ಅಪಘಾತ ಪ್ರಕರಣ
:
ಸಂಚಾರಿ ಠಾಣೆ : ದಿನಾಂಕ
12-04-2014 ರಂದು 0915 ಪಿ.ಎಮ್ ಕ್ಕ ನೇಹರು ಗಂಜ ನಗರೇಶ್ವರ ಶಾಲೆಯ ಎದರುಗಡೆ ಹುಮನಾಬಾದ ರೋಡಿನಲ್ಲಿ
ಲಾರಿ ನಂ. ಎಮ್.ಎಚ್. 18 ಎಎ 7867 ನೇದ್ದರ ಚಾಲಕನು ತನ್ನ ಲಾರಿಯನ್ನು ಎಮ್.ಎ.ಟಿ ಕ್ರಾಸ್ ಕಡೆಯಿಂದ
ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸೈಕಲ ಮೇಲೆ ರೋಡ ದಾಟುತ್ತಿದ್ದ ಮೃತ ಬಾಲಾಜಿ
ಇತನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಆತನ ಮೇಲೆ ಲಾರಿ ಹಾಯಿಸಿ ಲಾರಿ ಅಲ್ಲಿಯೆ ಬಿಟ್ಟು ಓಡಿ ಹೋಗಿದ್ದು
ಅಪಘಾತದಲ್ಲಿ ಭಾರಿ ರಕ್ತಗಾಯ ಹೊಂದಿದ ಬಾಲಾಜಿ ಈತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ
ಗಂಗೂಬಾಯಿ ಗಂಡ ಬಾಲಾಜಿ ಪಾಟೀಲ, ಸಾಃ ಶಿವಾಜಿ ನಗರ ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ
ನಿರತ ವ್ಯಕ್ತಿಗಳ ಬಂಧನ :
ಅಫಜಲಪೂರ ಠಾಣೆ
: ದಿನಾಂಕ
12-04-2014 ರಂದು ಅಫಜಲಪೂರ ಬಸ್ ನಿಲ್ದಾಣದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ.
ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರು ಕೂಡಿಕೊಂಡು ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಂತೆ ಸ್ಥಳಕ್ಕೆ
ಹೋಗಿ ಮರೆಯಾಗಿ ನಿಂತು ನೋಡಲು ಬಸ್ ನಿಲ್ದಾಣದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ 3 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಜುಜಾಡುತ್ತಿದ್ದ 3 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1. ಮಳೆಪ್ಪ ತಂದೆ ಶರಣಪ್ಪ ದೇಸಾಯಿ 2. ಜಗನ್ನಾಥ ತಂದೆ ಪೀರಪ್ಪ ಕೋರಿ 3. ಸಂತೋಷ ತಂದೆ ಚಂದ್ರಶಾ ನಾವಿ ಸಾ|| ಎಲ್ಲರು ಅಫಜಲಪೂರ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ 1420- ರೂ ನಗದು ಹಣ ಮತ್ತು 52 ಇಸ್ಪೆಟ ಎಲೆಗಳನ್ನು ಜಪ್ತಿಮಾಡಿಕೊಂಡು ಸದರಿಯವರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಅಫಜಪೂರ ಟಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾತಿ
ನಿಂದನೆ
ಪ್ರಕರಣ
:
ಸೇಡಂ ಠಾಣೆ : ಶ್ರೀ. ದಶರಥ ತಂದೆ ಯಂಕಪ್ಪಾ ನಾಟಿಕಾರ ಸಾಃ ಉಡುಗಿ ತಾಃ ಸೇಡಂ ಇವರು ಎರಡು ದಿವಸಗಳ ಹಿಂದೆ
ನಮ್ಮ ತಮ್ಮನಾದ ಸಿದ್ದು ಹಾಗೂ ನಮ್ಮ ಗ್ರಾಮದ ಬಸಣ್ಣಾ ದಂಡಗುಂಡ ಇವರಿಬ್ಬರೂ ಶಾಲೆಗೆ ಹೋಗುವಾಗ ಒಬ್ಬರಿಗೊಬ್ಬರು
ಬಾಯಿ ಬಡಿದು ಜಗಳ ಮಾಡಿಕೊಂಡಿದ್ದು ಇತ್ತು. ಅದೇ ವೈಮನಸ್ಸಿನಿಂದ ದಿನಾಂಕ:12-04-2014 ರಂದು ಬೆಳಿಗ್ಗೆ
10 00 ಗಂಟೆಯ ಸುಮಾರಿಗೆ ನಾನು ಮತ್ತು ಪಂಚಾಯತ ಆಪರೇಟರನಾದ
ಶಹಾಬೊದ್ದಿನ್ ಇಬ್ಬರೂ ಮಾತಾಡುತ್ತಾ ಪಂಚಾಯತ ಆಫೀಸ್ ಮುಂದುಗಡೆ ಕುಳಿತ್ತಿದ್ದಾಗ, ನಮ್ಮ ಗ್ರಾಮದ ಬಸವರಾಜ
ತಂದೆ ಮರಿಯಣ್ಣ ದಂಡಗುಂಡ ಮತ್ತು ತಾಜೋದ್ದಿನ್ ತಂದೆ ಹಮೀದ್ ಖುರೇಶಿ ಇವರಿಬ್ಬರೂ ಕೂಡಿಕೊಂಡು ಬಂದವರೇ
ಅವರಲ್ಲಿಯ ಬಸವರಾಜ ದಂಡಗುಂಡ ಇತನು ನನಗೆ ಅವಾಚ್ಯ ಶಬ್ದ್ಗಳಿಂದ ಬೈದು ಕೈಯಿಂದ ಕಪಾಳ ಮೇಲೆ ಹೊಡೆದು
ಜಾತಿನಿಂದನೆ ಮಾಡಿ ಖಲಾಸ ಮಾಡಬೇಕು ಅಂತ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ
ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment