POLICE BHAVAN KALABURAGI

POLICE BHAVAN KALABURAGI

01 February 2013

GULBARGA DISTRICT REPORTED CRIMES


ಗುಲಬರ್ಗಾ ನಗರದ ಕುಖ್ಯಾತ ರೌಡಿ
ಬಾಂಬೆ ಸಂಜ್ಯಾ @ ಸಂಜುಕುಮಾರನ ಬಂಧನ

ಅಶೋಕ ನಗರ ಪೊಲೀಸ್ ಠಾಣೆಯ ಗುನ್ನೆ ನಂ:07/2013 ಕಲಂ 399, 402, 120(ಬಿ)  ಐಪಿಸಿ ಮತ್ತು 25 ಆರ್ಮ್ಸ ಕ್ಟ  ಪ್ರಕರಣದಲ್ಲಿ ಈಗಾಗಲೇ  ಈ ಪ್ರಕರಣ ಆರೋಪಿತರನ್ನು ದಿನಾಂಕ:12-01-2013 ರಂದು ದಸ್ತಗಿರಿ ಮಾಡಿ ಆರೋಪಿತರಿಂದ ಜೇಪ್, ಮೋಟಾರ ಸೈಕಲಗಳು, ಹರಿತವಾದ ಮಚ್ಚುಗಳು, ಪಿಸ್ತೂಲ್, ಜೀವಂತ ಗುಂಡುಗಳು, ಖಾರದ ಪುಡಿ, ಇತರೆ ಜಪ್ತಿ ಪಡಿಸಿಕೊಂಡು ನ್ಯಾಯಾಂಗ ಬಂದನಕ್ಕೆ ಕಳುಹಿಸಿದ್ದು, ಇದೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ  ಆರೋಪಿ ಪತ್ತೆ ಪತ್ತೆ ಕುರಿತು ಶ್ರೀ. ಟಿ.ಹೆಚ್‌ ಕರಿಕಲ್‌ ಪಿಐ, ಬಸಯ್ಯಾಸ್ವಾಮಿ ಎ.ಎಸ್‌.ಐ  ಮತ್ತು  ಸುರೇಶ, ಚಂದ್ರಕಾಂತ,ಹಣಮಂತ,ದಾಮೊದರ ಪಿಸಿ ರವರು ತಲೆ ಮರೆಸಿಕೊಂಡಿದ್ದ 1) ಬಾಂಬೆ ಸಂಜ್ಯಾ @ ಸಂಜೀವಕುಮಾರ ತಂದೆ ಪರಶುರಾಮ ಸನಗುಂದಿ ಸಾ: ವಿಜಯನಗರ ಗುಲಬರ್ಗಾ ಇತನಿಗೆ ಇಂದ್ರಾನಗರದ ಹತ್ತಿರ ದಸ್ತಗಿರಿ ಮಾಡಿ  ಆತನಿಂದ ಮಾರಕಾಸ್ತ್ರಗಳು ವಶಪಡಿಸಿಕೊಂಡಿರುತ್ತಾರೆ.  ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ಈ ಪ್ರಕರಣದ ಮತ್ತೊಬ್ಬ ಆರೋಪಿ 2) ಮೂಗ ಮಲ್ಯಾ @ ಮಲ್ಲಿನಾಥ ತಂದೆ ದೇವಿಂದ್ರಪ್ಪ ಕಟ್ಟಿಮನಿ ಸಾ: ಬಸವನಗರ ಗುಲಬರ್ಗಾ ಇತನ ಪತ್ತೆ ಕಾರ್ಯ ಮುಂದುವರೆದಿದೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಭಾಗ್ಯವಂತ ತಂದೆ ಚಿದಾನಂದ ಬಬಲಾದ ವಯಾ|| 20 ವರ್ಷ, ಸಾ|| ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾರವರು ನಾನು ದಿನಾಂಕ:30-01-2013 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಮನೆಗೆ ಬರುತ್ತಿದ್ದಾಗ, ಮಾಣಿಕೇಶ್ವರಿ ದೇವಸ್ಥಾನದ ಹತ್ತಿರ ಎದುರುಗಡೆಯಿಂದ 4 ಜನರು ಎರಡು ಮೊಟಾರ್ ಸೈಕಲ್ ಮೇಲೆ ಬಂದು, ನನಗೆ ಸಂಜು ಕೊಟ್ಟರಗಿ ಇತನು ಅವಾಚ್ಯವಾಗಿ ಬೈದು ನನಗೆ ಸಂಗಡ ಜಗಳ ಮಾಡುತ್ತಿಯಾ  ಈಗ ಬಾ ಮಗನೆ ಅನ್ನುತಾ  ಆತನ ಜೋತೆಗಿದ್ದ ಶರಣು ಪೂಜಾರಿ, ವೆಂಕು ಯಾದವ, ಸಂತೋಷ ಹೋಸಪೇಟ ಇವರು ಕೂಡಿಕೊಂಡು ನನಗೆ ಹೊಡೆ ಬಡೆ ಮಾಡಿರುತ್ತಾರೆ. ಈ ವಿಷಯ ನಮ್ಮ ತಂದೆ ತಾಯಿಗೆ ತಿಳಿಸಿ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆಯಾಗಿರುತ್ತೆನೆ. ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 10/2013 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: