POLICE BHAVAN KALABURAGI

POLICE BHAVAN KALABURAGI

15 April 2014

Gulbarga District Reported Crimes

ಬೆಂಕಿ ಹತ್ತಿ ಗೃಹಿಣಿ ಸಾವು ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಗೋದಾವರಿ ಗಂಡ ನಾಗನಾಥ ಸೋಲಾಪೂರೆ  ಸಾಕನಕಟ್ಟಾ  ತಾಹುಮನಾಬಾದ ಜಿಗುಲಬರ್ಗಾ ಇವರು ದಿನಾಂಕ 14-04-2014 ರಂದು ಬೆಳಗ್ಗೆ 07-30 ಗಂಟೆಗೆ ಮಗಳಾದ ಸಂಗೀತಾ ಗಂಡ ಶಿವಕುಮಾರ ಜನಕಟ್ಟಿ ಸಾಡೊಂಗರಗಾಂವ ತಾಜಿಗುಲಬರ್ಗಾ ಇವಳು ಡೊಂಗರಗಾಂವ ಗ್ರಾಮದ ತನ್ನ ಮನೆಯಲ್ಲಿ ಅಡುಗೆ ಮಾಡುವಾಗ ಸೀಮೆ ಎಣ್ಣೆ ಸ್ಟೋ ಹತ್ತಿಸಿಕೊಂಡು ಆಕಸ್ಮಕವಾಗಿ ಸ್ಟೋ ಬ್ಲಾಸ್ಟಾವಾಗಿ , ಅದರಲ್ಲಿಂದ  ಸೀಮೆ ಎಣ್ನೆ ಮೈ ಮೇಲೆ ಸಿಡಿದು , ಮೈಗೆ ಬೆಂಕಿ ಹತ್ತಿಕೊಂಡಿದ್ದುಆಗ ಅವಳು ಚೀರಾಡುತ್ತಾ ಮನೆಯಿಂದ ಹೋರೆಗೆ ಬಂದಾಗಅವಳ ಗಂಡ ಮತ್ತು ತಾಯಿ ಕೂಡಿಕೊಂಡುಬೆಂಕಿ ನಂದಿಸಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದು,  ಉಪಚಾರ ಪಲಿಸದೆ ಬೆಳಗ್ಗೆ 11-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ ;
ಫರತಾಬಾದ ಠಾಣೆ : ದಿನಾಂಕ 09-04-2014  ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಮಲಗಿಕೊಂಡಾಗ ನಮ್ಮ ಅಣ್ಣತಮ್ಮಕೀಯವರ ಅಳಿಯನಾದ ಕೊರೆಪ್ಪ ದೊಡಮನಿ ಅವನ ಹೆಂಡತಿ ಲಕ್ಕಮ್ಮ ,ಮಗಳಾದ ಮಹಾಪೂರಿ ಮತ್ತು ನಮ್ಮ ಅಣ್ಣತಮ್ಮಕಿಯವರಾದ ಜಟ್ಟೆಪ್ಪ ಅವನ ಹೆಂಡತಿ ಪಾರ್ವತಿ ಇವರೆಲ್ಲರೂ ಕೂಡಿಕೊಂಡು ಬಂದು ಅವರಲ್ಲಿ ಕೊರೆಪ್ಪ ಇತನು ನನಗೆ ಎಬ್ಬಸಿ ರಂಡಿ ಮಗನೆ ಶರಣ್ಯ ನಿನ್ನೆ ರಾತ್ರಿ ನಮಗ ನಿಮ್ಮ ಮನೆಯ ಮೇಲೆ ನಿಂಬಿಕಾಯಿ ಬಿಸಾಕ್ಯರ ಅಂತಾ ಸುಮ್ಮ-ಸುಮ್ಮನೆ ಬೈತಿ ಬೊಸ್ಡಿ ಮಗನೆ ಅಂತಾ ಬೈಯುತ್ತಾ ನನಗೆ ರಂಡಿ ಮಗನೆ ತೊರಿಸು ಯಾರ ಬಿಸಾಕ್ಯರ ಅಂತಾ ಅನ್ನುತ್ತಿದ್ದಾಗ  ನಾನು ಎದ್ದು, ನೋಡು ನಿಮಗ ಬೈದಿಲ್ಲಾ ನಾ ಬಿಸಾಕದವರಿಗಿ ಬೈದಿನ ಅಂತಾ ಅನ್ನುತ್ತಿದ್ದಾಗ ಕೊರೆಪ್ಪ ಇತನು ನನಗೆ ಕೈಯಿಂದ ಕಪಾಳ ಮೇಲೆ ಬೆನ್ನ  ಮೇಲೆ ಹೊಡೆದಿರುತ್ತಾನೆ. ಅಲ್ಲೆ ನನ್ನ ಹಿಂದೆ ಇದ್ದ ಜಟ್ಟೆಪ್ಪ ಇತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಹೆಡಕಿನ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:11/04/2014 ರಂದು ಮದ್ಯಾಹ್ನ 02:30 ಗಂಟೆ ಸುಮಾರಿಗೆ ಅಣವೀರಪ್ಪ ಇತನು ತನ್ನ ಹಿರೋ ಹೊಂಡಾ ಮೋಟಾರ ಸೈಕಲ ನಂ ಕೆ.-32 .ಬಿ-6197 ನೇದ್ದರಕ್ಕೆ ಅವಿನಾಶ ಪೆಟ್ರೋಲ ಪಂಪನಲ್ಲಿ ಪೆಟ್ರೋಲ ಹಾಕಿಸಿಕೊಂಡು ಮಾಶಾಬ್ದಿ ದರ್ಗಾ ಹತ್ತಿರ ಇರುವ ಕ್ರಾಸಿನಲ್ಲಿ ಮೋಟಾರ ಸೈಕಲ ತಿರುಗಿಸುತ್ತಿದ್ದಾಗ ಅದೇ ವೇಳೆಗೆ ಕಾರ ನಂ ಕೆ.-33 ಎಂ-3616 ನೇದ್ದರ ಚಾಲಕನು ರಾಂಗ ರೂಟ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಣವೀರಪ್ಪ ಇತನ ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ರೋಡಿನ ಮೇಲೆ ಬಿದಿದ್ದು ಆತನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತಸ್ರಾವವಾಗಿ ಬಲಗಣ್ಣಿನ ಕೆಳೆಗೆ ಹಾಗು ಇತರೇ ಭಾಗದಲ್ಲಿ ಭಾರಿ ಗಾಯವಾಗಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಆಗಿದ್ದಾಗ ಉಪಚಾರ ಫಲಕಾರಿ ಆಗದೇ ಇಂದು ದಿನಾಂಕ:-14/04/2014 ರಂದು ಬೆಳಿಗ್ಗೆ 06:30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ ಆಂತಾ ಆತನ ತಂದೆ ಬಸವರಾಜ ತಂದೆ ಗುರಲಿಂಗಪ್ಪ ಚಿಂಚೂರ ಸಾ:ಚಿಂಚನಸೂರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: