಳ್ಳಿಗ್ಗೆ 10 ಗಂಟೆ ಸುಮಾರಿಗೆ ನಮ್ಮ
ಮಾವನಾದ ಸಿದ್ದಣ್ಣಗೌಡ ಹಾಗು ಅತ್ತೆಯಾದ ಜಗದೇವಿ
ಇಬ್ಬರೂ ತಾಂಡೂರಿಗೆ ಹೋಗಿ ಬರುತ್ತೇವೆ ಅಂತಾ
ಹೇಳಿ ಹೋದರು. ಅವರು ಹೋದ ಬಳಿಕ ಮನೆಯಲ್ಲಿ ನನು
ಮತ್ತು ನನ್ನ ಗಂಡ ನಿಲಕಂಠಪ್ಪಗೌಡ ಇಬ್ಬರೆ ಮನೆಯಲ್ಲಿ ಇದ್ದೇವು ಮದ್ಯಾಹ್ನ 2 ಗಂಟೆಯ ಸುಮಾರಿಗೆ
ನನ್ನ ಗಂಡನು ನನಗೆ ಹಾಲು ಕಾಸಿ ಕೊಡು ಅಂತ
ಅಂದಿದನು ಆಗ ನಾನು ಸಾಯಾಂಕಾಲ ಕಾಯಿಸಿ
ಕೊಡುತ್ತೆನೆ ಅಂತ ಅಂದೆನು ಆಗ ಅವರು ಏ ರಂಡಿ ನಾ ಹೇಳಿದ್ದು ಕೇಳಬೇಕು ಇಲ್ಲದೆ ಹೋದರೆ ನಿನಗೆ
ಖಲಾಸ ಮಾಡ್ತಿನಿ ಅಂತ ಅಂದರು
ಆಗ ನಾನು ಅದೇ ಹೆದರಿಕೆಯಿಂದ ಹಾಲು ಕಾಸಿ ಕೊಡಬೇಕು ಅಂತ ಸ್ಟೋವಗೆ ಸೀಮೆ ಎಣ್ಣೆ
ಹಾಕಬೇಕೆಂದು ಮಾಡದಲ್ಲಿದ್ದ ಸೀಮೆಣ್ಣೆ ತಗೆದುಕೊಳ್ಳುವಾಗ ಆ ಡಬ್ಬಿ ಮುಚ್ಚಳಿಕೆ ಸರಿಯಾಗಿ ಕೂಡದ ಕಾರಣ ಆಡಬ್ಬಿಯಲ್ಲಿ ಸೀಮೆ ಎಣ್ಣೆ ನನ್ನ ಮೈಮೇಲೆ ಬಿತ್ತು
ಅದರಿಂದ ನಾನು ಉಟ್ಟುಕೊಂಡ ಬಟ್ಟೆಗಳು ಎಣ್ಣೆಯಲ್ಲಿ ತೊಯ್ದಿದೆವು. ಇದನ್ನು ನೋಡಿ ನನ್ನ
ಗಂಡನಾದ ನೀಲಕಂಠಪ್ಪಗೌಡ ತಂದೆ ಸಿದ್ದಣ್ಣಗೌಡ ಪೊಲೀಸ್ ಪಾಟೀಲ ಇತನು ಏರಂಡಿ ನೀನಗೆ ಹಾಲು ಕಾಯಿಸಲು
ಹೇಳಿದರೆ ನೀನು ಸೀಮೆ ಎಣ್ಣೆ ಮೈಮೇಲೆ ಚಲ್ಲಿ
ಕೊಂಡಿದೀ ನಿನಗೆ ಯಾವ ಕೆಲಸ ಬರುವುದಿಲ್ಲಾ ಅಂತ ಅಂದವನೆ
ನನಗೆ ಖಲಾಸ ಮಾಡಲು ಇದೆ ಸಮಯ ಅಂತ ಬೈದು
ಅಲ್ಲಿಯೆ ಇದ್ದ ಕಡ್ಡಿ ಪೆಟ್ಟಿಗೆ ತಗೆದುಕೊಂಡು ಕಡ್ಡಿ ಕೊರೆದು ಆ ಕಡ್ಡಿಯನ್ನು ನನ್ನ ಮೈಮೇಲೆ ಒಗೆದನು. ಅದರಿಂದ ನಾನು ಉಟ್ಟುಕೊಂಡ ಬಟ್ಟೆಗಳಿಗೆ ಉರಿ
ಹತ್ತಿ ನನ್ನ ಮೈ ಸುಡಹತ್ತಿದ್ದು ಆಗ ನಾನು ಚಿರಾಡಿದಾಗ
ಅಕ್ಕಪಕ್ಕದ ಮನೆಯವರು ಓಡಿ ಬಂದು ನೀರು ಹಾಕಿ ಉರಿಯನ್ನು ಆರಿಸಿದರು.ಈ ಘಟನೆಯಿಂದ ನನ್ನ ಮುಖಕ್ಕೆ,
ಕುತ್ತಿಗೆಗೆ, ಎರಡು ಕೈಗಳಿಗೆ,ಎದೆಗೆ, ಹೊಟ್ಟೆಗೆ, ಬೆನ್ನಿಗೆ ಮತ್ತು ಎರಡು ಕಾಲುಗಳಿಗೆ
ಅಲ್ಲಲ್ಲಿ ಸುಟ್ಟು ತೊಗಲು ಸುಟ್ಟಿರುತ್ತದೆ. ಉಪಚಾರ
ಕುರಿತು ಸದರಿ ಕೇಸಿನಲ್ಲಿ ಗಾಯಾಳು ಮಂಜುಳಾ ಗಂಡ ನೀಲಕಂಠಪ್ಪ ಪೊಲೀಸ್ ಪಾಟೀಲ್ ಎನ್.ಎಮ್.ಎನ್.ಸಿ
ಜನರಲ್ ಆಸ್ಪತ್ರೆ ನ್ಯೂ-ಮುಂಬೈ ಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಅವಳು ಉಪಚಾರ ಪಡೆಯುವಾಗ
ದಿನಾಂಕ:16-06-2014 ರಂದು ಮದ್ಯಾಹ್ನ 1430 ಗಂಟೆಗೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ
:
ರಟಕಲ ಠಾಣೆ : ಶ್ರೀಮತಿ ಗೌರಮ್ಮ ಗಂಡ ತಿಪ್ಪಣ್ಣ ಮಡಿವಾಳ ಸಾ : ಸುರಪೂರ ಜಿ: ಯಾದಗೀರ ರವರ ಗಂಡ ಹಾಗು ಗಂಡನ
ಮನೆಯವರು ಕೂಡಿ ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಮಾನಸಿಕ ಕಿರುಕಳ ನೀಡಿ ತವರು ಮನೆಯಿಂದ
ವರದಕ್ಷಣೆ ಬಂಗಾರ ತರುವಂತೆ ಪಿಡಿಸಿ ಹೊಡೆ ಬಡೆ ಮಾಡಿ ಜೀವದ ಬೆರರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ .ರಟಕಲ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment