ಹಲ್ಲೆ
ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಬಸವರಾಜ ತಂದೆ
ರೇವಣಸಿದ್ದಪ್ಪ ಕೊರಳ್ಳಿ ಮತ್ತು ನನ್ನ ತಮ್ಮ
ಶಿವಪ್ಪ , ಶಿವಪ್ಪನ ಹೆಂಡತಿ ಮಲ್ಲವ್ವ
ಮೂರು ಜನರು ನಮ್ಮ ಮನೆಯ ಮುಂದೆ ಇದ್ದಾಗ, ನನ್ನ ತಮ್ಮ ಶಿವಪ್ಪನ ಹೆಂಡತಿಯ ಅಣ್ಣನಾದ ಅಪ್ಪಾಶಾ ಈತನ ಮಕ್ಕಳಾದ 1)
ಬಸವರಾಜ ತಂದೆ ಅಪ್ಪಾಸಾಬ ಪಾಟೀಲ 2) ಬಾಬು ತಂದೆ ಅಪ್ಪಾಸಾಬ ಪಾಟೀಲ 3) ಶರಣು ತಂದೆ ಅಪ್ಪಾಸಾಬ ಪಾಟೀಲ 4) ರುದ್ರಗೌಡ ತಂದೆ ಅಪ್ಪಾಸಾಬ ಪಾಟೀಲ 5) ಸಿದ್ದು ತಂದೆ ಅಪ್ಪಾಸಾಬ ಪಾಟೀಲ ಸಾ|| ಎಲ್ಲರೂ ಆಲಹಳ್ಳಿ (ಅಳ್ಳೊಳ್ಳಿ)
ತಾ|| ಸಿಂದಗಿ ಎಲ್ಲರೂ ನನ್ನ ತಮ್ಮ ಮೃತ ಮಲ್ಲಿಕಾರ್ಜುನ ಈತನ ಮನೆಗೆ ಬಂದು,
ಸದರಿ ಮನೆಯಲ್ಲಿ ಬಾಡಿಗೆ ಇದ್ದ ಸುರೇಶ ತಂದೆ ನಿಂಗಪ್ಪ ಬಿರಾದಾರ (ಗಣಿಹಾರ) ಇವರ ಹತ್ತಿರ ಬಂದು,
ಈ ಮನಿ ನಮ್ಮ ಹೆಸರಿಗಿ ಆದ, ನೀವು ಮನಿ ಕಾಲಿ ಮಾಡ್ರಿ ಅಂತಾ ಹೇಳಿದರೂ, ಅದಕ್ಕೆ ಸುರೇಶ ಬಿರಾದಾರ ಇವರು ನಮ್ಮ ಹತ್ತಿರ ಬಂದು, ಏನ್ರಿ ಮನಿ ಬಾಡಗಿ ಕೊಟ್ಟಿದ್ದು ನೀವು, ಈಗ ಇವರು ಬಂದು ಮನಿ ಕಾಲಿ ಮಾಡ್ರಿ ಅಂತಾ ಹೇಳ್ತಾಇದ್ದಾರೆ ಎಂದು ನಮ್ಮ ಹತ್ತಿರ ಬಂದು
ಹೇಳಿದನು. ಅದ್ಕಕೆ ನಾನು ಸದರಿಯವರಿಗೆ
ಕೇಳಲು ಹೊದಾಗ, ಬಸವರಾಜ ಈತನು ಮಗನೆ ಇದರಲ್ಲಿ
ತಲೆ ಹಾಕಲು ನೀನು ಯಾರು ಎಂದು ಬೈದು ಕೈಯಿಂದ ನನ್ನ ಮೂಗಿನ ಮೇಲೆ ಚೂರಿದನು.
ನಂತರ ಬಾಬು ಪಾಟೀಲ ಈತನು ಈ ಮಗನಿಗೆ ಕಲಾಸ ಮಾಡು ಎಂದು ಅಲ್ಲಿಯೆ
ಬಿದ್ದ ಬಡಿಗೆಯನ್ನು ತಗೆದುಕೊಂಡು ಬಂದು ನನ್ನ
ಬೆನ್ನಿನ ಮೇಲೆ ಹೊಡೆದನು. ಆಗ ಅಲ್ಲೆ ಇದ್ದ ನನ್ನ ತಮ್ಮ
ಶಿವಪ್ಪ ಮತ್ತು ಆತನ ಹೆಂಡತಿ ಮಲ್ಲವ್ವ ಇವರು ಜಗಳ ಬಿಡಿಸಲು ಬಂದಾಗ, ಶಿವಪ್ಪ ಈತನಿಗೆ ಶರಣು ಪಾಟೀಲ ಮತ್ತು ರುದ್ರಗೌಡ ಪಾಟೀಲ ಇಬ್ಬರು ಕೈಯಿಂದ ಬಲಗಣ್ಣಿನ ಮೇಲೆ
ಹಾಗೂ ಮೈಕೈಗೆ ಹೊಡೆದರು, ಮಲ್ಲವ್ವ ಇವಳಿಗೆ ಸಿದ್ದು ಈತನು
ಕೈಯಿಂದ ದಬ್ಬಿದನು, ಇದರಿಂದ ಅವಳು ಕೆಳಗೆ
ಬಿದ್ದಿದ್ದು, ಅವಳಿಗೂ ಸಹ ಮೈ ಕೈಗೆ
ಗುಪ್ತಪೆಟ್ಟುಗಳು ಆಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಂಗ್ರಹನೆ ಮಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 13-04-2014 ರಂದು ರಾತ್ರಿ 9;00 ಗಂಟೆಗೆ ಮತೀನ
ಪಟೇಲ ರವರ ಹೊಲದಲ್ಲಿ ಅಕ್ರಮವಾಗಿ ಸಂಗೃಹಿಸಿಟ್ಟ ಮರಳನ್ನು ಜೆ.ಸಿ.ಬಿ, ಮತ್ತು ಹಿಟಾಚಿಯಿಂದ ಟ್ರ್ಯಾಕ್ಟರನಲ್ಲಿ ತುಂಬುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ, ಸಿಬ್ಬಂದಿ ಹಾಗು ಪಂಚರೊಂದಿಗೆ ಮಾನ್ಯ ಸಿಪಿಐ
ಸಾಹೇಬರಿಗೆ ಹಾಗು ಮಾನ್ಯ ತಹಸೀಲ್ದಾರ ಸಾಹೇಬರಿಗೆ ವಿಷಯ ತಿಳಿಸಿ ಬರಮಾಡಿಕೊಂಡೆನು. ನಂತರ ಪಂಚರು ಹಾಗು ಮಾನ್ಯ ತಹಸೀಲ್ದಾರರು ಹಾಗು ಮಾನ್ಯ ಸಿಪಿಐ ಸಾಹೇಬರು ಮತ್ತು ನಾವುಗಳು ಮತೀನ ಪಟೇಲ ರವರ ಹೊಲದಿಂದ ಸ್ವಲ್ಪ ದೂರು ನಮ್ಮ ವಾಹನಗಳು ನಿಲ್ಲಿಸಿ ಸ್ವಲ್ಪ ನಡೆದುಕೊಂಡು ಹೋಗಿ ನೋಡಲಾಗಿ ಮತೀನ ಪಟೇಲ ರವರ ಹೊಲದಲ್ಲಿ ಒಬ್ಬ ವ್ಯಕ್ತಿ ಹಿಟಾಚಿಯಿಂದ ಅಲ್ಲಿ ಸಂಗೃಹಿಸಿದ ಮರಳನ್ನು ಟ್ರ್ಯಾಕ್ಟರ ಟ್ರಾಯಲಿಯಲ್ಲಿ ಹಾಕುತ್ತಿದ್ದನು. ಆಗ ನಾವು ಸದರಿ ಹಿಟಾಚಿ ಚಾಲಕನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಶಾಹಿದ ತಂದೆ ದಿಲಾವರ ಅನ್ಸಾರಿ ಸಾ|| ಶಾದಿ ಮೊಹಲ್ಲಾ ತಾ|| ಬರಿ, ಜಿಲ್ಲಾ ಗಯಾ (ಬಿಹಾರ) ಹಾ||ವ|| ಅಫಜಲಪೂರ ಅಂತಾ ಹೇಳಿದನು, ನಂತರ ಸದರಿಯವನಿಗೆ ಕುಲಂಕುಷವಾಗಿ ವಿಚಾರಿಸಲಾಗಿ ಹೇಳಿದ್ದೇನೆಂದರೆ, ನಮ್ಮ ಮಾಲಿಕರಾದ ಮತೀನ ಪಟೇಲ ಹಾಗು ಮೋಸಿನ ಪಟೇಲ ರವರು ಹೇಳಿದಂತೆ ಸದರಿ ಹಿಟಾಚಿ ಮತ್ತು ಜೇ.ಸಿ.ಬಿ ಮೂಲಕ ಕಳ್ಳತನದಿಂದ ಬೀಮಾ ನದಿಯಲ್ಲಿಯ ಮರಳನ್ನು ಟ್ರ್ಯಾಕ್ಟರನಲ್ಲಿ ಹಾಕಿಕೊಂಡು ನಮ್ಮ ಮಾಲಕರಾದ ಮತೀನ ಪಟೇಲ ರವರ ಹೊಲದಲ್ಲಿ ಅಕೃಮವಾಗಿ ಸಂಗೃಹಿಸಲಾಗಿದ್ದು ಇರುತ್ತದೆ. ಸದ್ಯ ಇಲ್ಲಿ ನಾನೊಬ್ಬನೆ ಇರುತ್ತೇನೆ ಅಂತಾ ಹೇಳಿದ್ದು ಪಂಚರ ಸಮಕ್ಷಮದಲ್ಲಿ ಅಂದಾಜು 100 ಟ್ರಿಪ್ ದಿಂದ 150 ಟ್ರ್ಯಾಕ್ಟರ್ ಟ್ರಿಪ್ ಮರಳನ್ನು ಅಕ್ರಮವಾಗಿ ಸಂಗೃಹಿಸಿದ್ದು ಇತ್ತು, ಜೇ.ಸಿ.ಬಿ ನಂಬರ ನೋಡಲಾಗಿ ಕೆ.ಎ-28 ಎಮ್-7134 ಅಂತಾ ಇತ್ತು ನಂತರ ಹಿಟಾಚಿ ಚಸ್ಸಿ ನಂ ನೋಡಲಾಗಿ ಎಡಿ-07-09-5982 ಅಂತಾ ಇತ್ತು, ಅಲ್ಲೆ ಇದ್ದ ಟ್ರ್ಯಾಕ್ಟರ ನೊಡಲಾಗಿ ಅದರ ನಂಬರ ಇರಲಿಲ್ಲ, ಅದರ ಇಂಜಿನ್ ನಂಬರ ಎಸ್324
ಸಿ24258
ಅಂತಾ ಇದ್ದು ಸದರಿಯವುಗ ಳನ್ನು ಜಪ್ತಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶೇಖ ಮಕಬೂಬಲ ಅಹಿಮದ ರವರು ದಿನಾಂಕ 13-04-2014 ರಂದು
ಸಾಯಂಕಾಲ 5-00 ಗಂಟೆಗೆ
ಆಳಂದ ಚೆಕ್ಕ ಪೋಸ್ಟ ದಿಂದ ಶಹಾಬಜಾರ ನಾಕಾ ರೋಡ ಮೇಲೆ
ಫಿರ್ಯಾದಿ ನಡೆದುಕೊಂಡು ಶಾಹಾ ಬಜಾರ ನಾಕಾ ಕಡೆಗೆ ಹೋಗುತ್ತಿದ್ದಾಗ ಪಿ.ಎಫ.ಐ ಆಫೀಸ ಕ್ರಾಸ್
ಎದುರಿನ ರೋಡಿನ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ಜೆ-4377 ರ ಸವಾರನು ಶಹಾ ಬಜಾರ ನಾಕಾ ಕಡೆಯಿಂದ
ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಫಿರ್ಯಾದಿಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ತನ್ನ ಮೋಟಾರ
ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ
ನಿಂದನೆ ಪ್ರಕರಣ :
ಬ್ರಹ್ಮಪೂರ
ಠಾಣೆ : ಶ್ರೀ. ಸಿದ್ದಣ್ಣಾ ತಂದೆ ಬೀಮಶ್ಯಾ ಸಾ|| ಗಂಜ್ ಕಾಲೊನಿ
ಗುಲಬರ್ಗಾ.ಇವರು ಜೋಶಿ ಕಾಂಪ್ಲೇಕ್ಸ್ ಕಲಾಯಿ ಗಲ್ಲಿಯಲ್ಲಿ ಬರುವ ಸುಮಿತ್ ಪ್ಲಾಸ್ಟೀಕ್ ಅಂಗಡಿಗೆ
ಪ್ಲಾಸ್ಟೀಕ್ ವಸ್ತುಗಳು ಖರೀದಿ ಮಾಡಲು ಹೋದಾಗ ಆರೋಪಿತಳಾದ ಪದ್ಮಾವತಿ ಗಂಡ ಶಾಂತಕುಮಾರ ಇವಳು
ಫಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ನಮ್ಮ ಅಂಗಡಿಗೆ ಯಾಕೆ ಬಂದ್ದಿದಿ ಅಂತಾ ಅವಾಚ್ಯ
ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment